For Quick Alerts
ALLOW NOTIFICATIONS  
For Daily Alerts

ಇಲಿಗಳನ್ನು ಸಾಯಿಸಲು ಇಲ್ಲಿದೆ ನೋಡಿ 14 ಸರಳ ಟಿಪ್ಸ್

By Sushma Charhra
|

ನಿಮಗೆ ವಿಷಯ ಗೊತ್ತಾ... ಇಲಿಗಳು ಸುಮಾರು 20 ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತದೆ. ಒಂದು ಪುಟ್ಟ ಇಲಿ ಕೂಡ ದೊಡ್ಡ ಕೆಟ್ಟ ಪರಿಣಾಮವನ್ನು ಮನುಷ್ಯನಿಗೆ ಮಾಡಬಲ್ಲದು.ಇವತ್ತು ನಾವು ಇಂತಹ ಇಲಿಗಳ ಕಾಟದಿಂದ ಬಳಲುತ್ತಿದ್ದೇವೆ ಮತ್ತು ಸಾಕಷ್ಟು ಹಾನಿಯನ್ನು ಕೂಡ ಈ ಪುಟ್ಟ ಇಲಿಗಳು ಮಾಡುತ್ತಲೇ ಇರುತ್ತದೆ. ಹಾಗಾಗಿ ಇಲಿಗಳನ್ನು ಸುಮ್ಮನೆ ಬಿಡುವ ಬದಲು ಸಾಯಿಸುವುದೇ ಮೇಲು.

ಕಾರಣವೇನೆಂದರೆ, ಅವುಗಳನ್ನು ಹಾಗೆಯೇ ಬಿಟ್ಟರೆ, ಮತ್ತೆ ಪುನಃ ಬರುತ್ತವೆ ಮತ್ತು ಅವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿ, ಕಾಯಿಲೆಗಳು ಹರಡುತ್ತವೆ . ಹಾಗಾಗಿ ಇಲ್ಲಿ ಕೆಲವು ನೈಸರ್ಗಿಕ ವಿಧಾನಗಳನ್ನು ಸೂಚಿಸಿದ್ದೇವೆ ಮತ್ತು ಆ ಮುಖಾಂತರ ಇಲಿಗಳನ್ನು ಸಾಯಿಸಬಹುದಾಗಿದೆ. ನೈಸರ್ಗಿಕ ವಿಧಾನಗಳನ್ನು ಬಳಸಲು ನೀವು ಸ್ವಲ್ಪ ಬುದ್ಧಿವಂತಿಕೆ ಬಳಸಬೇಕು ಅಷ್ಟೇ. .ಯಾಕೆಂದರೆ ಇಲಿಗಳು ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಬಹಳವಾಗಿ ಹೊಂದಿದೆ. ಮನೆಯಲ್ಲೆಲ್ಲ ಓಡಾಡಿ ಕಾಯಿಲೆಗೆ ಕಾರಣವಾಗುತ್ತದೆ. ಇಲಿಗಳನ್ನು ಸಾಯಿಸಲು ಇರುವ ನೈಸರ್ಗಿಕ ವಿಧಾನಗಳಲ್ಲಿ ಕೆಲವರು ಚೀಸ್ ನ್ನು ಬಳಸಿ ವಿಷ ಹಾಕುತ್ತಾರೆ.

ಇಲಿಗಳನ್ನು ಅಟ್ಯಾಕ್ ಮಾಡಲು ಅವುಗಳು ತಿನ್ನುವ ಆಹಾರಗಳಿಗೆ ವಿಷ ಹಾಕುವುದು ಒಂದು ಕ್ರಮವಾಗಿದೆ. ಆದರೆ ಈ ಹಳೆಯ ವಿಧಾನವು ಕೆಲವು ಈಗಿನ ಜನರೇಷನ್ನಿನವರಿಗೆ ಸ್ವಲ್ಪ ಮೆಸ್ಸಿ ಅನ್ನಿಸಬಹುದು. ಹಾಗಾಗಿ ಮನೆಯಿಂದ ಇಲಿಗಳನ್ನು ಒಡಿಸಲು ಕೆಲವು ಸುಲಭದ ಮಾರ್ಗೋಪಾಯಗಳಿವೆ. ಅವುಗಳು ಖಂಡಿತ ನಿಮ್ಮ ನೆರವಿಗೆ ಬರುತ್ತದೆ. ನೀವು ಮನೆಯಲ್ಲೇ ಬಳಸುವ ಕೆಲವು ಪದಾರ್ಥಗಳನ್ನು ಬಳಸಿ ನೈಸರ್ಗಿಕವಾಗಿ ಇಲಿಗಳನ್ನು ಸಾಯಿಸಬಹುದು. ಹಾಗಾದ್ರೆ ಆ ವಸ್ತುಗಳು ಯಾವುದು ಇಲ್ಲಿದೆ ನೋಡಿ ವಿವರ.

