For Quick Alerts
ALLOW NOTIFICATIONS  
For Daily Alerts

ಸಿಟ್ರಸ್ ಹಣ್ಣಿನ ಸಿಪ್ಪೆಯನ್ನು ಮನೆ-ಗಾರ್ಡನ್‌ನಲ್ಲಿ ಹೇಗೆಲ್ಲಾ ಬಳಸಬಹುದು ಗೊತ್ತೆ

|

ಸಿಟ್ರಸ್ ಹಣ್ಣಿನ ಸಿಪ್ಪೆಗಳನ್ನು ಸುಮ್ಮನೆ ಎಸೆದು ಕಸಕ್ಕೆ ಹಾಕುವ ಬದಲು ಹಲವಾರು ರೀತಿಯಲ್ಲಿ ನೀವು ಬಳಕೆ ಮಾಡಬಹುದು. ಕಿತ್ತಳೆ, ನಿಂಬೆ, ಟ್ಯಾಂಜೆಲೋ ಮತ್ತು ಇತರೆ ಸಿಟ್ರಸ್ ಹಣ್ಣುಗಳ ಸಿಪ್ಪೆಯನ್ನು ಬಳಸಿ ನೀವು ನಿಮ್ಮ ಹಣವನ್ನು ಉಳಿಸಬಹುದು ಮತ್ತು ಕೆಲವು ಅತ್ಯುತ್ತಮ ಫಲಿತಾಂಶವನ್ನು ಕೂಡ ಪಡೆಯಬಹುದು. ಹಾಗಾದ್ರೆ ಹೇಗೆ ಎಂಬ ಪ್ರಶ್ನೆಗೆ ಉತ್ತರವನ್ನು ನೀವು ಈ ಲೇಖನದಲ್ಲಿ ಪಡೆದುಕೊಳ್ಳಬಹುದು.

ಯಾವೆಲ್ಲಾ ಸಿಪ್ಪೆಗಳು?

ಯಾವೆಲ್ಲಾ ಸಿಪ್ಪೆಗಳು?

ಹಲವು ರೀತಿಯ ಸಿಟ್ರಸ್ ಗಳಿವೆ ಉದಾಹರಣೆಗೆ ಕಿತ್ತಳೆ, ಮೂಸಂಬಿ, ಕುಮ್ಕ್ವಾಟ್, ಗ್ರೇಪ್ ಫ್ರೂಟ್, ನಿಂಬೆ ಹಣ್ಣು, ಸಿಟ್ರಾನ್(ಸಿಟ್ರಸ್ ಸೇಬು), ಟ್ಯಾಂಗರಿನ್ ಗಳು ಇತ್ಯಾದಿ.

* ಬಳಕೆಗೆ ಮುನ್ನ ಮೊದಲನೆಯದಾಗಿ ಯಾವಾಗಲೂ ಕೂಡ ಸಿಪ್ಪೆಯನ್ನು ಚೆನ್ನಾಗಿ ತೊಳೆಯಿರಿ. ಸಾಧ್ಯವಾದಷ್ಟು ಸಾವಯವ ಮೂಲವನ್ನು ಬಳಕೆ ಮಾಡಿ. ಅದರಲ್ಲೂ ಆಹಾರ ಪದಾರ್ಥಗಳು ಮತ್ತು ಆಂತರಿಕ ಬಳಕೆಗಾಗಿ ಬಳಸುವ ವಸ್ತುಗಳನ್ನು ಆದಷ್ಟು ಕೆಮಿಕಲ್ ರಹಿತವಾಗಿರುವಂತೆ ನೋಡಿಕೊಳ್ಳುವುದು ಒಳ್ಳೆಯದು. ಒಂದು ವೇಳೆ ನಿಮಗೆ ಸಾವಯವ ಹಣ್ಣುಗಳು ದೊರೆಯದ ಪಕ್ಷದಲ್ಲಿ, ಸಿಂಪಡಿಸಲ್ಪಟ್ಟ ರಾಸಾಯನಿಕವನ್ನು ತೆಗೆಯಲು ಅತ್ಯುತ್ತಮವಾದ ಹಣ್ಣು ಮತ್ತು ತರಕಾರಿ ಸ್ಕ್ರಬ್ ಅನ್ನು ಬಳಕೆ ಮಾಡಿ.

* ಸಿಟ್ರಸ್ ಸಿಪ್ಪೆಗಳಿಂದಾಗುವ ಅಲರ್ಜಿಗಳು ಮತ್ತು ಡರ್ಮಟೈಟಿಸ್ ನ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಕೆಲವು ಅಧಿಕೃತ ಕಂಪೆನಿಗಳು ಮಾರಾಟ ಮಾಡುವ ಪ್ರೊಡಕ್ಟ್ ಗಳಲ್ಲಿ ನಮೂದಿಸಲಾಗಿರುವ "ಎಚ್ಚರಿಕೆಗಳು" ಎಂದು ಬರೆಯಲಾಗಿರುವುದನ್ನು ಗಮನಿಸಿ. ಅವುಗಳನ್ನು ಸೂಕ್ಷ್ಮವಾಗಿ ಓದಿಕೊಳ್ಳಿ.

