For Quick Alerts
ALLOW NOTIFICATIONS  
For Daily Alerts

ಭೂಮಿ ಪೂಜೆ ಮಾಡುವುದು ಹೇಗೆ? ಇದರ ಶುಭಫಲವೇನು?

|

ಯಾವುದೇ ಕಟ್ಟಡ ಕಟ್ಟುವ ಮುನ್ನ ಭೂಮಿ ತಾಯಿಗೆ ಸಲ್ಲಿಸುವ ಪೂಜೆಯೇ ಭೂಮಿ ಪೂಜೆ. ಕಟ್ಟುವಾಗ ಯಾವುದೇ ದೋಷ ಉಂಟಾಗದಿರಲಿ, ಭೂತಾಯಿ ಕೆಲಸ ಸರಾಗವಾಗಿ ನಡೆಯುವಂತೆ ಆಶೀರ್ವದಿಸಲಿ ಎಂದು ಕೋರಿ ಭೂ ಮಾತೆಗೆ ಪೂಜೆ ಸಲ್ಲಿಸಲಾಗುವುದು.

ಭೂಮಿಯಲ್ಲಿ ಶಲ್ಯದೋಷವಿದ್ದರೆ ಅದರ ನಿವಾರಣೆಗೆ ಭೂ ಪೂಜೆ ಮಾಡಲಾಗುವುದು. ಭೂ ಮಾತೆಯಲ್ಲಿ ಅಂದರ ಭೂಮಿಯಲ್ಲಿ ವಿಲೀನವಾಗದ ಹದಿನಾರು ಬಗೆಯ ವಸ್ತುಗಳು ಉದಾಹರಣೆಗೆ ಮೂಳೆ, ಪ್ಲಾಸ್ಟಿಕ್, ಉಗುರು,ಕೂದಲು, ಬೂದಿ, ಗಾಜು ಇವುಗಳು ಭೂಮಿಯಲ್ಲಿದ್ದರೆ ಶಲ್ಯ ದೋಷ ಉಂಟಾಗುವುದು. ಈ ದೋಷ ಉಂಟಾಗದಿರಲು ಭೂಮಿ ಪೂಜೆ ಮಾಡಲಾಗುವುದು.

ಭೂಮಿ ಪೂಜೆಯನ್ನು ಎಲ್ಲಿ ಮಾಡಲಾಗುವುದು?

ಭೂಮಿ ಪೂಜೆಯನ್ನು ಎಲ್ಲಿ ಮಾಡಲಾಗುವುದು?

Image Courtesy

ಭೂಮಿ ಪೂಜೆಯನ್ನು ಈಶಾನ್ಯ ದಿಕ್ಕಿನಲ್ಲಿ ಮಾಡಲಾಗುವುದು. ಭೂಮಿ ಪೂಜೆಯ ದಿನ ನಿವೇಶನವನ್ನು ಗೋಮೂತ್ರ, ಪರ್ವಶುದ್ಧಿ ಮತ್ತು ಅರಿಶಿಣದ ನೀರಿನಿಂದ ಶುದ್ಧ ಮಾಡಬೇಕು. ಭೂಮಿಗೆ ಪೂಜೆ ಮತ್ತು ನಿವೇಶನದ ಬ್ರಹ್ಮಸ್ಥಾನದಲ್ಲಿ ಶಂಕುಸ್ಥಾಪನೆ ಒಂದೇ ಮುಹೂರ್ತದಲ್ಲಿ ನೆರವೇರಬೇಕು.

ಭೂಮಿ ಪೂಜೆಯಲ್ಲಿ ಯಾವೆಲ್ಲಾ ದೇವರಿಗೆ ಪೂಜೆ ಸ ಭೂಮಿ ಪೂಜೆಯನ್ನು ವಾಸ್ತು ಪುರುಷ, ಭೂಮಾತೆ, ಪಂಚ ಭೂತಗಳಿಗೆ ಸಲ್ಲಿಸಲಾಗುವುದು. ಈ ಪೂಜೆ ಮಾಡುವುದರಿಂದ ಇರುವ ಸಕಲ ಅಡ್ಡಿ ಆತಂಕಗಳು ದೂರವಾಗಿ ಕಟ್ಟಡ ಕೆಲಸ ಸರಾಗವಾಗಿ ಸಾಗುವುದು ಎಂಬ ನಂಬಿಕೆ ಇದೆ.ಲ್ಲಿಸಲಾಗುವುದು

 ಭೂಮಿ ತೆಗೆದುಕೊಂಡ ಬಳಿಕ ಮೊದಲು ಏನು ಮಾಡಬೇಕು?

