For Quick Alerts
ALLOW NOTIFICATIONS  
For Daily Alerts

ತಳಹಿಡಿದು ಸುಟ್ಟುಹೋಗಿರುವ ಆಹಾರದ ವಾಸನೆಯನ್ನು ತೆಗೆದುಹಾಕಲು ಇಲ್ಲಿವೆ ಟಿಪ್ಸ್‌ಗಳು

|

ಮನೆಗೆ ಅತಿಥಿಗಳನ್ನು ಊಟಕ್ಕೆ ಆಹ್ವಾನಿಸಿರುತ್ತೀರಿ. ಆದರೆ, ಕೊನೆಯ ಘಳಿಗೆಯಲ್ಲಿ ಮಾಡಿದ ಅಡುಗೆ ತಳ ಹಿಡಿದು, ಹಾಳಾಗಿದೆ ಎಂಬುದು ಗಮನಕ್ಕೆ ಬರುತ್ತದೆ. ಆ ಸಮಯದಲ್ಲಿ ಹೊರಗಿನಿಂದ ಆಹಾರವನ್ನು ಆರ್ಡರ್ ಮಾಡುವುದನ್ನು ಬಿಟ್ಟು ನಿಮಗೆ ಬೇರೆ ದಾರಿಯಿರುವುದಿಲ್ಲ. ನೀವೂ ಕೂಡ ಈ ರೀತಿಯ ಸಮಸ್ಯೆಯನ್ನು ಎದುರಿಸಿದ್ದರೆ ಈ ಸುಲಭವಾದ ಹ್ಯಾಕ್ಸ್‌ಗಳನ್ನು ಪ್ರಯತ್ನಿಸಿ. ಈ ಸಲಹೆಗಳ ಸಹಾಯದಿಂದ, ಯಾವುದೇ ಸಮಸ್ಯೆಯಿಲ್ಲದೆ ತಳಹಿಡಿದು ಸುಟ್ಟಿರುವ ವಾಸನೆಯನ್ನು ಆಹಾರದಿಂದ ತೆಗೆದುಹಾಕಲು ಸಾಧ್ಯವಾಗುತ್ತದೆ.

ಆಹಾರ ತಳಹಿಡಿದು ಸುಟ್ಟುಹೋಗಿದ್ದರೆ, ಅದರ ವಾಸನೆಯನ್ನು ತೆಗೆದುಹಾಕುವ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ತಳಹಿಡಿದ ಬೇಳೆಯ ವಾಸನೆಯನ್ನು ಈ ರೀತಿ ತೆಗೆಯಿರಿ:

ತಳಹಿಡಿದ ಬೇಳೆಯ ವಾಸನೆಯನ್ನು ಈ ರೀತಿ ತೆಗೆಯಿರಿ:

ಸಾಮಾನ್ಯವಾಗಿ ಪ್ರೆಶರ್ ಕುಕ್ಕರ್‌ನಲ್ಲಿ ನೀರು ಕಡಿಮೆಯಾಗಿ, ಅಡುಗೆ ಮಾಡುವಾಗ ಬೇಳೆ ಸುಟ್ಟುಹೋಗುತ್ತದೆ. ನಿಮಗೂ ಇದು ಸಂಭವಿಸಿದ್ದರೆ, ಒಂದು ಲೋಟದ ಸಹಾಯದಿಂದ, ಬೇಳೆ ತೆಗೆದುಕೊಂಡು ಅವುಗಳನ್ನು ತಣ್ಣಗಾಗಿಸಿ. ನಂತರ ಈ ಬೇಳೆಯನ್ನು ಫ್ರಿಡ್ಜ್‌ನಲ್ಲಿ ಸುಮಾರು ಒಂದು ಗಂಟೆ ಇಡಿ. ಒಂದು ಗಂಟೆಯ ನಂತರ, ಪ್ಯಾನ್ ಅನ್ನು ಗ್ಯಾಸ್ ಮೇಲಿಟ್ಟ ನಂತರ ಈರುಳ್ಳಿ, ಟೊಮ್ಯಾಟೊ ಮಿಶ್ರಣ ಮಾಡಿ. ಬೇಳೆ, ತುಪ್ಪ ಮತ್ತು ಇಂಗು ಸೇರಿಸಿ. ಈ ಸಲಹೆಗಳನ್ನು ಪ್ರಯತ್ನಿಸುವ ಮೂಲಕ, ಬೇಳೆಯಿಂದ ತಳಹಿಡಿದ ವಾಸನೆಯು ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ.

