For Quick Alerts
ALLOW NOTIFICATIONS  
For Daily Alerts

ಫ್ರಿಜ್ ನಲ್ಲಿ ಇಟ್ಟ ಹಣ್ಣು-ತರಕಾರಿ, ಆಹಾರಗಳನ್ನು ಎಷ್ಟು ಸಮಯದೊಳಗೆ ತಿಂದರೆ ಆರೋಗ್ಯ ಸೇಫ್ ?

|

ಬಿಡುವಿಲ್ಲದ ಆಧುನಿಕ ಜೀವನದಲ್ಲಿ ಹಸಿವಾದಾಗ ಫ್ರೆಶ್ ಅಡುಗೆ ಮಾಡಿ ತಿನ್ನಲು ಸಮಯವಿಲ್ಲ. ಇದಕ್ಕಾಗಿ ಹೆಚ್ಚಿನವರು ತಮಗೆ ಬೇಕಾದಷ್ಟು ಅಡುಗೆ ತಯಾರಿಸಿ, ಪ್ರಿಜ್ ನಲ್ಲಿ ಸಂಗ್ರಹಿಸಿ ಇಡುವುದನ್ನು ಕಂಡಿರುತ್ತೇವೆ. ಇದು ಹೆಚ್ಚಾಗಿ ಉದ್ಯೋಗಕ್ಕೆ ಹೋಗುವವರೇ ಮಾಡುವುದು.

ಉಳಿದ ಆಹಾರವನ್ನು ರೆಫ್ರಿಜರೇಟರ್ ನಲ್ಲಿ ಸಂಗ್ರಹಿಸುವ ಉದ್ದೇಶವೆಂದರೆ ಆಹಾರ ವ್ಯರ್ಥವಾಗುವುದನ್ನು ತಡೆಯುವುದು ಅಥವಾ ಸಮಯವನ್ನು ಉಳಿಸುವುದು. ಆಹಾರವು ಹಾಳಾಗುವುದನ್ನು ಫ್ರಿಜ್ ತಡೆಯಬಹುದು, ಆದರೆ ಇದು ನಿಮ್ಮ ಆರೋಗ್ಯವನ್ನು ಹಾಳಾಗದಂತೆ ಕಾಪಾಡಬಹುದೇ? ಈ ಪ್ರಶ್ನೆಗೆ ಉತ್ತರವನ್ನು ಪಡೆಯಲು, ಆಹಾರ, ಹಣ್ಣುಗಳು ಮತ್ತು ತರಕಾರಿಗಳನ್ನು ಫ್ರಿಜ್ ನಲ್ಲಿ ಎಷ್ಟು ಸಮಯದವರೆಗೆ ಇಡುವುದು ಆರೋಗ್ಯಕ್ಕೆ ಸುರಕ್ಷಿತ ಎಂಬುದನ್ನು ಹೇಳಿದ್ದೇವೆ.

ಆರೋಗ್ಯ ಚೆನ್ನಾಗಿರಬೇಕಾದರೆ ಫ್ರಿಜ್ ನಲ್ಲಿ ಇಟ್ಟ ಆಹಾರವನ್ನು ಎಷ್ಟು ಸಮಯದೊಳಗೆ ತಿನ್ನಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಅನ್ನ:

ಅನ್ನ:

ರೆಫ್ರಿಜರೇಟರ್ ನಲ್ಲಿ ಬೇಯಿಸಿದ ಅನ್ನಯನ್ನು ಇಟ್ಟರೆ ಅದನ್ನು 2 ದಿನಗಳಲ್ಲಿ ತಿನ್ನಬೇಕು. ಅದನ್ನು ಸೇವಿಸುವ ಮೊದಲು ಅನ್ನವನ್ನು ಸ್ವಲ್ಪ ಸಮಯದವರೆಗೆ ಕೋಣೆಯ ಉಷ್ಣಾಂಶದಲ್ಲಿ ಇಡಿ. ಅಷ್ಟೇ ಅಲ್ಲ, ಅನ್ನವನ್ನು ಸರಿಯಾಗಿ ಬಿಸಿ ಮಾಡಿದ ಮೇಲೆ ಮಾತ್ರ ತಿನ್ನಿರಿ. ಎರಡು ದಿನಗಳ ನಂತರ ಆ ಅನ್ನ ತಿನ್ನಲು ಹೋಗಬೇಡಿ.

