For Quick Alerts
ALLOW NOTIFICATIONS  
For Daily Alerts

ಸ್ವಚ್ಛವಾದ, ಕೀಟಾಣು ಮುಕ್ತ, ಥಳಥಳಿಸುವ ಸಿಂಕ್ ನಿಮ್ಮದಾಗಬೇಕೇ?

By Sindhushree Mahesh
|

ಮನೆಯೇ ಮಂತ್ರಾಲಯ ಅಂತಾರೆ. ಮನೆಯು ಶುಭ್ರವಾಗಿದ್ದರೆ ಮಾತ್ರ ನಮಗೆ ಸಂತೋಷ, ಆರೋಗ್ಯ,ಸ್ಪೂರ್ತಿ ಎಲ್ಲ. ಈಗೀಗ ಹೆಚ್ಚಿನ ಪ್ರಮುಖ ನಗರಗಳಲ್ಲಿ ಮನೆಗಳು ಮತ್ತು ಬಂಗಲೆಗಳು ಪ್ಲಾಟ್‌ಗಳು ಮತ್ತು ಅಪಾರ್ಟ್ ಮೆಂಟ್ ಗಳಿಗೆ ದಾರಿಮಾಡಿಕೊಟ್ಟಿದೆ. ಇದೇನೋ ಒಳ್ಳೆಯದೇ, ಈ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿರುವ ಸ್ಥಳಾವಕಾಶದ ಬಿಕ್ಕಟ್ಟಿಗೆ ಒಳ್ಳೆಯ ಮಾರ್ಗವೇನು ಹೌದು. ಆದರೆ ಅನಾನುಕೂಲದ ಬಗ್ಗೆ ಹೇಳುವುದಾದರೆ ಮನೆಯ ತ್ಯಾಜ್ಯ ಹೊರಗೆ ಹೋಗಲು ಸಾಮಾನ್ಯವಾಗಿ ಸಿಂಕುಗಳು ಏಕೈಕ ಪರಿಹಾರವಾಗಿರುತ್ತದೆ. ಅಡುಗೆ ಮಾಡಿದ ಪಾತ್ರೆಗಳನ್ನು ಸಿಂಕ್ ನಲ್ಲಿ ರಾಶಿ ಹಾಕುತ್ತಿರುತ್ತೇವೆ. ಅನೇಕ ಸಲ ಅದನ್ನು ಸ್ವಚ್ಛ ಗೊಳಿಸುವುದನ್ನು ಮರೆತುಬಿಡುತ್ತೇವೆ. ನಿಮ್ಮ ಸಿಂಕ್ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇದ್ದಾಗ ಮಾತ್ರ ಬ್ಯಾಕ್ಟೀರಿಯ ಸಿಂಕ್ ನೊಳಗೆ ಹರಡುವುದಿಲ್ಲ.

ಹೀಗಾಗಿ, ನೀವು ಅದನ್ನು ಸ್ವಚ್ಛಗೊಳಿಸದೆ ಇದ್ದಲ್ಲಿ ಇದು ಕೊಳಕು ಮತ್ತು ಬ್ಯಾಕ್ಟೀರಿಯಾದ ಉಗ್ರಾಣವಾಗಿ ಕೀಟಗಳು ಮತ್ತು ಸೂಕ್ಷ್ಮ ಜೀವಾಣುಗಳನ್ನು ಆಹ್ವಾನಿಸುತ್ತದೆ. ನಂತರ ಈ ಕೀಟಗಳು ಮನೆಯನ್ನು ಕಲುಷಿತಗೊಳಿಸುವದಷ್ಟೇ ಅಲ್ಲದೆ ಕುಟುಂಬದವರನೆಲ್ಲಾ( ಅದರಲ್ಲೂ ಚಿಕ್ಕಮಕ್ಕಳಿಗೆ ) ಹಲವಾರು ರೋಗಗಳಿಗೆ ತುತ್ತು ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹಾಳು ಮಾಡುತ್ತದೆ.

