For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆ ವಾಸ್ತು ಹೀಗಿದ್ರೆ ಮನೆಯಲ್ಲಿ ಶಾಂತಿ-ನೆಮ್ಮದಿ ಸದಾ ಇರುತ್ತೆ

|

ನೀವು ಯಾವುದೇ ಸಂಸ್ಕೃತಿಯಲ್ಲಿ ಬೆಳೆದಿದ್ದರೂ,ನೀವು ತಿನ್ನುವ ಆಹಾರವು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಲಾಗುತ್ತದೆ. ನೀವು ಸೇವಿಸುವ ಆಹಾರದ ಪೌಷ್ಟಿಕಾಂಶವು ನಿಮ್ಮ ದೇಹ ಮತ್ತು ಮನಸಿನ ಪರಿಣಾಮ ಬೀರುತ್ತದೆ ಎಂಬ ಮಾತನ್ನು ಯಾರು ಕೂಡ ನಿರಾಕರಿಸುವಂತೆ ಇಲ್ಲ ಎಂದು ಹೇಳಬಹುದು,ಈ ಕಾರಣದಿಂದಾಗಿ ಆಹಾರವು ತಯಾರಿಸಲ್ಪಟ್ಟ ನೈರ್ಮಲ್ಯ ಪರಿಸ್ಥಿತಿಗಳು ಆಹಾರದ ಮೌಲ್ಯದಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತವೆ ಎಂದು ಹೇಳುತ್ತಾರೆ.

ಅದಕ್ಕಾಗಿಯೇ, ದೇಶದ ಉದ್ದಗಲಗಳಲ್ಲೆಲ್ಲಾ ಅಡುಗೆ ಮನೆಯ ಸ್ವಚ್ಛತೆಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.ಹಿಂದಿನ ಕಾಲದಲ್ಲಿ ಸಾಂಪ್ರದಾಯಿಕವಾದ ಮನೆಗಳಲ್ಲಿ ಅಡುಗೆ ಮನೆಗಳನ್ನೇ ಮನೆಯಲ್ಲಿ ಸಂಪೂರ್ಣವಾಗಿ ಪ್ರತ್ಯೇಕವಾದ ಘಟಕದಂತೆ ನಿರ್ಮಿಸುತ್ತಾ ಇದ್ದರು. ಇಂದಿನ ದಿನಗಳಲ್ಲಿ ಹೆಚ್ಚಿನ ಮನೆಗಳಲ್ಲಿ (ಫ್ಲ್ಯಾಟ್ಗಳು ಸೇರಿದಂತೆ) ಅಡಿಗೆಮನೆಗೆ ಹಾಗೂ ಊಟದ ಮನೆ ಒಟ್ಟಿಗೆ ಜೋಡಿಸಿದಂತೆ ಇದ್ದರೂ,ಮನೆಯಲ್ಲಿ ಅಡುಗೆಮನೆಯ ಸ್ಥಳದ ಬಗ್ಗೆ ಇರುವ ಪ್ರಾಮುಖ್ಯತೆಯು ಮನೆಯಲ್ಲಿರುವವರ ಸಮೃದ್ಧಿ ಮತ್ತು ಆರೋಗ್ಯವನ್ನು ನಿರ್ಧಾರ ಮಾಡುತ್ತದೆ.

ಅಡುಗೆ ಮನೆಯ ವಾಸ್ತು ಶಾಸ್ತ್ರ: ತಿಳಿಯಲೇಬೇಕಾದ ಸಂಗತಿಗಳು

Vastu Tips For Kitchen Direction

ಮೇಲೆ ನಾವು ತಿಳಿಸಿದ ಈ ಪರಿಕಲ್ಪನೆಯು ಮೂಲತಃ ಭಾರತೀಯ ವಾಸ್ತ ಶಾಸ್ತ್ರ ಸಂಪ್ರದಾಯದ ಒಂದು ಸಲಹೆಯಾಗಿದೆ. ಈಗಿನ ಆಧುನಿಕ ಮನೋವಿಜ್ಞಾನಿಗಳ ಪ್ರಕಾರ ಅಡುಗೆಮನೆಯ ಸ್ಥಾನವು ಅಲ್ಲಿ ವಾಸಿಸುವ ಜನರ ಒಟ್ಟಾರೆ ಮಾನಸಿಕ ಯೋಗಕ್ಷೇಮದಲ್ಲಿ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅವರೇ ಖಚಿತ ಪಡಿಸಿದ್ದಾರೆ. ನಾವು ಈ ಲೇಖನದಲ್ಲಿ, ಅಡುಗೆಮನೆಯ ಆದರ್ಶದ ಸ್ಥಾನದ ಬಗ್ಗೆ ಚರ್ಚಿಸಲಿದ್ದೇವೆ, ಹಾಗೂ ನೀವು ಸರಿಯಾದ ದಿಕ್ಕಿನಲ್ಲಿ ಅಡುಗೆ ಮಾಡಲು ಸಾಧ್ಯವಿಲ್ಲದಿದ್ದರೆ ಅನುಸರಿಸಬಹುದಾದ ಕ್ರಮಗಳು ಮತ್ತು ಇತರ ವಿಚಾರಗಳ ಬಗ್ಗೆಯೂ ತಿಳಿಸಿಕೊಡಲಿದ್ದೇವೆ.