ಚಪಾತಿ ಅಥವಾ ರೋಟಿ:

ಚಪಾತಿ ಅಥವಾ ರೋಟಿ:

ಹೆಚ್ಚು ದಿನಗಳ ಕಾಲ ಇಟ್ಟ ರೊಟ್ಟಿ ಹೊಟ್ಟೆ ನೋವನ್ನು ಉಂಟುಮಾಡುತ್ತದೆ. ನೀವು ಗೋಧಿ ರೋಟಿಯನ್ನು ಫ್ರಿಜ್ ನಲ್ಲಿ ಇಟ್ಟುಕೊಂಡಿದ್ದರೆ, ರೊಟ್ಟಿ ತಯಾರಿಸಿದ 12 ರಿಂದ 14 ಗಂಟೆಗಳಲ್ಲಿ ಇದನ್ನು ಸೇವಿಸುವುದು ಉತ್ತಮ. ಇದನ್ನು ಮತ್ತಷ್ಟು ದಿನಗಳ ಕಾಲ ಇಟ್ಟರೆ ರೊಟ್ಟಿಯ ಪೌಷ್ಠಿಕಾಂಶದ ಮೌಲ್ಯವನ್ನು ಕಳೆದುಕೊಳ್ಳುವುದರ ಜೊತೆಗೆ, ಇದು ನಿಮಗೆ ಹೊಟ್ಟೆ ನೋವನ್ನು ಸಹ ಉಂಟುಮಾಡುತ್ತದೆ.

ಬೇಳೆಕಾಳು:

ಬೇಳೆಕಾಳು:

ಆಹಾರ ತಯಾರಿಸುವಾಗ ಬೇಳೆ ಕಾಳು ಉಳಿದಿದ್ದರೆ ಮತ್ತು ಅದು ಹಾಳಾಗದಂತೆ ತಡೆಯಲು ಅದನ್ನು ಫ್ರಿಜ್ ನಲ್ಲಿ ಇಟ್ಟುಕೊಂಡಿದ್ದರೆ, ಅದನ್ನು 2 ದಿನಗಳಲ್ಲಿ ಸೇವಿಸಿ. 2 ದಿನಗಳ ನಂತರ, ಫ್ರಿಜ್ ನಲ್ಲಿ ಇಟ್ಟ ಬೇಳೆ ಸೇವಿಸಿದ ನಂತರ, ಅದು ಹೊಟ್ಟೆಯಲ್ಲಿ ಗ್ಯಾಸ್ ರೂಪಿಸಲು ಪ್ರಾರಂಭಿಸುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು.

ಕತ್ತರಿಸಿದ ಹಣ್ಣುಗಳು:

ಕತ್ತರಿಸಿದ ಹಣ್ಣುಗಳು:

ಅನೇಕ ಬಾರಿ ಕತ್ತರಿಸಿದ ಹಣ್ಣುಗಳನ್ನು ಫ್ರಿಜ್ ನಲ್ಲಿ ಇಡುವುದುಂಟು. ಆದರೆ ಪ್ರತಿ ಹಣ್ಣುಗಳನ್ನು ತಿನ್ನಲು ಒಂದು ನಿರ್ದಿಷ್ಟ ಸಮಯವಿದೆ. ಅದರ ನಂತರ ಈ ಹಣ್ಣು ಹಾಳಾಗುವುದು. ಪಪ್ಪಾಯಿ ಆರು ಗಂಟೆಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ. ನೀವು ಕತ್ತರಿಸಿದ ಪಪ್ಪಾಯಿಯನ್ನು ಫ್ರಿಜ್ ನಲ್ಲಿ ಸಂಗ್ರಹಿಸಿದ್ದರೆ, ಅದನ್ನು ಆರು ಗಂಟೆಗಳಲ್ಲಿ ಬಳಸಬೇಕು. ತದನಂತರ ಅದು ಕಲುಷಿತವಾಗಲು ಪ್ರಾರಂಭವಾಗುವುದು. ನೀವು ಅದನ್ನು 12 ಗಂಟೆಗಳ ನಂತರ ಸೇವಿಸಿದರೆ, ನಿಮ್ಮ ದೇಹಕ್ಕೆ ನಿಧಾನವಾದ ವಿಷದಂತೆ ಕಾರ್ಯನಿರ್ವಹಿಸುತ್ತದೆ.

ಕತ್ತರಿಸಿದ ನಂತರ ಸೇಬುಗಳನ್ನು ದೀರ್ಘಕಾಲದವರೆಗೆ ಇಟ್ಟುಕೊಂಡರೆ, ಆಕ್ಸಿಡೀಕರಣವು ಅದರಲ್ಲಿ ನಡೆಯಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ಅದರ ಮೇಲಿನ ಪದರವು ಕಪ್ಪು ಬಣ್ಣಕ್ಕೆ ತಿರುಗುವುದು. ಆದರೆ, ಇದರಿಂದ ಯಾವುದೇ ಗಮನಾರ್ಹ ಅನಾನುಕೂಲತೆ ಇಲ್ಲ. ಆದರೆ ಸೇಬನ್ನು ಕತ್ತರಿಸಿದ 4 ಗಂಟೆಗಳಲ್ಲಿ ತಿನ್ನುವುದು ಉತ್ತಮ. ನೀವು ಯಾವುದೇ ಹಣ್ಣುಗಳನ್ನು ಕತ್ತರಿಸಿ ಪ್ರಿಜ್ ನಲ್ಲಿ ಇಟ್ಟಿದ್ದರೆ, ಅದನ್ನು 6 ರಿಂದ 8 ಗಂಟೆಗಳ ನಂತರ ತಿನ್ನಬಾರದು.

