For Quick Alerts
ALLOW NOTIFICATIONS  
For Daily Alerts

ಮನೆಯ ಸದಸ್ಯರೆಲ್ಲರಿಗೂ ಕೋವಿಡ್‌ 19 ಬಂದ ಬಳಿಕ ಮನೆಯನ್ನು ಸೋಂಕು ಮುಕ್ತವಾಗಿಸಲು ಏನು ಮಾಡಬೇಕು?

|

ಕೊರೊನಾ 2ನೇ ಅಲೆಯಲ್ಲಿ ಕೊರೊನಾ ಸೋಂಕು ಸಾಕಷ್ಟು ಜನರಿಗೆ ತಗುಲಿದೆ. ಕೆಲ ಮನೆಗಳಲ್ಲಿ ಒಬ್ಬರು, ಇಬ್ಬರಿಗೆ ಸೋಂಕು ತಗುಲಿದರೆ ಇನ್ನು ಕೆಲ ಮನೆಗಳಲ್ಲಿ ಮನೆಯ ಎಲ್ಲಾ ಸದಸ್ಯರಿಗೆ ಸೋಂಕು ತಗುಲಿದೆ. ಒಬ್ಬರಿಗೆ ಅಥವಾ ಇಬ್ಬರಿಗೆ ಸೋಂಕು ತಗುಲಿದರೆ ಅವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ಕೊಡಿಸಬಹುದು, ಅದೇ ಇಡೀ ಮನೆಯ ಸದಸ್ಯರಿಗೆ ಸೋಂಕು ತಗುಲಿದಾಗ ಒಬ್ಬೊಬ್ಬರು ಒಂದೊಂದು ರೂಮ್‌ನಲ್ಲಿರಲು ಬಹುತೇಕ ಮನೆಗಳಲ್ಲಿ ಅಷ್ಟು ರೂಮ್‌ನ ಸೌಕರ್ಯವಿರುವುದಿಲ್ಲ. ಸ್ವಲ್ಪ ದೊಡ್ಡ ಮನೆಯೆಂದರೆ 3 ಬೆಡ್‌ರೂಂ ಇರುತ್ತದೆ. ಆದರೆ ಮಧ್ಯಮ ವರ್ಗದ ಮನೆಯೆಂದರೆ ಒಂದು ಅಥವಾ ಎರಡು ಬೆಡ್‌ರೂಂನ ಮನೆಯೇ ಹೆಚ್ಚಾಗಿರುತ್ತದೆ. ಹಾಗಿರುವಾಗ ಇಡೀ ಮನೆ ಸೋಂಕಿಗೆ ತುತ್ತಾದಾಗ ನಾವು ಮನೆಯನ್ನು ಹೇಗೆ ಸ್ಯಾನಿಟೈಸ್‌ ಮಾಡಬೇಕು, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ.

ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ:

ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ:

ಎಲ್ಲರೂ ಮನೆಯಲ್ಲಿ ಕೈಗಳನ್ನು ಆಗಾಗ ಸ್ವಚ್ಛವಾಗಿ ತೊಳೆಯುತ್ತಿರಬೇಕು. ಹ್ಯಾಂಡ್‌ ವಾಶ್ ಅಥವಾ ಸೋಪ್ ಹಚ್ಚಿ ಕೈಗಳನ್ನು ತೊಳೆಯುತ್ತಿರಬೇಕು. ಇನ್ನು ಯಾವುದಾದರೂ ವಸ್ತುಗಳನ್ನು ಮುಟ್ಟುವ ಮುನ್ನ ಕೈಗಳಿಗೆ ಸ್ಯಾನಿಟೈಸರ್‌ ಹಾಕಿ.