ಅಡುಗೆ ಮನೆಯ ದಿಕ್ಕು

ಅಡುಗೆ ಮನೆಯ ದಿಕ್ಕು

ನಿಮ್ಮ ಮನೆ ಯಾವುದೇ ದಿಕ್ಕಿನಲ್ಲಿ ಇದ್ದರೂ ನಿಮ್ಮ ಅಡುಗೆ ಮನೆ ಮಾತ್ರ ಆದರ್ಶಪ್ರಾಯವಾಗಿ ಆಗ್ನೇಯ ದಿಕ್ಕಿನಲ್ಲೇ ಇರಬೇಕು.ಅಡುಗೆ ಮನೆಯಲ್ಲಿ ನೀವು ಅಡುಗೆ ಮಾಡುವ ದಿಕ್ಕು(ಕೇಂದ್ರ ಕಲ್ಲಿನ ದಿಕ್ಕು)ಪೂರ್ವವಾಗಿರಬೇಕು.ಆಧುನಿಕ ಅಡುಗೆಮನೆಗಳಲ್ಲಿ,ಮೈಕ್ರೊವೇವ್ ಒವನ್,ಇಂಡಕ್ಷನ್ ಒವನ್, ಗ್ಯಾಸ್ ಬರ್ನರ್, ಇತ್ಯಾದಿ ಅನೇಕ ಅಡುಗೆಗಳ ವಿಧಾನಗಳು ಇರುತ್ತದೆ.

ಕೇಂದ್ರೀಯ ಕಲ್ಲನ್ನು ಅಂತಹ ಅಡುಗೆಮನೆಗಳಲ್ಲಿ ಅಡುಗೆಗೆ ಬೇಕಾದ ನಿರ್ದಿಷ್ಟ ಸಾಮಾನುಗಳು ಮತ್ತು ಅಡುಗೆ ಸಿದ್ಧತೆಗಳ ಜೊತೆಗೆ ಸರಿಯಾಗಿ ಅಳವಡಿಸಬೇಕು.ಏಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಆಹಾರವನ್ನು ಸಿದ್ಧಪಡಿಸುವಾಗ ಒಬ್ಬ ಸ್ತ್ರೀಯು ಪೂರ್ವಕ್ಕೆ ಎದುರು ನೋಡಿದರೆ, ಆಕೆಯ ಹೃದಯ ಮತ್ತು ಆತ್ಮ ಅಡುಗೆ ಎಂಬ ಕಲೆಗೆ ಒಟ್ಟಾಗಿ ಸೇರುತ್ತವೆ ಮತ್ತು ಇದರಿಂದ ನಿಮ್ಮ ಅಡುಗೆಯ ರುಚಿಯೂ ಕೂಡ ಹೆಚ್ಚುತ್ತದೆ.

ಮನುಷ್ಯರ ಮೇಲೆ ಇದರ ಪರಿಣಾಮ

ಮನುಷ್ಯರ ಮೇಲೆ ಇದರ ಪರಿಣಾಮ

ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಆಶ್ಚರ್ಯಕರವಾದ ವಿಷಯವೆಂದರೆ ಅಡುಗೆ ಮನೆಯಲ್ಲಿ ಅಡುಗೆಯನ್ನು ಮಾಡುವ ದಿಕ್ಕು ಕೇವಲ ಅಡುಗೆ ಮಾಡುವವರಿಗೆ ಮಾತ್ರ ಸುಲಭವಷ್ಟೇ ಅಲ್ಲದೆ ಅದು ಆ ಅಡುಗೆಯನ್ನು ತಿನ್ನುವವರ ಮೇಲೂ ಪರಿಣಾಮವನ್ನು ಬೀರುತ್ತದೆ.ಇದು ವಾಸ್ತುಶಾಸ್ತ್ರದಿಂದ ಕೂಡ ಒಪ್ಪಲ್ಪಟ್ಟ ಸಂಗತಿಯಾಗಿದೆ.ಅಂತಹ ಒಂದು ಬದಲಾವಣೆಯಿಂದ ಕಂಡು ಬರುವ ಫಲಿತಾಂಶವೆಂದರೆ ಇದು ಇಡೀ ಮನೆಯು ಸಕಾರಾತ್ಮಕತೆಯಿಂದ ತುಂಬಿರುವಂತೆ ನೋಡಿಕೊಳ್ಳುತ್ತದೆ ಮತ್ತು ಇದರ ಪರಿಣಾಮವಾಗಿ ಅಲ್ಲಿ ವಾಸಿಸುವ ಜನರು ವಿವಿಧ ರೀತಿಯ ರೋಗಗಳಿಂದ ದೂರವಿರಲು ಸಹಾಯಕಾರಿಯಾಗಿದೆ.ಅಂತಹ ಮನೆಗಳಲ್ಲಿ ಪ್ರೀತಿಯು ಹೆಚ್ಚಾಗಿರುತ್ತದೆ ಮತ್ತು ಕುಟುಂಬದ ಎಲ್ಲ ಸದಸ್ಯರ ನಡುವೆ ಉತ್ತಮವಾದ ಪರಸ್ಪರ ಸಂಬಂಧವು ಏರ್ಪಡುತ್ತದೆ.

