For Quick Alerts
ALLOW NOTIFICATIONS  
For Daily Alerts

ಬೆವರಿನ ಕಲೆ ಇರುವ ಬಟ್ಟೆ ಡ್ರೈಯರ್‌ನಲ್ಲಿ ಹಾಕಲೇಬೇಡಿ, ಹೀಗೆ ಮಾಡಿ

|

ತುಂಬಾ ಬೆವರುವವರು ಒಂದು ಗಮನಿಸಿರಬಹುದು, ನಿಮ್ಮ ಬಟ್ಟೆ ಒದ್ದೆಯಾಗುವುದು ಮಾತ್ರವಲ್ಲ, ಕುತ್ತಿಗೆ ಹತ್ತಿರ, ಕಂಕುಳ ಹತ್ತಿರ ಕಲೆ ರೀತಿಯಾಗಿರುತ್ತದೆ. ಈ ಕಲೆ ಸುಲಭವಾಗಿ ಹೋಗುವುದಿಲ್ಲ. ಇನ್ನು ಕೈಯಲ್ಲಿ ಒಗೆಯುವುದಾದರೆ ಸರಿ, ಇಲ್ಲಾ ನೀವು ಬಟ್ಟೆ ಒಗೆಯಲು ವಾಶಿಂಗ್ ಮೆಷಿನ್ ಬಳಸುವುದಾದರೆ ಬೆವರಿನ ಕಲೆ ಇರುವ ಬಟ್ಟೆಯನ್ನು ವಾಶಿಂಗ್‌ ಮೆಷಿನ್‌ನಲ್ಲಿ ಹಾಕಲೇಬಾರದು.

ಇಂಥ ಬಟ್ಟೆ ವಾಶಿಂಗ್‌ ಮೆಷಿನ್‌ನಲ್ಲಿ ಏಕೆ ಹಾಕಬಾರದು, ಇದರ ಕಲೆ ಹೋಗಲಾಡಿಸುವುದು ಹೇಗೆ ಎಂದು ನೋಡೋಣ:

ಬೆವರಿನ ಕಲೆ ಹೋಗಲಾಡಿಸುವುದು ಹೇಗೆ?

ಬೆವರಿನ ಕಲೆ ಹೋಗಲಾಡಿಸುವುದು ಹೇಗೆ?

* 250 ಮಿ.ಲೀ ವೈಟ್‌ ವಿನೆಗರ್‌

* 500 ಮಿ. ಲೀ ಬಿಸಿ ನೀರು

* 120 ಗ್ರಾಂ ಅಡುಗೆ ಸೋಡಾ

* 1 ಚಮಚ ಉಪ್ಪು

* 1 ಚಮಚ ಹೈಡ್ರೋಜನ್‌ ಪರಾಕ್ಸೈಡ್

ಒಂದು ಬಕೆಟ್‌ ಬಿಸಿ ನೀರಿನಲ್ಲಿ ವೈಟ್‌ ವಿನೆಗರ್‌ ಹಾಕಿ, ಅದರಲ್ಲಿ ಬೆವರಿನ ಕೊಳೆ ಅಧಿಕವಿರುವ ಬಟ್ಟೆಯನ್ನು ನೆನೆ 20 ನಿಮಿಷ ಹಾಕಿ. ಮತ್ತೊಂದು ಪ್ರತ್ಯೇಕ ಬೌಲ್‌ನಲ್ಲಿ ಬೇಕಿಂಗ್ ಸೋಡಾ, ಉಪ್ಪು, ಹೈಡ್ರೋಜನ್‌ ಪರಾಕ್ಸೈಡ್ ಹಾಕಿ ಗಟ್ಟಿಯಾದ ಪೇಸ್ಟ್ ರೀತಿ ಮಾಡಿ. ಈಗ ನೀರಿನಲ್ಲಿ ನೆನೆ ಹಾಕಿ ಬಟ್ಟೆ ತೆಗೆದು ಮಿಕ್ಸ್ ಮಾಡಿಟ್ಟ ಪೇಸ್ಟ್ ಅನ್ನು ಕಲೆ ಇರುವ ಕಡೆ ಹಾಕಿ ತಿಕ್ಕಿ, ಇದರಿಂದ ಬೆವರಿನ ಕಲೆ ಹೋಗಿ ಬಟ್ಟೆ ಶುಭ್ರವಾಗಿ ಕಾಣುವುದು.

