For Quick Alerts
ALLOW NOTIFICATIONS  
For Daily Alerts

ಪ್ರೆಶರ್ ಕುಕ್ಕರ್ ಬಳಸುವಾಗ ಈ ವಿಚಾರಗಳನ್ನು ನೆನಪಿನಲ್ಲಿಡಿ

|

ಪ್ರೆಶರ್ ಕುಕ್ಕರ್... ಇಂದಿನ ಬ್ಯುಸಿ ಲೈಫಲ್ಲಿ, ಕೇವಲ ಸಮಯವನ್ನು ಉಳಿಸುವುದಷ್ಟೇ ಅಲ್ಲದೇ, ನಿಯಮಿತವಾಗಿ ಬೇಯಿಸುವುದರಿಂದ ಪೌಷ್ಟಿಕಾಂಶ ಹಾಗೂ ರುಚಿಯನ್ನು ಉಳಿಸುವ ಹೆಂಗಳೆಯರ ಫೇವರೆಟ್ ಅಡುಗೆ ಮನೆಯ ಸಾಧನ.

ಆದರೆ, ಸರಿಯಾಗಿ ಬಳಸದಿದ್ದರೆ ಪ್ರೆಶರ್ ಕುಕ್ಕರ್ ತುಂಬಾ ಅಪಾಯಕಾರಿ ಅಡುಗೆ ಸಾಧನ ಎಂದು ನಿಮಗೆ ತಿಳಿದಿದೆಯೇ? ಹೌದು, ಶಾಖ ಮತ್ತು ಒತ್ತಡದಿಂದ ಅಡುಗೆ ತಯಾರಿಸುವ ಈ ಸಾಧನದ ಯಾವುದೇ ಭಾಗ ಹಾನಿಗೊಳಗಾದರೆ ಅಪಾಯ ಸೃಷ್ಟಿ ಮಾಡಬಹುದು. ನೀವು ಪ್ರೆಶರ್ ಕುಕ್ಕರ್ ಅನ್ನು ಹೇಗೆ ಸುರಕ್ಷಿತವಾಗಿ ಬಳಸಬಹುದು ಎಂಬುದನ್ನು ತಿಳಿಯಲು ಕೆಳಗೆ ಸ್ಕ್ರಾಲ್ ಮಾಡಿ.

ಮನೆಯಲ್ಲಿ ಕುಕ್ಕರ್ ಬಳಸುವಾಗ ನೆನಪಿಡಬೇಕಾದ ವಿಷಯಗಳನ್ನು ಈ ಕೆಳಗೆ ನೀಡಲಾಗಿದೆ;

ಕುಕ್ಕರ್ ತುಂಬುವಂತೆ ಮಾಡಬೇಡಿ:

ಕುಕ್ಕರ್ ತುಂಬುವಂತೆ ಮಾಡಬೇಡಿ:

ಪ್ರೆಶರ್ ಕುಕ್ಕರ್ ಹೇಗೆ ಕೆಲಸಮಾಡುತ್ತದೆ ಎಂಬ ಕಾರ್ಯವಿಧಾನ ನಿಮಗೆ ತಿಳಿದಿದ್ದರೆ, ಈ ತಪ್ಪು ನೀವು ಎಂದಿಗೂ ಮಾಡುವುದಿಲ್ಲ. ಒತ್ತಡ ಮತ್ತು ನೀರಿನ ಮೂಲಕ ಆಹಾರ ಬೇಯುವ ಕುಕ್ಕರ್ ನಲ್ಲಿ ಉಸಿರಾಟಕ್ಕೆ ಸ್ಥಳವಿಲ್ಲದಿದ್ದಾಗ, ಆಹಾರ ಹೇಗೆ ಬೇಯ್ಯುತ್ತದೆ ಹೇಳಿ? ಆಗಲೇ ಅದು ಸಿಡಿಯುವುದು. ಆದ್ದರಿಂದ, ನೀವು ಮೂರನೇ ಎರಡು ಅಂದರೆ ಕುಕ್ಕರಿನ ಮುಕ್ಕಾಲು ಭಾಗದಷ್ಟು ಮಾತ್ರ ಆಹಾರ ಸೇರಿಸಿ, ಮತ್ತು ಬೇಯಿಸಿದಾಗ ಉಬ್ಬುವ ಆಹಾರ ಇದ್ದರೆ, ಅರ್ಧದಷ್ಟು ಭಾಗವನ್ನು ಮಾತ್ರ ಭರ್ತಿ ಮಾಡಿ.

