For Quick Alerts
ALLOW NOTIFICATIONS  
For Daily Alerts

ಅಡುಗೆಮನೆಯ ಕಪಾಟು ದುರ್ವಾಸನೆ ಬೀರುತ್ತಿದೆಯೇ? ಇಲ್ಲಿದೆ ಅದನ್ನು ಹೋಗಲಾಡಿಸಲು ಟಿಪ್ಸ್ಗಳು

|

ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಅಂದ್ರೆ, ಪಾತ್ರೆ ಅಥವಾ ಅಡುಗೆ ಸಾಮಾಗ್ರಿಗಳಿಟ್ಟ ಕಪಾಟು ದುರ್ವಾಸನೆ ಬೀರುವುದು. ಯಾವಾಗ ಅಡುಗೆ ಮನೆಯ ಬೀರು ಹಳೆಯದಾಗುತ್ತದೆಯೋ, ಆಗ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

ಅಡುಗೆ ಮನೆಯ ಬೀರುವನ್ನು ಪ್ರತಿದಿನ ಸ್ವಚ್ಛವಾಗಿಡುವುದು ತುಂಬಾ ಕಷ್ಟ. ಕೆಲವರು ಅಡುಗೆ ಮನೆಯ ಕಪಾಟುಗಳನ್ನು ಸ್ವಚ್ಛಗೊಳಿಸಲು ನೀರನ್ನು ಬಳಸುತ್ತಾರೆ, ಇದರಿಂದಾಗಿ ಮರವು ಬೇಗನೆ ಹಾಳಾಗುವ ಸಂಭವವಿದೆ. ಅಷ್ಟೇ ಅಲ್ಲ, ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ, ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳು ಬೆಳೆಯುವ ಸಂಭವವಿದೆ. ಆದ್ದರಿಂದ ಅಡುಗೆ ಮನೆಯ ಕಪಾಟಿನ ಸರಿಯಾದ ನಿರ್ವಹಣೆ ಹೇಗೆ? ಅದರಿಂದ ಬೀರುವ ವಾಸನೆ ತೆಗೆದುಹಾಕುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಅಡುಗೆ ಮನೆಯ ಬೀರು ಅಥವಾ ಕಪಾಟಿನಲ್ಲಿ ವಾಸನೆ ಹುಟ್ಟಿಕೊಳ್ಳಲು ಕಾರಣಗಳೇನು ಎಂಬುದನ್ನು ಮೊದಲು ನೋಡೋಣ:

ಅಡುಗೆ ಮನೆಯ ಬೀರು ಅಥವಾ ಕಪಾಟಿನಲ್ಲಿ ವಾಸನೆ ಹುಟ್ಟಿಕೊಳ್ಳಲು ಕಾರಣಗಳೇನು ಎಂಬುದನ್ನು ಮೊದಲು ನೋಡೋಣ:

ಕೆಲವೊಮ್ಮೆ ನಾವು ಮಾಡುವ ಸಣ್ಣ ಸಣ್ಣ ವಿಷಯಗಳೇ ಕಪಾಟಿನಲ್ಲಿ ವಾಸನೆ ಹುಟ್ಟಿಕೊಳ್ಳಲು ಕಾರಣವಾಗುತ್ತೇವೆ. ಆಹಾರ ಮತ್ತು ಪಾನೀಯಗಳು ಕೊಳೆಯುವಿಕೆಯಿಂದ ಅಥವಾ ಒದ್ದೆಯಾದ ಪಾತ್ರೆಗಳನ್ನು ಇಡುವುದು ನಮಗೆ ಸಣ್ಣ ವಿಚಾರವಾಗಿ ಕಾಣುತ್ತವೆ. ಆದರೆ, ನಮ್ಮ ಈ ನಿರ್ಲಕ್ಷ್ಯವೇ ವಾಸನೆ ಬರಲು ಕಾರಣವಾಗುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಶುಚಿತ್ವದ ಹೊರತಾಗಿ ಒಂದಿಷ್ಟು ಸ್ಮಾರ್ಟ್ ಟಿಪ್ಸ್ ಪಾಲಿಸಬೇಕಾಗುತ್ತದೆ. ಈ ಕೆಳಗಿನ ಸಹಾಯದಿಂದ, ನೀವು ಅಡುಗೆಮನೆಯ ಕಪಾಟು ವಾಸನೆ ಬರದಂತೆ ತಡೆಯಬಹುದು.

