Just In
Don't Miss
- Movies
ಗಟ್ಟಿಮೇಳ ಧಾರಾವಾಹಿಯ ನಟಿ ಮಹತಿ ಎಸ್ಎಸ್ಎಲ್ಸಿಯಲ್ಲಿ ಪಡೆದ ಅಂಕ ಎಷ್ಟು?
- News
ಚಿಕ್ಕಬಳ್ಳಾಪುರಕ್ಕೆ ಇಎಸ್ಐ ಆಸ್ಪತ್ರೆ; ಕೇಂದ್ರದ ಒಪ್ಪಿಗೆ
- Technology
ಭಾರತದಲ್ಲಿ ಇನ್ಫಿನಿಕ್ಸ್ ನೋಟ್ 12 ಸರಣಿ ಬಿಡುಗಡೆ! ಬೆಲೆ ಎಷ್ಟು?
- Sports
ನಮ್ಮೂರ ಪ್ರತಿಭೆ: ಕ್ರೀಡೆಯನ್ನೇ ಉಸಿರಾಗಿಸಿಕೊಂಡ ಛಲಗಾರ: ಕಬಡ್ಡಿ ಅಂಗಳದ ಮಿನುಗು ತಾರೆ ಸುಕೇಶ್ ಹೆಗ್ಡೆ
- Automobiles
ರೈಲಿನ ಹಾರ್ನ್ ಬಗ್ಗೆ ನಿಮಗೆಷ್ಟು ಗೊತ್ತು?: ಈ 11 ಬಗೆಯ ಹಾರ್ನ್ ಟ್ಯೂನ್ಗಳಿಗಿವೆ ವಿವಿಧ ಸಂಕೇತಗಳು!
- Finance
ಆಂಕರ್ ಹೂಡಿಕೆದಾರರಿಂದ 124 ಕೋಟಿ ರೂ. ಪಡೆದ ಇಮುದ್ರಾ!
- Education
ESIC Karnataka Recruitment 2022 : 5 ಸಹಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಳಿಗಾಲದಲ್ಲಿ ಇರುವೆಗಳ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿವೆ ಸರಳೋಪಾಯಗಳು
ಮಳೆ ಕಡಿಮೆಯಾಗಿ, ಬಿಸಿಲು ಬರುತ್ತಿದ್ದಂತೆ, ಇರುವೆಗಳಂತಹ ಕೀಟಗಳು ಹೊರಗೆ ಬರಲು ಪ್ರಾರಂಭವಾಗುತ್ತವೆ. ಅದರಲ್ಲೂ ಈ ಮರಿಸೈನ್ಯ ಅಡುಗೆಮನೆಗೆ ಕಾಲಿಟ್ಟರೆ ಅಧೋಗತಿ ಖಂಡಿತ. ಅವುಗಳನ್ನು ತೊಡೆದು ಹಾಕುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಸಕ್ಕರೆ ಪದಾರ್ಥಗಳು, ಬೀಜಗಳು, ಎಣ್ಣೆಯನ್ನು ಹಾಳುಮಾಡುತ್ತವೆ. ಆದ್ದರಿಂದ ಅವುಗಳನ್ನು ದೂರವಿಡುವ ಮತ್ತು ಅವುಗಳನ್ನು ತೊಡೆದುಹಾಕಲು ಸಹಾಯ ಮಾಡುವ ಕೆಲವು ನೈಸರ್ಗಿಕ ಪರಿಹಾರಗಳನ್ನು ನಾವಿಂದು ತಿಳಿಸಿಕೊಡಿದ್ದೇವೆ.
ಮನೆಯಲ್ಲಿರುವ ಇರುವೆಗಳನ್ನು ತೊಡೆದುಹಾಕಲು ನೈಸರ್ಗಿಕ ಪರಿಹಾರಗಳನ್ನು ಈ ಕೆಳಗೆ ನೀಡಲಾಗಿದೆ:

ಗ್ಲಾಸ್ ಕ್ಲೀನರ್ ನಿಂದ ಪರಿಹಾರ:
ಸಾಮಾನ್ಯವಾಗಿ ಮನೆಯಲ್ಲಿ ವಿವಿಧ ಉದ್ದೇಶಗಳಿಗಾಗಿ ಖಾಲಿ ಸ್ಪ್ರೇ ಬಾಟಲಿಗಳನ್ನು ಇಟ್ಟುಕೊಳ್ಳುತ್ತೀರಿ. ಆ ಸ್ಪ್ರೇ ಬಾಟಲಿಯಲ್ಲಿ ಗ್ಲಾಸ್ ಕ್ಲೀನರ್ ದ್ರವವನ್ನು ಸ್ವಲ್ಪ ಡಿಶ್ ಸೋಪ್ನೊಂದಿಗೆ ಸೇರಿಸಿ, ಸ್ಪ್ರೇ ಮಾಡಿ. ಈ ಪರಿಹಾರವು ಇರುವೆಗಳು ನಿಮ್ಮ ಮನೆಯಿಂದ ದೂರ ಹೋಗುವಂತೆ ಮಾಡುತ್ತದ. ಇರುವೆಗಳ ಸಾಲು ಎಲ್ಲಿಂದ ಹುಟ್ಟುತ್ತದೆ ಎಂದು ನೀವು ಭಾವಿಸುವಿರೋ ಅಲ್ಲೆಲ್ಲಾ ಸಿಂಪಡಿಸಿ, ಉಳಿದಿರುವ ಶೇಷವನ್ನು ಬಟ್ಟೆಯಿಂದ ಒರೆಸಿ.