ಕೋಳಿಯ ವಾಸನೆಯನ್ನು ಹೋಗಲಾಡಿಸಲು ಹೀಗೆ ಮಾಡಿ:

ಕೋಳಿಯ ವಾಸನೆಯನ್ನು ಹೋಗಲಾಡಿಸಲು ಹೀಗೆ ಮಾಡಿ:

ಕೋಳಿ ಮಾಂಸದ ನಿಜವಾದ ರುಚಿ ಅದರ ಗ್ರೇವಿಯಲ್ಲಿದೆ. ಆದ್ದರಿಂದ ಈ ಗ್ರೇವಿ ಸುಟ್ಟರೆ ಶ್ರಮ ಮತ್ತು ರುಚಿ ಎರಡೂ ಹಾಳಾಗುತ್ತದೆ. ಎಂದಾದರೂ ಚಿಕನ್ ಗ್ರೇವಿ ತಳಹಿಡಿದಿದ್ದರೆ, ಚಿಕನ್‌ನ್ನು ಮೇಲಿನಿಂದ ತೆಗೆದು, ಅದಕ್ಕೆ ಸ್ವಲ್ಪ ಹಾಲನ್ನು ಮಿಶ್ರಣ ಮಾಡಿ, ಬೇಯಿಸಿ. ಈ ಮೂಲಕ ಸುಟ್ಟ ವಾಸನೆ ಕಡಿಮೆಯಾಗುತ್ತದೆ. ಆದ್ದರಿಂದ ಚಿಕನ್ ಸುಟ್ಟರೆ, ಅರ್ಧ ಕಪ್ ಹಾಲು ಸೇರಿಸಿ ಮತ್ತು ಅದನ್ನು ಮತ್ತೆ ಬೇಯಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಇದರಿಂದ ಸುಟ್ಟ ವಾಸನೆ ಹೋಗುತ್ತದೆ.

ತರಕಾರಿ ಗ್ರೇವಿ:

ತರಕಾರಿ ಗ್ರೇವಿ:

ಯಾವುದೇ ತರಕಾರಿಯನ್ನು ಗ್ರೇವಿ ಸುಟ್ಟಿದ್ದರೆ ಅಥವಾ ತಳಹಿಡಿದಿದ್ದರೆ, ಮೊದಲು ಅದನ್ನು ಪ್ಯಾನ್‌ನಿಂದ ತೆಗೆದು, ಪ್ರತ್ಯೇಕ ಪಾತ್ರೆಯಲ್ಲಿ ಹಾಕಿ. ಇದರ ನಂತರ, ಗ್ಯಾಸ್ ಮೇಲೆ ಮತ್ತೊಂದು ಪ್ಯಾನ್ ಇಟ್ಟು, ಅದಕ್ಕೆ ತರಕಾರಿಗಳನ್ನು ಹಾಕಿ, ಒಂದು ಅಥವಾ ಎರಡು ಚಮಚ ಮಜ್ಜಿಗೆ ಮತ್ತು ಮೊಸರು ಮಿಶ್ರಣ ಮಾಡಿ ಸ್ವಲ್ಪ ಸಮಯ ಬೇಯಿಸಿ. ಹೀಗೆ 10 ನಿಮಿಷ ಮಾಡಿದ ನಂತರ ಗ್ಯಾಸ್ ಆಫ್ ಮಾಡಿ ಸರ್ವ್ ಮಾಡಿ. ವಾಸನೆ ಸಂಪೂರ್ಣವಾಗಿ ಮರೆಯಾಗಿರುತ್ತದೆ.