ಸ್ಯಾನಿಟೈಸರ್‌ ಸಮೀಪದಲ್ಲೇ ಇಟ್ಟುಕೊಳ್ಳಿ

ಸ್ಯಾನಿಟೈಸರ್‌ ಸಮೀಪದಲ್ಲೇ ಇಟ್ಟುಕೊಳ್ಳಿ

ಮನೆಯಲ್ಲಿ ಶೇ. 60ರಷ್ಟು ಆಲ್ಕೋಹಾಲ್ ಇರುವ ಸ್ಯಾನಿಟೈಸರ್ ಬಳಸಿ. ಮಕ್ಕಳಿದ್ದರೆ ಅವರನ್ನು ಮುಟ್ಟುವ ಮುನ್ನ, ಅವರ ಡಯಾಪರ್ ತೆಗೆಯುವ ಮುನ್ನ ನಿಮ್ಮ ಕೈಗಳಿಗೆ ಸ್ಯಾನಿಟೈಸರ್ ಹಾಕಿ. ಇದು ವೈರಸ್‌ ಬೆಳವಣಿಗೆ ತಡೆಗಟ್ಟಲು ಸಹಾಯ ಮಾಡುವುದು.

ವಸ್ತುಗಳನ್ನು ಸ್ವಚ್ಛ ಮಾಡಿ

ವಸ್ತುಗಳನ್ನು ಸ್ವಚ್ಛ ಮಾಡಿ

ಕೊರೊನಾ ಸೋಂಕು ತಗುಲಿದಾಗ ಕೆಲವರಲ್ಲಿ ತುಂಬಾ ಸುಸ್ತು ಇರುತ್ತದೆ, ಅಂಥವರು ಏನೂ ಮಾಡಬೇಡಿ ವಿಶ್ರಾಂತಿ ತೆಗೆದುಕೊಳ್ಳಿ. ಕೊರೊನಾ ಲಕ್ಷಣಗಳಿಲ್ಲದೆ ಕೊರೊನಾ ಪಾಸಿಟಿವ್‌ ಬಂದಿದ್ದರೆ ಅಂಥವರಿಗೆ ಹೆಚ್ಚಿನ ಸುಸ್ತು ಏನೂ ಇರುವುದಿಲ್ಲ, ಅವರು ಮನೆಯ ಡೋರ್, ಹ್ಯಾಂಡಲ್ಸ್ ಹೀಗೆ ಹೆಚ್ಚು ಮುಟ್ಟುವ ವಸ್ತುಗಳನ್ನು ಸ್ಯಾನಿಟೈಸ್‌ ಮಾಡಿ. EPA ರಿಜಿಸ್ಟ್ರೇಷನ್ ಇರುವ ಡಿಸ್‌ಇನ್‌ಫೆಕ್ಟಂಟ್‌ ಬಳಸಿ.

ಮಕ್ಕಳ ಆಟಿಕೆ ಸ್ವಚ್ಛಗೊಳಿಸಿ

ಮಕ್ಕಳ ಆಟಿಕೆ ಸ್ವಚ್ಛಗೊಳಿಸಿ

ಮಕ್ಕಳು ಎಷ್ಟು ಹುಷಾರಿಲ್ಲದಿದ್ದರೂ ಆಡುತ್ತಾ ಇರುತ್ತವೆ, ಆದ್ದರಿಂದ ಮಕ್ಕಳ ಆಟಿಕೆಗಳನ್ನು ಸೋಪ್‌ ನೀರಿನಲ್ಲಿ ತೊಳೆಯಿರಿ. ಎಲೆಕ್ಟ್ರಾನಿಕ್ಸ್ ಆಟಿಕೆಯಾದರೆ ಅದನ್ನು ಸೋಪ್‌ ನೀರಿನಲ್ಲಿ ಒರೆಸಿ ಸ್ವಚ್ಛಗೊಳಿಸಿ.

