For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯ ಪಕ್ಕ ದೇವರ ಕೋಣೆ ಇದೆಯೇ? ಹಾಗಾದರೆ ತಕ್ಷಣ ತೆಗೆಯಿರಿ

By Manu
|

ವಾಸ್ತುಶಾಸ್ತ್ರದ ಪ್ರಕಾರ ಮನೆಯ ನಿರ್ದಿಷ್ಟ ಭಾಗದಲ್ಲಿ ದೇವರ ಮಂದಿರವಿರಬೇಕೆಂಬ ನಿಯಮವಿದೆ. ಆದರೆ ಕೆಲವರು ಜಾಗದ ಅಭಾವದಿಂದಾಗಿ ಅಡುಗೆ ಮನೆಯಲ್ಲಿ ಮಂದಿರವನ್ನು ಇಟ್ಟುಕೊಳ್ಳುತ್ತಾರೆ. ಮನೆಯ ಸ್ಥಿತಿ ಹಾಗೂ ಮನೆಯಲ್ಲಿರುವವರ ದೇಹದ ಸ್ಥಿತಿಯಲ್ಲಿ ಅಡುಗೆ ಕೋಣೆಯು ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಅಡುಗೆ ಮನೆಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳುವುದು ಅತೀ ಅಗತ್ಯ. ಕೆಲವರು ತಿಂದ ಪಾತ್ರೆಗಳನ್ನು ಹಾಗೆ ಮರುದಿನ ತೊಳೆಯಲು ಇಟ್ಟುಬಿಡುತ್ತಾರೆ.

God mandir

ಇದು ಸರಿಯಲ್ಲ. ನಾವು ತಿನ್ನುವಂತಹ ಆಹಾರವು ನಮಗೆ ಕೇವಲ ಪೋಷಕಾಂಶಗಳನ್ನು ನೀಡುವುದು ಮಾತ್ರವಲ್ಲದೆ ಧನಾತ್ಮಕ ಶಕ್ತಿ ಹಾಗೂ ಮನಸ್ಸಿಗೆ ಶಾಂತಿ ನೀಡುವುದು. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಹೇಳಿರುವಂತಹ ಕೆಲವೊಂದು ಕ್ರಮಗಳನ್ನು ಪಾಲಿಸಿಕೊಂಡು ಹೋದರೆ ವಾಸ್ತು ಪ್ರಕಾರ ನಿಮ್ಮ ಮನೆಯ ಎಲ್ಲಾ ದೋಷಗಳು ನಿವಾರಣೆಯಾಗಿ ಸುಖ, ಶಾಂತಿ, ಸಮೃದ್ಧಿ ನಿಮ್ಮದಾಗುವುದು. ಅಡುಗೆ ಮನೆಯ ಆಳ್ವಿಕೆ ನಡೆಸುವುದು ಶುಕ್ರ ಮತ್ತು ಅಧಿಕಾರದ ಅಂಶ ಅಗ್ನಿ. ಇವೆರಡನ್ನು ಸಂತುಷ್ಟಗೊಳಿಸಬೇಕು... ಮುಂದೆ ಓದಿ

ಮನೆಯಲ್ಲಿ 'ದೇವರ ಕೋಣೆ' ಹೀಗಿರಲಿ, ಎಲ್ಲವೂ ಶುಭವಾಗುವುದು...

*ಮನೆಯ ಆಗ್ನೇಯ ಭಾಗದಲ್ಲಿ ಅಡುಗೆ ಮನೆಯಿರಬೇಕು
*ಅಡುಗೆ ಮನೆಯು ದೇವರ ಮಂದಿರ, ಶೌಚಾಲಯ ಅಥವಾ ಮಲಗುವ ಕೋಣೆಯ ಕೆಳಗಡೆ ಅಥವಾ ಮೇಲೇ ಇರಲೇಬಾರದು.
*ಅಡುಗೆ ಮನೆಯ ಮುಖ್ಯ ಭಾಗವು ಮನೆಯ ಪೂರ್ವ ಅಥವಾ ಆಗ್ನೇಯ ಮೂಲೆಯಲ್ಲಿ ಇರಬೇಕು.
*ಗ್ಯಾಸ್ ಅಥವಾ ಸ್ಟೌವ್ ನ್ನು ಮನೆಯ ಭಾಗದಲ್ಲಿ ಇಡಬೇಕು ಮತ್ತು ಗೋಡೆಗಿಂತ ಕೆಲವು ಇಂಚು ದೂರವಿಡಬೇಕು.


*ಸಿಂಕ್ ಅಥವಾ ವಾಶ್ ಬೇಸಿನ್ ಈಶಾನ್ಯ ಭಾಗದಲ್ಲಿ ಇರಬೇಕು. ಲೋಟಗಳು ಕೂಡ ಇದೇ ಭಾಗದಲ್ಲಿ ಇರಬೇಕು.
*ಸಾಂಬಾರ ಪದಾರ್ಥಗಳು, ಧಾನ್ಯಗಳು ಅಥವಾ ಇತರ ಸಂಗ್ರಹಿತ ಸಾಮಗ್ರಿಗಳು ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿರಬೇಕು.
*ಅಡುಗೆ ಮನೆಯ ಬಣ್ಣವು ಹಳದಿ, ಕಿತ್ತಳೆ, ಗುಲಾಬಿ, ಚಾಕಲೇಟ್ ಅಥವಾ ಕೆಂಪು ಬಣ್ಣವಿರಬೇಕು. ಕಪ್ಪು ಬಣ್ಣವನ್ನು ಆದಷ್ಟು ಕಡೆಗಣಿಸಬೇಕು. ಅದರಲ್ಲೂ ನೆಲಕ್ಕೆ ಇದನ್ನು ಬಳಿಯಬಾರದು.
*ಮಲಗುವ ಮೊದಲು ಎಲ್ಲಾ ಪಾತ್ರೆಗಳನ್ನು ತೊಳೆದು ಅಡುಗೆ ಮನೆಯನ್ನು ಸ್ವಚ್ಛವಾಗಿಡಿ.
*ಹೆಚ್ಚಿನವರು ತಾವು ಮಾಡಿದ ಅಡುಗೆಯನ್ನು ಸ್ವಲ್ಪ ಅಗ್ನಿಗೆ ಹಾಕುತ್ತಾರೆ. ಇದರಿಂದ ಮನೆಯಲ್ಲಿ ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.
English summary

Do You Keep A Mandir In Your Kitchen? This Brings Negativity

If you keep a Mandir in your kitchen or leave utensils unwashed until the next day. Follow these simple tips from thh science of vaastu and fix the dosh in your house, these rules will bring peace, joy and wealth at your doorstep It is crucial to follow the Vastu rules as we prepare food in the kitchen and instead of only nutrition, the food should also provide positive energy and peace of mind. The ruling planet of kitchen area is Venus and its ruling element is fire.
Story first published: Thursday, August 31, 2017, 20:56 [IST]
X
Desktop Bottom Promotion