1. ಕುಮ್ಕ್ವಾಟ್ ಸಿಪ್ಪೆಯನ್ನು ಬಳಸಿ (ಒಂದು ಜಾತಿಯ ಕಿತ್ತಳೆ ಹಣ್ಣು. ಕಡು ಕೇಸರಿ ಬಣ್ಣದಲ್ಲಿರುವ ಕಿತ್ತಳೆ ಹಣ್ಣು)

1. ಕುಮ್ಕ್ವಾಟ್ ಸಿಪ್ಪೆಯನ್ನು ಬಳಸಿ (ಒಂದು ಜಾತಿಯ ಕಿತ್ತಳೆ ಹಣ್ಣು. ಕಡು ಕೇಸರಿ ಬಣ್ಣದಲ್ಲಿರುವ ಕಿತ್ತಳೆ ಹಣ್ಣು)

* ಮರ್ಮಲೈಡ್ ತಯಾರಿಕೆಗಾಗಿ ಕುಮ್ಕ್ವಾಟ್ ಸಿಪ್ಪೆಯನ್ನು ಬಳಸಿ. ಶಿರಪ್ ನಂತೆ ಆಗುವವರೆಗೆ ಸಕ್ಕರೆ ಪಾಕದಲ್ಲಿ ಇದರ ಸಿಪ್ಪೆಗಳನ್ನು ಕುದಿಸಬೇಕು. ನಿಮಗೆ ಇಷ್ಟವಾಗುವ ಮರ್ಮಲೈಡ್ ರೆಸಿಪಿಯನ್ನು ನೀವು ಟ್ರೈ ಮಾಡಬಹುದು.

2. ನಿಂಬೆ ಹಣ್ಣಿನ ಸಿಪ್ಪೆ

2. ನಿಂಬೆ ಹಣ್ಣಿನ ಸಿಪ್ಪೆ

* ನಿಂಬೆಯ ಸಿಪ್ಪೆಯನ್ನು ತೆಗೆದು ಸ್ನಾನದ ಸಮಯದಲ್ಲಿ ಸ್ನಾನದ ನೀರಿನಲ್ಲಿ ಬಳಕೆ ಮಾಡಿ. ಇದು ನಿಮ್ಮ ದೇಹದ ದುರ್ಗಂಧ ನಿವಾರಣೆ ಮಾಡಿ ಸ್ವಚ್ಛವಾಗಿ ಮತ್ತು ಶುಚಿಯಾಗಿಡುವುದಕ್ಕೆ ನೆರವು ನೀಡುತ್ತದೆ.

* ನಿಂಬೆಯ ಟೇಸ್ಟ್ ಅನ್ನು ನಿಮ್ಮ ಚಹಾದಲ್ಲಿ ಬಳಸುವುದಕ್ಕಾಗಿ ಚಹಾ ಪುಡಿಗೆ ನಿಂಬೆ ಸಿಪ್ಪೆಯ ಪುಡಿಯನ್ನು ಸೇರಿಸಿ ಬಳಸಿ. ಇದು ನಿಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ.

* ತಾಜಾ ನಿಂಬೆಯ ಸಿಪ್ಪೆಯನ್ನು ಉಪಯೋಗಿಸಿ

* ಕ್ಯಾಂಡಿಡ್ ನಿಂಬೆಯ ಸಿಪ್ಪೆಯನ್ನು ತಯಾರಿಸಿಕೊಳ್ಳಿ

* ನಿಂಬೆಯ ಬ್ರ್ಯಾಂಡಿಯನ್ನು ತಯಾರಿಸಿ

* ಚಿಕನ್ ಅನ್ನು ರೋಸ್ಟ್ ಮಾಡುವ ಕೆಲಸದಲ್ಲಿ ಸಿಟ್ರಸ್ ಸಿಪ್ಪೆಗಳಲ್ಲಿ ಒಂದಾದ ನಿಂಬೆಯ ಸಿಪ್ಪೆ ಅತ್ಯುತ್ತಮವಾಗಿರುತ್ತದೆ. ನಿಂಬೆಯ ಸಿಪ್ಪೆಯನ್ನು ಚಿಕನ್ ನಲ್ಲಿಟ್ಟು ರೋಸ್ಟ್ ಮಾಡಿ. ಇದರಿಂದಾಗಿ ಚಿಕನ್ ನ ವಾಸನೆ ಅತ್ಯುತ್ತಮವಾಗುತ್ತದೆ ಮತ್ತು ಚಿಕನ್ ಗೆ ಅತ್ಯುದ್ಭುತ ರುಚಿ ನೀಡುವುದಕ್ಕೂ ಕೂಡ ಸಹಾಯವಾಗುತ್ತದೆ.