ಭೂಮಿ ತೆಗೆದುಕೊಂಡ ಬಳಿಕ ಮೊದಲು ಏನು ಮಾಡಬೇಕು?

Image Courtesy

ಮೊದಲಿಗೆ ಕಾಂಪೌಂಡ್ ಕಟ್ಟಿ

ಜಾಗ ತೆಗೆದುಕೊಂಡ ಬಳಿಕ ಮನೆ ಕಟ್ಟುವ ಮುನ್ನ ಕಾಪೌಂಡ್‌ ಕಟ್ಟಬೇಕು. ಅದರಲ್ಲೂ ದಕ್ಷಿಣ ಭಾಗದ ಕಾಂಪೌಂಡ್ ಇತರ ಭಾಗಗಳಿಗಿಂತ ಎತ್ತರವಾಗಿರಬೇಕು. ಪಶ್ಚಿಮ, ದಕ್ಷಿಣ ಭಾಗದ ಗೋಡೆಗಳು ಉತ್ತರ, ಪೂರ್ವ ಭಾಗದ ಗೋಡೆಗಳಿಗಿಂತ ತಗ್ಗಿರಬೇಕು.

ನಂತರ ಕಟ್ಟಡ ಕಟ್ಟುವ ಜಾಗದಲ್ಲಿ ಗಿಡವನ್ನು ನೆಡಿ.

ಜಾಗದಲ್ಲಿ ಕರು ಮತ್ತು ಇದ್ದರೆ ಆ ಜಾಗಕ್ಕೆ ಅದೃಷ್ಟ ಎನ್ನಲಾಗುವುದು.

ಭೂಮಿ ಪೂಜೆ: ವ್ಯಕ್ತಿಯ ಬದುಕಿನಲ್ಲಿ ಸಂತೋಷ, ಸಮೃದ್ಧಿಗಾಗಿ ಭೂಮಿ ಪೂಜೆ ಮಾಡಲಾಗುವುದು.

ಭೂಮಿ ಪೂಜೆ ಯಾರು ಮಾಡಬೇಕು?

ಭೂಮಿ ಪೂಜೆ ಯಾರು ಮಾಡಬೇಕು?

Image Courtesy

ಭೂಮಿ ಪೂಜೆಯನ್ನು ಮನೆಯ ಯಜಮಾನ ಧರ್ಮಪತ್ನಿ ಜೊತೆಯಾಗಿ ಮಾಡುತ್ತಾನೆ, ಎಲ್ಲಾ ಋಣಾತ್ಮಕ ಶಕ್ತಿ ದೂರವಾಗಲಿ, ಕೆಲಸಗಳು ಯಾವುದೇ ವಿಘ್ನವಿಲ್ಲದೆ ನೆರವೇರಲಿ ಎಂಬ ಉದ್ದೇಶದಿಂದ ಮಾಡಲಾಗುವುದು. ಜಾಗ ಕೃಷಿಗೆ ಸಂಬಂಧಿಸಿದ್ದಾರೆ ಭೂಮಿ ಚೆನ್ನಾಗಿ ಫಲ ನೀಡಲಿ ಎಂದು ಪ್ರಾರ್ಥಿಸಿ ಭೂಮಿ ಪೂಜೆ ಮಾಡಲಾಗುವುದು.

