ಅಡುಗೆ ಮನೆಯ ಸ್ವಚ್ಛತೆ ನಾಲ್ಕು ಮಂದಿ ಮೆಚ್ಚುವಂತಿರಲಿ!

By: Jaya subramanya
Subscribe to Boldsky

ಮನೆಯು ಸುಂದರವಾಗಿ ಕಾಣಬೇಕು ಎಂದಾದಲ್ಲಿ ಅಲ್ಲಿರುವ ಪ್ರತಿಯೊಂದು ವಸ್ತು ಕೂಡ ವ್ಯವಸ್ಥಿತವಾಗಿ ಇರಬೇಕು. ಯಾವುದೇ ಕೋಣೆ ಇರಲಿ ಅಲ್ಲಿ ಸ್ವಚ್ಛತೆ ಅಗತ್ಯವಾಗಿ ಇರಲೇಬೇಕು. ಹಾಗಿದ್ದರೆ ಮನೆಯ ಪ್ರಧಾನ ಕೇಂದ್ರ ಬಿಂದುವಾದ ಅಡುಗೆ ಮನೆಯನ್ನಂತೂ ನೀವು ಇನ್ನಷ್ಟು ಶುದ್ಧವಾಗಿರಿಸಬೇಕು ಅಲ್ಲವೇ? ಮನೆಯವರ ಅಗತ್ಯಗಳನ್ನು ಪೂರೈಸುವ ಪಾಕಶಾಲೆಯ ಸ್ವಚ್ಛತೆಯನ್ನು ಇನ್ನಷ್ಟು ಪರಿಪೂರ್ಣವಾಗಿ ಮಾಡಬೇಕು ತಾನೇ? ಅಡುಗೆಯ ಬಳಿಕ, ಮನೆ ಸಾಮಗ್ರಿಗಳ ಸ್ವಚ್ಛತೆ ಹೀಗಿರಲಿ

ಹಾಗಿದ್ದರೆ ಇಂದಿನ ಲೇಖನದಲ್ಲಿ ಅಡುಗೆ ಮನೆಯ ಸ್ವಚ್ಛತೆಯ ಕುರಿತು ನೀವು ಗಮನಿಸಬೇಕಾದ ಅಂಶಗಳೇನು ಎಂಬುದನ್ನು ತಿಳಿಸುತ್ತಿದ್ದೇವೆ. ಬರಿಯ ಅಡುಗೆ ಕಟ್ಟೆಯನ್ನು ಶುಚಿ ಮಾಡುವುದಲ್ಲದೆ ಅಡುಗೆ ಮನೆಯಲ್ಲಿ ಯಾವುದೆಲ್ಲಾ ವಸ್ತುಗಳನ್ನು ಸ್ವಚ್ಛವಾಗಿರಿಸಬೇಕು ಎಂಬ ಕಿವಿಮಾತನ್ನು ಇಲ್ಲಿ ತಿಳಿಸುತ್ತಿದ್ದೇವೆ. 

kitchen cleaning women
 

ಅಡುಗೆ ಕಟ್ಟೆಯನ್ನು ಸ್ವಚ್ಛ ಮಾಡುವುದು

ನಿಮ್ಮ ಅಡುಗೆ ಮನೆಯ ಕೆಲಸಗಳನ್ನು ಮುಗಿಸಿದ ನಂತರ ಅಡುಗೆ ಕಟ್ಟೆಯನ್ನು ಸ್ವಚ್ಛಮಾಡಿ. ಇದಕ್ಕಾಗಿ ಮೃದುವಾದ ಬಟ್ಟೆ ಮತ್ತು ಮನೆಯಲ್ಲೇ ತಯಾರಿಸಿದ ಡಿಟರ್ಜೆಂಟ್ ಅನ್ನು ಬಳಸಿ ಲಿಂಬೆ ರಸವು ದುರ್ಗಂಧವನ್ನು ಹೋಗಲಾಡಿಸುತ್ತದೆ ಮತ್ತು ಅಡುಗೆ ಕಟ್ಟೆಯ ಕಲೆಗಳನ್ನು ನಿವಾರಿಸುತ್ತದೆ.   ಅಡುಗೆ ಸೋಡಾದಿಂದ ಅಡುಗೆ ಮನೆ ಸಿಂಕ್ ಶುಚಿಗೊಳಿಸುವುದು