ಮಕ್ಕಳ ಡಯಾಪರ್‌ ಎಚ್ಚರಿಕೆಯಿಂದ ಬದಲಾಯಿಸಿ

ಮಕ್ಕಳ ಡಯಾಪರ್‌ ಎಚ್ಚರಿಕೆಯಿಂದ ಬದಲಾಯಿಸಿ

ಮಕ್ಕಳ ಡಯಾಪರ್ ಅನ್ನು ಬೆಡ್‌ ಮೇಲೆ ಅಥವಾ ಅಡುಗೆ ಕೋಣೆ, ಡೈನಿಂಗ್ ಟೇಬಲ್ ಹೀಗೆ ಎಲ್ಲೆಂದರಲ್ಲಿ ಬದಲಾಯಿಸಬೇಡಿ. ಮಗುವನ್ನು ಡಯಾಪರ್‌ ಚೇಂಜ್ ಮಾಡುವ ಟೇಬಲ್ ಮೇಲೆ ಮಲಗಿಸಿ (ಇಲ್ಲಾಂದ್ರೆ ಅದಕ್ಕಾಗಿ ಒಂದು ಚಿಕ್ಕ ಟೇಬಲ್ ಇಡಿ) , ನಿಮ್ಮ ಕೈಗಳಿಗೆ ಗ್ಲೌಸ್ ಧರಿಸಿ ಡಯಾಪರ್‌ ಬದಲಾಯಿಸಿ, ನಂತರ ಅದನ್ನು ಕಸದ ಬುಟ್ಟಿಗೆ ಹಾಕಬೇಕು. ಡಯಾಪರ್ ಬಿಚ್ಚಿ ಅಲ್ಲಲ್ಲಿ ಇಡುವುದು ಮಾಡಬೇಡಿ.

ಬಟ್ಟೆ ಎಲ್ಲಾ ತೊಳೆಯಿರಿ

ಬಟ್ಟೆ ಎಲ್ಲಾ ತೊಳೆಯಿರಿ

ಸೋಂಕಿನಿಂದ ಗುಣಮುಖರಾದ ಬಳಿಕ ಬಳಸಿದ ಬಟ್ಟೆ ಎಲ್ಲವನ್ನು ತೊಳೆಯಿರಿ. ಬಳಸಿದ ಗ್ಲೌಸ್‌, ಮಾಸ್ಕ್ ಎಲ್ಲವನ್ನು ಸರಿಯಾದ ರೀತಿಯಲ್ಲಿ ಕಸದ ಬುಟ್ಟಿಗೆ ಹಾಕಿ.

ನಿಮ್ಮ ಆಹಾರ ಸೋಂಕಾಣುಗಳಿಂದ ಮುಕ್ತವಾಗಿರಲಿ

ನಿಮ್ಮ ಆಹಾರ ಸೋಂಕಾಣುಗಳಿಂದ ಮುಕ್ತವಾಗಿರಲಿ

ಒಮ್ಮೆ ನೆಗೆಟಿವ್ ಬಂದ ಮೇಲೆ ಹೊರಗಡೆಯಿಂದ ಆಹಾರ ತರಿಸಬೇಡಿ. ಗಂಜಿ, ಬ್ರೆಡ್‌ ಟೋಸ್ಟ್‌ ಇಂಥವುಗಳನ್ನು ಮನೆಯಲ್ಲಿ ಮಾಡಿ ಕಡುಇಯಿರಿ. ಅಲ್ಲದೆ ನಿಮ್ಮ ತಟ್ಟೆಗೆ ಮನೆಯ ಇತರ ಸದಸ್ಯರು ಕೈ ಹಾಕುವುದು, ನೀವು ಅವರ ತಟ್ಟೆಗೆ ಕೈ ಹಾಕುವುದು ಮಾಡಬೇಡಿ.

ಬಾತ್‌ರೂಂ ಸಂಪೂರ್ಣ ಸ್ವಚ್ಛಗೊಳಿಸಿ

ಬಾತ್‌ರೂಂ ಸಂಪೂರ್ಣ ಸ್ವಚ್ಛಗೊಳಿಸಿ

ಬ್ಯಾಕ್ಟಿರಿಯಾ, ವೈರಸ್‌ಗಳು ಬಾತ್‌ರೂಂನಲ್ಲಿ ಇರುವ ಸಾಧ್ಯತೆ ಹೆಚ್ಚು, ಇವುಗಳನ್ನು ಸಂಪೂರ್ಣವಾಗಿ ಸ್ವಚ್ಛ ಗೊಳಿಸಿ. ಟಯ್ಲೆಟ್ ಕ್ಲೀನರ್, ಬಾತ್‌ರೂಂ ಕ್ಲೀನರ್‌, ಸೋಪು ನೀರು ಬಳಸಿ ಸ್ವಚ್ಛ ಗೊಳಿಸಿ.

