For Quick Alerts
ALLOW NOTIFICATIONS  
For Daily Alerts

ಬಾತ್ ರೂಮ್ ಸ್ವಚ್ಛತೆ ಹೀಗಿರಲಿ, ಹತ್ತು ಮಂದಿಯ ಮನ ಮೆಚ್ಚುವಂತಿರಲಿ!

By Jaya Subramanya
|

ನಿಮ್ಮ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದರ ಜೊತೆಗೆ ಮನೆಯ ಬಚ್ಚಲು ಮನೆ ಮತ್ತು ಶೌಚಾಲಯವನ್ನು ನೀವು ಸ್ವಚ್ಛವಾಗಿಟ್ಟುಕೊಳ್ಳಬೇಕು. ಏಕೆಂದರೆ ಇವೆರಡೂ ಸ್ಥಳಗಳು ಸ್ವಚ್ಛವಾಗಿದ್ದರೆ ನಿಮ್ಮ ಮನೆಯಲ್ಲಿರುವವರ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ಮನೆಗೆ ಬಂದವರೂ ಕೂಡ ನಿಮ್ಮನ್ನು ಪ್ರಶಂಸಿಸುತ್ತಾರೆ. ಹೆಚ್ಚಿನ ಮನೆಗಳಲ್ಲಿ ಬಚ್ಚಲು ಮತ್ತು ಶೌಚಾಲಯದ ನಿರ್ಮಾಣಕ್ಕೆ ಸ್ವಚ್ಛತೆಗೆ ಹೆಚ್ಚಿನ ಗಮನವನ್ನು ನೀಡುತ್ತಾರೆ. ಕೀಟಾಣುಗಳು, ಸೂಕ್ಷ್ಣ್ಮಾಣು ಜೀವಿಗಳು ಈ ಭಾಗದಿಂದಲೇ ಕೂಡಲೇ ಉತ್ಪಾದನೆಯಾಗುವುದರಿಂದ ನೀವು ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕಾಗುತ್ತದೆ. ನಿತ್ಯವೂ ಬಚ್ಚಲಿನ ಸ್ವಚ್ಛತೆ ನಿಮ್ಮಿಂದ ಸಾಧ್ಯವಿಲ್ಲ ಎಂದಾದಲ್ಲಿ ವಾರಕ್ಕೊಮ್ಮೆಯಾದರೂ ಈ ಭಾಗವನ್ನು ನೀವು ಸ್ವಚ್ಛಗೊಳಿಸಲೇಬೇಕು.

ಬಚ್ಚಲು ಮನೆಯ ಸ್ವಚ್ಛತೆಗೆ ನೀವು ಆದ್ಯತೆ ನೀಡುತ್ತೀರಿ ಎಂದಾದಲ್ಲಿ ಕೆಲವೊಂದು ಅಂಶಗಳನ್ನು ನೀವು ಗಮನದಲ್ಲಿಟ್ಟುಕೊಂಡು ಈ ಭಾಗದ ಸ್ವಚ್ಛತೆಯನ್ನು ಮಾಡಿ. ನಿಮ್ಮ ಮನೆಯ ಸ್ವಚ್ಛತೆ ಆರಂಭಗೊಳ್ಳುವುದೇ ಬಚ್ಚಲಿನಿಂದ ಎಂಬುದನ್ನು ಮಾತ್ರ ಮರೆಯದಿರಿ. ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೀವು ಬಚ್ಚಲಿನ ಸ್ವಚ್ಛತೆಯನ್ನು ಮಾಡಿದರೆ ನಿಮ್ಮ ಬಚ್ಚಲು ಹೊಳೆಯುವುದು ಖಂಡಿತ. ಮತ್ತು ನಿಮಗೂ ಪ್ರಶಂಸೆ ಲಭಿಸುವುದು. ಹಾಗಿದ್ದರೆ ಬನ್ನಿ ಆ ಅಂಶಗಳೇನು ಎಂಬುದನ್ನು ಇಲ್ಲಿ ನೋಡೋಣ...

