For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿರುವ ಫಂಗಸ್ ಎಂದರೇನು? ಇದು ಆರೋಗ್ಯದ ಮೇಲೆ ಎಂತಹ ಪರಿಣಾಮ ಬೀರುತ್ತೆ ಗೊತ್ತಾ?

|

ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು, ಭೂಮಿಗೆ ತಂಪೆರೆಯಲು ಪ್ರತಿಯೊಬ್ಬರೂ ಮಳೆಗಾಲಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಇಂತಹ ಮಳೆಗಾಲವು ಹಲವಾರು ಸಮಸ್ಯೆಗಳನ್ನು ಹೊತ್ತು ತರುತ್ತದೆ. ಅದರಲ್ಲೊಂದು ಮನೆಯ ಶಿಲೀಂಧ್ರ ಅಥವಾ ಫಂಗಸ್. ಅತಿಯಾದ ತೇವಾಂಶದಿಂದ ಉಂಟಾಗುವ ಈ ಶಿಲೀಂಧ್ರ ಮನೆಯನ್ನು ಹಾಳು ಮಾಡುವುದಲ್ಲೇ, ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಮನೆ ಶಿಲೀಂಧ್ರವು ಕಿಟಕಿ, ಬಾಗಿಲು, ಬಟ್ಟೆ, ಶೂಗಳು ಅಥವಾ ಸಾಕುಪ್ರಾಣಿಗಳ ಮೂಲಕ ಮನೆಗಳನ್ನು ಪ್ರವೇಶಿಸಬಹುದು. ಇವು ಸಾಮಾನ್ಯವಾಗಿ ಪುಡಿ ಮತ್ತು ಹತ್ತಿಯಂತಿರುತ್ತವೆ ಜೊತೆಗೆ, ಕೆಟ್ಟ ವಾಸನೆಯನ್ನು ಹೊಂದಿರುತ್ತವೆ. ಆದರೆ, ನಾವು ಯಾರು ಇದಕ್ಕೆ ಹೆಚ್ಚು ಗಮನ ಕೊಡುವುದೇ ಇಲ್ಲ. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ಅದರ ಮೂಲ, ಪರಿಣಾಮ ಮತ್ತು ಅದನ್ನು ನಿಮ್ಮ ಮನೆಗಳಿಗೆ ಪ್ರವೇಶಿಸದಂತೆ ತಡೆಯುವ ವಿಧಾನಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.

ಮನೆಯಲ್ಲಿರುವ ಶಿಲೀಂಧ್ರ ಅಥವಾ ಫಂಗಸ್ ಎಂದರೇನು? ಇದರಿಂದ ನಮ್ಮ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮನೆಯ ಶಿಲೀಂಧ್ರ ಎಂದರೇನು?:

ಮನೆಯ ಶಿಲೀಂಧ್ರ ಎಂದರೇನು?:

60-80 ಡಿಗ್ರಿ ತಾಪಮಾನದಲ್ಲಿ ಮನೆಯ ತೇವ ಪ್ರದೇಶದಲ್ಲಿ ಕಂಡುಬರುವ ಪಾಚಿ ತರಹದ ವಸ್ತು. ಬಾತ್ ರೂಮ್, ಅಡುಗೆಮನೆ, ಎಸಿ ಮತ್ತು ಕೂಲರ್ ಗಳ ಸುತ್ತಮುತ್ತ, ಸ್ವಲ್ಪ ಒಣ ಜಾಗಗಳಲ್ಲಿ ಹೆಚ್ಚು ಇರುತ್ತವೆ. ಕೆಲವು ಮನೆಯ ವಾಲ್‌ಪೇಪರ್‌ಗಳ ಹಿಂದೆ ಬೆಳೆಯಬಹುದು. ಎಲ್ಲಿ ತೇವಾಂಶ ಮತ್ತು ಗೋಡೆ ಅಥವಾ ಗೋಡೆಗೆ ಬಳಿದ ಬಣ್ಣ ಎದ್ದಿರುವ ಜಾಗ ಒಟ್ಟಿಗೆ ಇರುತ್ತದೆಯೋ ಅಲ್ಲಿ ಶಿಲೀಂಧ್ರಗಳು ಬೆಳೆಯುತ್ತವೆ. ಇವುಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

