For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ನೈಸರ್ಗಿಕವಾಗಿಯೇ ಮನೆಯನ್ನು ತಂಪಾಗಿರಿಸಲು ಟಿಪ್ಸ್

|

ಸುಡುವ ಬೇಸಿಗೆ ಶುರುವಾಯ್ತು. ಯಾರ ಬಾಯಲ್ಲಿ ಕೇಳಿದರೂ ಸೆಖೆ ಸೆಖೆ ಎಂಬ ಮಾತೆ! ಅದರಲ್ಲೂ ನಗರ ಭಾಗದಲ್ಲಿ ಪ್ರದೋಷಣೆ, ಧೂಳಿನಿಂದಾಗಿ ಈ ಬೇಸಿಗೆ ಇನ್ನಷ್ಟು ಕಿರಿಕಿರಿಯನ್ನು ಉಂಟುಮಾಡುತ್ತದೆ. ಹೊರಗಡೆ ಹೋದರೆ ಸೆಖೆಯಾಗುವುದು ಮಾತ್ರವಲ್ಲ ಮನೆಯಲ್ಲಿಯೇ ಕುಳಿತುಕೊಳ್ಳುವುದು ಕೂಡ ಅಷ್ಟೇ ಕಷ್ಟದ ಕೆಲಸ.

ತಡೆಯಲಾಗದ ಸೂರ್ಯನ ಕಿರಣ, ಅತಿಯಾಗಿ ಉಂಟಾಗುವ ಬೆವರು, ಅಹಿತಕರವಾಗ ರಾತ್ರಿ ಇವುಗಳನ್ನೇಲ್ಲ ನೆನೆಸಿಕೊಂಡರೇ, ಯಾವಾಗ ಬೇಸಿಗೆ ಮುಗಿಯುತ್ತೋ ಎನ್ನಲು ಶುರು ಮಾಡುತ್ತೇವೆ. ಈ ಬೇಸಿಗೆಯಂತೂ ಇಷ್ಟು ಬೇಗ ಮುಗಿಯದು, ಅಂದಹಾಗೆ ಬೇಸಿಗೆಯಲ್ಲೂ ತಣ್ಣಗಿರಲು ಏನು ಉಪಾಯ ಮಾಡಿದ್ದೀರಿ? ಪದೇ ಪದೇ ಸ್ನಾನಮಾಡಿದರೂ, ತಂಪಾದ ನೀರನ್ನು ಕುಡಿದ್ರೂ, ಐಸ್ ಕ್ರೀಮ್ ತಿಂದರೂ ತಂಪಾಗಿರಲು ಸಾಧ್ಯವಿಲ್ಲ. ಹಾಗಾದರೆ ಏನಿದೆ ಇದಕ್ಕೆಲ್ಲಾ ಪರಿಹಾರ. ಇಲ್ಲಿದೆ ಉಪಾಯ! ಬೇಸಿಗೆಯಲ್ಲಿ ತಣ್ಣಗಿನ ಅನುಭವ ಪಡೆಯುವುದು ಮಾತ್ರವಲ್ಲದೇ, ಒಂದಿಷ್ಟು ಹಣವನ್ನೂ ಉಳಿಸಬಹುದು. ಹೇಗೆ? ಮುಂದೆ ಓದಿ.

How To Keep Home Cool Naturally In Summer

ವಾಸ್ತವವಾಗಿ, ಹವಾನಿಯಂತ್ರಣವು ನಿಮ್ಮ ಮನೆಯೊಳಗಿನ ಸೆಖೆಯ ಸಮಸ್ಯೆಯನ್ನು ಪರಿಹರಿಸಬಹುದು. ಆದರೆ, ಬೇಸಿಗೆಯಲ್ಲಿ ಎಲ್ಲಾ ಸಮಯದಲ್ಲೂ ನೀವು ಮನೆಯೊಳಗೇ ಕುಳಿತುಕೊಳ್ಳಲು ಸಾಧ್ಯವೇ? ಅಲ್ಲದೆ, ನೀವು ಏರ್ ಕಂಡೀಶನರ್ ನ್ನು ದಿನದ 24 ಗಂಟೆಯೂ ಹಾಕಿಡಲು ಸಾಧ್ಯವಿಲ್ಲ. ಏಕೆಂದರೆ ತಿಂಗಳ ಕೊನೆಯಲ್ಲಿ ಬರುವ ಕರೆಂಟ್ ಬಿಲ್ ನ್ನು ಭರಿಸುವುದೇ ಒಂದು ದೊಡ್ಡ ಕೆಲಸ.

