For Quick Alerts
ALLOW NOTIFICATIONS  
For Daily Alerts

ಕೋಣೆಯು ಸ್ವಚ್ಛವಾಗಿದ್ದರೆ ಆರೋಗ್ಯವೂ ಸುಧಾರಣೆಯಲ್ಲಿರುವುದು

|

ಮನೆ ಎಂದ ಮೇಲೆ ಅದು ಸ್ವಚ್ಛವಾಗಿ ಸುಂದರವಾಗಿ ಇರಬೇಕು. ಆಗಲೇ ಮನೆಯಲ್ಲಿ ಒಂದಿಷ್ಟು ಸಮಯ ಕಳೆಯಲು ಮನಸ್ಸಾಗುವುದು. ಹಾಗೊಮ್ಮೆ ಮನೆಯೊಳಗೆ ಹಾಗೂ ನಮ್ಮ ಕೋಣೆಯೊಳಗೆ ಒಂದಿಷ್ಟು ಕಸ ಹಾಗೂ ವಸ್ತುಗಳು ಚಲ್ಲಾಪಿಲ್ಲಿಯಾಗಿದ್ದರೆ ಮನಸ್ಸಿಗೂ ಒಂದು ಬಗೆಯ ಕಿರಿಕಿರಿ ಉಂಟಾಗುವುದು. ಮನೆಯಲ್ಲಿ ಕುಳಿತುಕೊಳ್ಳುವುದಕ್ಕೆ ಬದಲು ಹೊರಗೆ ಹೋಗೋಣ ಎನ್ನುವ ಮನಸ್ಸಾಗುತ್ತದೆ. ಮನೆಯಲ್ಲಿ ನಮ್ಮ ಮನಸ್ಸಿಗೆ ಇಷ್ಟವಾಗುವ ಸ್ಥಳ ಅಥವಾ ನಮ್ಮ ಅಗತ್ಯಗಳನ್ನು ಹೆಚ್ಚಾಗಿ ಪೂರೈಸಿಕೊಳ್ಳುವ ಪ್ರದೇಶ ಎಂದರೆ ಅದು ನಮ್ಮ ಕೋಣೆಯಾಗಿರುತ್ತದೆ. ವೈಯಕ್ತಿಕವಾಗಿ ನಮಗೆ ಒಂದಿಷ್ಟು ಸಾಂತ್ವಾನ ನೀಡುವುದು ನಮ್ಮ ಕೋಣೆ.

ನಮ್ಮ ಕೋಣೆಯಲ್ಲಿಯೇ ಮಲಗುವುದು, ಓದುವುದು, ಒಂದಿಷ್ಟು ವಿಶ್ರಾಂತಿ ಪಡೆಯುವುದು, ನಮ್ಮದು ಎನ್ನುವ ವೈಯಕ್ತಿಕ ವಸ್ತುಗಳನ್ನು ಇಟ್ಟುಕೊಳ್ಳುವುದು ಸಹ ನಮ್ಮ ಕೋಣೆಯಲ್ಲಿಯೇ ಆಗಿರುತ್ತದೆ. ನಮ್ಮ ಆತ್ಮೀಯ ಸ್ನೇಹಿತರೊಂದಿಗೆ ಹರಟೆ ಹೊಡೆಯುವುದು, ಸಣ್ಣ ಪುಟ್ಟ ತಿಂಡಿಗಳನ್ನು ತಿನ್ನುವುದು ಎಲ್ಲವೂ ನಮ್ಮ ಕೋಣೆಯೇ ಆಗಿರುತ್ತದೆ.