ಪರ್ಯಾಯ ಕ್ರಮಗಳು

ಪರ್ಯಾಯ ಕ್ರಮಗಳು

ಕೆಲವು ಸಂದರ್ಭಗಳಲ್ಲಿ, ಮೇಲೆ ಸೂಚಿಸಲಾದ ಆದರ್ಶ ದಿಕ್ಕಿನಲ್ಲಿ ಅಡುಗೆ ಮನೆಯನ್ನು ನಿರ್ಮಿಸಲು ನಮಗೆ ಸಾಧ್ಯವಾಗದೆ ಇರಬಹುದು.ಅಂತಹ ಪರಿಸ್ಥಿತಿಯಲ್ಲಿ, ಅಡುಗೆ ಮನೆಯು ಮನೆಯ ಮಧ್ಯ ಭಾಗದಲ್ಲಿ ಅಥವಾ ಉತ್ತರ ದಿಕ್ಕಿನಲ್ಲಿ ಇರದಂತೆ ನಾವು ಜಾಗ್ರತೆಯನ್ನು ವಹಿಸಬೇಕು.ಆ ದಿಕ್ಕಿನಲ್ಲಿ ನಿಮ್ಮ ಅಡುಗೆಮನೆಯು ಇದ್ದರೆ ಅದು ನಿಮ್ಮ ಕುಟುಂಬದ ಯೋಗಕ್ಷೇಮಕ್ಕೆ ಹಾನಿಕಾರಕವಾಗಿರುತ್ತದೆ.ಒಂದು ವೇಳೆ ನಿಮ್ಮ ಮನೆಯಲ್ಲಿ ಅಂತಹ ದಿಕ್ಕಿನಲ್ಲಿ ಅಡುಗೆ ಮನೆ ಇದ್ದರೆ ನಿಮ್ಮ ಕುಟುಂಬಕ್ಕೆ ಸಂಭವಿಸುವ ದುರದೃಷ್ಟದ ಪರಿಣಾಮವನ್ನು ತಗ್ಗಿಸುವ ಸಲುವಾಗಿ ನೀವು ಆದಷ್ಟು ಬೇಗ ಅಗತ್ಯವಾದ ಬದಲಾವಣೆಗಳನ್ನು ಮಾಡಬೇಕೆಂಬುದನ್ನು ಖಚಿತಪಡಿಸಿಕೊಳ್ಳಿ.