 ಯಾವಾಗ ಭೂಮಿ ಪೂಜೆಗೆ ಸೂಕ್ತ ಸಮಯ

ಯಾವಾಗ ಭೂಮಿ ಪೂಜೆಗೆ ಸೂಕ್ತ ಸಮಯ

Image Courtesy

ಶ್ರಾವಣ, ಮಾರ್ಗಶಿರ, ಪುಷ್ಯಾ, ಕಾರ್ತಿಕ ಮಾಸ ಭೂಮಿ ಪೂಜೆಗ ಸೂಕ್ತವಾಗಿದೆ. ಸೋಮವಾರ, ಬುಧವಾರ, ಗುರುವಾರ ಭೂಮಿ ಮಾಡಲು ಸೂಕ್ತ ದಿನಗಳಾಗಿವೆ. ಭಾನುವಾರ, ಶನಿವಾರ, ಮಂಗಳವಾರ ಭೂಮಿ ಪೂಜೆ ಮಾಡಲೇಬಾರದು.

ಮನೆಯಲ್ಲಿ ಯಾರಾದರೂ ಗರ್ಭಿಣಿಯಿದ್ದರೆ ಕಟ್ಟಡ ಕಟ್ಟುವ ಕೆಲಸಕ್ಕೆ ಕೈ ಹಾಕಬಾರದು.

 ಭೂಮಿ ಪೂಜೆ ಮಾಡುವಾಗ ಪಾಲಿಸುವ ವಿಧಾನಗಳು'

ಭೂಮಿ ಪೂಜೆ ಮಾಡುವಾಗ ಪಾಲಿಸುವ ವಿಧಾನಗಳು'

Image Courtesy

 • ಜಾಗವನ್ನು ಸ್ವಚ್ಛಮಾಡಬೇಕು.
 • ನಂತರ ಈಶಾನ್ಯ ದಿಕ್ಕಿಗೆ ಭೂಮಿಯನ್ನು ಅಗೆಯಬೇಕು.
 • ಮನೆಯ ಯಜಮಾನ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಳ್ಳಬೇಕು.
 • ಪೂಜೆಯಲ್ಲಿ ಗಣೇಶ, ಲಕ್ಷ್ಮಿ ಮೂರ್ತಿಯನ್ನು ಇಟ್ಟು ಪೂಜಿಸಲಾಗುವುದು
 • ಪೂಜೆ ಬಳಿಕ ಜಾಗದ ನಾಲ್ಕು ದಿಕ್ಕಿನಲ್ಲಿ ಹಾಗೂ ಮಧ್ಯ ಭಾಗದಲ್ಲಿ ನಿಂಬೆಹಣ್ಣು ಇಟ್ಟು ದೃಷ್ಟಿ ನಿವಾಳಿಸಬೇಕು.
 • ಪೂಜೆಯಲ್ಲಿ ಗಣೇಶನಿಗೆ ಮೊದಲು ಪೂಜೆ ಸಲ್ಲಿಸಲಾಗುವುದು, ನಂತರ ದೇವಿ ಪೂಜೆ ಮಾಡಿ ಸಂಕಲ್ಪ ಕೈಗೊಳ್ಳಬೇಕು, ನಂತರ ಸತ್ಕರ್ಮ, ಪ್ರಾಣ ಪ್ರತಿಷ್ಠಾಪನೆ ಮಾಡಿ ಮಂಗಳಕರ ದ್ರವ್ಯ ಸಿಂಪಡಿಸಲಾಗುವುದು.
 • ಭೂಮಿ ಪೂಜೆಗೆ ಬೇಕಾಗುವ ಸಾಮಗ್ರಿಗಳು

  ಭೂಮಿ ಪೂಜೆಗೆ ಬೇಕಾಗುವ ಸಾಮಗ್ರಿಗಳು

  Image Courtesy

  ಅರಿಶಿಣ ಪುಡಿ

  ಕುಂಕುಮ

  ಚಂದನ'

  ಗಂಧದ ಕಡ್ಡಿ

  ಕರ್ಪೂರ

  ಹೂಗಳು

  ತೆಂಗಿನಕಾಯಿ

  ಕಳಸ ವಸ್ತ್ರಂ

  ಅಕ್ಕಿ

  ನಾಣ್ಯಗಳು

  ತುಪ್ಪ

  ಕಲ್ಲು ಸಕ್ಕರೆ

  ನವಧಾನ್ಯಗಳು

  ನೈವೇದ್ಯ

English summary

Bhumi Pooja Benefits, Pooja Vidhi And Pooja Material

Here are bhumi pooja benefits, pooja vidhi and pooja material, have a look
X