ಸಾಕಷ್ಟು ನೀರು / ದ್ರವ ಸೇರಿಸಿ:

ಸಾಕಷ್ಟು ನೀರು / ದ್ರವ ಸೇರಿಸಿ:

ಪ್ರೆಶರ್ ಕುಕ್ಕರ್ನ ಕಾರ್ಯವಿಧಾನದ ಪ್ರಕಾರ, ಶಾಖ ಮತ್ತು ಒತ್ತಡವನ್ನು ಸೃಷ್ಟಿಸಲು ಇದಕ್ಕೆ ಸಾಕಷ್ಟು ದ್ರವ / ನೀರು ಬೇಕಾಗುತ್ತದೆ, ಆದ್ದರಿಂದ ನೀವು ಸಾಕಷ್ಟು ನೀರು / ದ್ರವವನ್ನು ಸೇರಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಇದರಿಂದ ಆಹಾರವು ಸಮವಾಗಿ ಬೇಯುತ್ತದೆ. ಒಂದು ವೇಳೆ ನೀವು ಕಡಿಮೆ ನೀರನ್ನು ಸೇರಿಸಿದರೆ, ಆಹಾರ ತಳಹಿಡಿಯಬಹುದು ಮತ್ತು ಹೆಚ್ಚು ನೀರನ್ನು ಸೇರಿಸಿದರೆ, ಆಹಾರದ ವಿನ್ಯಾಸ ಹಾಳಾಗಬಹುದು. ಆದ್ದರಿಂದ, ತುಂಬಾ ಲೆಕ್ಕಾಚಾರ ಮಾಡಿ! .

ನೊರೆ ಉಂಟು ಮಾಡುವ ಆಹಾರಗಳೊಂದಿಗೆ ಜಾಗರೂಕರಾಗಿರಿ:

ನೊರೆ ಉಂಟು ಮಾಡುವ ಆಹಾರಗಳೊಂದಿಗೆ ಜಾಗರೂಕರಾಗಿರಿ:

ಪಾಸ್ಟಾ, ಸ್ಪ್ಲಿಟ್ ಬೀನ್ಸ್ ಮತ್ತು ಕ್ರ್ಯಾನ್ಬೆರಿಗಳಂತಹ ಆಹಾರ ಪದಾರ್ಥಗಳನ್ನು ಬೇಯಿಸುವಾಗ ನೊರೆ ಉಂಟಾಗುತ್ತದೆ. ಅಂತಹ ಆಹಾರ ಪದಾರ್ಥಗಳನ್ನು ತಕ್ಷಣ ಬೇಯಿಸಬಾರದು. ಅವುಗಳನ್ನು ಕುದಿಸಿ. ನೊರೆ ತೆಗೆದು ನಂತರ ಪ್ರೆಶರ್ ಕುಕ್ಕರ್ ಗೆ ಹಾಕಬಹುದು.

ಪ್ರೆಶರ್ ನಲ್ಲಿ ಹುರಿಯುವುದನ್ನು ತಪ್ಪಿಸಿ:

ಪ್ರೆಶರ್ ನಲ್ಲಿ ಹುರಿಯುವುದನ್ನು ತಪ್ಪಿಸಿ:

ಪ್ರೆಶರ್ ಕುಕ್ಕರ್ನಲ್ಲಿ ಅಡುಗೆ ಮಾಡುವಾಗ, ಸಾಕಷ್ಟು ಎಣ್ಣೆಯನ್ನು ಬಳಸದಿದ್ದರೆ ಅದು ಗ್ಯಾಸ್ಕೆಟ್ (ರಬ್ಬರ್ ಅಥವಾ ಬೆಲ್ಟ್ )ಮತ್ತು ಇತರ ಭಾಗಗಳನ್ನು ಕರಗಿಸುವ ಸಾಧ್ಯತೆಗಳಿವೆ. ಅಡುಗೆಮನೆಗೆ ಇದು ತುಂಬಾ ಅಪಾಯಕಾರಿ ಸಂಗತಿಯಾಗಿದೆ.

ಪ್ರೆಶರ್ ನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿ:

ಪ್ರೆಶರ್ ನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿ:

ಪ್ರೆಶರ್ ನ್ನು ಬಿಡುಗಡೆ ಮಾಡುವ ಸುರಕ್ಷಿತ ಮತ್ತು ನೈಸರ್ಗಿಕ ಶೈಲಿಯೆಂದರೆ ತಾನಾಗಿಯೇ ಪ್ರೆಶರ್ ಬಿಡುವ ತನಕ ಅದನ್ನು ಅದರಷ್ಟಕ್ಕೆ ಬಿಡುವುದು. ಇನ್ನೊಂದು ಮಾರ್ಗವೆಂದರೆ ತಣ್ಣೀರಿನ ಟ್ಯಾಪ್ ನೀರಿನ ಅಡಿಯಲ್ಲಿ ಕುಕ್ಕರ್ ನ್ನು ಇಡುವುದು. ನೀವು ಚಮಚ ಅಥವಾ ಚಾಕು ಬಳಸಿ ಸೀಟಿ ಎತ್ತಿ ಪ್ರೆಶರ್ ನ್ನು ಬಿಡುಗಡೆ ಮಾಡಬಹುದು. ನಂತರದ ಎರಡು ವಿಧಾನಗಳಲ್ಲಿ, ಶಾಖ ನಿಮ್ಮ ಕೈಗಳನ್ನು ಸುಡುವುದರಿಂದ ನಿಮ್ಮ ಕೈಗಳನ್ನು ಜಾಗರೂಕರಾಗಿ ಹಿಡಿಯಿರಿ.