ಗ್ಯಾಸ್ ಸ್ಟವ್‌ನ ಸ್ವಚ್ಛತೆ

ಪ್ರತೀ ದಿನವೂ ಗ್ಯಾಸ್ ಸ್ಟವ್ ಅನ್ನು ನೀವು ಸ್ವಚ್ಛಗೊಳಿಸಬೇಕಾಗುತ್ತದೆ. ನೀವು ಆಹಾರ ತಯಾರಿಸುವಾಗ ಏನಾದರೂ ಗ್ಯಾಸ್ ಮೇಲೆ ಬಿತ್ತೆಂದರೆ ಕೂಡಲೇ ಇದನ್ನು ಒರೆಸಿ. ಹೀಗೆ ಒರೆಸುವುದರಿಂದ ಸ್ಟವ್ ಹಾಳಾಗುವುದನ್ನು ತಪ್ಪಿಸಬಹುದಾಗಿದೆ. 

gas stove
 

ಮೈಕ್ರೋವೇವ್‌ ಸ್ವಚ್ಛತೆ

ನೀವು ಮೈಕ್ರೋವೇವ್ ಅನ್ನು ಬಳಸಿದೊಡನೆ ಅದನ್ನು ಸ್ಚಚ್ಛಮಾಡುವುದರಿಂದ ಮೈಕ್ರೊವೇವ್ ಒಳಗೆ ಪಸರುವ ದುರ್ಗಂಧವನ್ನು ನಿಮಗೆ ತಡೆಗಟ್ಟಬಹುದಾಗಿದೆ. ಅಂತೆಯೇ ಎಣ್ಣೆ ಸಿಡಿದಿರುವುದನ್ನು ನಿಮಗೆ ನಿವಾರಿಸಬಹುದಾಗಿದೆ. ಬೇಕಿಂಗ್ ಸೋಡಾವನ್ನು (ಅಡುಗೆ ಸೋಡಾವನ್ನು) ಮೃದುವಾದ ಬಟ್ಟೆಯಲ್ಲಿ ಅದ್ದಿ ನಂತರ ಅದರಲ್ಲಿ ಓವನ್ ಅನ್ನು ಸ್ವಚ್ಛಮಾಡಿ. ಮೈಕ್ರೋವೇವ್‌ನಿಂದ ಮಾಡಬಹುದಾದ ಅಚ್ಚರಿಯ ಸಂಗತಿಗಳು

ಸಿಂಕ್ ಅನ್ನು ಸ್ವಚ್ಛಮಾಡುವುದು

ಪಾತ್ರೆಗಳನ್ನು ತೊಳೆದ ನಂತರ ಸಿಂಕ್‌ಗೆ ಸ್ವಲ್ಪ ಕಲ್ಲುಪ್ಪನ್ನು ಹಾಕಿ. ನಂತರ ಕಪ್ಪು ವಿನೇಗರ್ ಅನ್ನು ಉಪ್ಪಿನ ಮೇಲೆ ಚಿಮುಕಿಸಿ. ಬ್ರಶ್ ಅನ್ನು ಬಳಸಿಕೊಂಡು ಸಿಂಕ್ ಅನ್ನು ತೊಳೆಯಿರಿ. ಇದು ದುರ್ಗಂಧವನ್ನು ಹೋಗಲಾಡಿಸುತ್ತದೆ ಮತ್ತು ಸಿಂಕ್‌ನ ಕಲೆಗಳನ್ನು ನಿವಾರಿಸುತ್ತದೆ. 

Cleaning The Dishes
 

ಪಾತ್ರೆಗಳನ್ನು ತೊಳೆಯವುದು

ರಾತ್ರಿ ಪೂರ್ತಿ ಸಿಂಕ್‌ನಲ್ಲಿ ಪಾತ್ರೆಗಳನ್ನು ಹಾಗೆಯೇ ಬಿಡಬೇಡಿ ಇದು ನಿಮ್ಮ ಪಾತ್ರೆಗಳ ಮೇಲೆ ಹಾನಿಯನ್ನುಂಟು ಮಾಡಬಹುದು. ಅವುಗಳನ್ನು ಬಳಸಿದೊಡನೆ ತುರ್ತಾಗಿ ಪಾತ್ರೆಗಳನ್ನು ತೊಳೆದುಕೊಳ್ಳಿ.

English summary

five Spots You Should Clean in Your Kitchen Every Day

Ladies, if your newly married, living in a new home can be a task. Here are 5 Things You Should Keep Clean In Your Kitchen 24/7. Take a look.
Please Wait while comments are loading...
Subscribe Newsletter