For Quick Alerts
ALLOW NOTIFICATIONS  
For Daily Alerts

ನಿಮ್ಮ ಮನೆಯ ಪ್ರಧಾನ ಬಾಗಿಲಿಗೆ ಸರಿ ಹೊಂದುವ ವಾಸ್ತು ಸಲಹೆಗಳು

|

ಮನೆಯಲ್ಲಿ ನೆಮ್ಮದಿ ನೆಲೆಸಿರಬೇಕಾದರೆ ಮನೆಯ ಅಂಗಗಳು ವಾಸ್ತುವಿನ ಪ್ರಕಾರವೇ ಇರಬೇಕಾದದ್ದು ಅವಶ್ಯವಾಗಿದೆ ಹಾಗೂ ಈ ಮೂಲಕ ಧನಾತ್ಮಕ ಶಕ್ತಿಯ ಹರಿವು ಸೂಕ್ತ ದಿಕ್ಕಿನಲ್ಲಿ ಹರಿಯಗೊಡಗುತ್ತದೆ. ನಮ್ಮ ಮನೆ ಹಾಗೂ ಇತರ ಎಲ್ಲಾ ಪರಿಸರದಲ್ಲಿ ಹಲವಾರು ಶಕ್ತಿಗಳ ಪ್ರವಾಹ ಸತತವಾಗಿ ಹರಿಯುತ್ತಿರುತ್ತದೆ. ಉದಾಹರಣೆಗೆ ಉತ್ತರ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವ ಮೂಲಕ ಭೂಮಿಯ ಆಯಸ್ಕಾಂತೀಯ ಹರಿವು ದೇಹದ ಮೂಲಕ ಗರಿಷ್ಟವಾಗಿ ಪ್ರವಹಿಸಿ ಮರುದಿನದಲ್ಲಿ ಹೆಚ್ಚಿನ ಚೈತನ್ಯವಿರುವಂತೆ ಮಾಡುತ್ತದೆ. ಇದಕ್ಕೆ ವಿರುದ್ದವಾಗಿ ದಕ್ಷಿಣ ದಿಕ್ಕಿನತ್ತ ತಲೆಯಿಟ್ಟು ಮಲಗಿದರೆ ಈ ಪ್ರಭಾವವೂ ವಿರುದ್ದವಾಗಿ ಮರುದಿನ ಎದ್ದಾಗ ತಲೆಭಾರ ಹಾಗೂ ಚೈತಲ್ಯವಿಲ್ಲದಂತೆ ಮಾಡುತ್ತದೆ.

ನಮ್ಮ ಮನೆಯಲ್ಲಿ ಪ್ರವಹಿಸುವ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳ ಹರಿಯುವಿಕೆಯನ್ನು ಸರಿಪಡಿಸಿ ಹೆಚ್ಚು ಧನಾತ್ಮಕ ಶಕ್ತಿಯ ಪ್ರವಹಿಸುವಿಕೆಯನ್ನು ಪಡೆಯಲು ಸಾಧ್ಯವಾಗಿಸುವುದು ವಾಸ್ತುಶಾಸ್ತ್ರವಾಗಿದೆ ಹಾಗೂ ಇದು ಮನೆಯ ವಿನ್ಯಾಸವನ್ನು ಪ್ರಮುಖವಾಗಿ ಅವಲಂಬಿಸಿದೆ. ಪ್ರಧಾನ ಬಾಗಿಲಿನಿಂದ ಹಿಡಿದು ಮನೆಯ ಪುಟ್ಟ ಉಗ್ರಾಣದ ಬಾಗಿಲಿನವರೆಗೂ ವಾಸ್ತು ಅನ್ವಯವಾಗುತ್ತದೆ. ಈ ನಿಯಮಗಳನ್ನು ಪಾಲಿಸುವ ಮೂಲಕ ಮನೆಯಲ್ಲಿ ನೆಮ್ಮದಿ ಸಮೃದ್ದಿ ಹಾಗೂ ಸಂತೋಷ ತುಂಬಿರುತ್ತದೆ. ಇಂದಿನ ಲೇಖನದಲ್ಲಿ ಮನೆಯ ಪ್ರಧಾನ ಬಾಗಿಲಿಗೆ ಅನ್ವಯವಾಗುವ ವಾಸ್ತುವಿನ ನಿಯಮಗಳ ಬಗ್ಗೆ ವಿವರಿಸುತ್ತಿದ್ದೇವೆ, ಬನ್ನಿ ನೋಡೋಣ:

ಪ್ರಧಾನ ಬಾಗಿಲಿನ ಜೋಡಣೆ (Alignment)

ಪ್ರಧಾನ ಬಾಗಿಲಿನ ಜೋಡಣೆ (Alignment)

ಪ್ರಧಾನ ಬಾಗಿಲು ಇರುವ ಗೋಡೆಯ ದಿಕ್ಕು ಮತ್ತು ಬಾಗಿಲಿನ ಜೋಡಣೆ ಒಂದೇ ರೇಖೆಯಲ್ಲಿ ಹೊಂದಿಕೊಂಡಿರಬಾರದು. ಇವುಗಳ ದಿಕ್ಕು ಸಮನಾಗಿದ್ದರೂ ಸರಿ ಜೋಡಣೆ ಮಾತ್ರ ಬೇರೆಯಾಗಿರಬೇಕು. ಈ ಮೂಲಕ ಪ್ರಧಾನ ಬಾಗಿಲಿನಿಂದ ಋಣಾತ್ಮಕ ಶಕ್ತಿಯ ಪ್ರವಹಿಕೆಗೆ ತಡೆಯುಂಟು ಮಾಡಬಹುದು.

Most Read: ನೀವು ಜೀವನದಲ್ಲಿ ಅನುಸರಿಸಬೇಕಾದ ವಾಸ್ತು ಸಲಹೆಗಳು

ದಿಕ್ಕು

ದಿಕ್ಕು

ಪ್ರಧಾನ ಬಾಗಿಲು ಪೂರ್ವ, ಈಶಾನ್ಯ, ಉತ್ತರ ಅಥವಾ ಪಶ್ಚಿಮ ಈ ದಿಕ್ಕುಗಳಿಗೆ ಮಾತ್ರವೇ ಎದುರಾಗಿರುವಂತಿರಬೇಕು. ಈ ಎಲ್ಲಾ ದಿಕ್ಕುಗಳ ಮೂಲಕ ಧನಾತ್ಮಕ ಪ್ರವಾಹ ಮನೆಯೊಳಗೆ ಹರಿಯುತ್ತದೆ. ಈ ಮೂಲಕ ಮನೆಯಲ್ಲಿ ಸಮೃದ್ದಿ ಹೆಚ್ಚುವುದನ್ನು ಗಮನಿಸಬಹುದು. ತಪ್ಪಿಯೂ ದಕ್ಷಿಣ ದಿಕ್ಕಿನತ್ತ ಇರಿಸಬಾರದು.

ಬಾಗಿಲು ಹಲವು ಭಾಗಗಳದ್ದಾಗಿರಬೇಕು

ಬಾಗಿಲು ಹಲವು ಭಾಗಗಳದ್ದಾಗಿರಬೇಕು

ಪ್ರಧಾನ ಬಾಗಿಲನ್ನು ಮರದಿಂದ ಮಾಡಿದ್ದರೆ ಅತ್ಯುತ್ತಮ. ಇದರಲ್ಲಿ ಕನಿಷ್ಟ ಎರಡಾದರೂ ಭಾಗಗಳಿರಲೇ ಬೇಕು. ಹೆಚ್ಚಿದ್ದಷ್ಟೂ ಒಳ್ಳೆಯದು. ಒಂದೇ ಹಲಗೆಯಿಂದ ಮಾಡಿದ ಬಾಗಿಲು ಪ್ರಧಾನ ಬಾಗಿಲಿಗೆ ಸೂಕ್ತವಲ್ಲ! ಅಲ್ಲದೇ ಮನೆಯ ಹೆಸರನ್ನು (ಅಥವಾ ಮನೆಯ ಒಡೆಯನ ಹೆಸರು) ಬಾಗಿಲಿನ ಮೇಲೆ ಸ್ಥಾಪಿಸುವುದೂ ಅವಶ್ಯ. ಅಲ್ಲದೇ ಬಾಗಿಲು ಇರುವ ಸ್ಥಳದಲ್ಲಿ ಯಾವುದೇ ನೆರಳು ಬೀಳದಿರುವಂತೆ ಇರಬೇಕು.