Hacks to clean your sink

ಆರೋಗ್ಯದ ದೃಷ್ಟಿಕೋನದಿಂದ ಮಾತ್ರವಲ್ಲ ಸಿಂಕ್ ಅಶುಭ್ರವಾಗಿದ್ದರೆ ಅಡುಗೆಮನೆ ನೋಟ ಕೂಡಾ ನೀರಸ ಮತ್ತು ಬೇಸರದ ವಾತಾವರಣವನ್ನು ಸೃಷ್ಟಿಸುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮಾಡ್ಯುಲರ್ ಕಿಚನ್ ಗಾಗಿ ನಾವು ಖರ್ಚು ಮಾಡಿದ ಹಣ ವ್ಯರ್ಥವಾಗುವುದೇ ವಿನಹಃ ಅಡುಗೆಮನೆ ಸೌಂದರ್ಯವಂತೂ ಹೆಚ್ಚುವುದಿಲ್ಲ ,ನೋಡಿದವರ ಮನಸೂರೆಗೊಳ್ಳುವದಿಲ್ಲ. ನೋಡುಗರ ಮನ ಸೆಳೆಯಲು ಬಹಳಷ್ಟು ಖರ್ಚು ಮಾಡಿ ನಿರ್ಮಿಸಿಕೊಳ್ಳುವ ಕನಸಿನ ಅಡುಗೆಮನೆಯನ್ನು ಸೋಂಕುಗಳು ಮತ್ತು ಸೂಕ್ಷ್ಮಾಣು ಜೀವಿಯ ಕ್ರಿಯೆಗಳಿಂದ ದೂರವಿರು ಸುವುದಕ್ಕಾಗಿ, ನಿಮ್ಮ ಕುಟುಂಬವನ್ನು ರೋಗ ಮುಕ್ತರನ್ನಾಗಿರಿಸಲು ನೀವು ಮಾಡಬೇಕಾದ ಮೊದಲ ಮತ್ತು ಅತಿ ಮುಖ್ಯ ಕೆಲಸವೆಂದರೆ ಸಿಂಕ್ ಅನ್ನು ಶುಚಿಗೊಳಿಸುವುದು. ನಮ್ಮ ಸಿಂಕ್ ಸ್ವಚ್ಛವಾಗಿದೆಯಾ? ಕೀಟಾಣು ರಹಿತವಾಗಿದೆಯಾ? ಸ್ವಚ್ಛತೆಗಾಗಿ ನಾವು ಅನುಸರಿಸುತ್ತಿರುವ ಕ್ರಮಗಳು ಉತ್ತಮವೇ? ಆ ಕ್ರಮಗಳಷ್ಟೇ ಸಾಕ ಅಥವಾ ಇನ್ನೇನಾದರೂ ಸಮರ್ಥ ಮತ್ತು ಸುಲಭ ಮಾರ್ಗಗಳಿದೆಯಾ?

ನೋಡೋಣ ಬನ್ನಿ .

ಸಿಂಕ್ ಸ್ವಚ್ಛತೆಗಾಗಿ ಪ್ರಪ್ರಥಮವಾಗಿ ಅನುಸರಿಸಬೇಕಾದ ವಿಧಾನ

ಒಂದು ಚಮಚ ಮತ್ತು ಫೋರ್ಕ್ ಮೊದಲುಗೊಂಡಂತೆ ಎಲ್ಲಾ ಕೊಳಕಾಗಿರುವ ಪಾತ್ರೆಗಳನ್ನು ಸಿಂಕಿ ನಿಂದ ದೂರ ತೆಗೆದಿಡಿ. ಸಿಂಕ್ ಅನ್ನು ಸದಾಕಾಲ ಉಪಯೋಗಿಸುತ್ತಿದ್ದ ಪಕ್ಷದಲ್ಲಿ, ನಿಮಗೆ ಅಲ್ಲಿ ಸಣ್ಣ ಸಣ್ಣ ಆಹಾರ ಕಣಗಳು ಕಂಡುಬರಬಹುದು. ನೀರಿನಿಂದ ಅದನ್ನೆಲ್ಲ ತೊಳೆಯಿರಿ. ಆಗಲೂ ಸ್ವಲ್ಪ ತುಣುಕುಗಳು ಅಲ್ಲೇ ಉಳಿದಿರುವ ಸಾಧ್ಯತೆಗಳಿವೆ. ಇಂತಹ ಸಮಯದಲ್ಲಿ ನೀವು ಗ್ಲೌಸ್ ಗಳನ್ನು ಹಾಕಿಕೊಂಡು ಅದನ್ನು ತೆಗೆದುಹಾಕಿ. ಒಟ್ಟಿನಲ್ಲಿ ಈ ಹಂತದ ಕೊನೆಯಲ್ಲಿ ಸಿಂಕ್ ನಲ್ಲಿ ಯಾವ ಆಹಾರ ಪದಾರ್ಥಗಳು ಸುತ್ತಮುತ್ತ ಉಳಿದುಕೊಂಡಿರಬಾರದು. ದಯವಿಟ್ಟು ಗಮನಿಸಿ ನೀವು ಉಪಯೋಗಿಸುತ್ತಿರುವ ಸಿಂಕ್ ಯಾವ ಬಗೆಯದ್ದಾರೂ ಆಗಿರಲಿ, ಎಲ್ಲಾದರೂ ಇರಲಿ, ಯಾವ ಶೈಲಿಯ ಅಡುಗೆ ಮನೆಯಾದರೂ ಆಗಿರಲಿ ಸಿಂಕ್ ಸ್ವಚ್ಛ ಮಾಡುವಾಗ ಮಾತ್ರ ಈ ವಿಧಾನವನ್ನು ಅನುಸರಿಸತಕ್ಕದ್ದು.

