For Quick Alerts
ALLOW NOTIFICATIONS  
For Daily Alerts

ಮೇಲೆ ಕೆಟ್ಟ ದೃಷ್ಟಿ ಬೀಳದಂತೆ ತಡೆಯುವ ಈ ವಸ್ತುವನ್ನು ಮನೆಯಲ್ಲಿ ಎಲ್ಲಿ ಕಟ್ಟಬೇಕು?

|

ನಮ್ಮಲ್ಲಿ ಅನಾದಿ ಕಾಲದಿಂದಲೂ ಕೆಟ್ಟ ದೃಷ್ಟಿ ಅಥವಾ ದೃಷ್ಟಿ ಆಗುವುದು ಎಂಬ ಪರಿಕಲ್ಪನೆಯಿದೆ. ನಮ್ಮ ಸಂತೋಷ, ಏಳಿಗೆಯನ್ನ ಸಹಿಸದ ಜನರು ನಮ್ಮ ಮೇಲೆ ಉದ್ದೇಶಪೂರ್ವಕವಾಗಿ ಏನನ್ನಾದರೂ ಮಾಡುತ್ತಾರೆ. ಅದರಿಂದ ನಮ್ಮ ಆರೋಗ್ಯ, ಸಂಪತ್ತೆಲ್ಲವೂ ನಶಿಸಿ ಹೋಗುವುದು ಎಂದು ಭಯಪಡುತ್ತಾರೆ.

ದುಷ್ಟ ಕಣ್ಣು ತಮ್ಮ ಮೇಲೆ ಬೀಳದೇ ಇರಲು ಜನರು ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಅವುಗಳಲ್ಲಿ ಒಂದು ಇವಿಲ್ ಐ. ತಮ್ಮ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಇದನ್ನು ತಡೆಯುವ ಶಕ್ತಿ ಇರುವ ಕಣ್ಣಿನ ಆಕೃತಿ(ಇವಿಲ್ ಐ)ಯನ್ನು ಧರಿಸಿಕೊಂಡಿರುತ್ತಾರೆ. ಆದರೆ ಯಾವ ಉದ್ದೇಶಕ್ಕೆ ಯಾವ ಬಣ್ಣದ ಮಣಿ ಕಟ್ಟಬೇಕು? ಎಲ್ಲಿ ಕಟ್ಟಬೇಕು ಎಂಬುದು ತಿಳಿದಿರುವುದಿಲ್ಲ. ಅವುಗಳನ್ನು ಈ ಕೆಳಗೆ ನೀಡಲಾಗಿದೆ.

How do You Protect your House from the Evil Eye? Here is all you Need to Know

ದೃಷ್ಟಿ ತೆಗೆಯುವ ಈ ವಸ್ತುಗಳನ್ನು ವಾಸ್ತು ಪ್ರಕಾರ ಮನೆಯಲ್ಲಿ ಎಲ್ಲಿ ಕಟ್ಟಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕೆಟ್ಟ ದೃಷ್ಟಿಯಿಂದ ದೂರವಿರಲು ನೀವು ಈ ಕೆಳಗಿನ ಬಣ್ಣದ ಕಣ್ಣಿನ ದೃಷ್ಟಿ ಮಣಿಗಳನ್ನು ಧರಿಸಬಹದು.

1. ನೀಲಿ ಬಣ್ಣ ಬುದ್ಧಿವಂತಿಕೆಗಾಗಿ

2. ಕೆಂಪು ಧೈರ್ಯಕ್ಕಾಗಿ

3. ಆಕಾಶ ನೀಲಿ ಆರೋಗ್ಯಕ್ಕಾಗಿ

4. ತಿಳಿ ಹಸಿರು ಯಶಸ್ಸಿಗೆ

5. ಕಪ್ಪು ಶಕ್ತಿಗಾಗಿ

6. ಗುಲಾಬಿ ಪ್ರೀತಿಗಾಗಿ

7. ಹಸಿರು ಸಂತೋಷಕ್ಕಾಗಿ

8. ಹವಳವು ರಕ್ಷಣೆಗಾಗಿ

9. ಬಿಳಿ ಸಂಪತ್ತುಗಾಗಿ.

ಕೆಟ್ಟ ದೃಷ್ಟಿ ಬೀಳದಂತೆ ಇವಿಲ್ ಐಯನ್ನು ಎಲ್ಲಿ ಹಾಕಬೇಕು?:

1. ವಾಸ್ತು ತಜ್ಞರ ಪ್ರಕಾರ, ಇವಿಲ್ ಐ ಅನ್ನು ಹಾಕಲು ಉತ್ತಮ ಸ್ಥಳವೆಂದರೆ ನಿಮ್ಮ ಮನೆಯಲ್ಲಿ ನೇತು ಹಾಕುವುದು. ನೀಲಿ ಕಣ್ಣುಳ್ಳ ಆ ಆಕೃತಿಯು ನಿಮ್ಮ ಮನೆಯನ್ನು ಅಸೂಯೆಯಿಂದ ರಕ್ಷಿಸುವುದಲ್ಲೇ, ನಿಮ್ಮ ಕುಟುಂಬವನ್ನು ಕಾಪಾಡುತ್ತದೆ. ಮನೆಯ ಪ್ರವೇಶದ್ವಾರದಲ್ಲಿ ಹಾಕುವುದರಿಂದ, ಮನೆಗೆ ಪ್ರವೇಶಿಸುವ ಎಲ್ಲಾ ಕೆಟ್ಟ ಶಕ್ತಿಗಳನ್ನು ಸ್ವಯಂಚಾಲಿತವಾಗಿ ತಡೆಯುತ್ತದೆ.

