For Quick Alerts
ALLOW NOTIFICATIONS  
For Daily Alerts

ಜೀನ್ಸ್ ಪ್ಯಾಂಟ್‌ನ್ನು ಬೇಕಾಬಿಟ್ಟಿಯಾಗಿ ತೊಳೆದು ಹಾಕುವಂತಿಲ್ಲ!

ಜೀನ್ಸ್ ಅನ್ನು ಬೇಕಾಬಿಟ್ಟಿಯಾಗಿ ನೀವು ತೊಳೆದುಹಾಕುವಂತಿಲ್ಲ. ಜೀನ್ಸ್‌ಗೆ ಐರನ್ ಮಾಡುವಾಗ, ಅದನ್ನು ಒಣಗಿಸುವಾಗ ಕೆಲವೊಂದು ನಿಯಮಗಳನ್ನು ನೀವು ಪಾಲಿಸಬೇಕು. ಹಾಗಿದ್ದರೆ ಆ ನಿಯಮಗಳೇನು ಎಂಬುದನ್ನು ಮುಂದೆ ಓದಿ...

By Jaya Subramanya
|

ಪಾಶ್ಚಾತ್ಯ ದಿರಿಸುಗಳೆಂದರೆ ಎಲ್ಲರೂ ಇಷ್ಟಪಡುವಂತಹದ್ದೇ ಅದರಲ್ಲೂ ಜೀನ್ಸ್ ಅನ್ನು ಎಳೆಯರು ದೊಡ್ಡವರೆನ್ನದೆ ಧರಿಸಲು ಮೆಚ್ಚಿಕೊಳ್ಳುತ್ತಾರೆ. ಹೆಚ್ಚು ಆರಾಮದಾಯಕ ಮತ್ತು ಸ್ಟೈಲಿಶ್ ನೋಟವನ್ನು ನೀಡುವ ಜೀನ್ಸ್ ಅನ್ನು ನೀವು ಟಿಶರ್ಟ್, ಶರ್ಟ್, ಕುರ್ತಿಗೂ ಬಳಸಿ ಇನ್ನಷ್ಟು ಫ್ಯಾಷನ್ ಟ್ರೆಂಡ್ ಅನ್ನು ಹುಟ್ಟುಹಾಕಬಹುದು. ಜೀನ್ಸ್ ಪ್ಯಾಂಟ್‌ಗೆ ಮರುಳಾಗದವರು ಯಾರು ಇದ್ದಾರೆ ಹೇಳಿ?

jeans pant

ಆದರೆ ಜೀನ್ಸ್ ವಿಷಯದಲ್ಲಿ ನೀವು ಇತರ ಫಾರ್ಮಲ್ ಪ್ಯಾಂಟ್‌ಗಳಂತಹ ನಿಯಮಗಳನ್ನು ಅಳವಡಿಸಲಾಗುವುದಿಲ್ಲ. ಇತರ ಪ್ಯಾಂಟ್‌ಗಳನ್ನು ಸಾಮಾನ್ಯವಾಗಿ ತೊಳೆದರೂ ಸಾಕು, ಆದರೆ ಜೀನ್ಸ್ ಅನ್ನು ಬೇಕಾಬಿಟ್ಟಿಯಾಗಿ ನೀವು ತೊಳೆದುಹಾಕುವಂತಿಲ್ಲ. ಜೀನ್ಸ್‌ಗೆ ಐರನ್ ಮಾಡುವಾಗ, ಅದನ್ನು ಒಣಗಿಸುವಾಗ ಕೆಲವೊಂದು ನಿಯಮಗಳನ್ನು ನೀವು ಪಾಲಿಸಬೇಕು. ಹಾಗಿದ್ದರೆ ಆ ನಿಯಮಗಳೇನು ಎಂಬುದನ್ನು ಅರಿತುಕೊಳ್ಳೋಣ...