ಬೆಕ್ಕಿನ ಕಸಗಳು

ಬೆಕ್ಕಿನ ಕಸಗಳು

ಇಲಿಗಳನ್ನು ಓಡಿಸಲು ಇರುವ ಪ್ರಮುಖ ಮನೆಮದ್ದು ಎಂದರೆ ಅದು ಬೆಕ್ಕಿನ ಕಸಗಳು.. ಇಲಿಗಳು ಓಡಾಡುವ ಜಾಗದಲ್ಲಿ, ಅವುಗಳ ಗುಂಡಿಗಳಲ್ಲಿ ಬೆಕ್ಕಿನ ಕೂದಲು, ಮಲ ಇತ್ಯಾದಿಯನ್ನು ಎಸೆಯಿರಿ. ಬೆಕ್ಕಿನ ಭಯದಿಂದಾಗಿ, ಇಲಿಗಳು ಸುಳಿದಾಡುವುದೇ ಇಲ್ಲ.

ಪುದೀನಾ

ಪುದೀನಾ

ಇಲಿಗಳು ಪುದೀನಾ ವಾಸನೆಯನ್ನು ಸಹಿಸಿ ನಿಲ್ಲಲಾರವು. ನೀವು ನೈಸರ್ಗಿಕವಾಗಿ ಇಲಿಗಳನ್ನು ಸಾಯಿಸಬೇಕು ಎಂದುಕೊಂಡಿದ್ದರೆ, ಪುದೀನಾ ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿ ಮತ್ತು ಅದನ್ನು ಇಲಿಗಳು ಓಡಾಡುವ ಜಾಗದಲ್ಲಿ ಮತ್ತು ಅವುಗಳು ವಾಸಿಸುತ್ತಿರುವ ಗುಂಡಿಗಳಲ್ಲಿ ಇಟ್ಟುನೋಡಿ.. ಆ ವಾಸನೆಯು ಅವುಗಳ ಶ್ವಾಸಕೋಶವನ್ನು ಕುಗ್ಗಿಸುತ್ತದೆ ಮತ್ತು ಇಲಿಗಳು ಸತ್ತುಹೋಗುತ್ತವೆ.

ಬೆಕ್ಕು ಸಾಕಿ

ಬೆಕ್ಕು ಸಾಕಿ

ಅತೀ ಹಳೆಯ ಔಷಧಇ ಎಂದರೆ ನಿಮ್ಮ ಮನೆಯಲ್ಲಿ ಬೆಕ್ಕನ್ನು ಸಾಕುವುದು. ಇಲ್ಲಿ ಎಲ್ಲಿದೆ ಎಂಬುವುದು ಮುಖ್ಯವಲ್ಲ. ಅದೆಲ್ಲೇ ಅಡಗಿ ಕೂತರೂ ಹಿಡಿದು ಬೇಟೆಯಾಡುವ ಸಾಮರ್ಥ್ಯ ಬೆಕ್ಕಿಗಿದೆ.

ಮನುಷ್ಯರ ತಲೆಕೂದಲು

ಮನುಷ್ಯರ ತಲೆಕೂದಲು

ಮನುಷ್ಯನ ತಲೆಕೂದಲು ಬಿದ್ದಿರುವ ಜಾಗದಲ್ಲಿ ಇಲಿಗಳು ಸುಳಿದಾಡುವುದಿಲ್ಲ. ಇಲಿಗಳಿಗೆ ಕೂದಲು ಎಂದರೆ ಭಯ, ಅವುಗಳ ಪ್ರಕಾರ ಕೂದಲು ಅವುಗಳನ್ನು ಸಾಯಿಸುತ್ತವೆ ಎಂಬ ನಂಬಿಕೆ ಇದೆ. ಹಾಗಾಗಿ ಕೂದಲಿದ್ದರೆ ಇಲಿಗಳು ಇಲ್ಲ ಎಂದರ್ಥ.