ಹಾಗಾಗಿ ಕೊಣೆಯ ಸ್ವಚ್ಛತೆ ಅತ್ಯಂತ ಪ್ರಮುಖವಾದದ್ದು. ಅಧಿಕ ಸಮಯ ಅಲ್ಲಿಯೇ ಕಳೆಯುವುದರಿಂದ ಆ ವಾತಾವರಣ ಆರೋಗ್ಯದಿಂದ ಕೂಡಿರಬೇಕಾಗುವುದು. ಕೆಲಸದ ಒತ್ತಡ ಹಾಗೂ ಕೆಲವು ಜಂಜಾಟದಲ್ಲಿ ಕೋಣೆಯ ಸ್ವಚ್ಛತೆಯು ತಲೆ ನೋವನ್ನುಂಟು ಮಾಡಬಹುದು. ಅದಕ್ಕಾಗಿಯೇ ಕೆಲವು ರೀತಿಯಲ್ಲಿ ಮನೆ ಹಾಗೂ ಕೋಣೆಯ ಸ್ವಚ್ಛತೆ ಕಾಯ್ದುಕೊಂಡರೆ ಕೋಣೆಯ ಸ್ವಚ್ಛತೆ ಸುಲಭವಾಗುತ್ತದೆ. ಅದು ಹೇಗೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಹಾಸಿಗೆಯನ್ನು ಸೂಕ್ತ ರೀತಿಯಲ್ಲಿಡಿ

ಹಾಸಿಗೆಯನ್ನು ಸೂಕ್ತ ರೀತಿಯಲ್ಲಿಡಿ

ಕೊಠಡಿಯನ್ನು ಶುಚಿಯಾಗಿಡುವಂತೆ ಮಾಡುವುದರಲ್ಲಿ ಬೆಡ್/ಹಾಸಿಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮುಂಜಾನೆ ಎದ್ದ ತಕ್ಷಣ ಅಂದರೆ ಬ್ರೆಶ್ ಮಾಡುವ ಮೊದಲೇ ಹಾಸಿಗೆ ವಸ್ತ್ರಗಳನ್ನು ಮಡಚಿಡಿ. ನಂತರ ಬೆಡ್‍ಗಳನ್ನು ಶುಚಿಯಾಗಿಡಿಸಿ. ಇದನ್ನು ನಿತ್ಯವೂ ಅನುಸರಿಸಿದರೆ ಬೆಡ್ ಶುಚಿಗೊಳಿಸುವುದು ಒಂದು ದೊಡ್ಡ ಕೆಲಸ ಎನಿಸದು. ನಿತ್ಯ ಎದ್ದ ತಕ್ಷಣ ಶುಚಿ ಮಾಡಿದರೆ ಅಷ್ಟು ಸಮಯವೂ ಬೇಕಾಗದು. ಹಾಸಿಗೆಯೂ ಹಾಗಾಗೆ ಬಿದ್ದಿದ್ದರೆ ಕೊಠಡಿಯು ಅಸಹ್ಯದಿಂದ ಕೂಡಿರುವುದು. ಜೊತೆಗೆ ಮಲಗುವ ಹಾಸಿಗೆಯಲ್ಲಿ ಒಂದಿಷ್ಟು ಧೂಳು ಮನೆಮಾಡುವುದು.