ಕೈಯಲ್ಲಿ ತೊಳೆಯುವ ತಂತ್ರಗಳು
ಆದಷ್ಟು ನಿಮ್ಮ ಡೆನೀಮ್‌ಗಳನ್ನು ಕೈಯಲ್ಲಿ ತೊಳೆಯುವುದನ್ನು ಆರಂಭಿಸಿ. ಇದರಿಂದ ಶ್ರಿಂಕ್ ಉಂಟಾಗುವುದಿಲ್ಲ. ಜೀನ್ಸ್ ನೋಟದಲ್ಲಿ ಗಡಸಾಗಿದ್ದರೂ, ತೊಳೆಯುವಾಗ ಹೀಗೆ ಇರುವುದಿಲ್ಲ ಹೆಚ್ಚು ಮೃದುವಾಗಿರುತ್ತದೆ. ಆದ್ದರಿಂದ ಇವುಗಳನ್ನು ತೊಳೆಯುವಾಗ ಹೆಚ್ಚು ಜಾಗರೂಕತೆಯನ್ನು ವಹಿಸಬೇಕು.


ಒಂದು ಬಕೇಟ್ ತುಂಬಾ ನೀರು ತುಂಬಿಕೊಳ್ಳಿ. ಇದರಲ್ಲಿ 2-3 ಚಮಚ ಸೋಪ್ ಪೌಡರ್ ಅನ್ನು ಹಾಕಿ. ಇದರಲ್ಲಿ ಜೀನ್ಸ್ ಮುಳುಗಿಸಿ. ನಂತರ ಕೈಯಲ್ಲಿ ತೊಳೆಯಿರಿ 60 ನಿಮಿಷಗಳ ನಂತರ ಸ್ವಚ್ಛನೀರಿನಿಂದ ತೊಳೆದುಕೊಳ್ಳಿ. ಇದರಿಂದ ನಿಮ್ಮ ಡೆನೀಮ್ ತಾಜಾವಾಗಿರುತ್ತದೆ.

ಫ್ರೀಜರ್‌ನಲ್ಲಿರಿಸಿ
ಫ್ರೀಜರ್‌ನಲ್ಲಿ ಜೀನ್ಸ್ ಅನ್ನು ಇರಿಸುವ ವಿಚಾರವನ್ನು ನೀವು ಇದುವರೆಗೆ ಕೇಳಿರಲಿಕ್ಕಿಲ್ಲ. ಇದು ಜೀನ್ಸ್‌ನಿಂದ ಬರುವ ವಾಸನೆಯನ್ನು ತಡೆಗಟ್ಟುತ್ತದೆ. ಬ್ಯಾಕ್ಟೀರಿಯಾವನ್ನು ಜೀನ್ಸ್‌ನಿಂದ ನಿವಾರಿಸುತ್ತದೆ. ಜೀನ್ಸ್ ಅನ್ನು ಸರಿಯಾಗಿ ಮಡಚಿ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿರಿಸಿ ನಂತರ ಫ್ರೀಜರ್‌ನಲ್ಲಿಡಿ. ಹೆಚ್ಚು ತಾಪಮಾನದಲ್ಲಿ ಫ್ರೀಜರ್‌ನಲ್ಲಿ ಜೀನ್ಸ್ ಅನ್ನು ಇರಿಸುವುದು ಎಲ್ಲಾ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ. ಜೀನ್ಸ್‌ನಲ್ಲಿರುವ ವಾಸನೆಯನ್ನು ಹೋಗಲಾಡಿಸಿ ಇದರಿಂದ ತೊಳೆಯದೆಯೇ ಜೀನ್ಸ್ ಅನ್ನು ನಿಮಗೆ ಧರಿಸಬಹುದಾಗಿದೆ.

ರಫ್ ಅಂಡ್ ಟಫ್‌ನಂತಿರುವ ಜೀನ್ಸ್ ಪ್ಯಾಂಟ್‌ಗಳನ್ನು ಒಗೆಯುವುದು ಹೇಗೆ?

