For Quick Alerts
ALLOW NOTIFICATIONS  
For Daily Alerts

ಹಣ್ಣು-ತರಕಾರಿಗಳ ಸಿಪ್ಪೆಯನ್ನು ಎಸೆಯುವ ಬದಲು ಹೀಗೆ ಉಪಯೋಗಿಸಿ

|

ಆರೋಗ್ಯ ಚೆನ್ನಾಗಿರಲು, ಆಹಾರದಲ್ಲಿ ಹಣ್ಣು-ತರಕಾರಿಗಳನ್ನು ಸೇರಿಸಿಕೊಳ್ಳಲೇಬೇಕು. ಹೀಗಿರುವಾಗ ಹಣ್ಣು-ತರಕಾರಿ ಬಳಸಿ, ಅದರ ಸಿಪ್ಪೆಯನ್ನು ಸಾಮಾನ್ಯವಾಗಿ ಎಸೆಯುತ್ತೇವೆ. ಆದರೆ, ಹೀಗೆ ಉಳಿದ ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆಗಳಿಂದಲೂ ಪ್ರಯೋಜನವಿದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಇವುಗಳಿಂದ ಸೌಂದರ್ಯ ಸೇರಿದಂತೆ, ನಾನಾ ಪ್ರಯೋಜನಗಳು ಲಭ್ಯವಿವೆ. ಅವುಗಳನ್ನು ಹೇಗೆ ಬಳಸಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಹಣ್ಣು ಹಾಗೂ ತರಕಾರಿ ಸಿಪ್ಪೆಗಳ ನಾನಾ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ:

ಹಲ್ಲುಗಳನ್ನು ಬಿಳುಪಾಗಿಸಲು:

ಹಲ್ಲುಗಳನ್ನು ಬಿಳುಪಾಗಿಸಲು:

ಹಲ್ಲುಗಳು ಹಳದಿಯಾಗಿ ಕಾಣುತ್ತಿದ್ದರೆ, ಇದಕ್ಕಾಗಿ ಬಾಳೆಹಣ್ಣಿನ ಸಿಪ್ಪೆಯ ಬಿಳಿ ಭಾಗವನ್ನು ಉಜ್ಜಿಕೊಳ್ಳಿ. ಬಾಳೆಹಣ್ಣಿನಲ್ಲಿ ಮಾತ್ರವಲ್ಲ, ಅದರ ಸಿಪ್ಪೆಯಲ್ಲಿ ಕೂಡ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ಇದೆ, ಇದು ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕುತ್ತದೆ. ಆದರೆ ಇದನ್ನು ಒಂದು ದಿನ ಅಥವಾ ಎರಡು ದಿನಗಳವರೆಗೆ ಮಾಡುವುದು ಅಲ್ಲ, ಬಿಳಿ ಮತ್ತು ಹೊಳೆಯುವ ಹಲ್ಲುಗಳಿಗಾಗಿ ಇದನ್ನು ಪ್ರತಿದಿನ, ಕೆಲವು ವಾರಗಳವರೆಗೆ ಬಳಸಿ.

ಮುಖದ ಸ್ಚ್ರಬರ್‌ ಆಗಿ :

ಮುಖದ ಸ್ಚ್ರಬರ್‌ ಆಗಿ :

ಕಿತ್ತಳೆ ಸಿಪ್ಪೆಯಿಂದ ನೀವು ಉತ್ತಮ ನೈಸರ್ಗಿಕ ಸ್ಕ್ರಬ್ ಅನ್ನು ತಯಾರಿಸಬಹುದು. ಮೊದಲು ಮೂರ್ನಾಲ್ಕು ದಿನಗಳ ಕಾಲ ಬಲವಾದ ಬಿಸಿಲಿನಲ್ಲಿ ಸಿಪ್ಪೆಗಳನ್ನು ಒಣಗಿಸಿ, ನಂತರ ಅವುಗಳನ್ನು ಮಿಕ್ಸರ್ನಲ್ಲಿ ತರಿತರಿಯಾಗಿ ಪುಡಿಮಾಡಿ. ಈಗ ಮನೆಯಲ್ಲಿ ಸುಲಭವಾಗಿ ಸಿಗುವ ಜೇನು ಅಥವಾ ಮೊಸರನ್ನು ಮಿಶ್ರಣ ಮಾಡಿ. ಇದರಿಂದ ಮುಖ ಮತ್ತು ದೇಹವನ್ನು ಸ್ಕ್ರಬ್ ಮಾಡಿ. ಇದನ್ನು 15-20 ನಿಮಿಷಗಳ ಕಾಲ ಬಿಡಿ ನಂತರ ಸ್ನಾನ ಮಾಡಿ ಅಥವಾ ತೊಳೆಯಿರಿ.