* ಕಾಕ್ ಟೈಲ್ ಗಳ ಗಾರ್ನಿಶಿಂಗ್ ನಲ್ಲೂ ಕೂಡ ನಿಂಬೆಯನ್ನು ಬಳಕೆ ಮಾಡಲಾಗುತ್ತದೆ.

3. ಕಿತ್ತಳೆ ಸಿಪ್ಪೆ

3. ಕಿತ್ತಳೆ ಸಿಪ್ಪೆ

* ನಿಮ್ಮ ಬ್ರೌನ್ ಶುಗರ್( ಕಂದು ಸಕ್ಕರೆ)ಯನ್ನು ಮೃದುವಾಗಿ ಇರಿಸುವುದಕ್ಕಾಗಿ ನೀವು ಕಿತ್ತಳೆ ಸಿಪ್ಪೆಯನ್ನು ಅದರ ಪ್ಯಾಕೇಜಿಂಗ್ ನಲ್ಲಿ ಹಾಕಿಡುವ ಮೂಲಕ ಬಳಕೆ ಮಾಡಬಹುದು.

* ಹಣ್ಣಿನ ರಸದ ಪಾನೀಯಗಳ ಅಲಂಕಾರಕ್ಕಾಗಿ ಬಳಕೆ ಮಾಡಬಹುದು. ಕಾಕ್ ಟೇಲ್ ಮತ್ತು ಸಲಾಡ್ ಗಳ ಅಲಂಕಾರದಲ್ಲೂ ಕೂಡ ನೀವು ಈ ಸಿಟ್ರಸ್ ಹಣ್ಣಿನ ಸಿಪ್ಪೆಯನ್ನು ಬಳಕೆ ಮಾಡಬಹುದು.

4. ದ್ರಾಕ್ಷಿಹಣ್ಣಿನ ಸಿಪ್ಪೆ

4. ದ್ರಾಕ್ಷಿಹಣ್ಣಿನ ಸಿಪ್ಪೆ

* ನಿಮ್ಮ ಸಲಾಡ್ ನಲ್ಲಿ ಅಲಂಕಾರಿಕವಾಗಿ ವಿಭಿನ್ನ ರೀತಿಯಲ್ಲಿ ಕತ್ತರಿಸಿ ದ್ರಾಕ್ಷಿ ಹಣ್ಣಿನ ಸಿಪ್ಪೆಯನ್ನು ಬಳಕೆ ಮಾಡಿದರೆ ನೋಡುವುದಕ್ಕೆ ಆಕರ್ಷಕವಾಗಿರುತ್ತದೆ. ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಕೇವಲ ಸಲಾಡ್ ಮೇಲೆ ಉದುರಿಸಿದಂತೆ ಇದನ್ನು ಬಳಕೆ ಮಾಡಿದರೂ ಕೂಡ ಸುಂದರವಾಗಿರುತ್ತದೆ. ಸಲಾಡಿನ ಪರಿಮಳವನ್ನು ಹೆಚ್ಚಿಸುವುದಕ್ಕೆ ಕೂಡ ಇದು ನೆರವಾಗುತ್ತದೆ.

* ಗ್ರೇಪ್ ಫ್ರೂಟ್ ಅಥವಾ ದ್ರಾಕ್ಷಿ ಹಣ್ಣಿನ ಮರ್ಮಲೇಡ್ ಅಥವಾ ಕ್ಯಾಂಡಿಯನ್ನು ಕೂಡ ತಯಾರಿಸಬಹುದು. ಇತರೆ ಸಿಪ್ಪೆಗಳ ಜೊತೆಗೆ ಇದನ್ನು ಮಿಕ್ಸ್ ಮಾಡಿಕೊಂಡರೂ ಕೂಡ ಚೆನ್ನಾಗಿರುತ್ತದೆ.

* ಸುಗಂಧ ದ್ರವ್ಯಕ್ಕಾಗಿ ಸಿಪ್ಪೆಯಿಂದ ಭಟ್ಟಿ ಇಳಿಸಿದ ಎಣ್ಣೆಯನ್ನು ಬಳಕೆ ಮಾಡಬಹುದು.

1. ಸಿಪ್ಪೆಯಿಂದ ಅಡುಗೆ

1. ಸಿಪ್ಪೆಯಿಂದ ಅಡುಗೆ

ಪಾಕಶಾಲೆಯಲ್ಲಿ ಖಂಡಿತ ನೀವು ಸಿಟ್ರಸ್ ಸಿಪ್ಪೆಗಳ ಕೈಚಳಕವನ್ನು ತೋರಿಸಲೇಬೇಕು. ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಸಿಟ್ರಸ್ ಸಿಪ್ಪೆಗಳ ಬಳಕೆ ಮಾಡುವುದರಿಂದಾಗಿ ಆರೋಗ್ಯದ ಜೊತೆಗೆ ಇತರೆ ಲಾಭವನ್ನು ಕೂಡ ಪಡೆಯಬಹುದು.