ಕರಿಮೆಣಸಿನ ಪುಡಿ:
ಪ್ರತಿ ಅಡುಗೆಮನೆಯಲ್ಲಿ ಸುಲಭವಾಗಿ ಕಂಡುಬರುವ ಈ ಪದಾರ್ಥವು ಕಿರಿಕಿರಿಗೊಳಿಸುವ ಇರುವೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಈ ಕರಿಮೆಣಸಿನ ವಾಸನೆಯಿಂದ ಇರುವೆಗಳು ಓಡಿಹೋಗುತ್ತವೆ. ಆದ್ದರಿಂದ ಪ್ಲಾಟ್ಫಾರ್ಮ್ನಲ್ಲಿ ಅಥವಾ ಬೇಸ್ಬೋರ್ಡ್ನಲ್ಲಿ ಇದನ್ನು ಸ್ವಲ್ಪ ಚಿಮುಕಿಸಬೇಕು ಜೊತೆಗೆ ಉಪಕರಣಗಳ ಹಿಂದೆ ಅಥವಾ ಇರುವೆಗಳು ಇರುವ ಸ್ಥಳಗಳ ಹಿಂದೆ ಇಡಬೇಕು.

ಡಯಾಟೊಮ್ಯಾಸಿಯಸ್ ಅರ್ತ್:
ಈ ಪುಡಿ-ತರಹದ ವಸ್ತುವು ಒಂದು ರೀತಿಯ ಸಿಲಿಕಾವಾಗಿದ್ದು, ಇದು ಡಯಾಟಮ್ಸ್ ಎಂದು ಕರೆಯಲ್ಪಡುವ ಜಲಚರಗಳ ಪಳೆಯುಳಿಕೆಯ ಅವಶೇಷಗಳನ್ನು ಹೊಂದಿದೆ. ಇದು ವಿಷಕಾರಿಯಲ್ಲ, ಆದರೆ ಇದು ಇರುವೆಗಳನ್ನು ಕೊಲ್ಲುತ್ತದೆ. ಏಕೆಂದರೆ ಇದು ಇರುವೆಗಳನ್ನು ಒಣಗಿಸುತ್ತದೆ. ಆದರೆ, ನೀವು ಉಸಿರಾಡುವಾಗ ಅಥವಾ ನಿಮ್ಮ ಚರ್ಮ ಪ್ರವೇಶಿಸದಂತೆ ಜಾಗರೂಕರಾಗಿರಿ.

ಪುದೀನಾ:
ಇದು ನೈಸರ್ಗಿಕ ನಿವಾರಕವಾಗಿದ್ದು, ಮುಖ್ಯವಾಗಿ ಸೊಳ್ಳೆ ನಿವಾರಕವಾಗಿ ಬಳಸಲಾಗುತ್ತದೆ. ನೀವು ಮಾಡಬೇಕಾಗಿರುವುದು 2 ಕಪ್ ನೀರನ್ನು 15 ಹನಿ ಪುದೀನಾ ಎಣ್ಣೆಯೊಂದಿಗೆ ಬೆರೆಸಿ, ಇರುವೆಗಳು ಎಲ್ಲಿಂದ ಪ್ರವೇಶಿಸುತ್ತದೆ ಅಲ್ಲಿ ಸ್ಪ್ರೇ ಮಾಡಿ. ಆದರೆ ಈ ಸ್ಪ್ರೇ ಅನ್ನು ಸಾಕುಪ್ರಾಣಿಗಳಿಂದ ದೂರವಿಡಿ.

ಹ್ಯಾಂಡ್ ಸೋಪ್:
ಕೈ ಸಾಬೂನು ಕೇವಲ ಕೈಗಳನ್ನು ಸ್ವಚ್ಛಗೊಳಿಸುವುದಲ್ಲ, ಅದರ ಜೊತೆಗೆ ಸಾಬೂನು ನೀರಿನ ದ್ರಾವಣವು ಇರುವೆಗಳನ್ನು ತೆಗೆದುಹಾಕಲು ಉತ್ತಮವಾಗಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಇರುವೆಯ ಹಾದಿಗಳಲ್ಲಿ ಮತ್ತು ಅವು ಎಲ್ಲಿಂದ ಪ್ರವೇಶಿಸುತ್ತವೆಯೋ ಅಲ್ಲಿ ಇದನ್ನು ಸಿಂಪಡಿಸಿ.

