For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ಹಬ್ಬಕ್ಕೆ ಕುಂದನ್‌ ಅಲಂಕಾರ ತುಂಬಾ ವಿಶೇಷವಾಗಿರುತ್ತೆ ನೋಡಿ

|

ವರಮಹಾಲಕ್ಷ್ಮಿ ಹಬ್ಬ ಈ ವರ್ಷ ಜುಲೈ 31ರಂದು ಆಚರಿಸಲಾಗುವುದು. ವರಮಹಾಲಕ್ಷ್ಮಿ ಹಬ್ಬವೆಂದರೆ ಅದೊಂದು ಸಡಗರದ ಆಚರಣೆ, ಅದರಲ್ಲೂ ಮಹಿಳೆಯರಿಗೆ ಈ ಹಬ್ಬವೆಂದರೆ ತುಂಬಾನೇ ವಿಶೇಷ.

ವರಮಹಾಲಕ್ಷ್ಮಿ ಡೆಕೋರೇಷನ್ ಐಡಿಯಾ | Varamahalakshmi Pooja DIY Decoration | Boldsky Kannada
Kundan decoration Idea For Varamahalaxmi Festival

ಮನೆಗೆ ಮಹಾಲಕ್ಷ್ಮಿ ಬರಲಿ ಎಂದು ಮನೆಯ ಲಕ್ಷ್ಮಿಯರು ಮನೆಯನ್ನು ಹಾಗೂ ಕಳಶವನ್ನು ತುಂಬಾ ಚೆನ್ನಾಗಿ ಅಲಂಕಾರ ಮಾಡುತ್ತಾರೆ, ಅವುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ, ಮನಸ್ಸಿಗೆ ಖುಷಿ. ಮಹಾಲಕ್ಷ್ಮಿ ಅಲಂಕಾರ ಎಷ್ಟು ಚೆನ್ನಾಗಿ ಮಾಡುತ್ತೇವೋ ಅಷ್ಟು ತೃಪ್ತಿ ಎನಿಸುತ್ತದೆ.

ಈ ವರ್ಷ ವರಮಹಾಲಕ್ಷ್ಮಿಗೆ ಇನ್ನಷ್ಟು ಚೆನ್ನಾಗಿ ಅಲಂಕಾರ ಮಾಡಲು ನಾವು ನಿಮಗೆ ಕೆಲವೊಂದು ಡೆಕೋರೇಷನ್ ಐಡಿಯಾ ನೀಡುತ್ತಿದ್ದೇವೆ. ಇಲ್ಲಿ ನಾವು ನೀಡುತ್ತಿರುವುದು ಕುಂದನ್ ಅಲಂಕಾರದ ಬಗ್ಗೆ.

ಈ ಅಲಂಕಾರ ಒಮ್ಮೆ ಮಾಡಿಟ್ಟರೆ ದೀಪಾವಳಿ, ಯುಗಾದಿ ಹೀಗೆ ಇತರ ಹಬ್ಬಗಳಿಗೂ ಬಳಸಿಕೊಳ್ಳಬಹುದು. ಈ ಅಲಂಕಾರ ಐಡಿಯಾ ನಮ್ಮೊಂದಿಗೆ ಶೇರ್ ಮಾಡಿದವರು ಅಂಜಲಿ ರಾವ್. ಬನ್ನಿ ಆ ಅಲಂಕಾರಗಳನ್ನು ನೋಡೋಣ:

ಶ್ರಾವಣ ಮಾಸದ ಶುಕ್ರವಾರದಂದು ಆಚರಿಸುವ ಹಬ್ಬ

ಶ್ರಾವಣ ಮಾಸದ ಶುಕ್ರವಾರದಂದು ಆಚರಿಸುವ ಹಬ್ಬ

ವರಮಹಾಲಕ್ಷ್ಮಿ ಹಬ್ಬವನ್ನು ಶ್ರಾವಣ ಮಾಸದ ಎರಡನೆ ಶುಭ ಶುಕ್ರವಾರದಂದು ಆಚರಿಸಲಾಗುವುದು. ಈ ಹಬ್ಬದ ದಿನ ತಳಿರು ತೋರಣಗಳಿಂದ ಅಲಂಕೃತವಾದ ಪೀಠದಲ್ಲಿ ಲಕ್ಷ್ಮಿಯ ಕಳಶವಿಟ್ಟು ಅದನ್ನು ಹೂ ಹಾಗೂ ಆಭರಣ, ವಿವಿಧ ಅಲಂಕಾರಗಳಿಂದ ಅಲಂಕರಿಸಲಾಗುವುದು.