ನೀವು ಮಕ್ಕಳನ್ನು ಹೊಂದಿದ್ದರೆ, ಅವರು ಶಾಲೆ ಅಥವಾ ಆಟದ ಮೈದಾನದಿಂದ ಹಿಂದಿರುಗಿದ ನಂತರ ತಕ್ಷಣ ಎಸಿ ಇರುವ ಕೋಣೆಗೆ ಹೋಗುತ್ತಾರೆ. ಆದರೆ ನೆನಪಿಡಿ, ಈ ಅಭ್ಯಾಸವು ಖಂಡಿತ ಒಳ್ಳೆಯದಲ್ಲ. ಮಕ್ಕಳು ಹೀಗೆ ಎಸಿಯಲ್ಲಿ ಕುಳಿತರೆ ಕೆಮ್ಮು, ಶೀತ ಮತ್ತು ಜ್ವರದಿಂದ ಬಳಲುತ್ತಾರೆ. ಅಷ್ಟೇ ಅಲ್ಲ, ಎಸಿಯ ತಂಪಾದ ಗಾಳಿಯೂ ನಿಮ್ಮ ಚರ್ಮವನ್ನು ಒಣಗಿಸುತ್ತದೆ, ಶುಷ್ಕವಾಗಿಸುತ್ತದೆ.

ಆದ್ದರಿಂದ, ಬೇಸಿಗೆಯಲ್ಲಿ ನಿಮ್ಮ ಮನೆಯನ್ನು ನೈಸರ್ಗಿಕವಾಗಿ ಹೇಗೆ ತಂಪಾಗಿರಿಸಿಕೊಳ್ಳಬೇಕು ಎಂಬುದರ ಕುರಿತು ಈ ಮಾರ್ಗಗಳನ್ನು ಅನುಸರಿಸಿ. ಬೇಸಿಗೆಯಲ್ಲಿ ಮನೆಯನ್ನು ತಂಪಾಗಿಡಲು ಈ ನೈಸರ್ಗಿಕ ಸಲಹೆಗಳನ್ನು ಅನುಸರಿಸುವುದರ ಮೂಲಕ, ಯಾವುದೇ ಅಡ್ಡಪರಿಣಾಮಗಳಿಲ್ಲದೆ ನೀವು ಈ ವರ್ಷ ಬೇಸಿಗೆಯಿಂದ ಸ್ವಲ್ಪ ಸಮಾಧಾನ ಪಡೆಯಬಹುದು.

ಆದ್ದರಿಂದ, ಬೇಸಿಗೆಯಲ್ಲಿ ನಿಮ್ಮ ಮನೆಯನ್ನು ನೈಸರ್ಗಿಕವಾಗಿ ಹೇಗೆ ತಂಪಾಗಿರಿಸಿಕೊಳ್ಳಬೇಕು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ಕೆಳಗಿನ ಮಾಹಿತಿಗಳನ್ನು ನೋಡಿ.

1. ನೈಸರ್ಗಿಕ ವಾತಾಯನ:

1. ನೈಸರ್ಗಿಕ ವಾತಾಯನ:

ನಿಮ್ಮ ಮನೆಯ ಯಾವ ಭಾಗದಲ್ಲಿ ಹೆಚ್ಚು ಗಾಳಿ ಬರುತ್ತದೆ ಎಂಬುದನ್ನು ಗಮನಿಸಿ. ನಿಮ್ಮ ಮನೆಯ ಕಡೆಗೆ ಗಾಳಿ ಯಾವ ದಿಕ್ಕಿನಿಂದ ಬೀಸುತ್ತದೆ ಎಂಬುದನ್ನು ಗಮನಿಸಿ. ಇದು ನಿಮಗೆ ತಿಳಿದಿದ್ದರೆ, ನೀವು ಆ ಬದಿಯ ಕಿಟಕಿಗಳನ್ನು ತೆರೆದಿಡಬಹುದು ಇದರಿಂದ ಸೂರ್ಯಾಸ್ತದ ನಂತರ ನಿಮ್ಮ ಕೋಣೆಗಳು ತಂಪಾಗಿರುತ್ತವೆ.