ಕುಕ್ಕರ್ ನ್ನು ಸರಿಯಾಗಿ ಸ್ವಚ್ಛಗೊಳಿಸಿ:

ಕುಕ್ಕರ್ ನ್ನು ಸರಿಯಾಗಿ ಸ್ವಚ್ಛಗೊಳಿಸಿ:

ಕುಕ್ಕರ್ ಸಾಮಾನ್ಯ ಉಷ್ಣಾಂಶಕ್ಕೆ ಬಂದ ನಂತರ, ಪ್ರತಿ ಭಾಗವನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿ, ಪ್ರತಿಯೊಂದು ವಸ್ತುವನ್ನು ಪ್ರತ್ಯೇಕವಾಗಿ ಮತ್ತು ಸರಿಯಾಗಿ ಸ್ವಚ್ಛಗೊಳಿಸಿ. ವಿಸಿಲ್ ಮತ್ತು ಗ್ಯಾಸ್ಕೆಟ್ (ರಬ್ಬರ್ ಅಥವಾ ಬೆಲ್ಟ್) ಅನ್ನು ಸ್ವಚ್ಛಗೊಳಿಸಲು ಬ್ರಷ್ ಅಥವಾ ಟೂತ್ಪಿಕ್ ಬಳಸಿ. ಅಲ್ಲದೆ, ತೊಳೆದ ಕುಕ್ಕರ್ ನ್ನು ತಲೆಕೆಳಗಾಗಿ ಇಡಲು ಮರೆಯಬೇಡಿ, ಇದರಿಂದ ಹೆಚ್ಚುವರಿ ನೀರು ಇರುವುದಿಲ್ಲ.

ಬಳಕೆಯ ಮೊದಲು ಕುಕ್ಕರ್ ಚೆಕ್ ಮಾಡಿ:

ಬಳಕೆಯ ಮೊದಲು ಕುಕ್ಕರ್ ಚೆಕ್ ಮಾಡಿ:

ಪ್ರತಿ ಬಳಕೆಯ ಮೊದಲು, ಮುಚ್ಚಳದಲ್ಲಿ ಏನಾದರೂ ಬಿರುಕು ಬಿಟ್ಟಿದೆಯೇ ಎಂದು ಪರಿಶೀಲಿಸಿ. ಜೊತೆಗೆ ಮುಚ್ಚಳವನ್ನು ಸರಿಯಾಗಿ ಲಾಕ್ ಮಾಡಲಾಗಿದೆಯೆ?, ಹ್ಯಾಂಡಲ್ನ ಪ್ಲಾಸ್ಟಿಕ್ ಕವರ್ ಮುರಿದುಹೋಗಿದೆಯೇ, ಸಡಿಲವಾಗಿದೆಯೇ ಎಂದು ಚೆಕ್ ಮಾಡಿ. ಏಕೆಂದರೆ ಹ್ಯಾಂಡಲ್ನ ಲೋಹದ ಭಾಗವನ್ನು ಹಿಡಿಯುವುದರಿಂದ ನಿಮ್ಮ ಕೈಗಳು ಸುಡಬಹುದು.

ಲೋಕಲ್ ಪ್ರೆಶರ್ ಕುಕ್ಕರ್ಗಳನ್ನು ಎಂದಿಗೂ ಬಳಸಬೇಡಿ:

ಲೋಕಲ್ ಪ್ರೆಶರ್ ಕುಕ್ಕರ್ಗಳನ್ನು ಎಂದಿಗೂ ಬಳಸಬೇಡಿ:

ಬ್ರಾಂಡೆಡ್ ಕುಕ್ಕರ್ಗಳು ಸುರಕ್ಷತಾ ಪರೀಕ್ಷೆಗಳನ್ನು ಮಾಡಿ, ಮನೆಯ ಬಳಕೆಗೆ ಸುರಕ್ಷಿತವೆಂದು ಗುರುತಿಸಲಾಗುತ್ತದೆ. ಲೋಕಲ್ ಕುಕ್ಕರ್ ನಲ್ಲಿ ಇದ್ಯಾವುದು ಇರುವುದಿಲ್ಲವಿರುವುದರಿಂದ ಇಂತಹ ಬಳಸುವುದು ನಿಮಗೆ ಅಪಾಯಕಾರಿ.

English summary

Are You Using Pressure Cooker Safely in Kannada?

Here we talking about Are You Using Pressure Cooker Safely in Kannada?, read on
Story first published: Friday, May 21, 2021, 15:02 [IST]
X
Desktop Bottom Promotion