 ಡ್ರೈಯರ್‌ನಲ್ಲಿ ಏಕೆ ಹಾಕಬಾರದು

ಡ್ರೈಯರ್‌ನಲ್ಲಿ ಏಕೆ ಹಾಕಬಾರದು

ನೀವು ಬೆವರಿನ ಕಲೆ ಇರುವ ಬಟ್ಟೆಯನ್ನು ಡ್ರೈಯರ್‌ನಲ್ಲಿ ಹಾಕಿದರೆ ಕಲೆ ಫ್ಯಾಬ್ರಿಕ್ ಬಟ್ಟೆಯಲ್ಲಿ ಮತ್ತಷ್ಟು ಕಲೆ ಅಂಟಿಕೊಮಡು ಬಟ್ಟೆಯೇ ಹಾಳಾಗಬಹುದು. ಅಲ್ಲದೆ ಆ ಕಲೆ ಮತ್ತೆ ಹೋಗಿಸುವುದು ಕೂಡ ಕಷ್ಟವಾಗುವುದು. ಆದ್ದರಿಂದ ಬೆವರಿನ ಕಲೆ ಇರುವ ಬಟ್ಟೆಯನ್ನು ಡ್ರೈಯರ್‌ನಲ್ಲಿ ಹಾಕಬೇಡಿ.

 ಇತರ ವಿಧಾನ:

ಇತರ ವಿಧಾನ:

ನೀವು ಆಸ್ಪಿರಿನ್‌ಯನ್ನು ಪುಡಿ ಮಾಡಿ ಅದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್‌ ರೀತಿ ಮಾಡಿ, ಅದನ್ನು ಕಲೆ ಇರುವ ಕಡೆ ಹಳೆಯ ಟೂತ್‌ ಬ್ರೆಷ್‌ನಲ್ಲಿ ಹಾಕಿ ತಿಕ್ಕಿದರೆ ಕಲೆ ಇಲ್ಲವಾಗುವುದು.

ಮತ್ತೊಂದು ವಿಧಾನ

1 ಚಮಚ ನಿಂಬೆರಸಕ್ಕೆ 1 ಚಮಚ ನೀರು ಹಾಕಿ ಮಿಕ್ಸ್ ಮಾಡಿ ಅದನ್ನು ಕಲೆ ಇರುವ ಕಡೆ ಹಚ್ಚಿ ಅರ್ಧ ಗಂಟೆ ಬಿಟ್ಟು ಬಟ್ಟೆ ತೊಳೆಇರಿ, ಇದರಿಂದ ಕಲೆ ಹೋಗಲಾಡಿಸಬಹುದು.

ಬಟ್ಟೆಯಿಂದ ಬೆವರಿನ ದುರ್ಗಂಧ ಹೋಗಲಾಡಿಸುವುದು ಹೇಗೆ?

ಬಟ್ಟೆಯಿಂದ ಬೆವರಿನ ದುರ್ಗಂಧ ಹೋಗಲಾಡಿಸುವುದು ಹೇಗೆ?

ತುಂಬಾ ಸೆಕೆ ಇರುವ ಕಡೆ ಬಟ್ಟೆ ಬೇಗನೆ ಬೆವರು ವಾಸನೆ ಬೀರುತ್ತದೆ. ಎಷ್ಟೇ ಸೋಪ್‌ ಹಚ್ಚಿ ತೊಳೆದರೂ ಆ ವಾಸನೆ ಸ್ವಲ್ಪ ಉಳಿಯುವುದು. ಆದ್ದರಿಂದ ಒಂದು ಬಕೆಟ್‌ ಬಿಸಿ ನೀರಿಗೆ 1 ಚಿಕ್ಕ ಕಪ್ ವೈಟ್‌ ವಿನೆಗರ್‌ ಹಾಕಿ ಅದರಲ್ಲಿ ಬಟ್ಟೆಯನ್ನು ನೆನೆ ಹಾಕಿ ಒಗೆದರೆ ಬೆವರಿನ ವಾಸನೆ ದೂರವಾಗುವುದು.

English summary

How to Remove Sweat Stains from Your Clothes in Kannada

Here are tips to remove sweat stains from clothes, read on,
X
Desktop Bottom Promotion