ನ್ಯಾಪ್ತಲೀನ್ ಉಂಡೆಗಳು (ಹುಳಿನುಂಡೆಗಳು)

ನ್ಯಾಪ್ತಲೀನ್ ಉಂಡೆಗಳು (ಹುಳಿನುಂಡೆಗಳು)

ನೈಸರ್ಗಿಕವಾಗಿ ಇಲಿಗಳನ್ನು ಸಾಯಿಸಲು ಇರುವ ಮಾರ್ಗವೆಂದರೆ ಅದು ನ್ಯಾಪ್ತಲೀನ್ ಉಂಡೆಗಳು. ಈ ಸಣ್ಣ ಉಂಡೆಗಳು ಮನುಷ್ಯರಿಗೆ ಮಾತ್ರ ವಿಷಕಾಯಿಯಲ್ಲ ಬದಲಾಗಿ ಇಲಿಗಳಿಗೂ ಕೂಡ ವಿಷಕಾರಿಯಾಗಿರುತ್ತದೆ.

ಅಮೋನಿಯಾ

ಅಮೋನಿಯಾ

ನೈಸರ್ಗಿಕವಾಗಿ ಇಲಿಗಳನ್ನು ಸಾಯಿಸಲು ಇರುವ ಇನ್ನೊಂದು ವಿಧಾನವೆಂದರೆ ಅವುಗಳ ಬಿಲಗಳಿಗೆ ಅಮೋನಿಯಾವನ್ನು ಚುಮುಕಿಸಿ.ಇದರ ವಾಸನೆಗೆ ಇಲಿಗಳು ಸಾಯುತ್ತವೆ

ದನದ ಸಗಣಿ

ದನದ ಸಗಣಿ

ನೀವು ಇಲಿಗಳನ್ನು ನೈಸರ್ಗಿಕವಾಗಿ ಸಾಯಿಸುವುದು ಹೇಗೆ ಎಂದು ಯೋಚಿಸುತ್ತಿದ್ದರೆ ಖಂಡಿತ ದನದ ಸಗಣಿಯನ್ನು ಬಳಕೆ ಮಾಡಬಹುದು. ಒಂದು ವೇಳೆ ಇಲಿಗಳು ದನದ ಸಗಣಿಯನ್ನು ಸೇವಿಸಿದರೆ, ಅವುಗಳಿಗೆ ವಾಂತಿ ಶುರುವಾಗುತ್ತೆ ಮತ್ತು ಅತಿಯಾದ ವಾಂತಿಯಿಂದ ಇಲಿಗಳು ಸಾಯಲ್ಪಡುತ್ತದೆ.

ಬೆಕ್ಕಿನ ಮೂತ್ರ

ಬೆಕ್ಕಿನ ಮೂತ್ರ

ಬೆಕ್ಕಿನ ಮೂತ್ರವೂ ಕೂಡ ಇಲಿಗಳು ನೀರು ಕುಡಿಯುವ ಜಾಗದಲ್ಲಿ ಇಡಬೇಕು. ಇದರಿಂದಾಗಿ ಕೂಡ ನೈಸರ್ಗಿಕವಾಗಿ ನೀವು ಇಲಿಗಳನ್ನು ಸಾಯಿಸಬಹುದು. ಈ ವಾಸನೆಯು ಅವುಗಳಿಗೆ ಕುಡಿಯಬೇಕು ಎಂದು ಅನ್ನಿಸುತ್ತದೆ ಮತ್ತು ಬೆಕ್ಕಿನ ಮೂತ್ರ ಕುಡಿದರೆ ಇಲಿಗಳು ಜೀವಂತವಾಗಿ ಇರಲಾರವು .

ಗೂಬೆಯ ಗರಿಗಳು

ಗೂಬೆಯ ಗರಿಗಳು

ಪ್ಲಾಸ್ಟಿಕ್ ಹಾವುಗಳು ಕೂಡ ಇಲಿಗಳು ಬರದಂತೆ ತಡೆಯುತ್ತದೆ. ಅದೇ ರೀತಿ ಗೂಬೆಯ ಗರಿಗಳನ್ನು ಕೂಡ ನೀವು ಇಲಿಗಳು ಓಡಾಡುವ ಜಾಗದಲ್ಲಿ ಅಥವಾ ಅವುಗಳ ಬಿಲಗಳಿರುವಲ್ಲಿ ಇಡಬಹುದು.