ಟ್ಯಾಗ್ ಪರಿಶೀಲಿಸಿ
ನಿಮ್ಮ ಜೀನ್ಸ್ ಟ್ಯಾಗ್ ಅದರ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಜೀನ್ಸ್‌ನಲ್ಲಿ ಯಾವ ಬಗೆಯ ಬಟ್ಟೆಯನ್ನು ಬಳಸಲಾಗಿದೆ ಎಂಬುದನ್ನು ಈ ಟ್ಯಾಗ್ ತೋರಿಸುತ್ತದೆ. ಮತ್ತು ಇದಕ್ಕೆ ತಕ್ಕಂತೆ ಜೀನ್ಸ್ ಅನ್ನು ನಿಮಗೆ ತೊಳೆಯಬಹುದಾಗಿದೆ. ಒಮ್ಮೊಮ್ಮೆ ಜೀನ್ಸ್ ಅನ್ನು ಬಳಸಿ ತೊಳೆದಿರಲಾಗಿರುತ್ತದೆ. ಈ ಸಮಯದಲ್ಲಿ ಜೀನ್ಸ್ ಅನ್ನು ತಣ್ಣನೆಯ ನೀರಿನಲ್ಲಿರಿಸಿ. ಇದರಿಂದ ಇನ್ನಷ್ಟು ಜೀನ್ಸ್ ಶ್ರಿಂಕ್ ಆಗುವುದಿಲ್ಲ. ನಿಮ್ಮ ಜೀನ್ಸ್ ರಾ, ಡ್ರೈ ಅಥವಾ ಸಿಂಗಲ್ ವಾಶ್ ಲೇಬಲ್ ಅನ್ನು ಹೊಂದಿದೆ ಎಂದಾದಲ್ಲಿ, ಜೀನ್ಸ್ ಅನ್ನು ಇದುವರೆಗೆ ತೊಳೆದಿಲ್ಲ ಮತ್ತು ಡೈ ಕೂಡ ಮಾಡಿಲ್ಲ ಎಂದಾಗಿದೆ. ಜೀನ್ಸ್ ಜೊತೆಗೆ ಬಂದಿರುವ ನಿಯಮಗಳನ್ನು ಪಾಲಿಸಿ ಜೀನ್ಸ್ ಅನ್ನು ತೊಳೆಯಿರಿ.


ನಿಮ್ಮ ಜೀನ್ಸ್ ಸ್ಯಾನ್‌ಪೊರ್ಜೈಡ್ ಟ್ಯಾಗ್ ಅನ್ನು ಹೊಂದಿದೆ ಎಂದಾದಲ್ಲಿ, ಇದನ್ನು ಶ್ರಿಂಕ್ ಉಂಟಾಗದಂತೆ ವಿನ್ಯಾಸಗೊಳಿಸಲಾಗಿದೆ ಎಂದರ್ಥವಾಗಿದೆ. ಸ್ಯಾನ್‌ಪೊರ್ಜೈಡ್ ಮಾಡಿರದ/ಶ್ರಿಂಕ್ ಟು ಫಿಟ್ ಅಂದರೆ ಹೇಳಿರುವ ಗಾತ್ರಕ್ಕಿಂತ ಜೀನ್ಸ್ ಸ್ವಲ್ಪ ಇಂಚುಗಳಷ್ಟು ಉದ್ದವಾಗಿದೆ ಎಂದರ್ಥವಾಗಿದೆ. ಈ ಸಮಯದಲ್ಲಿ ನಿಮ್ಮ ಜೀನ್ಸ್ ಅನ್ನು ತುಸು ಬೆಚ್ಚನೆಯ ನೀರಿನಲ್ಲಿ ಮುಳುಗಿಸಿಡಿ. ಇದು ಜೀನ್ಸ್ ಶ್ರಿಂಕ್ ಆಗುವುದನ್ನು ತಡೆಯುತ್ತದೆ. ಇದು ಸರಿಯಾದ ಗಾತ್ರಕ್ಕೆ ಬಂದ ನಂತರ ನೀವು ಅದನ್ನು ನಿತ್ಯವೂ ಬಳಸಬಹುದಾಗಿದೆ.