ಕೀಟನಾಶಕವಾಗಿ:

ಕೀಟನಾಶಕವಾಗಿ:

ಮನೆಯಲ್ಲಿ ತುಂಬಾ ನೊಣಗಳು ಮತ್ತು ಸೊಳ್ಳೆಗಳು ಇದ್ದರೆ, ಅವುಗಳನ್ನು ಓಡಿಸಲು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಸಿಂಪಡಿಸುವ ಬದಲು ಕಿತ್ತಳೆ ಅಥವಾ ನಿಂಬೆ ಸಿಪ್ಪೆಗಳನ್ನು ಬಳಸಿ. ಅವುಗಳ ಸಿಪ್ಪೆಗಳನ್ನು ಬಾಗಿಲು, ಕಿಟಕಿ ಮತ್ತು ಅಡುಗೆಮನೆಯಲ್ಲಿ ವಿವಿಧ ಸ್ಥಳಗಳಲ್ಲಿ ಇರಿಸಿ. ಇದರಿಂದ ಕೀಟಗಳು ಹೋಗುತ್ತವೆ. ಏಕೆಂದರೆ ಈ ಎಲ್ಲಾ ಕೀಟಗಳಿಗೆ ಸಿಟ್ರಸ್ ವಾಸನೆಯಲ್ಲಿ ಇರಲು ಸಾಧ್ಯವಾಗುವುದಿಲ್ಲ.

ಸ್ನಾನಕ್ಕಾಗಿ:

ಸ್ನಾನಕ್ಕಾಗಿ:

ಸ್ನಾನದ ನಂತರ, ದೇಹವು ಆಹ್ಲಾದಕರವಾದ ವಾಸನೆಯಿಂದ ತುಂಬಿರುವುದರ ಜೊತೆಗೆ ಚರ್ಮದಲ್ಲಿ ತುರಿಕೆ, ಸುಡುವ ಸಂವೇದನೆಯನ್ನು ಕೆಲವೊಮ್ಮೆ ಅನುಭವಿಸುತ್ತೀರಿ. ಇದಕ್ಕಾಗಿ, ಸ್ನಾನದ ನೀರಿನಲ್ಲಿ ನಿಂಬೆ, ಕಿತ್ತಳೆ ಅಥವಾ ಸೌತೆಕಾಯಿ ಸಿಪ್ಪೆಗಳನ್ನು ಹಾಕಿ ಮತ್ತು ಸ್ವಲ್ಪ ಸಮಯದವರೆಗೆ ಬಿಡಿ. ನಿಂಬೆ ಸಿಪ್ಪೆಯ ಬಳಕೆಯಿಂದ ಚರ್ಮವೂ ಹೊಳೆಯುತ್ತದೆ ಮತ್ತು ದೇಹದ ಮೇಲೆ ಸಂಗ್ರಹವಾಗಿರುವ ಕೊಳೆಯೂ ನಿವಾರಣೆಯಾಗುತ್ತದೆ.

ಪಾತ್ರೆ ಸ್ವಚ್ಛಗೊಳಿಸಲು:

ಪಾತ್ರೆ ಸ್ವಚ್ಛಗೊಳಿಸಲು:

ಪಾತ್ರೆಗಳು ಕರೆಗಟ್ಟಿರುವ ಸಂದರ್ಭ ಇದ್ದರೆ ನಿಂಬೆಹಣ್ಣಿನ ಸಿಪ್ಪೆಯಿಂದ ಅದನ್ನು ಉಜ್ಜಿ ಸರಿಪಡಿಸಬಹುದು. ಸುಮಾರು ಒಂದು ಗಂಟೆಯ ವರೆಗೆ ನಿಂಬೆ ಹಣ್ಣಿನ ಸಿಪ್ಪೆಯ ರಸ ಅದರ ಮೇಲೆ ಇರುವಂತೆ ನೋಡಿಕೊಂಡರೆ ಸಾಕು. ಸಂಪೂರ್ಣವಾಗಿ ಹೊಳೆಯುವ ಸ್ಟೀಲ್ ಪಾತ್ರೆ ನಿಮ್ಮದಾಗುತ್ತದೆ.

ಫೀಡಿಂಗ್ ಕಪ್ ಆಗಿ:

ಫೀಡಿಂಗ್ ಕಪ್ ಆಗಿ:

ಕಿತ್ತಳೆ ಹಣ್ಣಿನ ಸಿಪ್ಪೆ ಹಾಗೂ ಮೋಸಂಬಿ ಹಣ್ಣಿನ ಸಿಪ್ಪೆ ಯಿಂದ ಹಕ್ಕಿಗಳಿಗೆ ಫೀಡಿಂಗ್ ಕಪ್ ತಯಾರು ಮಾಡಬಹುದು. ಸಂಪೂರ್ಣವಾಗಿ ಒಳಗಿನ ತಿರುಳನ್ನು ತೆಗೆದುಕೊಂಡು, ಸರಿಯಾಗಿ ಹಣ್ಣಿನ ಅರ್ಧಭಾಗಕ್ಕೆ ಕಟ್ ಮಾಡಿದರೆ, ಈ ರೀತಿಯ ಕಪ್ ತಯಾರಾಗುತ್ತದೆ. ನೀವು ನಿಮ್ಮ ಮನೆಯ ಹೊರಗಡೆ ಇದನ್ನು ಇರಿಸಬಹುದು ಮತ್ತು ಹಕ್ಕಿಗಳಿಗೆ ಕಾಳುಗಳನ್ನು ಹಾಕಬಹುದು.

Read more about: home ಮನೆ
English summary

Benefits of Fruits and Vegetables Peels in Kannada

Here we talking about Benefits of Fruits and Vegetables Peels in Kannada, read on
Story first published: Wednesday, December 29, 2021, 13:33 [IST]
X
Desktop Bottom Promotion