ಗಣೇಶನ ಮೂರ್ತಿಯನ್ನು ಮನೆಯ ಈ ಭಾಗಗಳಲ್ಲಿ ಇಡಬೇಡಿ

By Hemanth
Subscribe to Boldsky

ಗಣೇಶ ಚತುರ್ಥಿ ಎಂದರೆ ಅದು ಅಬಾಲವೃದ್ಧರ ತನಕ ಪ್ರತಿಯೊಬ್ಬರಿಗೂ ಖುಷಿಯನ್ನು ತರುವಂತಹ ಹಬ್ಬವಾಗಿದೆ. ಗಣೇಶ ಚತುದರ್ಶಿ ಮುನ್ನ ದಿನ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಅದರಲ್ಲೂ ಗಣೇಶನನ್ನು ಭಾರತದ ಹೆಚ್ಚಿನ ಕಡೆಗಳಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜಿಸಲಾಗುತ್ತದೆ.

ಗಣೇಶ ಚತುದರ್ಶಿ ದಿನದಂದು ಗಣಪತಿಯ ಮೂರ್ತಿಯನ್ನು ತಂದು ಮನೆಯಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ಕೆಲವರು ಒಂದು ದಿನ, ಇನ್ನು ಕೆಲವರು 3, 5 7 ಮತ್ತು 10 ದಿನಗಳ ಕಾಲ ಗಣೇಶನ ಮೂರ್ತಿಯನ್ನು ಪೂಜಿಸತ್ತಾರೆ.

Things to remember while placing your Ganesha at home
 

ಗಣೇಶನ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಲು ಇಡೀ ಮನೆಯನ್ನೇ ಶೃಂಗರಿಸಲಾಗುತ್ತದೆ. ಆದರೆ ಗಣಪತಿಯ ಮೂರ್ತಿಯನ್ನು ಮನೆಯ ಯಾವ ಭಾಗದಲ್ಲಿ ಇಟ್ಟರೆ ಶುಭ ಎಂದು ತಿಳಿದುಕೊಳ್ಳಲು ಈ ಲೇಖನ ಓದಿಕೊಳ್ಳಿ ಮತ್ತು ಇದರ ಬಳಿಕ ಮನೆಯ ಅಲಂಕಾರ ಮಾಡಲು ತಯಾರಿ ನಡೆಸಿ.     ಗಣೇಶ ಚತುರ್ಥಿ ಹಬ್ಬದ ವಿಶೇಷತೆ ಹಾಗೂ ಹಿನ್ನೆಲೆ

ಕೆಲವು ಮಂದಿ ವಾಸದ ಕೊಠಡಿ ಅಥವಾ ಪೂಜಾ ಕೊಠಡಿಯಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ. ವಾಸ್ತು ಪ್ರಕಾರವೇ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಿಕೊಂಡು ಹೋದರೆ ತುಂಬಾ ಒಳ್ಳೆಯದು. ಇದು ಹೇಗೆ ಎಂದು ಮುಂದೆ ತಿಳಿಯಿರಿ.

ಸೊಂಡಿಲು ಎಡಕ್ಕಿರಲಿ

ಗಣಪತಿಯ ತಾಯಿ ಗೌರಿಯು ಆತನ ಬದಿಯಲ್ಲೇ ಕುಳಿತಿರುವ ಕಾರಣದಿಂದಾಗಿ ಸೊಂಡಿಲು ಯಾವಾಗಲೂ ಎಡದ ಬದಿಯಲ್ಲಿರುತ್ತದೆ. ಕೆಲವರು ಗಣೇಶ ಚತುದರ್ಶಿಗೆ ಗೌರಿ ಗಣೇಶನನ್ನು ಪೂಜಿಸುತ್ತಾರೆ. ಸೊಂಡಿಲು ಎಡಕ್ಕಿರಬೇಕೆಂಬುವುದು ಗಣೇಶನ ಪೂಜಿಸುವ ಮೊದಲ ಸೂತ್ರವಾಗಿದೆ.