ಡ್ರೈ ಕ್ಲೀನ್
ನಿಮ್ಮ ಜೀನ್ಸ್ ಅನ್ನು ಯಾವಾಗಲೂ ಡ್ರೈ ಕ್ಲೀನ್ ಮಾಡುವುದು ಒಳ್ಳೆಯದಾಗಿದೆ. ಇದರಿಂದ ಜೀನ್ಸ್‌ನಲ್ಲಿರುವ ಕೊಳೆ, ಕೀಟಾಣು, ಕಲೆಗಳು ದೂರವಾಗುತ್ತದೆ. ಡ್ರೈ ಕ್ಲೀನ್‌ನಿಂದ ಜೀನ್ಸ್‌ನ ಮೂಲೆಯಲ್ಲಿ ಸಂಗ್ರಹವಾಗಿರುವ ಜಿಡ್ಡು ನಿವಾರಣೆಯಾಗುತ್ತದೆ. ಡ್ರೈ ಕ್ಲೀನ್ ಹೆಚ್ಚು ದುಬಾರಿಯಾಗಿರುವುದರಿಂದ ತಿಂಗಳಿಗೆ ಒಮ್ಮೆ ಇದನ್ನು ಮಾಡಿ. ನಿಮ್ಮ ಜೀನ್ಸ್‌ಗೆ ಇದು ಉತ್ತಮ ಕಂಡೀಷನ್ ಅನ್ನು ನೀಡಿ ತಾಜಾಗೊಳಿಸುತ್ತದೆ.

ಹೀಟ್ ಬೇಡ
ಜೀನ್ಸ್‌ಗೆ ಹೀಡ್ ಮಾಡುವುದನ್ನು ನೀವು ತಡೆಯಲೇಬೇಕು. ಇದು ಬಟ್ಟೆಗೆ ಹಾನಿಕರವಾಗಿರಬಹುದು. ಏರ್ - ಡ್ರೈ ಮಾಡಬೇಕು ಮತ್ತು ನೇರವಾಗಿ ಸೂರ್ಯನ ಬೆಳಕಿನಲ್ಲಿ ಒಣಗಿಸದಿರಿ. ಜೀನ್ಸ್ ಅನ್ನು ಏರ್ ಡ್ರೈ ಮಾಡುವುದು ಕನಿಷ್ಠ ಪಕ್ಷ ಎರಡು ದಿನಗಳನ್ನು ತೆಗೆದುಕೊಳ್ಳುತ್ತದೆ, ನಿಮ್ಮ ವೇಳಾಪಟ್ಟಿಯನ್ನು ಇದಕ್ಕೆ ತಕ್ಕಂತೆ ಹೊಂದಿಸಿ. ನೀವು ಫ್ಯಾಬ್ರಿಕ್ ಸಾಫ್ಟ್‌ನರ್‌ಗಳನ್ನು ಬಳಸಿ ನಿಮ್ಮ ಡೆನೀಮ್‌ಗಳನ್ನು ಮೃದುಗೊಳಿಸಬಹುದಾಗಿದೆ ಮತ್ತು ದೀರ್ಘ ಸಮಯದವರೆಗೆ ಜೀನ್ಸ್ ಅನ್ನು ತಾಜಾವಾಗಿರಿಸುತ್ತದೆ.

English summary

Tricks That Will Help Keep Your Jeans Fresh

Jeans help to add the oomph factor to your personality; but it is really uncool if your denims look bad, are smelly and full of wrinkles. Faded jeans are in fashion, but fading of colour from an unusual location can leave patches on the fabric and look outdated. If you are a jean lover, here are a few perfect tricks you could try to keep your jeans to look fresh always.
X
Desktop Bottom Promotion