ದೀರ್ಘಕಾಲದವರೆಗೆ ಫ್ರಿಜ್ನಲ್ಲಿ ಆಹಾರವನ್ನು ತಾಜಾವಾಗಿರಿಸುವುದು ಹೇಗೆ?:

ದೀರ್ಘಕಾಲದವರೆಗೆ ಫ್ರಿಜ್ನಲ್ಲಿ ಆಹಾರವನ್ನು ತಾಜಾವಾಗಿರಿಸುವುದು ಹೇಗೆ?:

ಆಗಾಗ್ಗೆ ಜನರು ಬೇಯಿಸಿದ ಆಹಾರವನ್ನು ಹಸಿ ತರಕಾರಿಗಳೊಂದಿಗೆ ಫ್ರಿಜ್ನ ಒಂದೇ ಕಪಾಟಿನಲ್ಲಿ ಇಡುತ್ತಾರೆ. ಇದನ್ನು ಮಾಡುವುದರಿಂದ, ಫ್ರಿಜ್ ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ ಮತ್ತು ಆಹಾರವು ಬೇಗನೆ ಹಾಳಾಗುತ್ತದೆ. ಹಸಿ ಮತ್ತು ಬೇಯಿಸಿದ ಆಹಾರವನ್ನು ಬೇರೆ ಬೇರೆ ಕಪಾಟಿನಲ್ಲಿ ಇಡುವುದರ ಮೂಲಕ, ಹಸಿ ಆಹಾರದ ಬ್ಯಾಕ್ಟೀರಿಯಾವು ಬೇಯಿಸಿದ ಆಹಾರವನ್ನು ಕಲುಷಿತಗೊಳಿಸುವುದಿಲ್ಲ. ನೀವು ಬೇಯಿಸಿದ ಆಹಾರವನ್ನು ಸ್ಟೀಲ್ ಬಾಕ್ಸ್ ಇಟ್ಟುಕೊಂಡರೆ ಉತ್ತಮ.

ಪ್ರಿಜ್ ನಲ್ಲಿ ಇಟ್ಟ ಹಣ್ಣು-ತರಕಾರಿಗಳನ್ನು ಎಷ್ಟು ದಿನಗಳ ಒಳಗೆ ಸೇವಿಸಬೇಕು?:

ಹಣ್ಣುಗಳು ಮತ್ತು ತರಕಾರಿಗಳನ್ನು ಫ್ರಿಜ್ ನಲ್ಲಿ ಇಡಲು ನಿಗದಿತ ಸಮಯವೂ ಇದೆ. ಈ ಅವಧಿ ಮುಗಿಯುವ ಮೊದಲೇ ಅದನ್ನು ಸೇವಿಸಬೇಕು. ಆಗ ಮಾತ್ರ ದೇಹವು ಅದರಲ್ಲಿರುವ ಪೋಷಕಾಂಶಗಳನ್ನು ಪಡೆಯಬಹುದು. ಮೈಫಿಯರ್ಲೆಸ್ ಕಿಚನ್ ಪ್ರಕಾರ, ಫ್ರಿಜ್ನಲ್ಲಿ ಇಟ್ಟ ಹಣ್ಣುಗಳು ಮತ್ತು ತರಕಾರಿಗಳನ್ನು ಇಷ್ಟು ದಿನಗಳಲ್ಲಿ ಸೇವಿಸಬೇಕು.

ಸೇಬು :4 - 6 ವಾರಗಳು

ಚೆರ್ರಿ : 7 ದಿನಗಳು

ಕಪ್ಪು ದ್ರಾಕ್ಷಿ ರಾಸ್ಪ್ಬೆರಿ, ಸ್ಟ್ರಾಬೆರಿ: 3-6 ವಾರ

ಸಿಟ್ರಸ್ ಹಣ್ಣು : 1 - 3 ವಾರ

ದ್ರಾಕ್ಷಿ : 7 ದಿನಗಳು

ಕಲ್ಲಂಗಡಿ : ಕತ್ತರಿಸದೇ ಇರುವುದು 2 ವಾರಗಳು, ಹೋಳಾದ : 2 -4 ದಿನಗಳು

ಅನನಾಸ್ :5-7 ದಿನಗಳು

ಬಿನ್ಸ್ : 3-5 ದಿನಗಳು

ಕಾರ್ನ್: 1-2 ದಿನಗಳು

Read more about: home kitchen ಮನೆ
English summary

How Long Can You Safely Keep Leftovers in the Refrigerator in Kannada

Here we talking about How long can you safely keep leftovers in the refrigerator in Kannada, read on
X
Desktop Bottom Promotion