For Quick Alerts
ALLOW NOTIFICATIONS  
For Daily Alerts

World Coconut Day: ತೆಂಗಿನ ಕಾಯಿ ತೆಗೆಯುವುದು ಹೇಗೆ? ಅಡುಗೆಗೆ ಇದನ್ನು ಬಳಸಿದಾಗ ಈ ತಪ್ಪು ಮಾಡದಿರಿ

|

ಸೆಪ್ಟೆಂಬರ್‌ 2ನ್ನು ವಿಶ್ವ ತೆಂಗಿನಕಾಯಿ ದಿನವನ್ನಾಗಿ ಆಚರಿಸಲಾಗುವುದು. ತೆಂಗಿನಕಾಯಿ ನಮ್ಮ ದಿನ ನಿತ್ಯದ ಜೀವನದಲ್ಲಿ ಅನೇಕ ರೀತಿಯಲ್ಲಿ ಬಳಸುತ್ತೇವೆ. ಎಣ್ಣೆಯಾಗಿ, ಕೊಬ್ಬರಿಯಾಗಿ, ತೆಂಗಿನಕಾಯಿ, ತೆಂಗಿನಕಾಯಿ ಹಾಲು, ಎಳನೀರು ಹೀಗೆ ಅನೇಕ ರೀತಿಯಲ್ಲಿ ಬಳಸುತ್ತೇವೆ. ಈ ಲೇಖನದಲ್ಲಿ ತೆಂಗಿನ ಕಾಯಿ ಹಾಲು ತೆಗೆಯುವುದು ಹೇಗೆ, ಹಾಲು ಹಾಳಾಗದಿರಲು ಏನು ಮಾಡಬೇಕು, ತೆಂಗಿನ ಕಾಯಿ ಹಾಲು ಹಾಕಿದ ಮೇಲೆ ರುಚಿ ಹೆಚ್ಚಿಸಲು ಏನು ಮಾಡಬಾರದು ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:

ತೆಂಗಿನಕಾಯಿ ಹಾಕಿ ಮಾಡುವ ಅಡುಗೆಯ ರುಚಿ ಒಂದು ರೀತಿಯಾದರೆ, ತೆಂಗಿನ ಕಾಯಿ ಹಾಲು ಬಳಸಿ ಮಾಡುವ ಅಡುಗೆಯ ರುಚಿ ಇನ್ನೂ ಸೂಪರ್‌ ಆಗಿರುತ್ತೆ. ತೆಂಗಿನ ಕಾಯಿ ಹಾಲು ರೆಡಿ ಮೇಡ್‌ ಫುಡ್‌ ಮಾರ್ಕೆಟ್‌ಗಳಲ್ಲಿ ದೊರೆಯುವುದಾದರೂ ಫ್ರೆಷ್‌(ತಾಜಾ ಹಾಲು) ಹಾಕಿ ಮಾಡುವ ರುಚಿನೇ ಬೇರೆ.

ತೆಂಗಿನಕಾಯಿ ಹಾಲು ತೆಗೆದು ಮಾಡುವುದು ತುಂಬಾ ಕಷ್ಟದ ವಿಧಾನವೆಂದೇ ಹೆಚ್ಚಿನವರು ಭಾವಿಸಿರುತ್ತಾರೆ. ಆದರೆ ತೆಂಗಿನಕಾಯಿ ಹಾಲು ತೆಗೆಯುವುದು ತುಂಬಾನೇ ಸುಲಭ. ಅಲ್ಲದೆ ನೀವು ಈ ಹಾಲನ್ನು ತೆಗೆದು ಫ್ರಿಡ್ಜ್‌ನಲ್ಲಿಟ್ಟರೆ 3-4 ದಿನ ಕೂಡ ಬಳಸಬಹುದು. ಆದ್ದರಿಂದ ಹಬ್ಬದ ಸಂದರ್ಭದಲ್ಲಿ ತೆಂಗಿನಕಾಯಿ ಹಾಲು ತೆಗೆದು ಮಾಡಲು ಕಷ್ಟವಾಗುವುದು ಎಂದಾದರೆ ಮೊದಲೇ ಮಾಡಿಟ್ಟರೆ ಹಬ್ಬದ ಅಡುಗೆಗಳಲ್ಲಿ ಬಳಸಬಹುದು.