ಕಸದ ಡಬ್ಬಿ ಸ್ವಚ್ಛವಾಗಿರಲಿ

ಕಸದ ಡಬ್ಬಿ ಸ್ವಚ್ಛವಾಗಿರಲಿ

ನಿಮ್ಮ ಬಚ್ಚಲಿನಲ್ಲಿ ನೀವು ಕಸದ ಡಬ್ಬಿಯನ್ನು ಇರಿಸುತ್ತೀರಿ ಎಂದಾದಲ್ಲಿ ಅದನ್ನು ನಿತ್ಯವೂ ಸ್ವಚ್ಛಮಾಡಿ. ಕಸ ತುಂಬಿ ತುಳುಕಾಡುವವರೆಗೆ ಕಾಯಬೇಡಿ. ಏಕೆಂದರೆ ಸ್ವಲ್ಪ ಚೆಲ್ಲಿದ ಕಸ ಕೂಡ ನಿಮ್ಮ ಬಚ್ಚಲನ್ನು ಅಸಹ್ಯದ ತಾಣವನ್ನಾಗಿಸಬಹುದು. ಆದ್ದರಿಂದ ಈ ನಿಟ್ಟಿನಲ್ಲಿ ಗಮನ ಹರಿಸಿ.

ಎಕ್ಸಾಸ್ಟ್ ಫ್ಯಾನ್ ಆನ್‌ನಲ್ಲಿಡಿ

ಎಕ್ಸಾಸ್ಟ್ ಫ್ಯಾನ್ ಆನ್‌ನಲ್ಲಿಡಿ

ನಿಮ್ಮ ಬಚ್ಚಲನ್ನು ಸ್ವಚ್ಛ ಮತ್ತು ವಾಸನೆರಹಿತವನ್ನಾಗಿ ಇರಿಸಬೇಕು ಎಂದಾದಲ್ಲಿ ಇಲ್ಲಿರುವ ಎಕ್ಸಾಸ್ಟ್ ಫ್ಯಾನ್ ಅನ್ನು ಯಾವಾಗಲೂ ಆನ್ ಮಾಡಿರಿ. ಮನೆಯಿಂದ ಹೊರಹೋಗುವ ಮುನ್ನ ಇದನ್ನು ಆಫ್ ಮಾಡಲು ಮರೆಯದಿರಿ.

ಹೆಚ್ಚಿನ ಕೆಲಸಗಳನ್ನು ನಿರ್ವಹಿಸಿ

ಹೆಚ್ಚಿನ ಕೆಲಸಗಳನ್ನು ನಿರ್ವಹಿಸಿ

ನೀವು ಬ್ರಶ್ ಮಾಡಿಕೊಂಡಿರುವಾಗಲೇ ಬಚ್ಚಲಿನ ಕೆಲವೊಂದು ಕೆಲಸಗಳನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ. ಬಚ್ಚಲಿನ ಸಿಂಕ್ ಅನ್ನು ಸ್ವಚ್ಛಮಾಡಿ. ಇದರಿಂದ ಹಲ್ಲುಜ್ಜಿದ ನಂತರ ಉಂಟಾಗುವ ಕೊಳಕು ನಿವಾರಣೆಯಾಗುತ್ತದೆ. ನಂತರ ಸಿಂಕ್ ಅನ್ನು ಚೆನ್ನಾಗಿ ನೀರು ಹರಿಸಿ ತೊಳೆದುಕೊಳ್ಳಿ. ಇದರಿಂದ ಮುಂಜಾನೆಯೇ ನಿಮ್ಮ ಬಚ್ಚಲಿನ ಸಿಂಕ್ ಅನ್ನು ನಳನಳಿಸುವಂತೆ ಇರಿಸಿಕೊಳ್ಳಬಹುದು.

ಬಚ್ಚಲಿನ ಗೋಡೆಗಳನ್ನು ತೊಳೆಯಲು ಮರೆಯದಿರಿ

ಬಚ್ಚಲಿನ ಗೋಡೆಗಳನ್ನು ತೊಳೆಯಲು ಮರೆಯದಿರಿ

ಸ್ನಾನವಾದ ನಂತರ ಬಚ್ಚಲಿನ ಗೋಡೆಗಳನ್ನು ತೊಳೆಯಲು ಮರೆಯದಿರಿ. ನೀರು ಮತ್ತು ವಿನೇಗರ್ ಅನ್ನು ಬಳಸಿಕೊಂಡು ಗೋಡೆಗಳ ಸ್ವಚ್ಛತೆಯನ್ನು ನಿಮಗೆ ಮಾಡಬಹುದಾಗಿದೆ. ಇದರಿಂದ ನಿಮ್ಮ ಸಮಯ ಕೂಡ ಉಳಿತಾಯವಾಗುತ್ತದೆ.