ಪಾತ್ರೆಗಳಲ್ಲಿ ನೀರಿರದಂತೆ ನೋಡಿಕೊಳ್ಳಿ:

ಪಾತ್ರೆಗಳಲ್ಲಿ ನೀರಿರದಂತೆ ನೋಡಿಕೊಳ್ಳಿ:

ನಾವು ಕೆಲವೊಮ್ಮೆ ಸಣ್ಣ ಪಾತ್ರೆಗಳನ್ನು ತೊಳೆದ ನಂತರ, ತಕ್ಷಣವೇ ಕಪಾಟಿನಲ್ಲಿ ಇಟ್ಟುಬಿಡುತ್ತೇವೆ. ಇದು ತಪ್ಪು. ಬದಲಿಗೆ ಪಾತ್ರೆಯನ್ನು ಸಂಪೂರ್ಣವಾಗಿ ಒಣಗಲು ಬಿಡಿ, ನಂತರ ಅದನ್ನು ಬೀರುಗೆ ವರ್ಗಾಯಿಸಿ. ಜೊತೆಗೆ ಅಡುಗೆಮನೆಯ ಬೀರುಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಇಡುವುದಾದರೆ, ಅದನ್ನು ಚೆನ್ನಾಗಿ ತೊಳೆದು ಒಣಗಿಸಿದ ನಂತರವೇ ಇಡಿ. ಅಷ್ಟೇ ಅಲ್ಲ, ಕಪಾಟನ್ನು ಸ್ವಚ್ಛಗೊಳಿಸಿದಾಗ, ಅದನ್ನು ಸ್ವಲ್ಪ ಸಮಯದವರೆಗೆ ತೆರೆದಿಡಿ. ಇದರಿಂದ ಪ್ರತಿಯೊಂದು ಮೂಲೆಯೂ ಒಣಗುತ್ತದೆ ಮತ್ತು ವಾಸನೆ ದೂರವಾಗುತ್ತದೆ.

ಅಡಿಗೆ ಸೋಡಾ ಬಳಸಿ:

ಅಡಿಗೆ ಸೋಡಾ ಬಳಸಿ:

ಕಪಾಟನ್ನು ಹಲವು ಬಾರಿ ಸ್ವಚ್ಛಗೊಳಿಸಿದರೂ ದುರ್ವಾಸನೆ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮತ್ತೆ ಸ್ವಚ್ಛಗೊಳಿಸಲು ಅಗತ್ಯವಿಲ್ಲ, ಆದರೆ ಒಂದು ಬಟ್ಟಲಿನಲ್ಲಿ ಅಡಿಗೆ ಸೋಡಾವನ್ನು ತೆಗೆದುಕೊಂಡು ಅದನ್ನು ಕಪಾಟೊಳಗೆ ಇಡಿ. ನಂತರ, ಬೀರುವನ್ನು ಬಿಗಿಯಾಗಿ ಮುಚ್ಚಿ ಮತ್ತು ರಾತ್ರಿಯಿಡೀ ಹಾಗೆ ಬಿಡಿ. ಇದರಿಂದ ಅಡುಗೆ ಸೋಡಾ ವಾಸನೆಯನ್ನು ಹೀರಿಕೊಂಡು, ರಾತ್ರಿಯಿಡೀ ಈ ರೀತಿ ಇಡುವುದರಿಂದ ವಾಸನೆಯ ಸಮಸ್ಯೆಯನ್ನು ತೆಗೆದುಹಾಕುತ್ತದೆ. ಬೇಕಾದರೆ, ನೀವು ವಿನೆಗರ್ ಸಹ ಬಳಸಬಹುದು. ವಾಸನೆಯ ಸಮಸ್ಯೆ ಇದ್ದರೆ, ಒಂದು ಕ್ಲೀನ್ ಬಟ್ಟೆಯಲ್ಲಿ ವಿನೆಗರ್ ತೆಗೆದುಕೊಂಡು ಅದರಿಂದ ಕಬೋರ್ಡ್ ಅನ್ನು ಚೆನ್ನಾಗಿ ಒರೆಸಿ ಸ್ವಲ್ಪ ಸಮಯದವರೆಗೆ ಅದನ್ನು ತೆರೆದಿಡಿ.