ಶಬ್ದಗಳು ಅವುಗಳನ್ನು ನೋಯಿಸುತ್ತೆ

ಶಬ್ದಗಳು ಅವುಗಳನ್ನು ನೋಯಿಸುತ್ತೆ

ಶಬ್ದಗಳು ಇಲಿಗಳಿಗೆ ಕಿರಿಕಿರಿ ಉಂಟು ಮಾಡುತ್ತದೆ. ಅಷ್ಟೇ ಅಲ್ಲ ಇಲಿಗಳ ಕಿವಿಯಲ್ಲಿ ರಕ್ತಸ್ರಾವಕ್ಕೂ ಕಾರಣವಾಗುತ್ತದೆ. ಹಾಗಾಗಿ ಅಲೆಗಳು ಜೋರಾಗಿ ಇರುವ ಸೌಂಡ್ ಬಾಕ್ಸ್ ನ್ನು ಬಳಸಿ ಇಲಿಗಳನ್ನು ನೈಸರ್ಗಿಕವಾಗಿ ಸಾಯಿಸಬಹುದು. ಇದೂ ಕೂಡ ಮನೆಮದ್ದನ್ನೇ ಬಳಸಿ ಇಲಿಗಳನ್ನು ಸಾಯಿಸುವ ಒಂದು ವಿಧಾನವಾಗಿದೆ.

ಕಾಳುಮೆಣಸು

ಕಾಳುಮೆಣಸು

ಕಾಳುಮೆಣಸಿನ ಪುಡಿಯನ್ನು ಇಲಿಗಳ ಬಿಲಗಳಿಗೆ ಚಿಮುಕಿಸಿ. ಇದರ ವಾಸನೆಯು ಇಲಿಗಳ ಶ್ವಾಸಕೋಶದ ಮೇಲೆ ಪರಿಣಾಮ ಬೀರಿ ಇಲಿಗಳು ಸಾಯುವಂತೆ ಮಾಡುತ್ತದೆ.

ಲವಂಗದ ಎಲೆಗಳು

ಲವಂಗದ ಎಲೆಗಳು

ಇಲಿಗಳು ಲವಂಗದ ಎಲೆಗಳನ್ನು ತಮ್ಮ ಆಹಾರ ಎಂದು ಸೇವಿಸುತ್ತವೆ. ನೈಸರ್ಗಿಕವಾಗಿ ಇಲಿಗಳನ್ನು ಸಾಯಿಸಲು, ಈ ಎಲೆಗಳನ್ನು ಅವುಗಳ ಬಿಲಗಳಲ್ಲಿ ಇಡಬಹುದು. ಆದರೆ ಇದು ಇಲಿಗಳನ್ನು ಸಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಈರುಳ್ಳಿ

ಈರುಳ್ಳಿ

ಈರುಳ್ಳಿ ಬಳಕೆ ಮಾಡುವುದು ಮತ್ತೊಂದು ಪ್ರಮುಖ ವಿಧಾನಗಳಲ್ಲಿ ಒಂದೆನಿಸಿದೆ. ನೀವು ಮಾಡಬೇಕಾಗಿರುವುದು ಇಷ್ಟೇ.. ಈರುಳ್ಳಿಯನ್ನು ಕತ್ತರಿಸಿ ಅವುಗಳ ಬಿಲಗಳಿಗೆ ಹಾಕಿ.ಇದು ಕೂಡ ನೈಸರ್ಗಿಕ ವಿಧಾನಗಳಲ್ಲಿ ಒಂದಾಗಿದೆ.

ಮಕ್ಕಳ ಪೌಡರ್

ಮಕ್ಕಳ ಪೌಡರ್

ಮಕ್ಕಳ ಪೌಡರ್ ಇಲಿಗಳಿಗೆ ಉಸಿರುಗಟ್ಟಿಸುತ್ತೆ ಮತ್ತು ಅವುಗಳ ಸಾಯಲು ಕಾರಣವಾಗುತ್ತದೆ.. ಈ ಎಲ್ಲಾ ವಿಧಾನಗಳು ಇಲಿಗಳ ಜೀವಕ್ಕೆ ಕುತ್ತು ತರುವುದು ಗ್ಯಾರೆಂಟಿ ಮತ್ತು ಹೀಗೆ ಮಾಡುವುದು ಯಾರಿಗೂ ಕೂಡ ಪ್ರಯಾಸದ ಕೆಲಸವೂ ಅಲ್ಲ, ದುಬಾರಿಯೂ ಅಲ್ಲ.

English summary

14 Ways To Kill Rats Naturally

Did you know that mice carry over 20 types of diseases which is harmful to the human body. Today, there are many people who have become vicious towards these little rodents who can harm our life. It is best to kill a rat than to let it go.
X
Desktop Bottom Promotion