* ಸಿಟ್ರಸ್ ಸಿಪ್ಪೆಯ ಫ್ಲೇವರ್ ಹಾಕಿರುವ ನೀರನ್ನು ಬಳಕೆ ಮಾಡಿ. ಯಾವುದೇ ಸಿಟ್ರಸ್ ಸಿಪ್ಪೆಯನ್ನು ನೀರಿಗೆ ಹಾಕಿ ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳಿ. ಸ್ವಲ್ಪ ಸಮಯದ ನಂತರ ಅದನ್ನು ಸೇವಿಸಿ ಅದರ ರುಚಿಯನ್ನು ಸವಿಯಿರಿ.

* ಯಾವುದೇ ರೀತಿಯ ಸಿಟ್ರಸ್ ಸಿಪ್ಪೆಯನ್ನು ಬಳಸಿ ಮತ್ತು ಅದರ ಕ್ಯಾಂಡಿ ಮಾಡಿ. ಇದು ಮಕ್ಕಳಿಗೆ ಅತ್ಯದ್ಭುತ ಸಿಹಿಯಾಗುತ್ತದೆ ಮತ್ತು ಅತ್ಯುತ್ತಮ ಸ್ನ್ಯಾಕ್ ಕೂಡ ಆಗುತ್ತದೆ. ನೀವು ಮರ್ಮಲೈಡ್, ಚಟ್ನಿ, ಜಾಮ್ ಮತ್ತು ಸೇವರಿ ಸಾಸ್ ಆಗಿ ಸಿಟ್ರಸ್ ಸಿಪ್ಪೆಯನ್ನು ಬಳಕೆ ಮಾಡಬಹುದು.

* ಸಕ್ಕರೆ ಗಟ್ಟಿಯಾಗದಂತೆ ತಡೆಯಲು ಕಂದು ಸಕ್ಕರೆಗೆ ಸಿಟ್ರಸ್ ಸಿಪ್ಪೆಯನ್ನು ತುಂಡು ಸೇರಿಸಿ.

* ಮ್ಯಾಂಡರೀನ್ ಸಿಪ್ಪೆಯನ್ನು ಟೀಯಲ್ಲಿ ಬಳಕೆ ಮಾಡಬಹುದು. ಆದರೆ ಇದರ ಪ್ರಯೋಗ ಮಾಡುವ ಮುನ್ನ ಸಿಪ್ಪೆಯನ್ನು ಚೆನ್ನಾಗಿ ತೊಳೆಯುವುದನ್ನು ಮರೆಯಬೇಡಿ.

* ಮ್ಯಾಂಡರಿನ್ ಸಿಪ್ಪೆಯನ್ನು 100 °C (212 °F) ಕುದಿಯುವ ನೀರಿಗೆ ಸೇರಿಸಿ ಮತ್ತು ¾ ಕಪ್ ತುಂಬುವಂತೆ ನೋಡಿಕೊಳ್ಳಿ.

* ಚೆನ್ನಾಗಿ ಕುದಿಸಿ ನಿಮಗೆ ಇಷ್ಟವಾಗುವ ಮ್ಯಾಂಡರೀನ್ ಸಿಪ್ಪೆಯ ಟೀಯನ್ನು ಸವಿಯಿರಿ.

2. ಮನೆಬಳಕೆ ಕೆಲಸಗಳಲ್ಲಿ ಸಿಟ್ರಸ್ ಹಣ್ಣಿನ ಸಿಪ್ಪೆಗಳ ಬಳಕೆ

2. ಮನೆಬಳಕೆ ಕೆಲಸಗಳಲ್ಲಿ ಸಿಟ್ರಸ್ ಹಣ್ಣಿನ ಸಿಪ್ಪೆಗಳ ಬಳಕೆ

* ಕಿಂಡ್ಲಿಂಗ್ ಗಾಗಿ ಬಳಕೆ ಮಾಡಿ: ಯಾವುದೇ ರೀತಿಯ ಸಿಟ್ರಸ್ ಹಣ್ಣಿನ ಸಿಪ್ಪೆಯು ಚಳಿಗಾಲದಲ್ಲಿ ನಿಮ್ಮ ಅಗ್ಗಿಸ್ಟಿಕೆಗಾಗಿ ಅತ್ಯುತ್ತಮವಾದ ಕಿಂಡಲಿಂಗ್ ಆಗುತ್ತದೆ. ನೀವು ಸಿಪ್ಪೆಯನ್ನು ಒಣಗಿಸಿ ಇಟ್ಟುಕೊಂಡು ಇದ್ದಿಲಿನ ರೀತಿಯಲ್ಲಿ ಬೆಂಕಿ ಉರಿಸುವುದಕ್ಕಾಗಿ ಅಗ್ಗಿಸ್ಟಿಕೆಯಲ್ಲಿ ಬಳಕೆ ಮಾಡಬಹುದು.

