For Quick Alerts
ALLOW NOTIFICATIONS  
For Daily Alerts

ಈ ಟ್ರಿಕ್ಸ್‌ಗಳಿಂದ ಮೊಟ್ಟೆ ಸಿಪ್ಪೆಯನ್ನು ಕ್ಷಣಮಾತ್ರದಲ್ಲಿ ತೆಗೆಯಬಹುದು

|

ಮೊಟ್ಟೆಗಳು ತುಂಬಾ ಆರೋಗ್ಯಕರ. ಉತ್ತಮ ಪೌಷ್ಠಿಕಾಂಶದ ಮೌಲ್ಯಗಳಿಂದ ತುಂಬಿರುವ ಬೇಯಿಸಿದ ಮೊಟ್ಟೆಯನ್ನು ಬೆಳಗಿನ ಉಪಾಹಾರಕ್ಕಾಗಿ ಬಹಳಷ್ಟು ಜನರು ಸೇವಿಸುತ್ತಾರೆ. ದಿನನಿತ್ಯದ ಊಟದಲ್ಲಿ ಮೊಟ್ಟೆಗಳನ್ನು ವಿವಿಧ ಭಕ್ಷ್ಯಗಳನ್ನು ತಯಾರಿಸಲು ಪ್ರಯತ್ನಿಸುತ್ತಾರೆ. ಅದರಲ್ಲಿ ಒಂದು ವಿಧವೆಂದರೆ ಮೊಟ್ಟೆಯನ್ನು ಬೇಯಿಸಿ ತಿನ್ನುವುದು.

ಬಹಳಷ್ಟು ಜನರಿಗೆ ಮೊಟ್ಟೆಗಳನ್ನು ಬೇಯಿಸಿದ ನಂತರ ಸಿಪ್ಪೆ ತೆಗೆಯುವುದು ಕಷ್ಟವಾಗುತ್ತದೆ. ಅವುಗಳ ಸಿಪ್ಪೆ ತೆಗೆಯುವ ಪ್ರಕ್ರಿಯೆಯಲ್ಲಿ, ಮೊಟ್ಟೆಗಳ ಮೇಲೆ ಬಿಳಿ ಸಿಪ್ಪೆ ಹಾಗೇ ಉಳಿದು ಬಿಡುತ್ತವೆ ಅಥವಾ ಮೊಟ್ಟೆಯ ಬಿಳಿಭಾಗ ಸಿಪ್ಪೆಯೊಂದಿಗೆ ಕಿತ್ತುಬರುತ್ತದೆ. ಆದ್ದರಿಂದ ಮೊಟ್ಟೆಗಳ ಸಿಪ್ಪೆ ತೆಗೆಯುವ ಸಮಸ್ಯೆಯನ್ನು ತಪ್ಪಿಸಲು ನಾವು ನಿಮಗೆ ಕೆಲವು ತ್ವರಿತ ಮತ್ತು ಸುಲಭವಾದ ಹ್ಯಾಕ್‌ಗಳನ್ನು ಹೇಳಬಂದಿದ್ದೇವೆ.

ಮೊಟ್ಟೆಯ ಸಿಪ್ಪೆಯನ್ನು ಸುಲಭವಾಗಿ ತೆಗೆಯಲು ಕಿಚನ್ ಹ್ಯಾಕ್‌ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಅಡುಗೆ ಸೋಡಾ:

ಅಡುಗೆ ಸೋಡಾ:

ಮೊಟ್ಟೆಯ ಸಿಪ್ಪೆ ತೆಗೆಯಲು ಅಡುಗೆ ಸೋಡಾ ತುಂಬಾ ಸಹಾಯಕವಾಗಿದೆ. ಸಾಮಾನ್ಯವಾಗಿ ಬೇಯಿಸುವಾಗ ಮೇಲಿನ ಚಿಪ್ಪು ಮೊಟ್ಟೆಯ ಮೇಲೆ ಅಂಟಿಕೊಳ್ಳುತ್ತದೆ ಮತ್ತು ನಂತರ ಸಿಪ್ಪೆ ತೆಗೆಯುವುದು ಕಷ್ಟವಾಗುತ್ತದೆ. ಆದ್ದರಿಂದ ಅಡಿಗೆ ಸೋಡಾ ಅಂಟುವುದರಿಂದ ರಕ್ಷಿಸುವುದು. ನೀವು ಮೊಟ್ಟೆಗಳನ್ನು ಬೇಯಿಸುವಾಗ ಆ ನೀರಿಗೆ ಒಂದು ಚಿಟಿಕೆ ಸೋಡಾ ಸೇರಿಸಿ. ಇದು ಮೇಲಿನ ಶೆಲ್ ಅನ್ನು ಮೃದುಗೊಳಿಸುತ್ತದೆ ಮತ್ತು ಸಿಪ್ಪೆ ತೆಗೆಯುವುದು ಸುಲಭಗೊಳಿಸುತ್ತದೆ.