Things to remember while placing your Ganesha at home
 

ಬೆನ್ನ ಹಿಂದೆ ಕೋಣೆಗಳಿರಬಾರದು

ಗಣೇಶನ ಮೂರ್ತಿಯನ್ನು ಇಡುವಾಗ ಎಚ್ಚರಿಕೆ ವಹಿಸಬೇಕಾದ ಮತ್ತೊಂದು ವಿಚಾರವೆಂದರೆ ಗಣೇಶನ ಬೆನ್ನ ಹಿಂದೆ ಮನೆಯ ಯಾವುದೇ ಕೋಣೆ ಇರಬಾರದು. ಗಣೇಶ ಸಮೃದ್ಧಿಯ ದೇವರು. ಆತನ ಬೆನ್ನು ಬಡತನಕ್ಕೆ ಆಹ್ವಾನ ನೀಡಿದಂತೆ. ಇದರಿಂದ ಗಣೇಶನ ಬೆನ್ನು ಯಾವಾಗಲೂ ಮನೆಯ ಹೊರಗಿನ ಭಾಗಕ್ಕಿರಬೇಕು.    ಲಡ್ಡು ಪ್ರಿಯ ಲಂಬೋದರನಿಗೆ ಬೂಂದಿ ಲಾಡು ರೆಸಿಪಿ

ದಕ್ಷಿಣಕ್ಕಲ್ಲ

ಮನೆಯ ದಕ್ಷಿಣ ಭಾಗದಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಬೇಡಿ. ಮನೆಯ ಪೂರ್ವ ಅಥವಾ ಪಶ್ಚಿಮ ಭಾಗದಲ್ಲಿ ಗಣೇಶನ ಮೂರ್ತಿಯನ್ನು ಇಡಿ. ಪೂಜಾ ಕೊಠಡಿ ಕೂಡ ಮನೆಯ ದಕ್ಷಿಣ ಭಾಗದಲ್ಲಿರಬಾರದು ಎಂದು ನೆನಪಿಡಿ.

Things to remember while placing your Ganesha at home
 

ಶೌಚಾಲಯ

ಶೌಚಾಲಯಕ್ಕೆ ಅಂಟಿಕೊಂಡಿರುವ ಗೋಡೆಗೆ ತಾಗಿಸಿಕೊಂಡು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಡಿ. ಶೌಚಾಲಯದ ಗೋಡೆ ಕೋಣೆಗೆ ತಾಗಿದ್ದರೆ ಆ ಜಾಗದಲ್ಲಿ ಗಣೇಶನ ಮೂರ್ತಿಯನ್ನು ಇಡಬೇಡಿ.

ವಾಯುವ್ಯ

ಮನೆಯ ವಾಯುವ್ಯ ಭಾಗದಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಿದರೆ ತುಂಬಾ ಒಳ್ಳೆಯದು. ಮೇಲೆ ಹೇಳಿದ ಸೂತ್ರಗಳಿಂದ ವಾಯುವ್ಯ ಭಾಗಕ್ಕೆ ಅಡ್ಡಿಯಾಗುತ್ತಿದ್ದರೆ ಬೇರೆ ಭಾಗದಲ್ಲಿಡಬಹುದು.

Things to remember while placing your Ganesha at home
 

ಮೆಟ್ಟಿಲುಗಳ ಅಡಿ

ಎರಡು ಮಹಡಿ ಮನೆಯಲ್ಲಿ ವಾಸಿಸುವವರು ಹೆಚ್ಚಾಗಿ ಗಣೇಶನ ಮೂರ್ತಿಯನ್ನು ಮೆಟ್ಟಿಲುಗಳ ಅಡಿಯಲ್ಲಿಡುತ್ತಾರೆ. ಆದರೆ ಇದು ಸಲ್ಲ. ಮೆಟ್ಟಿಲಿನಲ್ಲಿ ಜನರು ಓಡಾಡುವುದರಿಂದ ಅವರು ಗಣೇಶನ ತಲೆಯ ಮೇಲೆ ಓಡಾಡಿದಂತಾಗುತ್ತದೆ. ಇದರಿಂದ ಮನೆಗೆ ದುರಾದೃಷ್ಟ ಕಾಡಬಹುದು. ಮನೆಯಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುವಾಗ ಈ ಸುಲಭ ಸೂತ್ರಗಳನ್ನು ಪಾಲಿಸಿಕೊಂಡು ಹೋದರೆ ಸುಖ, ಸಮೃದ್ಧಿ, ನೆಮ್ಮದಿ ನಿಮ್ಮದಾಗುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Things to remember while placing your Ganesha at home

    Many people place the Ganesha in their living room or puja room for Ganesh Chaturthi. However, you must keep the right Vastu rules in mind and only then decide where to place the idol of Ganapati. These are the basic guidelines for placing the idol of Ganesha in your house.
    Story first published: Monday, August 29, 2016, 23:16 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more