ಮನೆಗಳಲ್ಲಿ ಕಂಡುಬರುವ ವಿವಿಧ ರೀತಿಯ ಫಂಗಸ್ ಗಳು:

ಮನೆಗಳಲ್ಲಿ ಕಂಡುಬರುವ ವಿವಿಧ ರೀತಿಯ ಫಂಗಸ್ ಗಳು:

ಆಸ್ಪರ್ಜಿಲಸ್, ಆಲ್ಟರ್ನೇರಿಯಾ, ಅಕ್ರಿಮೋನಿಯಮ್, ಔರೆಬಾಸಿಡಿಯಂ, ಚೈಟೊಮಿಯಮ್, ಕ್ಲಾಡೋಸ್ಪೋರಿಯಮ್, ಫುಸಾರಿಯಮ್, ಮ್ಯೂಕೋರ್, ಪೆನಿಸಿಲಿಯಂ, ಸ್ಟ್ಯಾಚಿಬೋಟ್ರಿಸ್, ಟ್ರೈಕೋಡರ್ಮಾ, ಉಲೋಕ್ಲಾಡಿಯಮ್ ಇತ್ಯಾದಿಗಳು ನಿಮ್ಮ ಮನೆಗಳಲ್ಲಿ ಬೆಳೆಯುವ ವಿವಿಧ ರೀತಿಯ ಶಿಲೀಂಧ್ರಗಳಾಗಿವೆ. ಅವುಗಳಲ್ಲಿ ಅಕ್ರಿಮೋನಿಯಮ್ ಮನೆಗಳಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ಶಿಲೀಂಧ್ರವಾಗಿದೆ. ಇದರ ಜೊತೆಗೆ ಕ್ಯಾಂಡಿಡಾ, ಆಸ್ಪರ್ಜಿಲಸ್ ಮತ್ತು ಮ್ಯೂಕೋರ್ ಶಿಲೀಂಧ್ರಗಳು ಕೂಡ ಮಾನವನ ಮೇಲೆ ಪರಿಣಾಮ ಬೀರುವುದು.

ಮನೆಯ ಶಿಲೀಂಧ್ರದ ಆರೋಗ್ಯದ ಪರಿಣಾಮಗಳು:

ಮನೆಯ ಶಿಲೀಂಧ್ರದ ಆರೋಗ್ಯದ ಪರಿಣಾಮಗಳು:

ಕೆಲವು ಜನರು ಮನೆಯ ಶಿಲೀಂಧ್ರ ಅಲರ್ಜಿ ಹೊಂದಿರಬಹುದು. ಅದರ ಸಂಪರ್ಕಕ್ಕೆ ಬಂದ ನಂತರ ಕೆಮ್ಮು, ಶೀತ, ಸೀನುವಿಕೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದ ಈಗಾಗಲೇ ಇರುವ ಅಸ್ತಮಾ, ಉಸಿರಾಟದ ಸೋಂಕುಗಳಂತಹ ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಕಡಿಮೆ ರೋಗ ನಿರೋಧಕ ಶಕ್ತಿ ಇರುವ ಜನರು ಗಂಟಲು ನೋವು ಅಥವಾ ಇತರ ಉಸಿರಾಟದ ಸಮಸ್ಯೆಗಳನ್ನು ಎದುರಿಸಬಹುದು. ಇವುಗಳ ಜೊತೆಗೆ ಶಿಲೀಂಧ್ರದ ಕಣಗಳು ತಲೆಗೆ ಬಿದ್ದರೆ, ತುರಿಕೆ, ತಲೆಹೊಟ್ಟು, ಅಸ್ವಸ್ಥತೆ, ಕೆಂಪಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗಬಹುದು. ಇನ್ನೂ ಈ ಫಂಗಸ್ ಗಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಪಲ್ಮನರಿ ಫೈಬ್ರೋಸಿಸ್ ಅಥವಾ ಶ್ವಾಸಕೋಶದ ಸಮಸ್ಯೆ ಉಂಟಾಗಬಹುದು. ತೀವ್ರತರವಾದ ಪರಿಸ್ಥಿತಿಗಳಲ್ಲಿ ಅವು ಕ್ಯಾನ್ಸರ್ ರೂಪಕ್ಕೆ ತಿರುಗಬಹುದು.