ನಿಮ್ಮ ಶವರ್ ಹೆಡ್ ಸ್ವಚ್ಛತೆ ಮರೆಯದಿರಿ

ನಿಮ್ಮ ಶವರ್ ಹೆಡ್ ಸ್ವಚ್ಛತೆ ಮರೆಯದಿರಿ

ಮಲಗುವ ಮುಂಚೆ, ನಿಮ್ಮ ಶವರ್‌ ಹೆಡ್ ಅನ್ನು ವಿನೇಗರ್‌ನಲ್ಲಿ ಮುಳುಗಿಸಿಡಿ. ಮರುದಿನ ಬೆಳಗ್ಗೆ ಇದನ್ನು ಹೊಳೆಯುತ್ತಿರುತ್ತದೆ.

ಬೋರಕ್ಸ್ ಮತ್ತು ವಿನೇಗರ್ ಮಿಶ್ರಣದಿಂದ ಸ್ವಚ್ಛಮಾಡಿ

ಬೋರಕ್ಸ್ ಮತ್ತು ವಿನೇಗರ್ ಮಿಶ್ರಣದಿಂದ ಸ್ವಚ್ಛಮಾಡಿ

ನಿಮ್ಮ ಟಾಯ್ಲೆಟ್‌ನಲ್ಲಿ ಕಲೆಗಳಿವೆಯೇ? ಹಾಗಿದ್ದರೆ ಇಲ್ಲಿದೆ ನೋಡಿ ಈ ಕಲೆಗಳನ್ನು ಹೋಗಲಾಡಿಸುವ ಉತ್ತಮ ವಿಧಾನ. ಮೂರು ಕಪ್‌ಗಳಷ್ಟು ವಿನೇಗರ್ ಅನ್ನು ನಿಮ್ಮ ಟಾಯ್ಲೆಟ್‌ಗೆ ಹಾಕಿ. ಸೆಕೆಂಡ್‌ಗಳ ಕಾಲ ಕಾಯಿರಿ ನಂತರ ಟಾಯ್ಲೆಟ್ ಬ್ರಶ್ ಬಳಸಿಕೊಂಡು ಕಲೆಗಳನ್ನು ತೊಳೆಯಿರಿ. ನಂತರ ಬೋರಕ್ಸ್ ಪೌಡರ್ ಸಿಂಪಡಿಸಿ ಮೂವತ್ತು ನಿಮಿಷ ಕಾಯಿರಿ. ಕೊನೆಗೆ ಫ್ಲಶ್ ಮಾಡಿ. ಎಲ್ಲಾ ಕಲೆಗಳು ಮಾಯವಾಗುತ್ತವೆ.

ನಿಮ್ಮ ಬಚ್ಚಲಿನಲ್ಲಿ ಬಟ್ಟೆಗಳನ್ನಿಡಲು ಸ್ಥಳ ಮಾಡಿ

ನಿಮ್ಮ ಬಚ್ಚಲಿನಲ್ಲಿ ಬಟ್ಟೆಗಳನ್ನಿಡಲು ಸ್ಥಳ ಮಾಡಿ

ಬಚ್ಚಲಿನ ನೆಲದಲ್ಲಿ ಬಟ್ಟೆಗಳನ್ನಿಡುವ ಅಭ್ಯಾಸವನ್ನು ಕೆಲವರು ಮಾಡುತ್ತಾರೆ. ಇದರಿಂದ ಸಂಪೂರ್ಣ ಬಚ್ಚಲು ಕೊಳಕು ಮತ್ತು ಅಸ್ತವ್ಯಸ್ಥಗೊಳ್ಳಬಹುದು. ಆದ್ದರಿಂದ ನಿಮ್ಮ ಬಚ್ಚಲಿನಲ್ಲಿ ಬಟ್ಟೆಗಳನ್ನಿಡಲು ಶೆಲ್ಫ್‌ನಂತೆ ಸಿದ್ಧಪಡಿಸಿಕೊಳ್ಳಿ. ಇದರಿಂದ ಬಟ್ಟೆಗಳಿಂದ ಹರಡಿರುವ ಬಚ್ಚಲು ನಿಮ್ಮದಾಗಿರುವುದಿಲ್ಲ.