ಬಾಗಿಲು ತೆರೆಯುವ ದಿಕ್ಕು

ಬಾಗಿಲು ತೆರೆಯುವ ದಿಕ್ಕು

ಪ್ರಧಾನ ಬಾಗಿಲು ಸದಾ ಪ್ರದಕ್ಷಿಣಾ (clockwise) ದಿಕ್ಕಿನಲ್ಲಿಯೇ ತೆರೆಯುವಂತೆ ಮಾಡಿ. (ಅಂದರೆ ಬಾಗಿಲಿನ ಮೇಲಿನಿಂದ ನೋಡಿದರೆ ಬಾಗಿಲ ಮೇಲ್ಭಾಗದ ಅಂಚು ಗಡಿಯಾರದ ಮುಳ್ಳು ಚಲಿಸುವಂತಿರಬೇಕು). ಅಪ್ರದಕ್ಷಿಣಾ ದಿಕ್ಕಿನಲ್ಲಿ ತೆರೆಯುವ ಬಾಗಿಲು ಅಶುಭ ಅಥವಾ ಅಮಂಗಳ ಎಂದು ವಾಸ್ತು ತಿಳಿಸುತ್ತದೆ. ಅಲ್ಲದೇ ಬಾಗಿಲು ತೆರೆಯುವಾಗ ಅಥವಾ ಮುಚ್ಚುವಾಗ ಯಾವುದೇ ಸದ್ದನ್ನು ಹೊರಡಿಸಬಾರದು. ಒಂದು ವೇಳೆ ಕಾಲಕ್ರಮೇಣ ಸತತ ಸವೆತದಿಂದ ಶಬ್ದ ಎದುರಾದರೆ ತಕ್ಷಣವೇ ಎಣ್ಣೆ ಬಿಟ್ಟು ಈ ಸದ್ದು ಹೋಗುವಂತೆ ಮಾಡಬೇಕು (ನಿಂತ ಗಡಿಯಾರವೂ ಅಶುಭ ಸಂಕೇತ. ತಕ್ಷಣವೇ ಸೆಲ್ ಬದಲಿಸಿ ಮರುಚಾಲನೆ ನೀಡಬೇಕು)

ಬಾಗಿಲಿನ ಗಾತ್ರ

ಬಾಗಿಲಿನ ಗಾತ್ರ

ಮನೆಯಲ್ಲಿ ಎಷ್ಟು ಬಾಗಿಲುಗಳಿವೆಯೋ ಆ ಎಲ್ಲಾ ಬಾಗಿಲುಗಳಿಗಿಂತ ಪ್ರಧಾನ ಬಾಗಿಲು ಕೊಂಚವಾದರೂ ದೊಡ್ಡದಿರಬೇಕು. ಅಲ್ಲದೇ ಮನೆಯ ಪ್ರಧಾನ ಬಾಗಿಲು ಮನೆಯ ಒಳಗಿನ ಮೂಲೆಗಳಿಗೂ ಕೆಲವು ಇಂಚುಗಳಾದರೂ ದೂರವಿರಬೇಕು. ಬಾಗಿಲಿನ ಚೌಕಟ್ಟು ಸಹಾ ಮರದಿಂದಲೇ ಮಾಡಿರಬೇಕು. ಕಬ್ಬಿಣದ ಚೌಕಟ್ಟು ಒಳ್ಳೆಯದಲ್ಲ.