ಸೂಕ್ತ ಜಾಗದಲ್ಲಿಡಿ

ಸೂಕ್ತ ಜಾಗದಲ್ಲಿಡಿ

ಪ್ರತಿಯೊಂದು ವಸ್ತುವಿಗೂ ಒಂದು ನಿರ್ದಿಷ್ಟ ಜಾಗವನ್ನು ನಿರ್ಧರಿಸಿ. ನಿಮಗೆ ಅಗತ್ಯವಿದ್ದಾಗ ತೆಗೆದುಕೊಂಡು, ಕೆಲಸ ಮುಗಿದ ನಂತರ ಪುನಃ ಅದೇ ಸ್ಥಳದಲ್ಲಿ ಇಡಿ. ಬೇಕೆನಿಸಿದಾಗ ತೆಗೆದುಕೊಂಡು, ಹಾಗೆ ಬಿಸಾಡಿ ಹೋದರೆ ಅದನ್ನು ಸ್ವಚ್ಛಗೊಳಿಸಲು ಬೇರೆ ಸಮಯವನ್ನು ಮೀಸಲಿಡಬೇಕಾಗುತ್ತದೆ. ಜೊತೆಗೆ ಆ ವಸ್ತು ಹಾಳಾಗಬಹುದು. ಕೊಠಡಿಯನ್ನು ಅಸಹ್ಯವಾಗಿರುವಂತೆ ಮಾಡುವುದು. ದಣಿದು ರೂಮಿಗೆ ಬಂದಾಗ ಮನಸ್ಸಿಗೆ ಇನ್ನಷ್ಟು ಕಿರಿಕಿರಿ ಉಂಟಾಗುವುದು. ಪ್ರತಿಯೊಂದನ್ನೂ ನೀಟಾಗಿ ಎತ್ತಿ ಪುನಃ ಅಲ್ಲಿಯೇ ಇಟ್ಟರೆ ಅದೊಂದು ಶಿಸ್ತಿನ ಜೀವನ ನಿಮ್ಮದಾಗುತ್ತದೆ.

ಸೂಕ್ತ ವಸ್ತುಗಳನ್ನು ಖರೀದಿಸಿ

ಸೂಕ್ತ ವಸ್ತುಗಳನ್ನು ಖರೀದಿಸಿ

ಕೋಣೆ ಎಂದ ಮೇಲೆ ನಮ್ಮ ವೈಯಕ್ತಿಕ ಉಪಯೋಗಕ್ಕೆ ಬಳಸಿದ ವಸ್ತುಗಳು ಇರುತ್ತವೆ. ಅವುಗಳ ಬಳಕೆಯ ನಂತರ ಬೇಕೆಂದ ಹಾಗೆ ಬಿಸಾಡಬಾರದು. ಧರಿಸಿರುವ ಬಟ್ಟೆಯನ್ನು ತೆಗೆದು ಶುಚಿಗೊಳಿಸಲು ಸಮಯ ಬೇಕಾಗುವುದು. ಅಲ್ಲಿಯ ತನಕ ಎಲ್ಲೆಂದರಲ್ಲಿ ಎಸೆದಿಡಬಾರದು. ಬದಲಿಗೆ ಬಟ್ಟೆಯನ್ನು ಹಾಕಿಡಲು ಬೇಕಾದ ಟಬ್, ಬಾಸ್ಕೇಟ್ ಅಥವಾ ಸ್ಟ್ಯಾಂಡ್‍ಗಳನ್ನು ಖರೀದಿಸಿ. ಅದರಲ್ಲಿಯೇ ಇಡುವ ಪದ್ಧತಿಯನ್ನು ರೂಢಿಸಿಕೊಳ್ಳಿ. ಕಸವನ್ನು ಎಸೆಯಲು ಒಂದು ಡಸ್ಟ್‍ಬಿನ್ ಇಟ್ಟುಕೊಳ್ಳಲು ಮರೆಯದಿರಿ.

ಬೆಡ್ ಕೆಳಗೆ ಸ್ವಚ್ಛಗೊಳಿಸಿ

ಬೆಡ್ ಕೆಳಗೆ ಸ್ವಚ್ಛಗೊಳಿಸಿ

ಹಾಸಿಗೆಯ ಮೇಲೆ ಸ್ವಚ್ಛಗೊಳಿಸಿದ ಮಾತ್ರಕ್ಕೆ ಅಡಿಯಲ್ಲಿ ಧೂಳು ಇರುವುದಿಲ್ಲ ಎಂದು ಭಾವಿಸದಿರಿ. ಹಾಸಿಗೆಯ ಅಡಿಯಲ್ಲಿ ಜಿರಲೆ, ಇರುವೆ, ಜೇಡ ಸೇರಿದಂತೆ ಇನ್ನಿತರ ಕೀಟಗಳು ಮನೆ ಮಾಡುವ ಸಾಧ್ಯತೆಗಳಿರುತ್ತವೆ. ವಾರದಲ್ಲಿ ಒಮ್ಮೆ ಅಥವಾ ಸಾಧ್ಯವಾದರೆ ಮೂರು ದಿನಕ್ಕೊಮ್ಮೆ ಬೆಡ್ ಕೆಳಭಾಗದಲ್ಲೂ ಸ್ವಚ್ಛಗೊಳಿಸುವುದು ಮತ್ತು ಧೂಳು ತೆಗೆಯುವುದನ್ನು ಮರೆಯದಿರಿ.

