For Quick Alerts
ALLOW NOTIFICATIONS  
For Daily Alerts

ಬೀಜಗಳನ್ನು ಹಾಕಿ ರಾಖಿ ಮಾಡಿ, ಅಣ್ಣ ತಂಗಿ ಬಾಂಧವ್ಯ ಗಿಡ ಸಾಕ್ಷಿಯಾಗುತ್ತವೆ: ಇಲ್ಲಿದೆ ವೀಡಿಯೋ

|

ಅಣ್ಣ-ತಂಗಿಯ ಮಧುರ ಸಂಬಂಧ ಸಾರಿ ಹೇಳುವ ರಾಖಿ ಹಬ್ಬಕ್ಕೆ ಇನ್ನೇನು ಎರಡು ದಿನ ಬಾಕಿದೆ. ಇಷ್ಟು ವರ್ಷದ ರಾಖಿ ಹಬ್ಬದ ಆಚರಣೆಗೂ ಈ ವರ್ಷದ ರಾಖಿ ಹಬ್ಬದ ಆಚರಣೆಗೆ ವ್ಯತ್ಯಾಸವೇನೂ ಇಲ್ಲ, ಆದರೆ ಈ ವರ್ಷ ಪರಿಸ್ಥಿತಿ ತೀರಾ ಭಿನ್ನವಾಗಿದೆ.

ಹೊರಗಡೆ ಹೋಗಿ ಬಣ್ಣದ ರಾಖಿಗಳನ್ನ ತರೋಣ ಎಂದರೆ ಕೊರೊನಾ ಭಯ. ಆದ್ದರಿಂದ ಅಗ್ಯತ ವಸ್ತುಗಳಿಗಷ್ಟೇ ಜನರು ಹೊರಗೆ ಹೋಗುವಂತಾಗಿದೆ. ಅಲ್ಲದೆ ಹೊರಗಿನಿಂದ ಪ್ಲಾಸ್ಟಿಕ್‌ ರಾಖಿಗಳನ್ನು ತಂದು ಕಟ್ಟುವುದಕ್ಕಿಂತ ನಾವೇ ಮನೆಯಲ್ಲಿ ಪರಿಸರ ಸ್ನೇಹಿ ರಾಖಿ ಮಾಡಿದರೆ ಹೇಗೆ?

ಇದೇನು ತುಂಬಾ ಕಷ್ಟದ ಕೆಲಸವಂತೂ ಅಲ್ಲವೇ ಅಲ್ಲ. ಇಲ್ಲಿ ಅಂಜಲಿರಾವ್‌ ಅವರು ನೀಡಿರುವ ವೀಡಿಯೋ ನೋಡಿದರೇ ತಿಳಿಯುತ್ತದೆ.. ಅರೇ ಪರಿಸರ ಸ್ನೇಹಿ ರಾಖಿ ಮಾಡುವುದು ಎಷ್ಟು ಸುಲಭ ಎಂದು, ಇಲ್ಲಿ ನಾವು ನೀಡಿರುವ ರಾಖಿ ಐಡಿಯಾ ಪರಿಸರ ಸ್ನೇಹಿ ಮಾತ್ರವಲ್ಲ ಪರಿಸರ ಅಭಿವೃದ್ಧಿಗೆ ಪೂರಕವಾಗಿದೆ.

ಹೌದು ಇವುಗಳನ್ನು ಬೀಜಗಳನ್ನು ಹಾಕಿ ಮಾಡಲಾಗಿದೆ. ಬನ್ನಿ ರಾಖಿ ಮಾಡುವ ವಿಧಾನ ತಿಳಿದುಕೊಳ್ಳೋಣ:

ಫೋಟೋ ಕೃಪೆ: ಅಂಜಲಿರಾವ್

ಬೇಕಾಗುವ ಸಾಮಗ್ರಿ

ಬೇಕಾಗುವ ಸಾಮಗ್ರಿ

ಪೇಪರ್‌

ಕತ್ತರಿ

ಫ್ಯಾಬ್ರಿಕ್ ಗ್ಲೂ

ಬೀಜಗಳು (ಟೊಮೆಟೊ, ತುಳಸಿ, ಸಾಸಿವೆ, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ, ಕ್ಯಾಪ್ಸಿಕಂ ಬೀಜ ಹೀಗೆ ನಿಮ್ಮ ಇಷ್ಟವಾದ ಬೀಜ ಬಳಸಬಹುದು)