ಸ್ಟೇನ್ಲೆಸ್ ಸ್ಟೀಲ್ ಸಿಂಕಿಗಾಗಿ ಬೇಕಿಂಗ್ ಸೋಡಾ

ಇತ್ತೀಚೆಗೆ ಅಡುಗೆಮನೆಯ ಸಿಂಕ್ ಗಳು ಸ್ಟೇನ್ಲೆಸ್ ಸ್ಟೀಲ್ ನಿಂದ ಮಾಡಲ್ಪಟ್ಟಿರುತ್ತವೆ. ಇದರಿಂದ ಅನುಕೂಲವೇನೆಂದರೆ ಇದು ಬಹಳ ಬೇಗ ಗೀರು ಆಗುವುದಿಲ್ಲ ಮತ್ತು ಇಂತಹುದನ್ನು ಸ್ವಚ್ಛಗೊಳಿಸುವುದು ಬಹಳ ಸುಲಭ. ಈ ವಿಧಾನದಲ್ಲಿ ನೀವು ನಿಮ್ಮ ಸಿಂಕಿಗೆ ಬೇಕಿಂಗ್ ಸೋಡಾವನ್ನು ಎಲ್ಲಾಕಡೆ ಸಿಂಪಡಿಸಿ. ಆಮೇಲೆ 5 ನಿಮಿಷ ಹಾಗೆಯೇ ಬಿಡಿ. ನಂತರ ಮೃದುವಾದ ಸ್ಪಾಂಜ್ ತೆಗೆದುಕೊಂಡು ಸಿಂಕ್ ಅನ್ನು ಉಜ್ಜಿ. ಉಜ್ಜುವಾಗ ವೃತ್ತಾಕಾರದ ಚಲನೆಯನ್ನು ಅನುಸರಿಸಿ. ಬೇಕಿಂಗ್ ಸೋಡಾ ಒಂದು ಅದ್ಭುತ ಕ್ಲೀನಿಂಗ್ ಏಜೆಂಟ್. ಹಾಗಾಗಿ ಈ ಕೆಲಸ ಯಾವುದೇ ಗೀರು ಮತ್ತು ಗುರುತುಗಳು ಇಲ್ಲದ ಹಾಗೆ ಮಾಡುತ್ತದೆ. ಈ ಕ್ರಮವನ್ನು ನೀವು ಅನುಸರಿಸುವಾಗ ಮರೆಯದಂತೆ ಗ್ಲೌಸ್ ಗಳನ್ನು ಧರಿಸಿವುದು ಸೂಕ್ತ .