* ವಾಸನೆಯಾಗಿರುವ ಸಾಕ್ಸ್ ಮತ್ತು ಒಳಉಡುಪಿನ ಡ್ರಾಯರ್ ಗೆ ಒಣಗಿದ ಸಿಟ್ರಸ್ ಸಿಪ್ಪೆಯನ್ನು ಹಾಕಿ ಇಟ್ಟರೆ ವಾಸನೆ ನಿವಾರಣೆ ಮಾಡಿಕೊಳ್ಳಬಹುದು. ಸ್ಯಾಚೆಟ್ ರೀತಿಯಲ್ಲಿ ನೀವು ಸಿಪ್ಪೆಯನ್ನು ಹಾಕಿಟ್ಟು ನಂತರ ಅದನ್ನು ಸಾಕ್ಸ್ ಅಥವಾ ಅಂಡರ್ ಗಾರ್ಮೆಂಟ್ಸ್ ಗಳ ಅಡಿಯಲ್ಲಿ ಇಡಬಹುದು. ಸ್ಯಾಚೆಟ್ ಅಂದರೆ ಸಣ್ಣದಾದ ಸುಗಂಧ ದ್ರವ್ಯದ ಬ್ಯಾಗ್.

* ಸ್ನಾನದಲ್ಲಿ, ಬಾತ್ ರೂಮಿನಲ್ಲಿ ಸಿಟ್ರಸ್ ಸಿಪ್ಪೆಯ ಬಳಕೆ ನಿಮ್ಮ ಮತ್ತು ನಿಮ್ಮ ಬಾತ್ ರೂಮಿನ ಪರಿಮಳವನ್ನು ಹೆಚ್ಚಿಸುವುದಕ್ಕೆ ನೆರವಾಗುತ್ತದೆ.

* ನೀರಿನ ಪಾತ್ರೆ ಹೊಳೆಯುತ್ತಿಲ್ಲವಾದರೆ ಆ ಪಾತ್ರೆಗೆ ಸ್ವಲ್ಪ ಸಿಟ್ರಸ್ ಸಿಪ್ಪೆಯನ್ನು ಹಾಕಿಡಿ. ಕೆಲವೇ ನಿಮಿಷದಲ್ಲಿ ಪಾತ್ರೆ ಫಳಫಳ ಹೊಳೆಯುವಂತಾಗಲು ಇದು ಸಹಕಾರಿ.

* ನಿಮ್ಮ ಚಪ್ಪಲಿ ಅಥವಾ ಶೂಗಳಲ್ಲಿ ಟಾರ್ ಕಲೆ ಆಗಿದ್ದಲ್ಲಿ ಅದನ್ನು ತೆಗೆದುಹಾಕಲು ಕಿತ್ತಳೆ ಸಿಪ್ಪೆಯನ್ನು ಬಳಕೆ ಮಾಡಿ.

* ಯಾವುದೇ ಸ್ಮೂದಿ ತಯಾರಿಕೆಯಲ್ಲಿ ಸಿಟ್ರಸ್ ಸಿಪ್ಪೆಯನ್ನು ಕೂಡ ಗ್ರೈಂಡ್ ಮಾಡಿಕೊಳ್ಳಿ ಮತ್ತು ಹೆಚ್ಚುವರಿ ರುಚಿ ಮತ್ತು ಲಾಭವನ್ನು ಎಂಜಾಯ್ ಮಾಡಿ.

* ಕಸದ ವಾಸನೆಯನ್ನು ತಡೆಯುವುದಕ್ಕಾಗಿ ನೀವು ಸಿಟ್ರಸ್ ಹಣ್ಣಿನ ಸಿಪ್ಪೆಯನ್ನು ಬಳಕೆ ಮಾಡಬಹುದು. ಒಂದೆರಡು ದಿನ ವಿಲೇವಾರಿ ಆಗದೇ ಕಸ ಮನೆಯಲ್ಲೇ ಉಳಿದಿದ್ದರೆ ಅದು ದುರ್ನಾತ ಬರಲು ಪ್ರಾರಂಭವಾಗುತ್ತದೆ. ಈ ದುರ್ನಾತವನ್ನು ತಡೆಯುವುದಕ್ಕಾಗಿ ನೀವು ಸಿಟ್ರಸ್ ಸಿಪ್ಪೆಯ ಬಳಕೆ ಮಾಡಬಹುದು.