2. ಲಿವಿಂಗ್ ರೂಮ್ ಕೂಡ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ನಿಮ್ಮ ಮನೆಗೆ ಬಂದವರೆಲ್ಲ ಅದೇ ಪ್ರದೇಶದಲ್ಲಿ ಹೆಚ್ಚು ಕಾಲ ಕುಳಿತಿರುವುದರಿಂದ ದೃಷ್ಟ ಬೀಳದಂತೆ ಕಾಪಾಡುವ ವಸ್ತುವನ್ನು ಕಪಾಟಿನಲ್ಲಿ ಇಡುವುದು ಅಥವಾ ಅದನ್ನು ಅಲಂಕಾರಿಕವಾಗಿ ನೇತುಹಾಕುವುದು ಸೂಕ್ತ. ಇದು ಎಲ್ಲಾ ಕೆಟ್ಟ ಶಕ್ತಿಗಳನ್ನು ಸಕಾರಾತ್ಮಕವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.

3. ಇಂತಹ ಆಭರಣಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದು, ಟ್ರೆಂಡಿಯಾಗಿದೆ. ಇದು ನಿಮ್ಮನ್ನು ಎಲ್ಲಾ ನೆಗೆಟಿವ್ ಶಕ್ತಿಗಳಿಂದ ಕಾಪಾಡಿ, ಮಾನಸಿಕ ಶಾಂತಿಯನ್ನು ನೀಡುತ್ತದೆ. ಇದನ್ನು ಹಾರ ಅಥವಾ ಕಂಕಣದ ರೂಪದಲ್ಲಿ ಧರಿಸಬಹುದು. ಆದರೆ, ಯಾವುದೇ ಕಾರಣಕ್ಕೂ ಕಾಲಿಗೆ ಹಾಕಬೇಡಿ.

4. ಮರಗಳು ಅಥವಾ ಸಸ್ಯಗಳ ಮೇಲೆ ಸುಂದರವಾದ ಈ ಕಲಾಕೃತಿಯನ್ನು ಇರಿಸಲು ಗಾರ್ಡನ್ ಮತ್ತೊಂದು ಉತ್ತಮ ಸ್ಥಳವಾಗಿದೆ. ಆದರೂ ಅದನ್ನು ದಕ್ಷಿಣ ದಿಕ್ಕಿಗೆ ಎದುರಿಸಬೇಡಿ. ಅದನ್ನು ಉದ್ಯಾನದಲ್ಲಿ ಇಡುವುದರಿಂದ ಸಾಮರಸ್ಯದ ವಾತಾವರಣಕ್ಕೆ ಕಾರಣವಾಗುವ ಎಲ್ಲಾ ಸಕಾರಾತ್ಮಕ ಮತ್ತು ಶಾಂತಿಯುತ ಶಕ್ತಿಗಳು ಸಂಗ್ರಹವಾಗುತ್ತವೆ.

5. ಕೆಲಸದ ಸ್ಥಳಗಳಲ್ಲಿ ಮೇಜಿನ ಮೇಲೆ ಇಡುವುದು ಉತ್ತಮ. ದುಷ್ಟ ಕಣ್ಣನ್ನು ಇಡುವ ದಿಕ್ಕು ಕೂಡ ನಿರ್ಣಾಯಕ, ಅದನ್ನು ದಕ್ಷಿಣಕ್ಕೆ ಮುಖ ಮಾಡಿ ಇಡಬೇಡಿ. ತಮ್ಮ ವಾಹನಗಳಲ್ಲಿ ರಿಯರ್‌ವ್ಯೂ ಕನ್ನಡಿಯ ಮೇಲೆ ನೇತು ಹಾಕುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಇದನ್ನು ಉಡುಗೊರೆಯಾಗಿ ನೀಡಬೇಡಿ. ಏಕೆಂದರೆ ಅದು ದುರಾದೃಷ್ಟಕರ ಘಟನೆಗಳಿಗೆ ಕಾರಣವಾಬಹುದು.

Read more about: home ಮನೆ
English summary

How do You Protect your House from the Evil Eye? Here is all you Need to Know

Here we talking about How do you protect your house from the evil eye? Here is all you Need to Know, read on
X
Desktop Bottom Promotion