2. ಕಿಟಕಿಗಳನ್ನು ತೆರೆದಿಡಿ:

2. ಕಿಟಕಿಗಳನ್ನು ತೆರೆದಿಡಿ:

ಹಗಲಿನ ವೇಳೆಯಲ್ಲಿ ಮಾತ್ರವಲ್ಲ, ಸೂರ್ಯಾಸ್ತದ ನಂತರವೂ ನಿಮ್ಮ ಮನೆಯ ಕಿಟಕಿಗಳು ತೆರೆದಿರಲಿ. ನಮ್ಮ ದೇಶದಲ್ಲಿ ಬೇಸಿಗೆ, ಹಗಲಿನ ಸಮಯದಲ್ಲಿ ಬಿಸಿ ಗಾಳಿಯನ್ನು ತರುತ್ತದೆ, ಇದು ಚರ್ಮ ಸುಡುವುದಕ್ಕೆ ಕಾರಣವಾಗಬಹುದು. ಆದರೆ ಸೂರ್ಯಾಸ್ತದ ನಂತರ, ತಾಪಮಾನವು ಸ್ವಲ್ಪ ಕಡಿಮೆಯಾದಾಗ, ತಂಪಾದ ಗಾಳಿ ಮತ್ತು ಆಗಾಗ್ಗೆ ಹಿತವಾದ ಗಾಳಿಯು ಮಳೆಯೊಂದಿಗೆ ಬರಬಹುದು. ಕೋಣೆಯ ಒಳಗೆ ಗಾಳಿ ಪ್ರವೇಶಿಸಲು ಸಂಜೆ ನಿಮ್ಮ ಮನೆಯ ಕಿಟಕಿಗಳನ್ನು ತೆರೆದಿಡಿ.

3. ಬಿಳಿಯ ಲಿನಿನ್ ಬಟ್ಟೆ ಬಳಸಿ:

3. ಬಿಳಿಯ ಲಿನಿನ್ ಬಟ್ಟೆ ಬಳಸಿ:

ಬೇಸಿಗೆಯಲ್ಲಿ ನಿಮ್ಮ ಮನೆಯನ್ನು ತಂಪಾಗಿಡಲು ನಿಮಗೆ ಸಲಹೆಗಳು ಬೇಕಾದರೆ, ಇದನ್ನು ಅವಶ್ಯವಾಗಿ ಪ್ರಯತ್ನಿಸಿ. ಬೆಡ್ಶೀಟ್ಗಳು ಮತ್ತು ಹೊದಿಕೆಗಳು ದಪ್ಪ ಬಟ್ಟೆಯಾಗಿದ್ದರೆ ನಿಮ್ಮನ್ನು ಬೆವರುವಂತೆ ಮಾಡುತ್ತದೆ, ಬಿಳಿ ಅಥವಾ ತಿಳಿ-ಬಣ್ಣದ ಬಟ್ಟೆಗಳು ಶಾಖವನ್ನು ಹೀರಿಕೊಳ್ಳುವುದಿಲ್ಲ ಮತ್ತು ಬಿಸಿಯನ್ನು ಪ್ರತಿಬಿಂಬಿಸುವುದಿಲ್ಲ. ಇದಲ್ಲದೆ, ಅವುಗಳು ನಿಮ್ಮ ಕೋಣೆಗೆ ಹಿತವಾದ ಪರಿಣಾಮವನ್ನು ನೀಡುತ್ತವೆ.

4. ಸುತ್ತಲಿನ ವಾತಾವರಣ ಹಸಿರಾಗಿಸಿ:

4. ಸುತ್ತಲಿನ ವಾತಾವರಣ ಹಸಿರಾಗಿಸಿ:

ಬೇಸಿಗೆಯಲ್ಲಿ ನಿಮ್ಮ ಮನೆಯನ್ನು ನೈಸರ್ಗಿಕವಾಗಿ ತಂಪಾಗಿಡಲು ಇನ್ನೊಂದು ಅತ್ಯಂತ ಪ್ರಮುಖ ಮಾರ್ಗ, ನಿಮ್ಮ ಸುತ್ತಲಿನ ಪ್ರದೇಶ ಸರಿಯಾಗಿ ಓರಣ ಮಾಡುವುದು. ನಿಮ್ಮ ಮನೆ ತಂಪಾಗಿರಲು ಒಂದು ರೀತಿಯಲ್ಲಿ ಮರಗಳು, ಬಳ್ಳಿ ಮತ್ತು ಪೊದೆಗಳು ಅತ್ಯಂತ ಸಹಾಯಕಾರಿ. ಹಾಗಾಗಿ ಮನೆಯಲ್ಲಿ ಸಾಧ್ಯವಾದಷ್ಟು ಗಿಡಗಳನ್ನು ಇಡಿ. ಇದು ಸೂರ್ಯನ ಕಿರಣದಿಂದ ಕಾಪಾಡುವುದು ಮಾತ್ರವಲ್ಲದೇ ಮನೆಯೂ ಸುಂದರವಾಗಿ ಕಾಣುವಂತೆ ಮಾಡುತ್ತದೆ. ನಿಮ್ಮ ಮನೆಗೆ ನೇರವಾಗಿ ಸೂರ್ಯನ ಬೆಳಕು ಬರದಂತೆ ತಡೆಯಲು ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ನೆರಳಿನ ಮರಗಳನ್ನು ನೆಡಬೇಕು. ತಂಪಾದ ಪರಿಣಾಮವನ್ನು ಬೀರಲು ನಿಮ್ಮ ಮನೆಯ ಸುತ್ತಲೂ ಹುಲ್ಲನ್ನು ಬೆಳೆಸಿ.

