For Quick Alerts
ALLOW NOTIFICATIONS  
For Daily Alerts

ನಿಮ್ಮ ಮನೆ ಪ್ರವಾಹದಿಂದ ಹಾನಿಗೊಳಗಾಗಿದೆಯೇ? ಶುಚಿಗೊಳಿಸಲು ಇಲ್ಲಿದೆ ಕೆಲವು ಸಲಹೆಗಳು

|

ಇತ್ತೀಚೆಗೆ ಪ್ರವಾಹ ಎಂಬ ಪದ ಮಳೆ, ಬಿಸಿಲು, ಚಳಿಯಂತೆ ಸಾಮಾನ್ಯ ಎಂಬಂತಾಗಿದೆ. ಕರ್ನಾಟಕ ಸೇರಿದಂತೆ ಕೇರಳ, ಮಹಾರಾಷ್ಟ್ರ ಹಾಗೂ ಉತ್ತರ ಭಾರತದ ಬಹುತೇಕ ಪ್ರದೇಶಗಳು ನೀರಿನ ಅಬ್ಬರಕ್ಕೆ ನಲುಗಿ ಹೋಗಿದೆ. ಪ್ರವಾಹದ ಸಂದರ್ಭದಲ್ಲಿ ಮನೆಗಳನ್ನು ಬಿಟ್ಟು ನಿರಾಶ್ರಿತರ ತಾಣಗಳಲ್ಲಿ ತಂಗಿರುವ ಜನರು ನೀರಿನ ಹರಿವು ಕಡಿಮೆಯಾದ ಕೂಡಲೇ ತಮ್ಮ ಮನೆಗಳಿಗೆ ಸೇರಲು ಕಾತುರರಾಗಿರುತ್ತಾರೆ.

Clean home

ಆದರೆ ಇದಕ್ಕೂ ಮುನ್ನ ಪ್ರವಾಹ ನೀರಿನ ಜತೆಗೆ ಹಲವು ಸಾಂಕ್ರಾಮಿಕ ಕಾಯಿಲೆಗಳನ್ನು ಹೊತ್ತು ತಂದಿರುತ್ತದೆ ಎಂಬ ಬಗ್ಗೆ ಜಾಗ್ರತೆ ವಹಿಸುವುದು ಅತ್ಯಗತ್ಯ. ಪ್ರವಾಹ ಉಳಿಸಿ ಹೋಗುವ ಸಾಂಕ್ರಾಮಿಕ ರೋಗಗಳು, ಜಲಜನ್ಯ ಕಾಯಿಲೆಗಳು ಮತ್ತೆ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಿ ಜೀವನವನ್ನೇ ಬಲಿಪಡೆಯಬಹುದು. ಈ ಹಿನ್ನೆಲೆ ಪ್ರವಾಹದ ನಂತರ ಮತ್ತೆ ಮನೆಗೆ ಹೋಗುವ ಮುನ್ನ ಯಾವ ವಿಷಯಗಳ ಬಗ್ಗೆ ಎಚ್ಚರವಹಿಸಬೇಕು ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಸಂಪೂರ್ಣ ಮನೆ ಪರಿಶೀಲಿಸಿ

ಸಂಪೂರ್ಣ ಮನೆ ಪರಿಶೀಲಿಸಿ

ಪ್ರವಾಹದ ನಂತರ ಕೂಡಲೇ ಮನೆಗೆ ಹೋಗುವ ಮುನ್ನ ಸಂಪೂರ್ಣವಾಗಿ ಮನೆಯ ಸುತ್ತ ಪರಿಶೀಲಿಸಿ. ವಿದ್ಯುತ್ ಸಂಪರ್ಕ, ವಿದ್ಯುತ್ ತಂತಿಗಳು ತುಂಡಾಗಿರುವ ಬಗ್ಗೆ ಇರಲಿ ಎಚ್ಚರ. ಮನೆಗೆ ಪ್ರವೇಶಿಸಿದ ಕೂಡಲೇ ವಿದ್ಯುತ್ ಸ್ವಿಚ್ ಗಳನ್ನು ಆನ್ ಮಾಡಲೇಬೇಡಿ, ವಿದ್ಯುತ್ ಸಂಪರ್ಕದ ಬಗ್ಗೆ ಖಚಿತಪಡಿಸಿಕೊಂಡ ನಂತರ ಬಳಸಿ.

ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ತೆರೆದಿಡಿ

ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ತೆರೆದಿಡಿ

ಮನೆ ಪ್ರವೇಶಿದ ಮೊದಲಿಗೆ ಮನೆಯ ಎಲ್ಲಾ ಬಾಗಿಲುಗಳು ಹಾಗೂ ಕಿಟಕಿಗಳನ್ನು ತೆರೆದಿಡಿ. ಇದರಿಂದ ಪ್ರವಾಹದ ವೇಳೆ ಮನೆ ಸೇರಿರುವ ವಿಷಜಂತುಗಳು, ಪ್ರಾಣಿಗಳು, ಹುಳು ಹುಪ್ಪಟೆಗಳು ಮನೆಯಿಂದ ಹೊರಹೋಗಲು ಅನುಕೂಲಕರ. ಮನೆ ಪ್ರವೇಶಿಸುವಾಗ ಸದ್ದು ಮಾಡುತ್ತಾ, ಕೋಲಿನಿಂದ ವಸ್ತುಗಳ ಮೇಲೆ ಬಡಿಯುತ್ತಿರಿ. ಅವಿತುಕೊಂಡಿರುವ ವನ್ಯಮೃಗಗಳು ಸದ್ದಿಗೆ ಎಚ್ಚೆತ್ತು ಹೋಗುತ್ತದೆ.

ಸೋಡಿಯಂ ಪಾಲಿಯಾಕ್ರಿಲೇಟ್ ಮೂಲಕ ನೀರನ್ನು ಆವಿಗೊಳಿಸಿ

ಸೋಡಿಯಂ ಪಾಲಿಯಾಕ್ರಿಲೇಟ್ ಮೂಲಕ ನೀರನ್ನು ಆವಿಗೊಳಿಸಿ

ಪ್ರವಾಹದ ನೀರು ಕಡಿಮೆಯಾದ ನಂತರವೂ ಮನೆಯಲ್ಲೇ ಉಳಿದಿರುವ ನೀರನ್ನು ಸೋಡಿಯಂ ಪಾಲಿಯಾಕ್ರಿಲೇಟ್ ಮೂಲಕ ಶುಚಿಗೊಳಿಸಿ. ಸೋಡಿಯಂ ಪಾಲಿಯಾಕ್ರಿಲೇಟ್ ನೀರನ್ನು ಸುಲಭವಾಗಿ ಹೀರಿಕೊಳ್ಳುತ್ತದೆ, ಅಲ್ಲದೇ ಇದು ತನ್ನ ಸಾಮರ್ಥ್ಯಕ್ಕಿಂತ 200-300 ಪಟ್ಟು ಹೆಚ್ಚಾಗಿ ನೀರನ್ನು ಹೀರಿಕೊಳ್ಳುತ್ತದೆ.

ಸೋಂಕುನಿವಾರಕಗಳಿಂದ ಶುಚಿಗೊಳಿಸಿ

ಸೋಂಕುನಿವಾರಕಗಳಿಂದ ಶುಚಿಗೊಳಿಸಿ

ಶೇಕಡಾ 90ರಷ್ಟು ನೀರು ಮತ್ತು ಶೇಕಡಾ 10ರಷ್ಟು ಸೀಮೆಎಣ್ಣೆ ಬಳಸಿ ಮನೆಯ ಸುತ್ತ ಹಾಗೂ ನೆಲವನ್ನು ಶುಚಿಗೊಳಿಸಿ. ಮನೆಯ ಮುಂಭಾಗ, ಅಡುಗೆ ಕೋಣೆಯ ಸಿಂಕ್, ನೀರಿನ ಕೊಳವೆಗಳ ಬಳಿ ಸೀಮೆಎಣ್ಣೆ ಸಿಂಪಡಿಸಿ.

ನೀರಿಗೆ ಬ್ಲೀಚಿಂಗ್ ಪೌಡರ್

ನೀರಿಗೆ ಬ್ಲೀಚಿಂಗ್ ಪೌಡರ್

ಶೇಖರಿಸಿದ ಅಥವಾ ಯಾವುದೇ ಮೂಲದ ನೀರಿಗೆ ಬ್ಲೀಚಿಂಗ್ ಪೌಡರ್ ಹಾಕಿ ಒಂದು ತಾಸಿನ ನಂತರ ನೀರನ್ನು ಬಳಸಿ. ತಪ್ಪದೇ ಕಾಯಿಸಿ ಆರಿಸಿದ ನೀರನ್ನೇ ಕುಡಿಯಿರಿ.

ಶುಚಿಗೊಳಿಸುವ ವೇಳೆ ಕೈಗವಚ ಧರಿಸಿ

ಶುಚಿಗೊಳಿಸುವ ವೇಳೆ ಕೈಗವಚ ಧರಿಸಿ

ಮನೆಯನ್ನು ಶುಚಿಗೊಳಿಸುವ ವೇಳೆ ತಪ್ಪದೇ ಕೈಗವಚ ಮತ್ತು ಮಂಡಿಯವರೆಗೆ ಬೂಟು ಧರಿಸಿ. ಕ್ರಿಮಿ, ಕೀಟಗಳು ನಿಮ್ಮ ಕೈ ಮೂಲಕ ದೇಹ ಸೇರಬಹುದು.

English summary

How to Clean Your Flood-damaged Home

Cleaning up after the floods is quite an uphill task as people are impatient to get back into their homes and start the rebuilding process. To add to it, health issues and other hazards are a big concern in flood-hit areas. here’s what you should pay attention to your home after the floods.
X
Desktop Bottom Promotion