ಕಟ್ಟಿಂಗ್ ಬೋರ್ಡ್‌ ಮೇಲೆ ಉರುಳಾಡಿಸಿ:

ಕಟ್ಟಿಂಗ್ ಬೋರ್ಡ್‌ ಮೇಲೆ ಉರುಳಾಡಿಸಿ:

ಬೇಯಿಸಿದ ಮೊಟ್ಟೆಗಳ ತ್ವರಿತ ಸಿಪ್ಪೆಸುಲಿಯುವಿಕೆಗೆ, ಈ ವಿಧಾನವು ನಿಜವಾಗಿಯೂ ಸಹಾಯಕವಾಗುತ್ತದೆ. ಕತ್ತರಿಸುವ ಬೋರ್ಡ್ ಮೇಲೆ ಮೊಟ್ಟೆಯನ್ನು ಇರಿಸಿ, ನಿಧಾನವಾಗಿ, ಅದನ್ನು ನಿಮ್ಮ ಉರುಳಿಸಿ. ಈ ರೀತಿ ಮಾಡುವುದರಿಂದ ಮೊಟ್ಟೆಯ ಮೇಲಿನ ಸುಲಭವಾಗಿ ತೆಗೆಯಲು ಬರುತ್ತದೆ.

ತಣ್ಣೀರು:

ತಣ್ಣೀರು:

ಕುದಿಯುವ ನೀರಿನಿಂದ ಮೊಟ್ಟೆಯನ್ನು ತೆಗೆದ ನಂತರ, ಅದರ ಸಿಪ್ಪೆ ತೆಗೆಯಲು, ಆ ಮೊಟ್ಟೆಗಳನ್ನು ತಣ್ಣೀರಿರುವ ಬಟ್ಟಲಿನಲ್ಲಿ ಹಾಕಿ, ಮುಚ್ಚಿಡಿ. ಕೆಲವು ನಿಮಿಷಗಳ ಕಾಲ ಬೆರೆಸಿ ಮತ್ತು ಮೊಟ್ಟೆಯ ಸಿಪ್ಪೆ ಸುಲಭವಾಗಿ ಹೊರಬರುತ್ತದೆ.

ಹರಿಯುವ ನೀರು:

ಹರಿಯುವ ನೀರು:

ಮೇಲೆ ತಿಳಿಸಿದ ಎಲ್ಲಾ ತಂತ್ರಗಳು ಕಷ್ಟವೆಂದು ತೋರಿದರೆ, ನೀವು ಇದನ್ನು ಪ್ರಯತ್ನಿಸಬಹುದು. ಹರಿಯುವ ನೀರಿನ ಅಡಿಯಲ್ಲಿ ಅಥವಾ ಐಸ್ ನೀರಿನಲ್ಲಿ ಮೊಟ್ಟೆಗಳನ್ನು ಇಟ್ಟು, ಸಿಪ್ಪೆ ತೆಗೆಯಲು ಪ್ರಾರಂಭಿಸಿ. ಇದು ಬಿಳಿ ಚರ್ಮವು ಮೊಟ್ಟೆಯ ಮೇಲೆ ಅಂಟಿಕೊಳ್ಳದಂತೆ ನೋಡಿಕೊಳ್ಳುತ್ತದೆ, ಬೇಗನೆ ಸಿಪ್ಪೆ ತೆಗೆಯಲು ಸಹಾಯ ಆಗುತ್ತದೆ.

ಚಮಚ:

ಚಮಚ:

ಮೊಟ್ಟೆಯ ಮೇಲಿನ ಬಿಳಿ ಚರ್ಮವನ್ನು ತೆಗೆಯಲು ಚಮಚಗಳು ಸುಲಭವಾದ ಮಾರ್ಗವಾಗಿದೆ. ಮೊಟ್ಟೆಗಳನ್ನು ಮೊದಲು ಬೇಯಿಸಿ, ಮೇಲಿನಿಂದ ಸಣ್ಣ ಸಿಪ್ಪೆ ತೆಗೆಯಿರಿ. ಚಮಚದ ನಡುವೆ ಮೊಟ್ಟೆಯನ್ನು ಇಟ್ಟು, ತಿರುಗಿಸಲು ಪ್ರಾರಂಭಿಸಿ. ಕೆಲವೇ ನಿಮಿಷಗಳಲ್ಲಿ, ಮೊಟ್ಟೆಯ ಬಿಳಿ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು.

English summary

Easy and Quick Hacks to Peel Boiled Eggs in Kannada

Here we talking about Easy and Quick Hacks to Peel Boiled Eggs in Kannada, read on
Story first published: Tuesday, September 21, 2021, 10:41 [IST]
X
Desktop Bottom Promotion