3. ತೋಟಗಾರಿಕೆಯಲ್ಲಿ ಸಿಟ್ರಸ್ ಸಿಪ್ಪೆಯ ಬಳಕೆ

3. ತೋಟಗಾರಿಕೆಯಲ್ಲಿ ಸಿಟ್ರಸ್ ಸಿಪ್ಪೆಯ ಬಳಕೆ

* ಸಿಟ್ರಸ್ ಸಿಪ್ಪೆಯ ಗೊಬ್ಬರ ತಯಾರಿಸಿ. ನಿಮ್ಮ ಗಿಡಗಳಿಗೆ ಬಳಸುವ ಗೊಬ್ಬರಕ್ಕಾಗಿ ಸಿಟ್ರಸ್ ಸಿಪ್ಪೆ ಬಹಳ ಅತ್ಯುತ್ತಮವಾಗಿರುತ್ತದೆ. ಆದರೆ ಸಿಪ್ಪೆಯನ್ನು ಸಣ್ಣದಾಗಿ ಕತ್ತರಿಸುವುದನ್ನು ಮರೆಯಬೇಡಿ. ಯಾಕೆಂದರೆ ನೀವು ಸಣ್ಣದಾಗಿ ಸಿಪ್ಪೆಯನ್ನು ಕತ್ತರಿಸಿದರೆ ಬೇಗನೆ ಅದು ಕರಗಿ ಗೊಬ್ಬರವಾಗುವುದಕ್ಕೆ ನೆರವಾಗುತ್ತದೆ. ಗೊಬ್ಬರಕ್ಕಾಗಿ ನೀವು ಯಾವುದೇ ಸಿಟ್ರಸ್ ಹಣ್ಣಿನ ಸಿಪ್ಪೆಯನ್ನು ಬೇಕಿದ್ದರೂ ಬಳಕೆ ಮಾಡಬಹುದು. ಸಿಟ್ರಸ್ ಸಿಪ್ಪೆಗಳು ಕಾಂಪೋಸ್ಟ್ ಅಥವಾ ಗೊಬ್ಬರವು ತಾಜಾವಾಗಿರುವಂತೆ ಮತ್ತು ಸ್ವಚ್ಛವಾಗಿರುವಂತೆ ನೋಡಿಕೊಳ್ಳುತ್ತದೆ. ಕೆಲವರು ಕಿತ್ತಲೆ ಸಿಪ್ಪೆಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣವು ಗೊಬ್ಬರ ಆಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಎಂದು ದೂರುತ್ತಾರೆ. ಕೆಲವರು ಇದನ್ನು ನಗರ-ಪುರಾಣ ಎಂದು ಕರೆಯುವುದೂ ಇದೆ. ಈ ವಿಚಾರದ ಬಗ್ಗೆ ನೀವೇ ಸ್ವತಃ ಗೊಬ್ಬರ ತಯಾರಿಸಿ ಅನುಭವ ಪಡೆಯುವುದು ಒಳಿತು!

* ಬೆಕ್ಕುಗಳು ನಿಮ್ಮ ತೋಟದಲ್ಲಿ ಅಗೆಯದಂತೆ, ಮಣ್ಣನ್ನು ಕೆದರದಂತೆ ಮಾಡಬೇಕು ಎಂದಿದ್ದಲ್ಲಿ ಯಾವುದೇ ಸಿಟ್ರಸ್ ಹಣ್ಣಿನ ಸಿಪ್ಪೆಯನ್ನು ಬಳಕೆ ಮಾಡುವುದು ಒಳ್ಳೆಯದು. ನಿಮ್ಮ ಮುದ್ದಿನ ಸಾಕುಪ್ರಾಣಿಗಳು ತೋಟದಲ್ಲಿ ಮಾಡುವ ಕೆಲವು ಕಿತಾಪತಿ ಕೆಲಸಗಳನ್ನು ತಡೆಯುವುದಕ್ಕೆ ಖಂಡಿತ ಸಿಟ್ರಸ್ ಹಣ್ಣಿನ ಸಿಪ್ಪೆ ನೆರವಿಗೆ ಬರುತ್ತದೆ.

4. ಉಸಿರಿನ ವಾಸನೆಯನ್ನು ತೊಡೆದು ಹಾಕಲು ಸಿಟ್ರಸ್ ಸಿಪ್ಪೆಗಳು

4. ಉಸಿರಿನ ವಾಸನೆಯನ್ನು ತೊಡೆದು ಹಾಕಲು ಸಿಟ್ರಸ್ ಸಿಪ್ಪೆಗಳು

* ಸಿಟ್ರಸ್ ಸಿಪ್ಪೆಯನ್ನು ಹಾಗೆಯೇ ಬಾಯಿಯಲ್ಲಿ ಇಟ್ಟುಕೊಂಡು ಚೀಪುತ್ತಿರಿ. ಇದಕ್ಕಾಗಿ ನೀವು ಕಿತ್ತಳೆ ಅಥವಾ ನಿಂಬೆ ಸಿಪ್ಪೆಯನ್ನು ಬಳಕೆ ಮಾಡಬಹುದು. ಇದರಿಂದಾಗುವ ಬಹಳ ದೊಡ್ಡ ಲಾಭವೇನೆಂದರೆ ನಿಮ್ಮ ಉಸಿರಿನ ದುರ್ವಾಸನೆಯನ್ನು ತಡೆಯುವುದಕ್ಕೆ ಇದು ನೆರವಾಗುತ್ತದೆ ಮತ್ತು ಬಾಯಿಯ ವಾಸನೆ ನಿವಾರಣೆಗೂ ಕೂಡ ಸಹಾಯಕ. ಇದು ಪುದೀನಾ ಮತ್ತು ಚೂಯಿಂಗಮ್ ನ ಪರ್ಯಾಯವಾಗಿ ಖಂಡಿತ ಇದು ಕೆಲಸ ಮಾಡುತ್ತದೆ.

