Just In
Don't Miss
- Automobiles
ಆಕರ್ಷಕ ವಿನ್ಯಾಸದಲ್ಲಿ ಯಮಹಾ ಎಕ್ಸ್ಮ್ಯಾಕ್ಸ್ 250 ಡಾರ್ತ್ ವಾಡರ್ ಎಡಿಷನ್ ಬಿಡುಗಡೆ
- News
Breaking: ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸಿದ್ಧ: ಸಿಎಂ ಬೊಮ್ಮಾಯಿ
- Movies
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಖಾನ್ ಹೆಸರು ಕೈಬಿಟ್ಟ ಸೀಮಾ
- Finance
Gold Rate Today: ಚಿನ್ನ 400 ರೂ ಏರಿಕೆ : ಪ್ರಮುಖ ನಗರಗಳ ಮೇ 20ರ ದರ ಎಷ್ಟಿದೆ?
- Sports
CSK vs RR: ಎರಡನೇ ಸ್ಥಾನದ ಮೇಲೆ ರಾಜಸ್ಥಾನ್ ಕಣ್ಣು; ಪಂದ್ಯದ ಟಾಸ್ ವರದಿ ಮತ್ತು ಪ್ಲೇಯಿಂಗ್ ಇಲೆವೆನ್ ಮಾಹಿತಿ
- Technology
ಭಾರತದಲ್ಲಿ ಇನ್ಫಿನಿಕ್ಸ್ ನೋಟ್ 12 ಸರಣಿ ಬಿಡುಗಡೆ! ಬೆಲೆ ಎಷ್ಟು?
- Education
ESIC Karnataka Recruitment 2022 : 5 ಸಹಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆರೋಗ್ಯಕರ ಆಪಲ್ ಸೈಡರ್ ವಿನೆಗರ್ನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ?
ಆಪಲ್ ಸೈಡರ್ ವಿನೆಗರ್ ಇತ್ತೀಚಿನ ದಿನಗಳಲ್ಲಿ ವಿಶೇಷ ಬಗೆಯ ಅಡುಗೆ ತಯಾರಿಕೆಯಲ್ಲಿ ಹೆಚ್ಚೆಚ್ಚು ಬಳಸುತ್ತಿರುವ ಒಂದು ಪದಾರ್ಥ. ಇದು ಕೇವಲ ರುಚಿಗೆ ಮಾತ್ರವಲ್ಲ, ಇದರಲ್ಲಿರುವ ಔಷಧೀಯ ಗುಣಗಳಿಗೂ ಹೆಸರುವಾಸಿ. ಇದೇ ಕಾರಣಕ್ಕೆ ಬಹಳ ಹಿಂದಿನಿಂದಲೂ ಆಪಲ್ ಸೈಡರ್ ವಿನೆಗರ್ಬಳಕೆಯಿಲ್ಲಿದೆ.
ಆದರೆ ಆಪಲ್ ಸೈಡರ್ ವಿನೆಗರ್ನ ಜನಪ್ರಿಯತೆಯ ಹೆಚ್ಚಳದೊಂದಿಗೆ, ಕಲಬೆರಕೆ ಕೂಡ ಉತ್ತುಂಗಕ್ಕೇರಿದೆ. ಇದರಿಂದ ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕ್ ಮಾಡಿದ ಆಪಲ್ ಸೈಡರ್ ವಿನೆಗರ್ನ ಶುದ್ಧತೆಯ ಬಗ್ಗೆ ಸಂಶಯವನ್ನು ಮೂಡಿಸುವುದರಲ್ಲಿ ಎರಡು ಮಾತಿಲ್ಲ. ನಿಮಗೂ ಇದರ ಬಗ್ಗೆ ಗೊಂದಲವಿದ್ದರೆ, ಮನೆಯಲ್ಲಿಯೇ ತಾಜಾ ಮತ್ತು ಶುದ್ಧವಾದ ಆಪಲ್ ಸೈಡರ್ ವಿನೆಗರ್ ಅನ್ನು ನಿಮ್ಮ ಅಡುಗೆಮನೆಯ ಕೆಲವು ಸರಳ ಪದಾರ್ಥಗಳ ಸಹಾಯದಿಂದ ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಸಿಕೊಡಲಿದ್ದೇವೆ.
ಮನೆಯಲ್ಲಿಯೇ ಆಪಲ್ ಸೈಡರ್ ವಿನೆಗರ್ ಮಾಡುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:

ಆಪಲ್ ಸೈಡರ್ ವಿನೆಗರ್ ಪ್ರಯೋಜನಗಳು:
1. ರಾತ್ರಿ ಮಲಗುವ ಮೊದಲು ಆಪಲ್ ಸೀಡರ್ ವಿನೇಗರ್ ಸೇವನೆ ಮಾಡಿದರೆ, ಅದು ಹೊಟ್ಟೆಯ ಬೊಜ್ಜು ಕರಗಿಸಲು ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು.
2. ನಿಯಮಿತವಾಗಿ ಆಪಲ್ ಸೀಡರ್ ವಿನೇಗರ್ ಸೇವನೆ ಮಾಡುವುದು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ. ಇದು ಹೊಟ್ಟೆಯು ಖಾಲಿಯಾಗುವುದನ್ನು ನಿಧಾನಗೊಳಿಸುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆ ಆಗದಂತೆ ತಡೆಯುವುದು. ಜೊತೆಗೆ ಆಪಲ್ ಸೀಡರ್ ವಿನೇಗರ್ ಸೇವನೆ ಮಾಡಿದರೆ ಅದು ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಿಸಲು ಸಹಕಾರಿ ಎಂದು ಸಾಬೀತಾಗಿದೆ.
3. ಬೆಳಗ್ಗೆ ಎದ್ದಾಗ ನಿಮ್ಮ ಉಸಿರಿನ ದುರ್ವಾಸನೆಯನ್ನು ತಡೆಯಲು ರಾತ್ರಿ ಆಪಲ್ ಸೈಡರ್ ವಿನೆಗರ್ ಸ್ವಲ್ಪ ಸೇವಿಸಬೇಕು.
4. ಆಪಲ್ ಸೈಡರ್ ವಿನೆಗರ್ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುವುದು. ಅಜೀರ್ಣ ಸಮಸ್ಯೆಗೆ ಇದು ಅತ್ಯುತ್ತಮ ಮನೆಮದ್ದಾಗಿದ್ದು, ಹೊಟ್ಟೆಯುರಿಯನ್ನು ಶಮನಗೊಳಿಸುವುದು.
5. ಇದಲ್ಲದೇ, ಕೂದಲು ಹಾಗೂ ತ್ವಚೆಯ ಸಮಸ್ಯೆಗೆ, ತೂಕ ನಷ್ಟ, ಒಳ್ಳೆಯ ನಿದ್ರೆ ಮೊದಲಾದ ಸಮಸ್ಯೆಗಳಿಗೂ ಆಪಲ್ ಸೈಡರ್ ವಿನೆಗರ್ ಸಹಕಾರಿ.

ಆಪಲ್ ಸೈಡರ್ ವಿನೆಗರ್ ತಯಾರಿಸಲು ಬೇಕಾಗುವ ಪದಾರ್ಥಗಳು:
10 ದೊಡ್ಡ ಸೇಬುಗಳು
2 ಕಿತ್ತಳೆ
4 ದಾಲ್ಚಿನ್ನಿ ತುಂಡುಗಳು
1 ಟೀಚಮಚ ಲವಂಗ
1 ಟೀಚಮಚ ಮಸಾಲೆ
1 ಟೀಚಮಚ ಜಾಯಿಕಾಯಿ
1/2 ಕಪ್ ಬ್ರೌನ್ ಶುಗರ್

ಮನೆಯಲ್ಲಿ ಆಪಲ್ ಸೈಡರ್ ವಿನೆಗರ್ ಅನ್ನು ಹೇಗೆ ತಯಾರಿಸುವುದು?:
- ಇದಕ್ಕಾಗಿ ಒಳ್ಳೆಯ ಪರಿಮಳ ಇರುವ ಸೇಬುಗಳನ್ನು ಆಯ್ಕೆಮಾಡುವುದು ತುಂಬಾ ಮುಖ್ಯ. ಮುಂದೆ, ಸೇಬುಗಳನ್ನು ತೊಳೆದು ಕತ್ತರಿಸಿ.
- ನಂತರ, ದೊಡ್ಡ ಪ್ಯಾನ್ ಅಥವಾ ಪಾತ್ರೆಯನ್ನು ಬಿಸಿ ಮಾಡಿ, ಅದಕ್ಕೆ ಸೇಬು, ಕಿತ್ತಳೆ ಮತ್ತು ಬ್ರೌನ್ ಶುಗರ್ ಸೇರಿಸಿ, ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ನೀರು ಬೆಚ್ಚಗಾಗಲು ಪ್ರಾರಂಭಿಸಿದಾಗ, ದಾಲ್ಚಿನ್ನಿ, ಜಾಯಿಕಾಯಿ ಮತ್ತು ಮಸಾಲೆಗಳಂತಹ ಪರಿಮಳಯುಕ್ತ ಮಸಾಲೆಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಅದಕ್ಕೆ ನೀರು ಸೇರಿಸಿ ಮತ್ತು ಮುಚ್ಚಳವನ್ನು ಮುಚ್ಚಿ.
- ಇದನ್ನುಮೀಡಯಂ ಫ್ಲೇಮ್ನಲ್ಲಿ 2 ಗಂಟೆಗಳ ಕಾಲ ಬೇಯಲು ಬಿಡಿ. ಬೆಂದ ನಂತರ, ಕಿತ್ತಳೆಯನ್ನು ತೆಗೆದು, ಉಳಿದ ಪದಾರ್ಥಗಳನ್ನು ಮ್ಯಾಶ್ ಮಾಡಿ. ಮತ್ತೆ, 1 ಗಂಟೆ ಕುದಿಸಿ , ನಂತರ ಸೋಸಿಕೊಂಡರೆ, ಆಪಲ್ ಸೈಡರ್ ವಿನೆಗರ್ ಸಿದ್ಧ. ಇದನ್ನು ನೀವು ಇಷ್ಟಪಡುವ ರೀತಿಯಲ್ಲಿ ಸಂರಕ್ಷಿಸಿ ಮತ್ತು ಬಳಸಿ.
- ಈ ಪಾನೀಯವನ್ನು ಹುದುಗಿಸುವುದರಿಂದ ಇದು ಹುಳಿ-ಸಿಹಿ ರುಚಿಯನ್ನು ನೀಡುತ್ತದೆ.
ಗಮನಿಸಿ: ಹೆಚ್ಚು ಸುವಾಸನೆ ಮತ್ತು ರುಚಿಗಾಗಿ ಗ್ರಾನ್ನಿ ಸ್ಮಿತ್ ಸೇಬು, ಹನಿ ಕ್ರಿಸ್ಪ್ ಅಥವಾ ಫ್ಯೂಜಿ ಸೇಬು ಬಳಸುವುದು ಉತ್ತಮ.