ಭಾರತದ ವಿವಿಧ ಕಡೆಗಳಲ್ಲಿ ವರಮಹಾಲಕ್ಷ್ಮಿ ಆಚರಣೆ

ಭಾರತದ ವಿವಿಧ ಕಡೆಗಳಲ್ಲಿ ವರಮಹಾಲಕ್ಷ್ಮಿ ಆಚರಣೆ

ವರಮಹಾಲಕ್ಷ್ಮಿ ಹಬ್ಬವನ್ನು ಭಾರತದ ವಿವಿಧ ಕಡೆ ತಮ್ಮ ಸಂಪ್ರದಾಯದಂತೆ ಆಚರಿಸುತ್ತಾರೆ. ಲಕ್ಷ್ಮಿಗೆ ತುಂಬಾ ಚೆನ್ನಾಗಿ ಅಲಂಕಾರ ಮಾಡಿ ಭಾಗ್ಯದ ಲಕ್ಷ್ಮಿ.. ಭಾರಮ್ಮ ಎಂದು ಮನೆಗೆ ತುಂಬು ಮನಸ್ಸಿನ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಈ ಬಾರಿ ನೀವು ದೇವಿಗೆ ಅಲಂಕಾರ ಮಾಡುವಾಗ ಈ ಕುಂದನ್ ಅಲಂಕಾರ ಕೂಡ ಸೇರಿಸಿದರೆ ವಾವ್... ನಿಮ್ಮ ಅಲಂಕಾರ ಮತ್ತಷ್ಟು ಸೂಪರ್‌ ಆಗಿರುತ್ತದೆ ನೋಡಿ.

 ಕುಂದನ್‌ ಅಲಂಕಾರಕ್ಕೆ ನಿಮಗೆ ಬೇಕಾಗುವ ಸಾಮಗ್ರಿ

ಕುಂದನ್‌ ಅಲಂಕಾರಕ್ಕೆ ನಿಮಗೆ ಬೇಕಾಗುವ ಸಾಮಗ್ರಿ

ಪ್ಲಾಸ್ಟಿಕ್ ಶೀಟ್, ಕತ್ತರಿ, ಫ್ಯಾಬ್ರಿಕ್ ಗ್ಲೂ, ಟ್ವೀಜರ್ಸ್/ ಪೆನ್ಸಿಲ್, ಕುಂದನ್‌ ಸ್ಟೋನ್ಸ್, ಗೋಲ್ಡನ್ ಬೆಡ್‌ ಸ್ಟ್ರಿಂಗ್, ಕಲರ್‌ಫುಲ್ ಸ್ಟೋನ್ ಚೈನ್ಸ್ (ನಿಮ್ಮ ಇಷ್ಟ ಬಂದ ಬಣ್ಣದ್ದು ಆಯ್ಕೆ ಮಾಡಬಹುದು)

ಬೇಕಾದ ವಿನ್ಯಾಸ ಆಯ್ಕೆ ಮಾಡಿಕೊಳ್ಳಿ

ಬೇಕಾದ ವಿನ್ಯಾಸ ಆಯ್ಕೆ ಮಾಡಿಕೊಳ್ಳಿ

ಮೊದಲಿಗೆ ನಿಮಗೆ ಯಾವ ವಿನ್ಯಾಸ ಬೇಕೋ ಅದರ ಡಿಸೈನ್‌ ಅಥವಾ ರಂಗೋಲಿ ಪ್ರಿಂಟ್ ರೆಡಿ ಮಾಡಿ ಇಟ್ಟುಕೊಳ್ಳಿ. ಈ ಪ್ರಿಂಟ್‌ ಮೇಲೆ ಪ್ಲಾಸ್ಟಿಕ್ ಶೀಟ್‌ ಇಟ್ಟುಕೊಂಡು ಫಿಕ್ಸ್ ಮಾಡಿ.