5. ಕೀಟಗಳನ್ನು ತೊಡೆದು ಹಾಕಲು ಸಿಟ್ರಸ್ ಸಿಪ್ಪೆಗಳ ಬಳಕೆ

5. ಕೀಟಗಳನ್ನು ತೊಡೆದು ಹಾಕಲು ಸಿಟ್ರಸ್ ಸಿಪ್ಪೆಗಳ ಬಳಕೆ

ಕೀಟಗಳು ಎಂದರೆ ನಿಮಗೆ ಭಯವಿದ್ಯಾ? ಅವುಗಳಿಂದ ಯಾವಾಗಲೂ ದೂರವಿರಬೇಕು ಎಂದು ಬಯಸುತ್ತೀರಾ? ಕೀಟಗಳ ಕಾಟದಿಂದ ಮುಕ್ತಿ ಪಡೆಯಬೇಕು ಎಂದಿದ್ದಲ್ಲಿ ಖಂಡಿತ ನೀವು ಸಿಟ್ರಸ್ ಸಿಪ್ಪೆಯ ಬಳಕೆಯನ್ನು ಮಾಡಬೇಕು.

* ಕಿತ್ತಳೆ ಸಿಪ್ಪೆಯನ್ನು ನಿಮ್ಮಚರ್ಮಕ್ಕೆ ಹಚ್ಚಿಕೊಂಡು ರಾತ್ರಿಯ ವೇಳೆ ಮಲಗುವುದರಿಂದಾಗಿ ಕೀಟಗಳಿಂದ ಸುರಕ್ಷಿತವಾಗಿರಬಹುದು. ಸ್ವಲ್ಪ ಕಿತ್ತಳೆ ಸಿಪ್ಪೆಯ ಪುಡಿಯನ್ನು ನಿಮ್ಮ ಚರ್ಮಕ್ಕೆ ಹಚ್ಚಿ ಉಜ್ಜಿಕೊಳ್ಳಿ ಮತ್ತು ಯಾವುದೇ ರೀತಿಯ ಕೀಟವು ನಿಮಗೆ ಕಿರಿಕಿರಿ ಮಾಡುತ್ತಿದ್ದರೆ ಇದೇ ವಿಧಾನವನ್ನು ಪುನರಾವರ್ತಿಸಿ.

* ಒಂದು ಕಪ್ ನಷ್ಟು ಬಿಸಿ ನೀರಿಗೆ 2-3 ಕಿತ್ತಳೆ/ಸಿಟ್ರಸ್ ಹಣ್ಣಿನ ಸಿಪ್ಪೆಯನ್ನು ತೆಗೆದು ಬ್ಲೆಂಡರ್ ನಲ್ಲಿ ಹಾಕಿ ಬ್ಲೆಂಡ್ ಮಾಡಿ. ನಂತರ ನಿಮಗೆ ತೊಂದರೆ ಉಂಟು ಮಾಡುತ್ತಿರುವ ಕೀಟದ ಮನೆಗೆ ಅದನ್ನು ಸುರಿಯಿರಿ. ಉದಾಹರಣೆಗೆ ಇರುವೆಗಳಿರುವ ಮೂಲಸ್ಥಾನದಲ್ಲಿ ಅವುಗಳು ಮಣ್ಣನ್ನು ಗುಪ್ಪೆ ಹಾಕಿರುತ್ತವೆ. ಅಂತಹ ಜಾಗಕ್ಕೆ ಈ ಮಿಶ್ರಣವನ್ನು ಹಾಕಿದರೆ ಇರುವೆಗಳಿಂದ ಮುಕ್ತಿ ಪಡೆಯಬಹುದು.

* ಬೆಕ್ಕುಗಳು ನಿಮ್ಮ ಗಿಡಗಳನ್ನು ಹಾಳು ಮಾಡದಂತೆ ತಡೆಯಬೇಕಿದ್ದಲ್ಲಿ ತಿಂಗಳಿಗೆ ಒಮ್ಮೆ ಸಿಟ್ರಸ್ ಸಿಪ್ಪೆಯಿಂದ ಗಿಡದ ಎಲೆಯನ್ನು ಉಜ್ಜಿ.