ಫ್ರೆಶ್ನರ್ ಬಳಸಿ:

ಫ್ರೆಶ್ನರ್ ಬಳಸಿ:

ಹೆಚ್ಚಿನ ಮಹಿಳೆಯರು ಕೊಠಡಿಯನ್ನು ಪರಿಮಳಯುಕ್ತವಾಗಿರಿಸಲು ರೂಮ್ ಫ್ರೆಶ್ನರ್ ಅನ್ನು ಬಳಸುತ್ತಾಋೆ. ಆದರೆ, ಅದನ್ನು ಅಡುಗೆಮನೆಗೆ ಬಳಸುವುದಿಲ್ಲ. ಬೇಕಿದ್ದಲ್ಲಿ, ಕೃತಕ ಫ್ರೆಶ್ನರ್ ಅನ್ನು ಬಳಸಬಹುದು. ಇದಕ್ಕಾಗಿ ನಿಮಗೆ ಸಾರಭೂತ ತೈಲ ಬೇಕಾಗುತ್ತದೆ. ನಿಂಬೆ ಗ್ರೇಸ್ ಮತ್ತು ಲ್ಯಾವೆಂಡರ್ ಸಾರಭೂತ ತೈಲವನ್ನು ಹತ್ತಿ ಉಂಡೆಯಲ್ಲಿ ಅದ್ದಿ, ರಾತ್ರಿಯಿಡೀ ಅಡುಗೆಮನೆಯ ಕಪಾಟಿನಲ್ಲಿ ಬಿಡಿ, ಬೆಳಿಗ್ಗೆ ಅದನ್ನು ಹೊರತೆಗೆಯಿರಿ. ಹೀಗೆ ಮಾಡುವುದರಿಂದ ವಾಸನೆಯ ಸಮಸ್ಯೆ ದೂರವಾಗುತ್ತದೆ. ನೆನಪಿಡಿ, ಬೀರು ಸಂಪೂರ್ಣವಾಗಿ ಸ್ವಚ್ಛವಾಗಿದ್ದಾಗ ಮಾತ್ರ ಈ ವಿಧಾನವನ್ನು ಪ್ರಯತ್ನಿಸಿ.

ಕಪಾಟನ್ನು ನಿಯಮಿತವಾಗಿ ಶುಚಿಗೊಳಿಸಿ:

ಕಪಾಟನ್ನು ನಿಯಮಿತವಾಗಿ ಶುಚಿಗೊಳಿಸಿ:

ಅಡುಗೆ ಮನೆಯ ಕಪಾಟನ್ನು ವಾರಕ್ಕೊಮ್ಮೆ ತೆಗೆದು ಸ್ವಚ್ಛಗೊಳಿಸುವುದನ್ನು ಖಚಿತಪಡಿಸಿಕೊಳ್ಳಿ. ಒದ್ದೆ ಬಟ್ಟೆಯಿಂದ ಅಲ್ಲ ಒಣ ಬಟ್ಟೆಯಿಂದ ಸ್ವಚ್ಛಗೊಳಿಸಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ಅಡುಗೆ ಸ್ತುಗಳನ್ನು ಸಹ ಪರಿಶೀಲಿಸಬಹುದು. ಅನೇಕ ಬಾರಿ ನಾವು ಅಡುಗೆ ವಸ್ತುಗಳನ್ನು ಸರಿಯಾಗಿ ಇಟ್ಟುಕೊಳ್ಳುವುದಿಲ್ಲ, ಇದರಿಂದಾಗಿ ಅವು ಬೀರುಗಳಲ್ಲಿ ಕೊಳೆಯಲು ಅಥವಾ ಹಾಳಾಗಲು ಪ್ರಾರಂಭಿಸುತ್ತವೆ, ಇದರಿಂದಾಗಿ ವಾಸನೆಯ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ, ನಿಯಮಿತ ಶುಚಿಗೊಳಿಸುವಿಕೆಯನ್ನು ಹೊರತುಪಡಿಸಿ, ಅಡುಗೆ ವಸ್ತುಗಳ ನಿರ್ವಹಣೆಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಿ.

English summary

How to Get rid of Smelly Kitchen Cupboards in kannada

Here we talking about How to Get rid of Smelly Kitchen Cupboards in kannada, read on
Story first published: Monday, November 29, 2021, 15:07 [IST]
X
Desktop Bottom Promotion