ಕಸಬರಗೆ ದೂರವಿಡಿ

ಕಸಬರಗೆ ದೂರವಿಡಿ

ಕೊಠಡಿಯನ್ನು ಸ್ವಚ್ಛಗೊಳಿಸಿದ ನಂತರ, ಸ್ವಚ್ಛತೆಗೆ ಬಳಸಿದ ಪೊರಕೆ, ಬಟ್ಟೆ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಕೊಠಡಿಯ ಒಳಗೆ ಇಡದಿರಿ. ಅವುಗಳನ್ನು ಇಡಲು ಮನೆಯಿಂದ ಆಚೆ ಒಂದು ಸೂಕ್ತ ಸ್ಥಳವನ್ನು ನಿಗದಿ ಪಡಿಸಿಕೊಳ್ಳಿ.

ಆಹಾರ ವಸ್ತುಗಳನ್ನು ಇಡದಿರಿ

ಆಹಾರ ವಸ್ತುಗಳನ್ನು ಇಡದಿರಿ

ಕೋಣೆಯೊಳಗೆ ಕುಳಿತು ಆಹಾರ ಸೇವಿಸುವುದು, ಅಗತ್ಯವಿದ್ದಾಗ ತಿನ್ನಲು ಎಂದು ಹಣ್ಣುಗಳನ್ನು ಇರಿಸಿಕೊಳ್ಳುವ ಕಾರಣದಿಂದ ಕೋಣೆಯ ಸ್ವಚ್ಛತೆ ಹಾಳಾಗುವುದು. ತಿಂದ ಆಹಾರದ ಚೂರು ಅಲ್ಲಿಯೇ ಬೀಳಬಹುದು. ಬಿದ್ದ ಆಹಾರವನ್ನು ತಿನ್ನಲು ಇರುವೆ, ಜಿರಲೆ, ಹಲ್ಲಿಗಳು ಬರಬಹುದು. ಇಟ್ಟ ಹಣ್ಣುಗಳ ನೆನಪಿಲ್ಲದೆ ಕೊಳೆತು ವಾಸನೆ ಸೂಸುವುದು, ಕ್ರಿಮಿಗಳಾಗುವುದು. ಇವೆಲ್ಲವೂ ಕೊಠಡಿಯ ಸ್ವಚ್ಛತೆಯನ್ನು ಹಾಳುಮಾಡುತ್ತವೆ. ಹಾಗಾಗಿ ಈ ಕುರಿತು ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡರೆ ಅವುಗಳ ಸ್ವಚ್ಛತೆಗಾಗಿ ಸಮಯವನ್ನು ವ್ಯಯಿಸುವ ಅಗತ್ಯವಿರುವುದಿಲ್ಲ.

ಮ್ಯಾಟ್‍ಗಳನ್ನು ಬಳಸಿ

ಮ್ಯಾಟ್‍ಗಳನ್ನು ಬಳಸಿ

ಹಾಸಿಗೆಗೆ ಹೋಗುವ ಮುನ್ನ ಕಾಲನ್ನು ಒರೆಸಲು ಒಂದು ಮ್ಯಾಟ್ ಇಟ್ಟುಕೊಳ್ಳಿ. ಕಾಲನ್ನು ಶುಷ್ಕ ಗೊಳಿಸಿ ಮತ್ತು ಅದರಲ್ಲಿರುವ ಧೂಳನ್ನು ಮ್ಯಾಟ್‍ಗೆ ಒರೆಸುವುದರಿಂದ ಮಣ್ಣು ಮತ್ತು ಧೂಳು ಹಾಸಿಗೆಯನ್ನು ತಲುಪದು. ಜೊತೆಗೆ ಆ ಮ್ಯಾಟ್‍ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದನ್ನು ಮರೆಯಬಾರದು.