* ನಿಮ್ಮ ವಾಲ್ ಡ್ರೋಬ್ ಗೆ ಸೇರಿಕೊಳ್ಳುವ ಸಣ್ಣ ಜಾತಿಯ ಪತಂಗಗಳನ್ನು ತಡೆಯುವುದಕ್ಕಾಗಿ ನೀವು ಸಿಟ್ರಸ್ ಹಣ್ಣಿನ ಒಣಗಿದ ಸಿಪ್ಪೆಯನ್ನು ನಿಮ್ಮ ಗಾಡ್ರೇಜ್ ಅಥವಾ ವಾಲ್ ಡ್ರೋಬ್ ನಲ್ಲಿ ಇಡಬಹುದು.

6. ಸುಗಂಧ ದ್ರವ್ಯವಾಗಿ ಸಿಟ್ರಸ್ ಸಿಪ್ಪೆಗಳು

6. ಸುಗಂಧ ದ್ರವ್ಯವಾಗಿ ಸಿಟ್ರಸ್ ಸಿಪ್ಪೆಗಳು

* ಬಚ್ಚಲು ಮನೆಯ ವಾಸನೆಯನ್ನು ನಿವಾರಿಸುವುದಕ್ಕಾಗಿ ನೀವು ಸಿಟ್ರಸ್ ಸಿಪ್ಪೆಯನ್ನು ಬಳಸಿಕೊಳ್ಳಬಹುದು. ಸಿಟ್ರಸ್ ಸಿಪ್ಪೆಯನ್ನು ಒಣಗಿಸಿಕೊಳ್ಳಿ. ಒಮ್ಮೆ ಅದು ಸಂಪೂರ್ಣ ಒಣಗಿದ ನಂತರ ಪಾಟ್ಪೋರಿ (ಬಾತ್ ರೂಮಿನ ವಾಸನೆ ನಿವಾರಕ)ಕ್ಕೆ ಈ ಪುಡಿಯನ್ನು ಸೇರಿಸಿ ಇಡಬಹುದು. ಗಾಜಿನ ಜಾರಿನಲ್ಲಿ ಇದನ್ನು ಸಂಗ್ರಹಣೆ ಮಾಡಿ ಇಡುವುದು ಸೂಕ್ತ. ಸ್ಯಾಚೆಟ್ ಗಳಿಗೂ ಕೂಡ ನೀವಿದನ್ನು ಸೇರಿಸಬಹುದು. ಆ ಮೂಲಕ ನಿಮ್ಮ ಬಟ್ಟೆಗಳು ಶುದ್ಧವಾಗಿ, ಶುಭ್ರವಾಗಿ ಇರುವಂತೆ ನೋಡಿಕೊಳ್ಳಬಹುದು ಸಿಟ್ರಸ್ ಪಾಟ್ಪೋರಿಯನ್ನು ತಯಾರಿಸುವುದು ಹೇಗೆ ಎಂಬ ಬಗ್ಗೆ ವಿವರಣೆಯನ್ನು ತಿಳಿದುಕೊಳ್ಳಿ.

* ನಿಮ್ಮ ದೇಹದ ದುರ್ಗಂಧ ಹೋಗಲಾಡಿಸಿಕೊಳ್ಳುವುದಕ್ಕಾಗಿ ಮತ್ತು ಚರ್ಮದ ಪರಿಮಳ ಹೆಚ್ಚಿಸಿಕೊಳ್ಳುವುದಕ್ಕಾಗಿ ನೀವು ಪ್ರತಿ ದಿನ ಸ್ನಾನದ ನೀರಿಗೆ ಸಿಟ್ರಸ್ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಪೌಡರ್ ಅನ್ನು ಸೇರಿಸಿ ಬಳಕೆ ಮಾಡಿಕೊಳ್ಳಬಹುದು.

* ಮನೆಯಲ್ಲೇ ತಯಾರಿಸಲಾಗಿರುವ ಸುಗಂಧ ದ್ರವ್ಯಕ್ಕಾಗಿ ಸಿಟ್ರಸ್ ಸಿಪ್ಪೆಯ ಎಣ್ಣೆಯನ್ನು ಹೊರತೆಗೆದುಕೊಳ್ಳಬಹುದು.

* ಸಿಟ್ರಸ್ ಸಿಪ್ಪೆಯ ಸುಗಂಧ ದ್ರವ್ಯ ತಯಾರಿಸಿ

* ಬೇಸಿಗೆಗಾಗಿ ಸಿಟ್ರಸ್ ಸಿಪ್ಪೆಯ ಸೋಪ್ ಅನ್ನು ಕೂಡ ತಯಾರಿಸಿಕೊಳ್ಳಬಹುದು.

English summary

How To Use Citrus Fruit Peels In The Home and Garden

Citrus peels can be used in myriad ways instead of simply tossing them out or composting them. In a household that consumes many oranges, lemons, grapefruit, tangelo, and other citrus, making use of the peels can save you money and produce some wonderful results. This article presents a few suggestions to get you started.
X
Desktop Bottom Promotion