ಬಳಸುತ್ತಿದ್ದ ಟೂತ್‌ ಬ್ರೆಷ್ ಬಿಸಾಡಿ ,

ಬಳಸುತ್ತಿದ್ದ ಟೂತ್‌ ಬ್ರೆಷ್ ಬಿಸಾಡಿ ,

ಸೋಂಕಿನಿಂದ ಚೇತರಿಸಿದ ಬಳಿಕ ಹಳೆಯ ಬ್ರೆಷ್‌ ಬಳಸಬೇಡಿ, ಅದನ್ನು ಬಿಸಾಡಿ ಹೊಸ ಬ್ರೆಷ್‌ ಬಳಸಿ, ಸ್ಕ್ರಬ್ಬರ್ ಕೂಡ ಅಷ್ಟೇ ಹೊಸದೇ ಬಳಸಿ.

ಮಕ್ಕಳಿಗೆ ಎದೆ ಹಾಲುಣಿಸಿ

ಮಕ್ಕಳಿಗೆ ಎದೆ ಹಾಲುಣಿಸಿ

ತಾಯಿಗೆ ಸೋಂಕು ಇದ್ದರೆ ಮಗುವಿಗೆ ಎದೆಹಾಲನ್ನು ಕೊಡುವುದನ್ನು ನಿಲ್ಲಿಸಬೇಡಿ. ಎದೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇದ್ದು ಅದು ಅವರನ್ನು ರಕ್ಷಣೆ ಮಾಡುತ್ತದೆ. ಮಗುವನ್ನು ಎತ್ತುವಾಗ ನೀವು ಡಬಲ್ ಮಾಸ್ಕ್‌ ಧರಿಸಿರಿ, ಕೈಗಳಿಗೆ ಗ್ಲೌಸ್ ಧರಿಸಿ, ಕೆಮ್ಮುವುದು, ಸೀನುವುದು ಮುಗುವಿನ ಮುಂದೆ ಮಾಡ ಬೇಡಿ.

ಈ ಸಮಯದಲ್ಲಿ ಮನೆಯ ಇತರ ಸದಸ್ಯರೆಲ್ಲರು ಮಗುವಿನ ಎತ್ತುವುದು ಬೇಡ, ತಯಿ ಮಾತ್ರ ನೋಡಿಕೊಂಡರೆ ಸಾಕು.

ಪ್ರೀತಿಯ ಸಂಭಾಷಣೆ ಇರಲಿ

ಪ್ರೀತಿಯ ಸಂಭಾಷಣೆ ಇರಲಿ

ಮನೆಯಲ್ಲಿ ಒಬ್ಬರು ಮತ್ತೊಬ್ಬರಿಗೆ ಧೈರ್ಯ ತುಂಬುವ ಕೆಲಸ ಮಾಡಿ. ದೂರದಲ್ಲಿಯೇ ನಿಂತು ಮಾತನಾಡಿ, ಸಂಗಾತಿಗೆ ಫ್ಲೈಯಿಂಗ್ ಕಿಸ್‌ ನೀಡಿ, ಇವೆಲ್ಲಾ ನಿಮ್ಮಲ್ಲಿ ಲವಲವಿಕೆ ತುಂಬುವುದು. ಮಕ್ಕಳೊಂದಿಗೆ ಆಟವಾಡಿ.

English summary

How To Stop Germs When Your Whole Family Is Sick in Kannada

How to stop germs when your whole family is sick, read on..
Story first published: Friday, May 28, 2021, 18:16 [IST]
X
Desktop Bottom Promotion