*ವಾಟರ್ ಕಲರ್

*ದಾರ

*ಸ್ಯಾಟಿನ್ ಬಟ್ಟೆ

 ಮಾಡುವ ವಿಧಾನ

ಮಾಡುವ ವಿಧಾನ

* ಮೊದಲಿಗೆ ನಿಮಗೆ ಬೇಕಾದ ವಿನ್ಯಾಸವನ್ನು ಪೇಪರ್‌ನಲ್ಲಿ ಬರೆದು ಕಟ್‌ ಮಾಡ್ಕೊಳ್ಳಿ. ಈ ವೀಡಿಯೋದಲ್ಲಿ ರೌಂಡ್ ಅಥವಾ ಸರ್ಕಲ್‌ ಮಾಡಲಾಗಿದೆ.

* ನಂತರ ಅದಕ್ಕೆ ಬೀಜಗಳನ್ನು ಅಂಟಿಸಿ. ಬೇಕಿದ್ದರೆ ಬೀಜಕ್ಕೆ ನೈಸರ್ಗಿಕ ಬಣ್ಣ ಹಚ್ಚಿಯೂ ಅಂಟಿಸಬಹುದು.

* ಹೀಗೆ ಇವುಗಳನ್ನು ನಿಮಗೆ ಬೇಕಾದ ರೀತಿಯಲ್ಲಿ ವಿನ್ಯಾಸಗೊಳಿಸಿ, ದಾರವಿಟ್ಟು ಅಂಟಿಸಿ.

 ನಿಮ್ಮದೇ ಹೊಸ ವಿನ್ಯಾಸದ ರಾಖಿ ತಯಾರಿಸಬಹುದು

ನಿಮ್ಮದೇ ಹೊಸ ವಿನ್ಯಾಸದ ರಾಖಿ ತಯಾರಿಸಬಹುದು

ನಾವು ಇಲ್ಲಿ ನೀಡಿರುವ ವೀಡಿಯೋದಲ್ಲಿ ಎರಡು ಬಗೆಯ ವಿನ್ಯಾಸ ಹೇಳಿದ್ದೇವೆ. ನೀವು ಈ ಐಡಿಯಾ ತೆಗೆದುಕೊಂಡು ತುಂಬಾ ವಿನ್ಯಾಸದಲ್ಲಿ ರಾಖಿ ತಯಾರಿಸಬಹುದು.

ಮಧುರ ಬಾಂಧವ್ಯಕ್ಕೆ ಸಾಕ್ಷಿಯಾಗುವ ಗಿಡಗಳು

ಮಧುರ ಬಾಂಧವ್ಯಕ್ಕೆ ಸಾಕ್ಷಿಯಾಗುವ ಗಿಡಗಳು

ಬೀಜಗಳಿಂದ ತಯಾರಿಸಿದ ಈ ರಾಖಿ ಇತರ ರಾಖಿಗಳಿಗಿಂತ ತುಂಬಾ ಸ್ಪೆಷಲ್ ಏಕೆಂದರೆ ಇದನ್ನು ಹಬ್ಬ ಮುಗಿದ ಬಳಿಕ ಒಂದು ಹೂ ಕುಂಡದಲ್ಲಿ ಹಾಕಿಟ್ಟರೆ ಆ ಬೀಜಗಳು ಮೊಳಕೆ ಹೊಡೆದು ಗಿಡಗಳಾಗುತ್ತವೆ. ಅವುಗಳನ್ನು ನೋಡುತ್ತಿದ್ದರೆ ಅಣ್ಣ-ತಂಗಿಯ ಮಧುರ ಬಾಂಧವ್ಯಕ್ಕೆ ಸಾಕ್ಷಿಯಾದ ಆ ಗಿಡಗಳ ಮೇಲೆ ಮತ್ತಷ್ಟು ಪ್ರೀತಿ ಮೂಡುವುದರಲ್ಲಿ ನೋ ಡೌಟ್.

ನಿಮಗೂ ಈ ಐಡಿಯಾ ಖಂಡಿತ ಇಷ್ಟವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ. ಹ್ಯಾಪಿ ರಕ್ಷಾಬಂಧನ, ವೆಲ್ ಇನ್ ಅಡ್ವಾನ್ಸ್....

English summary

How to Make Eco-friendly Plantable Rakhi Kit with Seeds

Here are ecofrindly plantable rakhi idea, read on,
X
Desktop Bottom Promotion