ಜಖಂಗೊಂಡ ಬಾಗಿಲು

ಜಖಂಗೊಂಡ ಬಾಗಿಲು

ಪ್ರಧಾನ ಬಾಗಿಲು ಅತ್ಯುತ್ತಮ ಗುಣಮಟ್ಟದ್ದಾಗಿದ್ದು ಇದಕ್ಕೆ ಬಳಸುವ ಹಲಗೆಗಳು ಸೀಳಿರಬಾರದು ಅಥವಾ ಕೆಟ್ಟ ಭಾಗವಾಗಿರಬಾರದು. ಒಂದು ವೇಳೆ ಮನೆಯ ಪ್ರಧಾನ ಬಾಗಿಲು ಹಳೆಯದಾಗಿದ್ದು ಇದರ ಒಂದು ಅಥವಾ ಹೆಚ್ಚಿನ ಭಾಗಗಳು ಜಖಂಗೊಂಡಿದ್ದರೆ ಅಥವಾ ವಿಶೇಷವಾಗಿ ತಳಭಾಗದ ಹಲಗೆಗಳು ಮಳೆಯ ಸತತ ಹೊಡೆತಕ್ಕೆ ಸಿಲುಕಿ ಜರ್ಝರಿತವಾಗಿದ್ದರೆ ಆದಷ್ಟೂ ಬೇಗ ಈ ಭಾಗಗಳನ್ನು ಬದಲಿಸಿ ಸರಿಪಡಿಸಬೇಕು. ಎಂದಿಗೂ ಬಾಗಿಲಿನ ತಳಭಾಗದಲ್ಲಿ ಪಾಚಿಕಟ್ಟಲು ಬಿಡಬಾರದು. ಪ್ರಧಾನ ಬಾಗಿಲಿನ ಎದುರು ಕಾಲೊರೆಸು (door mat) ಒಂದನ್ನು ತಪ್ಪದೇ ಇರಿಸಬೇಕು. ಕೆಲವರು ಇದರಲ್ಲಿ ಸುಸ್ವಾಗತ, ವೆಲ್ ಕಂ ಎಂದು ಬರೆದಿರಲೇಬೇಕು ಎಂದು ಆಗ್ರಹಿಸುತ್ತಾರೆ. ವಾಸ್ತುವಿನ ಪ್ರಕಾಕ ಕಾಲೊರೆಸು ಮುಖ್ಯವೇ ಹೊರತು ಇದರ ಬರವಣಿಗೆ ಅಥವಾ ಬೆಲೆ ಮುಖ್ಯವಲ್ಲ. ಈ ಕಾಲೊರೆಸು ಹೊರಗಿನ ಧೂಳು ಒಳಬರದಂತೆ ತಡೆಯುತ್ತದೆ ಮಾತ್ರವಲ್ಲದೇ ಅನಗತ್ಯ ಋಣಾತ್ಮಕ ಶಕ್ತಿಗಳು ಮನೆಯೊಳಗೆ ಬಾರದಂತೆಯೂ ತಡೆಯುತ್ತವೆ.

Most Read: ನವೆಂಬರ್ ತಿಂಗಳ ಮುಂದಿನ ವಾರದಲ್ಲಿ ಈ 3 ರಾಶಿಚಕ್ರದವರಿಗೆ ಎಲ್ಲವೂ ಒಳ್ಳೆಯದಾಗಲಿದೆ!

ನಿರ್ವಹಣೆಯ ಪ್ರಾಮುಖ್ಯತೆ:

ನಿರ್ವಹಣೆಯ ಪ್ರಾಮುಖ್ಯತೆ:

ಬಾಗಿಲು ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸೂಕ್ತವಾಗಿ ನಿರ್ವಹಿಸಬೇಕು. ಇವು ಸದಾ ಸ್ವಚ್ಛವಾಗಿದ್ದು ಯಾವುದೇ ಅಡೆತಡೆಯಿಲ್ಲದಂತೆ ಸರಾಗವಾಗಿ ಮನೆಯ ಪ್ರವೇಶ ಸಾಧ್ಯವಾಗುವಂತಿರಬೇಕು. ಬಾಗಿಲಿನ ಎದುರು ಇರುವ ತಡೆಗಳು, ಅಡ್ದಾದಿಡ್ಡಿ ಬಿದ್ದಿರುವ ವಸ್ತುಗಳು ಮೊದಲಾದವು ಮನೆಯ ಅಂದವನ್ನು ಕುಂದಿಸುವುದು ಮಾತ್ರವಲ್ಲ ದುಷ್ಟಶಕ್ತಿಗಳಿಗೆ ಆಶ್ರಯತಾಣವೂ ಆಗುತ್ತವೆ.

English summary

Is Main Door Of Your House As Per Vastu

Energy is omnipresent and is present in various forms. This energy can be regulated in various ways. Architecture is one of the ways of regulating this energy. Considering Vastu rules while constructing your house, you can regulate to a great extent what kind of energy becomes predominant in the house.
Story first published: Friday, November 16, 2018, 17:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more