ತರಕಾರಿ ಪಲ್ಯ:

ತರಕಾರಿ ಪಲ್ಯ:

ಬೇಯಲು ಹಾಕಿಟ್ಟ ತರಕಾರಿ ಸುಟ್ಟಿದ್ದರೆ, ಮೊದಲನೆಯದಾಗಿ, ಪ್ರತ್ಯೇಕ ಪ್ಲೇಟ್‌ನಲ್ಲಿ ತಳಹಿಡಿಯದೇ ಅಥವಾ ಸುಡದೇ ಇರುವಂತಹ ತರಕಾರಿಗಳನ್ನು ತೆಗೆದುಕೊಳ್ಳಿ. ಈಗ ಪ್ರತ್ಯೇಕ ಬಾಣಲೆಯಲ್ಲಿ 1 ಅಥವಾ 2 ಟೀ ಚಮಚ ಕಡಲೆಹಿಟ್ಟನ್ನು ಲಘುವಾಗಿ ಹುರಿದ ನಂತರ, ಅದರಲ್ಲಿ ಆ ತರಕಾರಿಗಳನ್ನು ಮಿಶ್ರಣ ಮಾಡಿ. ತರಕಾರಿ ಪ್ರಮಾಣಕ್ಕೆ ಅನುಗುಣವಾಗಿ ಕಡಲೆ ಹಿಟ್ಟನ್ನು ಬಳಸುವುದನ್ನು ನೆನಪಿನಲ್ಲಿಡಿ. ಈ ಸಲಹೆಗಳನ್ನು ಅಳವಡಿಸಿಕೊಂಡರೆ ತರಕಾರಿಯಿಂದ ಸುಟ್ಟ ವಾಸನೆ ಮಾಯವಾಗುತ್ತದೆ.

ಆಲೂಗಡ್ಡೆ ಸಂರಕ್ಷಣೆಗೆ ಬರುವುದು:

ಆಲೂಗಡ್ಡೆ ಸಂರಕ್ಷಣೆಗೆ ಬರುವುದು:

ಇದು ಸಾಮಾನ್ಯವಾಗಿ ಬಳಸುವ ಹ್ಯಾಕ್ ಆಗಿದೆ. ಇದಕ್ಕಾಗಿ ಹಸಿ ಆಲೂಗಟ್ಟೆಯನ್ನು ಸಿಪ್ಪೆ ತೆಗೆದಿಟ್ಟುಕೊಳ್ಳಿ. ನಂತರ ಸುಟ್ಟ ಅಥವಾ ತಳಹಿಡಿದ ಆಹಾರವಿರುವ ಪಾತ್ರೆಗೆ ಆಲೂಗಟ್ಟೆಯನ್ನು ಹಾಕಿ, 45 ನಿಮಿಷಗಳವರೆಗೆ ಬಿಡಿ. ಹೀಗೆ ಮಾಡುವುದರಿಂದ ಸುಟ್ಟವಾಸನೆಯನ್ನು ಆಲೂಗಡ್ಡೆ ಹೀರಿಕೊಳ್ಳುತ್ತದೆ. ನೀವು ಆಲೂಗಡ್ಡೆಯನ್ನು ತಿನ್ನುವ ಅಗತ್ಯವಿಲ್ಲ, ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ತಕ್ಷಣ ತೆಗೆಯಬಹುದು.

English summary

How to Remove Burnt Smell from Food in Kannada

Here we talking about How to Remove Burnt Smell from Food in Kannada, read on
Story first published: Wednesday, November 3, 2021, 17:14 [IST]
X
Desktop Bottom Promotion