ಇತರೆ ಸಲಹೆಗಳು

ಇತರೆ ಸಲಹೆಗಳು

ಈ ದಿನಗಳಲ್ಲಿ ರೆಫ್ರಿಜಿರೇಟರ್ ಇಲ್ಲದೆಯೇ ಯಾರಾದರೂ ಅಡುಗೆ ಮಾಡುತ್ತಾರೆ ಎನ್ನುವುದನ್ನು ಊಹಿಸಲು ಕೂಡ ಕಷ್ಟವಾಗುತ್ತದೆ. ತಾತ್ತ್ವಿಕವಾಗಿ, ರೆಫ್ರಿಜಿರೇಟರ್ ಅನ್ನು ಅಡುಗೆಮನೆಗಯ ಪಶ್ಚಿಮಕ್ಕೆ ಇಡಬೇಕು. ಹೆಚ್ಚಾಗಿ ಇದನ್ನು ಅಡುಗೆ ಮನೆಯಲ್ಲಿ ಇರಿಸುತ್ತಾರೆ. ಅಡುಗೆ ಮನೆ ಚಿಕ್ಕದಾಗಿದ್ದರೆ ಮಾತ್ರ ಇತರ ಸ್ಥಳದಲ್ಲಿ ಫ್ರಿಡ್ಜ್ ಅನ್ನು ಇರಿಸುತ್ತಾರೆ. ಅಡುಗೆ ಮನೆಯಲ್ಲಿ ನೀವು ಫ್ರಿಡ್ಜ್ ಅನ್ನು ಇರಿಸುತ್ತೀರಿ ಎಂದಾದಲ್ಲಿ ಅದನ್ನು ನೈರುತ್ಯ ಭಾಗದಲ್ಲಿ ಇರಿಸಿಕೊಳ್ಳಿ. ಕನಿಷ್ಠ ಒಂದು ಅಡಿ ದೂರದ ಅಂತರವಿರಲಿ.ನೀವು ಅಡುಗೆ ಪರಿಕರಗಳನ್ನು ಜೋಡಿಸುವ ಸ್ಥಳಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಈ ವಸ್ತುಗಳನ್ನು ನಿಮ್ಮ ಪಶ್ಚಿಮ ಅಥವಾ ದಕ್ಷಿಣದ ಗೋಡೆಯ ಮೇಲೆ ಇರಿಸಿಕೊಳ್ಳಿ. ಇನ್ನು ನಿಮ್ಮ ಅಡುಗೆ ಮನೆಗಾಗಿ ನೀವು ಬೇರೆ ಬೇರೆ ಫ್ಲೋರಿಂಗ್ ವಿಧಾನವನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. ಮಾರ್ಬಲ್ ಅಥವಾ ಟೈಲ್ಸ್ ಹೆಚ್ಚು ಸೂಕ್ತವಾಗಿದೆ. ಸೆರಾಮಿಕ್ ಟೈಲ್ಸ್‌ಗಳು ಸ್ಕ್ತಾಚ್ ರಹಿತವಾಗಿರುವುದರಿಂದ ಇತರ ಎಲ್ಲಾ ಫ್ಲೋರ್‌ಗಳಿಂದ ಇದು ಉತ್ತಮವಾಗಿದೆ. ಅಲ್ಲದೆ, ಅಡುಗೆ ಮನೆಯಲ್ಲಿ ಆಹಾರವನ್ನು ಮಾತ್ರ ತಯಾರಿಸಲಾಗುತ್ತದೆ ಮತ್ತು ಯಾವುದೇ ಸಂದರ್ಭದಲ್ಲಿ ನೀವು ಪ್ರಾರ್ಥನೆ ಅಥವಾ ಯಾವುದೇ ರೀತಿಯ ಪೂಜೆಯನ್ನು ಇಲ್ಲಿ ಮಾಡಬಾರದು ಎಂಬುದನ್ನು ನೆನಪಿಟ್ಟುಕೊಳ್ಳಿ.ನಿಮ್ಮ ಮನೆಯ ಸ್ಥಾಪನೆಯು ಹೇಗೇ ಇರಲಿ, ಅಡುಗೆಮನೆಯು ಯಾವುದೇ ಕಾರಣಕ್ಕೂ ಪೂಜೆಯ ಕೋಣೆಯ ಮೇಲ್ಭಾಗದಲ್ಲಿ ಇರುವಂತಿಲ್ಲ. ಈಗ ನೀವು ಎಲ್ಲಿ ಅಡುಗೆ ಮಾಡಬೇಕು ಎಂಬುದನ್ನು ತಿಳಿದುಕೊಂಡಿದ್ದೀರಾ ಆದ್ದರಿಂದ ನಿಮ್ಮ ಕನಸಿನ ಮನೆಯ ಯೋಜನೆಯನ್ನು ಮಾಡುವಾಗ ನೀವು ತಪ್ಪದೇ ಅದನ್ನು ನೆನಪಿಟ್ಟುಕೊಳ್ಳುತ್ತೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.ಏರ್ಪಾಡುಗಳು ವಿಭಿನ್ನವಾಗಿರುವ ಮನೆಯಲ್ಲಿ ನೀವು ವಾಸಿಸುತ್ತಿದ್ದರೆ,ಅಡುಗೆಮನೆ ವಾಸ್ತುವಿನ ಅನುಸರಣೆಗೆ ಬದ್ಧವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಲು ಮರೆಯಬೇಡಿ.ಇದು ನಿಮ್ಮ ಕುಟುಂಬದ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುವುದಲ್ಲದೇ ನಿಮ್ಮ ಕುಟುಂಬವು ಉತ್ತಮವಾದ ಆರೋಗ್ಯದ ಅನುಕೂಲಗಳನ್ನು ಪಡೆಯುತ್ತದೆ ಎಂಬುದನ್ನು ಸಹ ಖಾತ್ರಿ ಪಡಿಸುತ್ತದೆ.

English summary

Vastu Tips For Kitchen Direction

Irrespective of the culture that you have been brought up in, the food that you eat is said to play a major role in your overall health and well-being. While no one can deny that the food you eat affects your body and mind in terms of nutrition, the fact is the hygiene conditions under which the food is prepared has a major say in the value of the food. That is why, across the length and breadth of the country a major importance is given to the cleanliness of the kitchen.
X
Desktop Bottom Promotion