ಹಠಮಾರಿ ಕಲೆಗಳಿಗೆ ವಿನಿಗರ್

ನೀವೆಷ್ಟೇ ಕಷ್ಟಪಟ್ಟು ಪ್ರಯತ್ನಿಸಿದರೂ ಸಿಂಕ್‌ನಲ್ಲಿ ಕಲೆಗಳು ಬೇಗಲೋ ಅಥವಾ ತಡವಾಗಿಯೋ ಬಂದೇ ಬಿಡುತ್ತದೆ. ಇದು ಬಿಳಿ ಸೆರಾಮಿಕ್ ಸಿಂಕ್ ಗಳಿಗೂ ಅನ್ವಯಿಸುತ್ತದೆ. ಕಲೆಗಳು ಚೆಲ್ಲಿದ ಟೀ-ಕಾಫಿ ಅಥವಾ ಯಾವುದೇ ಆಹಾರ ಪದಾರ್ಥಗಳಿಂದ ಉಂಟಾಗಬಹುದು ಅಥವಾ ಕೇವಲ ಗಡಸು ನೀರಿನ ಪರಿಣಾಮವಾಗಿರಬಹುದು. ನಿಮ್ಮ ಪ್ರದೇಶದ ನೀರಿನಲ್ಲಿ ಆರ್ಸನಿಕ್ ಅಂಶವಿದ್ದರೆ ಕಲೆಗಳನ್ನು ಉಂಟುಮಾಡಲು ಅದಷ್ಟೇ ಸಾಕು. ವಿನಿಗರ್ ಉಪಯೋಗಿಸಿದಲ್ಲಿ ಇಂತಹ ಬಗ್ಗದ ಕಲೆಗಳಿಗೂ ಚಿಂತಿಸಬೇಕಾಗಿಲ್ಲ. ಆದುದರಿಂದ ವಿನಿಗರ್ ಹಾಕಿ ನಿಮ್ಮ ಸಿಂಕ್ ಅನ್ನು ತೊಳೆಯುವುದು ಬಹಳ ಮುಖ್ಯ. ಇದು ಕಲೆಗಳನ್ನು ನಿವಾರಿಸುವುದಷ್ಟೇ ಅಲ್ಲದೆ ಸೂಕ್ಷ್ಮಜೀವಿಗಳನ್ನೂ ತೊಡೆದುಹಾಕುತ್ತದೆ. ಇದು ಸೋಂಕು ನಿವಾರಕವೂ ಹೌದು. ಇದರ ನಂತರ ನೀವು ಸ್ಪಾಂಜ್‌ನ್ನೊಂದಿದೆ ಲಘುವಾಗಿ ಉಜ್ಜಿ ಆನಂತರ ಸಿಂಕ್ ಅನ್ನು ನೀರಿನಿಂದ ತೊಳೆಯಿರಿ. ಈಗ ನೀವು ಹೊಳೆಯುವ ಮತ್ತು ಶುಭ್ರವಾದ ಸಿಂಕ್ ನೋಡಿ ವಾಹ್!!! ಎನ್ನದೇ ಇರುವುದಿಲ್ಲ.

Hacks to clean your sink

ಆಹ್ಲಾದಕರ ಸುವಾಸನಾಭರಿತ ಸಿಂಕ್‌ಗಾಗಿ

ಕಿತ್ತಲೆ ಹಣ್ಣು ದೊರಕುವ ಕಾಲವಾದರೆ ಕಿತ್ತಳೆ ಹಣ್ಣಿನ ಸಿಪ್ಪೆ ಇಲ್ಲದಿದ್ದಲ್ಲಿ ಯಾವಾಗಲೂ ದೊರಕುವ ನಿಂಬೆ ಹಣ್ಣಿನ ಸಿಪ್ಪೆಯನ್ನು ಬಳಸಿ ಪೂರ್ತಿ ಸಿಂಕ್ ಅನ್ನು ಉಜ್ಜಿ. ಇದು ಎಲ್ಲಾ ಆಕಾರ,ಗಾತ್ರ ಹೊಂದಿರುವ ಮತ್ತು ಯಾವುದೇ ರೀತಿಯ ವಸ್ತುವಿನಿಂದ ತಯಾರಿಸಲ್ಪಟ್ಟಿರುವ ಸಿಂಕ್ ಗಳನ್ನು ಕೂಡ ತುಂಬಾ ಪರಿಣಾಮಕಾರಿಯಾಗಿ ಸ್ವಚ್ಛಮಾಡುತ್ತದೆ. ಈ ರೀತಿ ಕಿತ್ತಲೆ ಹಣ್ಣಿನ ಸಿಪ್ಪೆ ಅಥವಾ ನಿಂಬೆ ಹಣ್ಣಿನ ಸಿಪ್ಪೆಯನ್ನು ಬಳಸಿ ಉಜ್ಜುವುದರಿಂದ ಸಿಂಕ್ ನ ಹೊಳಪನ್ನು ಕಾಪಾಡಿಕೊಳ್ಳಬಹುದು ಮತ್ತು ಹೊಚ್ಚ ಹೊಸದಾಗಿ ಕಾಣುವ ಸಿಂಕ್ ಅನ್ನು ನಮ್ಮದಾಗಿಸಿಕೊಳ್ಳಬಹುದು. ಈ ಸಿಪ್ಪೆ ಗಳಲ್ಲಿರುವ ಸಿಟ್ರಸ್ ಅಂಶವು ಸಿಂಕ್ ಅನ್ನು ಘಮಘಮಿಸುವಲ್ಲಿ ಸಹಕಾರಿಯಾಗಿದೆ.