5. ಬಿಳಿಯ ಮೇಲ್ಛಾವಣಿ:

5. ಬಿಳಿಯ ಮೇಲ್ಛಾವಣಿ:

ಬೇಸಿಗೆಯಲ್ಲಿ ನೈಸರ್ಗಿಕವಾಗಿ ಮನೆಯನ್ನು ತಂಪಾಗಿಡಲು, ಅದರಲ್ಲೂ ಮುಖ್ಯವಾಗಿ ಮಹಾನಗರಗಳಲ್ಲಿ ಮನೆಯನ್ನು ತಂಪಾಗಿರಿಸಿಕೊಳ್ಳಬೇಕು ಎಂದರೆ ಬಿಳಿಯ ಮೇಲ್ಛಾವಣಿ ಅತ್ಯುತ್ತಮ ಪ್ರಕ್ರಿಯೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಬಿಳಿ ಬಣ್ಣವು ಸೂರ್ಯನ ಯುವಿ ಕಿರಣಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ನಿಮ್ಮ ಮನೆಗೆ ನೈಸರ್ಗಿಕವಾಗಿ ತಂಪನ್ನು ನೀಡುತ್ತದೆ. ಆದ್ದರಿಂದ, ಇತ್ತೀಚಿಗೆ ಜನರು ಈಗ ತಮ್ಮ ಮನೆಯ ಮೇಲ್ಛಾಣಿಗಳು ಮತ್ತು ಮಾಳಿಗೆ ಪ್ರದೇಶಗಳಿಗೆ ಬಿಳಿ ಬಣ್ಣವನ್ನು ಲೇಪಿಸುತ್ತಾರೆ.

6. ನಿಮ್ಮ ಸ್ವಂತ ಹವಾನಿಯಂತ್ರಕವನ್ನು ತಯಾರಿಸಿ:

6. ನಿಮ್ಮ ಸ್ವಂತ ಹವಾನಿಯಂತ್ರಕವನ್ನು ತಯಾರಿಸಿ:

ಐಸ್ ಕ್ಯೂಬ್ಗಳನ್ನು ಒಂದು ಬೌಲ್ ನಲ್ಲಿ ಹಾಕಿ ಅದನ್ನು ಫ್ಯಾನ್ನ ಕೆಳಗೆ ಇರಿಸಿ, ಫ್ಯಾನ್ ಹಾಕಿ. ಮಂಜುಗಡ್ಡೆ ಕರಗುತ್ತಿದ್ದಂತೆ, ಗಾಳಿಯು ತಂಪಾದ ನೀರನ್ನು ತೆಗೆದುಕೊಂಡು ಅದನ್ನು ಕೋಣೆಯ ತುಂಬಾ ಪ್ರಸಾರ ಮಾಡುತ್ತದೆ. ಇದು ಸ್ವಯಂಚಾಲಿತವಾಗಿ ತಂಪಾದ ಗಾಳಿಯನ್ನು ಹರಡುತ್ತದೆ.

ನೈಸರ್ಗಿಕವಾಗಿ ಬೇಸಿಗೆಯಲ್ಲಿ ನಿಮ್ಮ ಮನೆಯನ್ನು ಹೀಗೆ ತಂಪಾಗಿರಿಸಿಕೊಳ್ಳಿ.

English summary

How To Keep Home Cool Naturally In Summer

Here we afe discussing about how to keep house cool naturally in summer. Summer is knocking at your door. The word is enough to remind you about the burning sun, sweaty afternoon, uncomfortable nights and much more. Read more.
X
Desktop Bottom Promotion