ಟೀ ಟ್ರೀ ಆಯಿಲ್:
ಈ ಎಣ್ಣೆಯು ಮೊಡವೆಗಳಿಗೆ ಚಿಕಿತ್ಸೆ ನೀಡುವುದಲ್ಲದೆ ಇರುವೆಗಳನ್ನು ಕೊಲ್ಲುತ್ತದೆ. ಸ್ಪ್ರೇ ಬಾಟಲ್ನಲ್ಲಿ 7 ಹನಿ ಟೀ ಟ್ರೀ ಆಯಿಲ್ 2 ಕಪ್ ನೀರಿನೊಂದಿಗೆ ಸೇರಿಸಿ, ಚೆನ್ನಾಗಿ ಅಲ್ಲಾಡಿಸಿ, ಸ್ಪ್ರೇ ಮಾಡಿ. ಇನ್ನೊಂದು ವಿಧಾನವೆಂದರೆ ಅದರಲ್ಲಿ ಹತ್ತಿ ಉಂಡೆಗಳನ್ನು ಅದ್ದಿ, ಇರುವೆಗಳಿರುವ ಮನೆಯ ಸುತ್ತಲೂ ಇರಿಸಿ. ಸುಗಂಧವು ತುಂಬಾ ಪ್ರಬಲವಾಗಿದೆ ಎಂದು ಭಾವಿಸಿದರೆ, ಪುದೀನಾ ಎಣ್ಣೆ ಮತ್ತು ನೀರಿನಿಂದ ಅದನ್ನು ಮಿಶ್ರಣ ಮಾಡಿ. ಬೆಕ್ಕುಗಳಿಂದ ದೂರವಿಡಿ.

ನಿಂಬೆರಸ:
ಅಡುಗೆಕೋಣೆಯಲ್ಲಿರುವ ಕೀಟಗಳನ್ನು ಓಡಿಸಲು ಅತ್ಯಂತ ಶಕ್ತಿಶಾಲಿ ಮದ್ದೆಂದರೆ ಅದು ನಿಂಬೆರಸ. ನಿಂಬೆರಸವನ್ನು ತೆಗೆದು ಅದಕ್ಕೆ ಒಂದು ಚಮಚ ಉಪ್ಪು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಂಡು ಇರುವೆಗಳು ಇರುವ ಜಾಗಕ್ಕೆ ಸಿಂಪಡಿಸಿ. ಕೆಲವೇ ಸಮಯದಲ್ಲಿ ಇರುವೆಗಳು ಅಲ್ಲಿಂದ ಜಾಗ ಖಾಲಿ ಮಾಡಿರುವುದನ್ನು ನೀವು ನೋಡಬಹುದು.

ದಾಲ್ಚಿನ್ನಿ ಎಲೆ ಸಾರಭೂತ ತೈಲ:
ದಾಲ್ಚಿನ್ನಿ ಎಲೆಯ ಸಾರಭೂತ ತೈಲದಲ್ಲಿರುವ ಸಂಯುಕ್ತಗಳು ಟ್ರಾನ್ಸ್-ಸಿನ್ನಾಮಾಲ್ಡಿಹೈಡ್ ಅನ್ನು ಹೊಂದಿರುತ್ತವೆ, ಇದು ಇರುವೆಗಳನ್ನು ಕೊಲ್ಲಲು ಮತ್ತು ಹಿಮ್ಮೆಟ್ಟಿಸಲು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಹತ್ತಿಯನ್ನು ಬಳಸುವ ಇತರ ಸಾರಭೂತ ತೈಲಗಳಂತೆಯೇ ಇದನ್ನೂ ಬಳಸಿ.

ವಿನೇಗರ್:
ಇರುವೆಗಳನ್ನು ಓಡಿಸಲು ಕಪ್ಪು ವಿನೇಗರ್ ತುಂಬಾ ಪ್ರಭಾವಿಯಾಗಿ ಕೆಲಸ ಮಾಡುತ್ತದೆ. ಅಡುಗೆ ಮನೆಗೆ ಇರುವೆಗಳು ಬರುವುದನ್ನು ತಡೆಯಲು ನೇರವಾಗಿ ಇರುವೆಗಳ ಮೇಲೆ ವಿನೇಗರ್ ಸಿಂಪಡಿಸಿ. ಇರುವೆಗಳು ವಿನೇಗರ್ನ ವಾಸನೆಗೆ ದೂರ ಹೋಗುತ್ತದೆ. ಇದು ಇರುವೆಗಳನ್ನು ಓಡಿಸಲು ಸುಲಭ ವಿಧಾನ.