ಮೋರಿ/ ಡ್ರೈನ್ ವಾಸನೆಯನ್ನು ಉತ್ತಮಗೊಳಿಸಲು

ನಿಮ್ಮ ಸಿಂಕ್ ವಾಸ್ತವವಾಗಿ ಚರಂಡಿಗೆ ಪ್ರವೇಶ ದ್ವಾರ ವಾಗಿದ್ದರೆ, ನೀವು ಎಷ್ಟೇ ಕಷ್ಟಪಟ್ಟು ಸಿಂಕ್ ಅನ್ನು ಸ್ವಚ್ಛಗೊಳಿಸಿದರೂ ಈ ಚರಂಡಿಯ ಪರಿಣಾಮವಾಗಿ ಸಿಂಕ್ ನಿಂದ ಕೂಡಾ ಕೆಟ್ಟ ವಾಸನೆ ಬರುವ ಸಾಧ್ಯತೆಗಳಿರುತ್ತದೆ. ಹೀಗಾಗಿದ್ದಲ್ಲಿ ನೀವು ಪಟ್ಟ ಶ್ರಮವೆಲ್ಲ ವ್ಯರ್ಥವಾಗುತ್ತದೆ. ಆದುದರಿಂದ ಸಿಂಕ್ ಅನ್ನು ಸ್ವಚ್ಛಗೊಳಿಸಲು ಎಷ್ಟು ಪ್ರಾಮುಖ್ಯತೆ ಕೊಡುತ್ತೀರೋ ಅಷ್ಟೇ ಪ್ರಾಮುಖ್ಯತೆಯನ್ನು ಈ ಹೊರಹೋಗುವ ಡ್ರೈನ್ ವ್ಯವಸ್ಥೆ ಯನ್ನು ಸ್ವಚ್ಛ ಪಡಿಸಿಕೊಳ್ಳಲು ಕೂಡಾ ಅಷ್ಟೇ ಪ್ರಾಮುಖ್ಯತೆಯನ್ನು ಕೊಡಬೇಕು. 'Garbage disposal refreshing bomb' ಎಂಬ ಹೆಸರಿನಲ್ಲಿ ಸಿಂಕ್ ಒಳಗಡೆ ಹಾಕಲು ಸಿಗುವ ಅನೇಕ ರೀತಿಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನೀವು ಇದನ್ನು ಆಯ್ಕೆ ಮಾಡುವಾಗ ಆದಷ್ಟು ಸಿಟ್ರಸ್ ಸಾರವಿರುವ ಉತ್ಪನ್ನವನ್ನು ಖರೀದಿಸಿ ಇದು ಸಿಂಕ್ ಮೇಲೆ ದೀರ್ಘಾವಧಿಯ ಪ್ರಭಾವವನ್ನು ಬೀರುತ್ತದೆ.

ಈ ಎಲ್ಲಾ ಸ್ವಚ್ಛತಾ ಕ್ರಮಗಳು ದೀರ್ಘಕಾಲದವರೆಗೆ ಕಾರ್ಯ ಸಮರ್ಥತೆ ಹೊಂದಿರುವುದನ್ನು ಖಾತರಿಪಡಿಸಿಕೊಳ್ಳಿ