ಕಿಟಕಿಯನ್ನು ತೆರೆಯಿರಿ

ಕಿಟಕಿಯನ್ನು ತೆರೆಯಿರಿ

ಉದ್ಯೋಗಕ್ಕೆ ಹೋಗುವವರಿಗೆ ಮನೆಯ ಕಿಟಕಿಯನ್ನು ತೆರೆದಿಟ್ಟು ಹೋಗಲು ಸಾಧ್ಯವಾಗದು. ಆಕಾರಣಕ್ಕೆ ಹಾಗೇ ಮುಚ್ಚಿರುವುದು ಸಹಜ. ಮನೆಗೆ ಬಂದ ಮೇಲೆ, ಸ್ವಲ್ಪ ಸಮಯದ ಮಟ್ಟಿಗಾದರೂ ಕಿಟಕಿಯನ್ನು ತೆರೆಯಿರಿ. ಮನೆಯಲ್ಲಿ ಇರುವಷ್ಟು ಸಮಯ ಕಿಟಕಿಯನ್ನು ತೆರೆದಿಡಿ. ಶುದ್ಧವಾದ ಗಾಳಿ ಮನೆಯ ಒಳಗೆ ಪ್ರವೇಶ ಪಡೆಯುತ್ತದೆ. ರೋಗಾಣುಗಳ ಉತ್ಪತ್ತಿಯು ಕಡಿಮೆಯಾಗುವುದು.

ಹಾಸಿಗೆಯನ್ನು ಮಡಿಚಿ

ಹಾಸಿಗೆಯನ್ನು ಮಡಿಚಿ

ಎಲ್ಲಾ ಸಮಯದಲ್ಲೂ ಹಾಸಿಗೆ ತೆರೆದೆ ಇಡುವುದರಿಂದ ಧೂಳು ಕುಳಿತುಕೊಳ್ಳುತ್ತದೆ. ನಿದ್ರೆಯ ನಂತರ ಹಾಸಿಗೆಯನ್ನು ಮಡಿಚಿಡುವ ಪದ್ಧತಿಯನ್ನು ಅನುಸರಿಸಿ. ಇದರಿಂದ ಹಾಸಿಗೆಯೂ ಸ್ವಚ್ಛವಾಗಿ ಇರುತ್ತದೆ. ಆರೋಗ್ಯಕರ ನಿದ್ರೆಯನ್ನೂ ಪಡೆಯಬಹುದು.

ನೆಲವನ್ನು ಸ್ವಚ್ಛವಾಗಿರಿಸಿ

ನೆಲವನ್ನು ಸ್ವಚ್ಛವಾಗಿರಿಸಿ

ವಾರಕ್ಕೊಮ್ಮೆಯಾದರೂ ಕೋಣೆಯೊಳಗಿರುವ ಪೀಠೋಪಕರಣಗಳನ್ನು ಶುಚಿಗೊಳಿಸಲು ಮರೆಯದಿರಿ. ನಿತ್ಯ ನಿಮಗೆ ಬಿಡುವಾದ ಸಮಯದಲ್ಲಿ ಒಮ್ಮೆ ನೆಲವನ್ನು ಒರೆಸಲು ಮರೆಯದಿರಿ. ಇದರಿಂದ ಮನೆ ಹಾಗೂ ಕೊಠಡಿಯು ಶುಚಿಯಾಗಿ ಇರುವುದು.

English summary

Easy Cleaning Tricks To Keep Your Rooms Clean

Cleanliness, they say, is next to godliness. However, keeping your surroundings clean is not always easy. This is all the way true when we speak of the rooms within our houses. The reason for this may be attributed to the fact that often, we take it for granted that the place inside the house is one where dust and dirt do not get accumulated and hence it does not get dirty in the first place.
X
Desktop Bottom Promotion