ತೆಂಗಿನ ಹಾಲು ತೆಗೆಯುವುದು ಹೇಗೆ? ಬಳಸುವ ವಿಧಾನ, ಇದರಲ್ಲಿರುವ ಪೋಷಕಾಂಶಗಳು ಮುಂತಾದ ಮಾಹಿತಿ ಈ ಲೇಖನದಲ್ಲಿದೆ ನೋಡಿ.

ಮೊದಲಿಗೆ ತೆಂಗಿನ ಹಾಲು ತೆಗೆಯುವುದು ಹೇಗೆ ಎಂದು ನೋಡೋಣ:

ಮೊದಲಿಗೆ ತೆಂಗಿನ ಹಾಲು ತೆಗೆಯುವುದು ಹೇಗೆ ಎಂದು ನೋಡೋಣ:

* ತೆಂಗಿನಕಾಯಿ ಆಗಷ್ಟೇ ಒಡೆದು ಅದನ್ನು ತುರಿಯಿರಿ. ಈಗ ತೆಂಗಿನ ತುರಿಯನ್ನು ಬ್ಲೆಂಡರ್‌ಗೆ ಹಾಕಿ ಒಂದು ಕಪ್‌ ಬಿಸಿ ನೀರು ಸೇರಿಸಿ (ಬಿಸಿ ನೀರು ಸೇರಿಸಿದರೆ 3-4 ದಿನ ಇಡಬಹುದು) ಚೆನ್ನಾಗಿ ರುಬ್ಬಿ.

* ಈಗ ಒಂದು ಶುದ್ಧವಾದ ಪಾತ್ರೆಯಿಟ್ಟು ಅದರ ಮೇಲೆ ಮಸ್ಲಿನ್ ಬಟ್ಟೆ ಇಟ್ಟು ಸೋಸಿ.

*ಮಸ್ಲಿನ್ ಬಟ್ಟೆಯಿಂದ ಚೆನ್ನಾಗಿ ಹಿಂಡಿ. ಹೀಗೆ ಮಾಡಿದರೆ ಗಟ್ಟಿ ಹಾಲು ಸಿಗುವುದು.

* ಈಗ ಈ ಗಟ್ಟಿ ಹಾಲನ್ನು ಒಂದು ಕಪ್‌ನಲ್ಲಿ ತೆಗೆದಿಡಿ.

* ಈಗ ತೆಂಗಿನಕಾಯಿ ತರಿಗೆ ಮತ್ತೆ ಅರ್ಧ ಅಥವಾ ಒಂದು ಕಪ್ ನೀರು ಹಾಕಿ ಮತ್ತೊಮ್ಮೆ ರುಬ್ಬಿ ಆ ಹಾಲನ್ನು ಮಸ್ಲಿನ್‌ ಬಟ್ಟೆಯಲ್ಲಿ ಸೋಸಿ ತೆಗೆದು ಮತ್ತೊಂದು ಲೋಟದಲ್ಲಿ ತೆಗೆದಿಡಿ.

ಬಳಸುವುದು ಹೇಗೆ?

ಬಳಸುವುದು ಹೇಗೆ?

* ನೀವು ತೆಂಗಿನ ಹಾಲು ಬಳಸುವಾಗ ಕುದಿಸಬಾರದು, ಬಿಸಿಯಾದಾಗ ಸಾರು ಅಥವಾ ಪಾಯಸವನ್ನು ಉರಿಯಿಂದ ಇಳಿಸಬೇಕು. ಆಗ ಅದರ ರುಚಿ ಹೆಚ್ಚು. ಮೊದಲಿಗೆ ತೆಳುವಾದ ಹಾಲನ್ನು ಹಾಕಿ ಕುದಿಸಿ.

* ಗಟ್ಟಿ ಹಾಲನ್ನು ಮಾತ್ರ ಕೊನೆಯ ಹಂತದಲ್ಲಿ ಹಾಕಬೇಕು.