ವಾಸ್ತವಿಕವಾಗಿ ಹೇಳುವುದಾದರೆ, ಸಿಂಕ್ ಕ್ಲೀನ್ ಮಾಡಲು ಅನೇಕ ವಿಧಾನಗಳನ್ನು ಅನುಸರಿಸುವುದು ಎಲ್ಲರಿಗೂ ಕಷ್ಟವೇ. ಆದುದರಿಂದ ಸಿಂಕ್ ಅನ್ನು ತುಂಬಾ ದಿನಗಳಾದರೂ ಸ್ವಚ್ಛಗೊಳಿಸದೆ ತಡ ಮಾಡಿಕೊಂಡು ಸ್ವಚ್ಛಗೊಳಿಸುವ ಬದಲು, ಆಗಾಗ್ಗೆ ಕಡಿಮೆ ಅವಧಿಯ ಅಂತರದಲ್ಲಿ ಶುಭ್ರಗೊಳಿಸುವುದುರಿಂದ ಈ ಕೆಲಸ ಬಹಳ ಸುಲಭವೆನಿಸುತ್ತದೆ. ಸಿಂಕಿನ ಸ್ವಚ್ಛತೆಯನ್ನು ಬಹಳ ದಿನಗಳವರೆಗೆ ಉಳಿಸಿಕೊಳ್ಳಬೇಕಾದರೆ ಡಿಸ್ಪೋಸಬಲ್ ಪೇಪರ್ ಟವಲ್ ಗಳನ್ನು ಸಿಂಕಿನ ಒಳಗೆಲ್ಲಾ ಹರಡಿ ಸುಮಾರು ಒಂದು ಗಂಟೆಗಳ ವರೆಗೆ ಹಾಗೆಯೇ ಬಿಟ್ಟು ಬಿಡಿ. ಈ ಸಮಯದಲ್ಲಿ ಸಿಂಕ್ ಅನ್ನು ಉಪಯೋಗಿಸಬಾರದೆಂದು ಹೇಳುವ ಅವಶ್ಯಕತೆಯೇನಿಲ್ಲ. ನೀವೇನಾದರೂ ವಿಪರೀತ ಸ್ವಚ್ಛತೆಯ ಕಡೆ ಗಮನಹರಿಸುವರಾಗಿದ್ದರಾಗಲಿ ಅಥವಾ ಕೆಲವು ವಾರಗಳಾದರೂ ಸಿಂಕ್ ಅನ್ನು ಸ್ವಚ್ಛ ಮಾಡಲು ಇಚ್ಛಿಸದ ಆಲಸಿಗಳಾಗಿದ್ದರೂ ಸರಿ, ಕೆಲವು ಹನಿ ಆಲೀವ್ ಎಣ್ಣೆಯನ್ನು ಅದಕ್ಕೆ ಸೇರಿಸಬಹುದು. ಈ ರೀತಿ ಆಲಿವ್ ಎಣ್ಣೆಯನ್ನು ಪೇಪರ್ ಟವಲ್ ಗಳ ಮೇಲೆ ಸಿಂಪಡಿಸುವುದರಿಂದ ಹೊಳಪು ಮಾಸದೆ ಹೊಸದರಂತೆ ಉಳಿಯುತ್ತದೆ. ಅಷ್ಟೇ ಅಲ್ಲದೆ ಈ ಆಲಿವ್ ಎಣ್ಣೆ ಕೀಟಗಳು ಮತ್ತು ಸೂಕ್ಷ್ಮಜೀವಿಗಳನ್ನು ಮೈಲಿಗಳಷ್ಟು ದೂರದಲ್ಲಿ ಇಟ್ಟು ಆರೋಗ್ಯ ಕಾಪಾಡಿಕೊಳ್ಳುವುದರಲ್ಲಿ ಸಹಕರಿಸುತ್ತದೆ. ಈ ಲೇಖನದಲ್ಲಿ ನೀಡಿರುವ ಈ ವಿವರಣೆಗಳು ಸ್ವಚ್ಛವಾದ, ಕೀಟಾಣು ಮುಕ್ತ ,ಥಳಥಳಿಸುವ ಸಿಂಕ್ ಅನ್ನು ನಿಮ್ಮದಾಗಿಸಿಕೊಳ್ಳುವುದುರಲ್ಲಿ ಸಹಕರಿಸಿ, ಅಡುಗೆ ಮನೆಯಲ್ಲಿ ಆಹ್ಲಾದಕರ,ಉಲ್ಲಾಸಭರಿತ ವಾತಾವರಣವನ್ನು ಸೃಷ್ಟಿಸುವುದಷ್ಟೇ ಅಲ್ಲದೆ ಸೌಂದರ್ಯವನ್ನೂ ಹೆಚ್ಚಿಸುತ್ತದೆ ಎಂದು ಭಾವಿಸುತ್ತೇವೆ.

ಹ್ಯಾಪಿ ಕ್ಲೀನಿಂಗ್ !!!

English summary

Hacks to clean your sink

One of the most important part of the kitchen is the sink. Most of the time we dump all the cooked vessels into the sink and often forget to keep it clean. Your sink should be clean and neat so that the bacteria inside the sink cannot spread. Use baking soda for stainless steal sink for cleaning purpose. Using lemon peel or orange peel can clean your sink and have a good fragrance.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more