ನಿಮ್ಮ ಟಬ್‌ಗಾಗಿ ಬಾತ್‌ರೂಮ್ ಸ್ಕ್ವೀಜ್ ಬಳಸಿ

ನಿಮ್ಮ ಟಬ್‌ಗಾಗಿ ಬಾತ್‌ರೂಮ್ ಸ್ಕ್ವೀಜ್ ಬಳಸಿ

ನಿಮ್ಮ ಟಬ್ ಅನ್ನು ಸ್ಕ್ವೀಜ್‌ನಿಂದ ಸ್ವಚ್ಛಮಾಡಿ. ಈ ಅಭ್ಯಾಸವನ್ನು ನಿತ್ಯವೂ ರೂಢಿಸಿಕೊಳ್ಳುವುದರಿಂದ ಟಬ್‌ನಲ್ಲಿ ಕೊಳಕು ಸಂಗ್ರಹವಾಗುವುದಿಲ್ಲ. ಸ್ಕ್ವೀಜ್ ಅನ್ನು ಶವರ್ ಗ್ಲಾಸ್ ವಾಲ್‌ ಮತ್ತು ಬಾಗಿಲಿಗೂ ನೀವು ಬಳಸಬಹುದು. ಇದರಿಂದ ಕ್ಯಾಲ್ಶಿಯಂ ನಿಲುಗಡೆ ಮತ್ತು ನೀರಿನ ಕಲೆಗಳನ್ನು ಹೋಗಲಾಡಿಸಬಹುದು.

ಅಡುಗೆ ಸೋಡಾ

ಅಡುಗೆ ಸೋಡಾ

ಅಡುಗೆ ಸೋಡಾವನ್ನು ಬಟ್ಟೆ ಅಥವಾ ಸ್ಪಾ೦ಜ್ ಒ೦ದರ ಮೇಲೆ ಹಾಗೂ ಟೈಲ್ಸ್ ಗಳಲ್ಲಿರುವ ಕಲೆಗಳ ಮೇಲೆ ಚಿಮುಕಿಸಿರಿ. ಅದೇ ಬಟ್ಟೆ ಅಥವಾ ಸ್ಪಾ೦ಜ್ ನಿ೦ದ ಬಾತ್ ರುಮ್ ಟೈಲ್ಸ್‌ಗಳನ್ನು ತೊಳೆದು ಅವುಗಳನ್ನು ನೀರಿನಿ೦ದ ತೊಳೆದು ಬಿಡಿರಿ. ಅಡುಗೆ ಸೋಡಾವನ್ನು ನೀರಿನೊಡನೆ ಮಿಶ್ರಗೊಳಿಸುವುದರ ಮೂಲಕ ನೀವು ಅಡುಗೆ ಸೋಡಾದ ಪೇಸ್ಟ್ ಅನ್ನೂ ಕೂಡ ತಯಾರಿಸಿಕೊಳ್ಳಬಹುದು ಹಾಗೂ ಇದನ್ನು ಸ್ನಾನದ ಟಬ್‌ನ ಕೊಳಕನ್ನು ನಿವಾರಿಸಲು ಬಳಸಬಹುದು.

English summary

How To Keep Bathroom Clean All The Time

We all love to enter into a fresh and clean bathroom in our house, don't we? However, this cleanliness is not a magic. You need to develop the habit of cleaning your bathroom every day. No matter whether you are running out of time or whatever excuse you have, when it comes to keeping your bathroom clean, you must keep a few important points in your mind. It is said that health is where cleanliness is and it starts with your bathroom itself. Following are a few habits that you must include in your daily routine to keep your bathroom sparkling and glowing at all times, take a look...
X
Desktop Bottom Promotion