ತೆಂಗಿನಕಾಯಿ ಹಾಲು ಹಾಕಿದ ಅಡುಗೆ ಹಾಳಾಗದಿರಲು ಏನು ಮಾಡಬೇಕು?

ತೆಂಗಿನಕಾಯಿ ಹಾಲು ಹಾಕಿದ ಅಡುಗೆ ಹಾಳಾಗದಿರಲು ಏನು ಮಾಡಬೇಕು?

* ತೆಂಗಿನಕಾಯಿ ಹಾಲು ಹಾಕಿದ ಅಡುಗೆ ಬೇಗನೆ ಹಾಳಾಗುವುದು.

* ಇಂಥ ಆಹಾರ ನೀವು ಫ್ರಿಡ್ಜ್‌ನಲ್ಲಿಟ್ಟು ಬಳಸುವುದಾದರೆ ಕುದಿಸಬೇಡಿ, ಬಿಸಿ ಮಾಡಿ ಸಾಕು.

ತೆಂಗಿನ ಹಾಲನ್ನು ಸ್ಟೋರ್‌ ಮಾಡುವುದು ಹೇಗೆ?

ತೆಂಗಿನ ಹಾಲನ್ನು ಸ್ಟೋರ್‌ ಮಾಡುವುದು ಹೇಗೆ?

* ತೆಂಗಿನ ಹಾಲು ತಯಾರಿಸುವಾಗ ತಣ್ಣೀರಿನ ಬದಲಿಗೆ ಕುದಿಸಿ ಆರಿಸಿದ ನೀರನ್ನು ಬಳಸಿ.

* ತೆಂಗಿನಕಾಯಿ ಹಾಲನ್ನು ಪ್ಲಾಸ್ಟಿಕ್‌ ಡಬ್ಬದಲ್ಲಿ ಹಾಕಿಡಿ.

* ಫ್ರೀಜರ್‌ನಲ್ಲಿಡಿ

* ವಾರಕ್ಕಿಂತ ಹೆಚ್ಚು ಸಮಯ ಇಡಬೇಡಿ, ರುಚಿ ಕಡಿಮೆಯಾಗುವುದು.

* ತೆಂಗಿನ ಕಾಯಿ ಹಾಲು ಹಾಕಿದ ಪದಾರ್ಥವನ್ನು ಕುದಿಸಬೇಡಿ, ಬಿಸಿ ಮಾಡಿದರೆ ಸಾಕು. ಇದರಿಂದ ರುಚಿ ಹಾಗೂ ಪೋಷಕಾಂಶಗಳು ಹಾಳಾಗದಂತೆ ತಡೆಯಬಹುದು.

1 ಕಪ್‌ ತೆಂಗಿನಕಾಯಿ ಹಾಲಿನಲ್ಲಿರುವ ಪೋಷಕಾಂಶಗಳು

1 ಕಪ್‌ ತೆಂಗಿನಕಾಯಿ ಹಾಲಿನಲ್ಲಿರುವ ಪೋಷಕಾಂಶಗಳು

* ಕ್ಯಾಲೋರಿ:552

* ಕೊಬ್ಬು: 77 ಗ್ರಾಂ

* ಪ್ರೊಟೀನ್: 5 ಗ್ರಾಂ

* ಕಾರ್ಬ್ಸ್‌: 13 ಗ್ರಾಂ

* ನಾರಿನಂಶ: 5 ಗ್ರಾಂ

ವಿಟಮಿನ್ ಸಿ, ಫೋಲೆಟ್, ಕಬ್ಬಿಣದಂಶ, ಮೆಗ್ನಿಷ್ಯಿಯಂ, ಪೊಟಾಷ್ಯಿಯಂ, ಸತು, ಮ್ಯಾಂಗನೀಸ್, ಸೆಲೆನಿಯಂ ಪೋಷಕಾಂಶಗಳಿವೆ.

English summary

Coconut Milk: Benefits, nutrition, Uses, Risks And How To Make in Kannada

World Coconut Day: Coconut milk: Benefits, nutrition, uses, risks and how to make,Read on,
Story first published: Wednesday, September 1, 2021, 10:12 [IST]
X
Desktop Bottom Promotion