ತಡೆಗಟ್ಟುವಿಕೆ ಹೇಗೆ?:

ತಡೆಗಟ್ಟುವಿಕೆ ಹೇಗೆ?:

ಆರೋಗ್ಯ ತಜ್ಞರು ಮನೆಯ ಶಿಲೀಂಧ್ರವನ್ನು ತಡೆಗಟ್ಟಲು ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾರೆ. ಅದಕ್ಕಾಗಿ ಮನೆಯನ್ನು ಪದೇ ಪದೇ ಶುಚಿಗೊಳಿಸುವುದು ಮುಖ್ಯ.

  • ಮನೆಯ ಶಿಲೀಂಧ್ರ ಬೆಳೆಯದಂತೆ ತಡೆಯಲು ಸುರಕ್ಷಿತ ಮತ್ತು ಪರಿಣಾಮಕಾರಿ ರಾಸಾಯನಿಕ ಪರಿಹಾರಗಳನ್ನು ಬಳಸಿ.
  • ಉತ್ತಮ ರಕ್ತದಲ್ಲಿನ ಸಕ್ಕರೆ ಮಟ್ಟ, ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯ ಮತ್ತು ಫಿಟ್ ನೆಸ್ ಕಾಪಾಡಿಕೊಳ್ಳಿ.
  • ಯಾರಾದರೂ ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯಂತಹ ಕಾಯಿಲೆಯಿಂದ ಬಳಲುತ್ತಿದ್ದರೆ, ಅವರು ಹೆಚ್ಚು ಜಾಗರೂಕರಾಗಿರಬೇಕು ಇಲ್ಲದಿದ್ದರೆ ಸೋಂಕು ಅವರ ಸ್ಥಿತಿ ಹದಗೆಡಲು ಕಾರಣವಾಗಬಹುದು.
  • ಫಂಗಸ್ ಮನೆಯಲ್ಲಿ ಈಗಾಗಲೇ ಬೆಳೆದಿದ್ದರೆ, ಅವುಗಳನ್ನ ಸ್ವಚ್ಛಗೊಳಿಸುವಾಗ ಬರಿ ಕೈಗಳಿಂದ ಮುಟ್ಟಬೇಡಿ, ಕೈಗವಸುಗಳನ್ನು ಧರಿಸಿ.
  • ಸ್ಟೋರ್ ರೂಂಗಳು ಅಥವಾ ಬಳಕೆಯಾಗದ ಕೊಠಡಿಗಳನ್ನು ಸ್ವಚ್ಛಗೊಳಿಸುತ್ತಿರಿ.
  • ಫಂಗಸ್ ಸಂಪರ್ಕಕ್ಕೆ ಬಂದ ನಂತರ ಚರ್ಮದ ಮೇಲೆ ಆಗುವ ಒಂದು ದದ್ದನ್ನು ಕೂಡ ನಿರ್ಲಕ್ಷಿಸಬೇಡಿ, ವೈದ್ಯರನ್ನು ಸಂಪರ್ಕಿಸಿ.
English summary

House fungus; Types, Symmptoms, Effects on Health and How to Prevent in kannada

People await the monsoon season all year long as it brings respite from the searing summer heat and spreads greenery. However, the rainy season also brings with it a host of problems that can prove to be health hazards. One of the most common issues during this season that can not just damage homes but also contribute to health problems is house fungus.
X
Desktop Bottom Promotion