ಹೀಗೆ ಫಿಕ್ಸ್ ಮಾಡಲು ನೀವು ರೈಟಿಂಗ್ ಪ್ಯಾಡ್ಸ್ ಬಳಸಬಹುದು, ನಿಮ್ಮ ವಿನ್ಯಾಸದ ಪ್ರಕಾರ ಗ್ಲೂ ಹಾಕಿ ಬಣ್ಣದ ಕಲ್ಲುಗಳನ್ನು ಅಂಟಿಸಿ, ಇಷ್ಟು ಮಾಡಿದರೆ ನಿಮ್ಮ ಡಿಸೈನ್ ರೆಡಿ. ಇದಕ್ಕೆ ಪೆನ್ಸಿಲ್ ಮತ್ತು ಟ್ವೀಜರ್ ಕತ್ತರಿ ಬಳಕೆ ಮಾಡಿ, ಸರಿಯಾಗಿ ಕತ್ತರಿಸಿದರೆ ತುಂಬಾ ಆಕರ್ಷಕವಾದ ವಿನ್ಯಾಸದ ಕುಂದನ್ ವಿನ್ಯಾಸ ರೆಡಿ.

ಇದನ್ನು ಗೋಡೆಗಳ ಅಲಂಕಾರಕ್ಕೂ ಬಳಸಬಹುದು

ಇದನ್ನು ಗೋಡೆಗಳ ಅಲಂಕಾರಕ್ಕೂ ಬಳಸಬಹುದು

ಈ ವಿನ್ಯಾಸ ಮಾಡಿಟ್ಟರೆ ಮನೆಯ ದೇವರ ಕೋಣೆಯ ಅಲಂಕಾರಕ್ಕೆ, ಗೋಡೆಗಳ ಅಲಂಕಾರಕ್ಕೂ ಬಳಸಬಹುದು.

ಗಿಫ್ಟ್‌ ನೀಡಬಹುದು

ಗಿಫ್ಟ್‌ ನೀಡಬಹುದು

ಹಬ್ಬಕ್ಕೆ ಮನೆಗೆ ಬಂದ ಗೆಸ್ಟ್‌ಗಳಿಗೆ ಈ ರೀತಿಯ ಕುಂದನ್ ವಿನ್ಯಾಸದ ವಸ್ತುಗಳನ್ನು ಗಿಫ್ಟ್ ಆಗಿಯೂ ನೀಡಬಹುದು.

ಇತರ ಹಬ್ಬಗಳಲ್ಲಿಯೂ ಬಳಸಬಹುದು

ಇತರ ಹಬ್ಬಗಳಲ್ಲಿಯೂ ಬಳಸಬಹುದು

ಇನ್ನು ಯುಗಾದಿ, ದೀಪಾವಳಿ, ದಸರಾ ಈ ರೀತಿಯ ಹಬ್ಬಗಳ ಆಚರಣೆಗೆ ಮನೆಯನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಅಲಂಕರಿಸಲು ಈ ಕುಂದನ್ ಡಿಸೈನ್‌ ಬಳಕೆ ಮಾಡಬಹುದು. ಈ ವೀಡಿಯೋದಲ್ಲಿ ನೀಡಿರುವಂತೆ ಮಾಡಿ ಅದರಲ್ಲಿ ದೀಪವನ್ನು ಹಚ್ಚಿಟ್ಟರೆ ದೀಪಾವಳಿ ಹಬ್ಬದ ಅಲಂಕಾರವೂ ತುಂಬಾ ವಿಶೇಷ ಅನಿಸುವುದು.

ಈ ಡೆಕೋರೇಷನ್ ಐಡಿಯಾ ಖಂಡಿತ ನಿಮ್ಮ ಮನಸ್ಸು ಗೆದ್ದಿರುತ್ತದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿದೆ. ಈ ಅಲಂಕಾರ ರೆಡಿ ಮಾಡಿ ಇಟ್ಟುಕೊಳ್ಳಿ.

English summary

Kundan decoration Idea For Varamahalaxmi Festival

Here are kundan decoration idea for varamahalaxmi festival, this wonderful idea shared by Anjali Rao, Have a look,
X
Desktop Bottom Promotion