For Quick Alerts
ALLOW NOTIFICATIONS  
For Daily Alerts

ಕೂದಲನ್ನು ಸಮೃದ್ಧಿಗೊಳಿಸುವ ಹಳ್ಳಿಗಾಡಿನ ತೈಲ

|

ಶತಮಾನಗಳಿಂದಲೂ ಭಾರತೀಯ ಮಹಿಳೆಯರು ತಮ್ಮ ತಲೆಗೂದಲನ್ನು ಸೊಂಪಾಗಿಸಿರಿಕೊಂಡು ಬರುತ್ತಿದ್ದಾರೆ. ಯಾವುದೇ ಪುರಾತನ ವರ್ಣಚಿತ್ರಗಳನ್ನು ಗಮನಿಸಿದರೆ ಈ ವಿಷಯ ಮನದಟ್ಟಾಗುತ್ತದೆ. ಇದರ ರಹಸ್ಯವನ್ನು ಕೆದಕಿದರೆ ಭಾರತೀಯ ಮಹಿಳೆಯರು ತಮ್ಮ ತಲೆಗೂದಲಿಗಾಗಿ ಉಪಯೋಗಿಸುವ ವಿವಿಧ ತೈಲಗಳ ಬಗ್ಗೆ ವಿವರಣೆ ದೊರಕುತ್ತದೆ.

ಇವರು ತಮ್ಮ ತಲೆಗೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವ ಮೂಲಕ ಹೆಚ್ಚಿನ ಹೊತ್ತಿನ ಆರೈಕೆ ನೀಡುತ್ತಿದ್ದುದು ಸೊಂಪಾದ ಕೂದಲ ರಹಸ್ಯವಾಗಿದೆ. ಆದರೆ ಈ ತೈಲಗಳು ಯಾವುವು ಎಂಬ ಮಾಹಿತಿ ವಿವಿಧ ಕಡೆಗಳಲ್ಲಿ ವಿವಿಧ ರೀತಿಯದ್ದಾಗಿವೆ.

ದಕ್ಷಿಣ ಭಾರತದಲ್ಲಿ ಕೊಬ್ಬರಿ ಎಣ್ಣೆಯನ್ನು ಪ್ರಧಾನವಾಗಿ ಬಳಸುತ್ತಿದ್ದರೆ ಉತ್ತರ ಮತ್ತು ಮಧ್ಯ ಭಾರತದಲ್ಲಿ ದಾಸವಾಳ, ನೆಲ್ಲಿಕಾಯಿ ಮತ್ತು ತುಳಸಿಯ ಎಣ್ಣೆಗಳನ್ನು ಬಳಸಲಾಗುತ್ತಿತ್ತು. ಇವುಗಳ ಪರಿಣಾಮವನ್ನು ಪ್ರತ್ಯಕ್ಷವಾಗಿ ಬಳಸಿ ಸೂಕ್ತವೆಂದು ಕಂಡುಬಂದ ಬಳಿಕ ಆಯುರ್ವೇದ ಇನ್ನೂ ಹಲವಾರು ಪ್ರಯೋಗಗಳ ಮೂಲಕ ಇನ್ನಷ್ಟು ಪರಿಣಾಮಕಾರಿಯಾದ ವಿಧಾನವನ್ನು ಪರಿಚಯಿಸಿದೆ. ಕೂದಲ ಅರೈಕೆಗಾಗಿ ಮನೆಯಲ್ಲಿಯೇ ತಯಾರಿಸಿ ಬಳಸಬಹುದಾದಂತಹ ಇಂತಹ ಹಲವು ಎಣ್ಣೆಗಳ ಬಗ್ಗೆ ಬೋಲ್ಡ್ ಸ್ಕೈ ತಂಡ ಕೆಲವು ಮಹತ್ವದ ಮಾಹಿತಿಗಳನ್ನು ನೀಡಿದೆ ಮುಂದೆ ಓದಿ..

Pamper Your Hair With These Ayurvedic Oil Recipes

ವಿಶೇಷ ಸೂಚನೆ: ಈ ಎಣ್ಣೆಗಳು ಕನಿಷ್ಠ ಒಂದು ವರ್ಷದವರೆಗಾದರೂ ಹಾಳಾಗದೇ ಉಳಿಯುವ ಸಾಮರ್ಥ್ಯ ಹೊಂದಿವೆ. ಆದರೆ ಇವನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸುವುದು ಮಾತ್ರ ಅಗತ್ಯ. ಇದನ್ನು ಗಾಳಿಯಾಡದ ಬಾಟಲಿ ಅಥವಾ ಜಾಡಿಯಲ್ಲಿ ಗಟ್ಟಿಯಾಗಿ ಮುಚ್ಚಿಡಬೇಕು ಹಾಗೂ ಬಿಸಿಲಿಗೆ ಒಡ್ಡಬಾರದು. ಆಲಿವ್ ಎಣ್ಣೆ-ತಲೆಹೊಟ್ಟಿನ ಸಮಸ್ಯೆಗೆ ರಾಮಬಾಣ

ದಾಸವಾಳದ ಎಣ್ಣೆ
ಕೂದಲು ತೆಳ್ಳಗಾಗುವುದು ಮತ್ತು ಉದುರುವುದನ್ನು ತಡೆಗಟ್ಟಲು ದಾಸವಾಳ ಹೂವಿನ ಎಣ್ಣೆ ಅತ್ಯುತ್ತಮವಾಗಿದೆ. ಈ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಲು ಕೆಳಗಿನ ವಿಧಾನವನ್ನು ಅನುಸರಿಸಿ:


ಅಗತ್ಯವಿರುವ ಸಾಮಾಗ್ರಿಗಳು:
ದಾಸವಾಳದ ಹೂವುಗಳು: ಸುಮಾರು ನಾಲ್ಕು
ದಾಸವಾಳದ ಎಲೆಗಳು: ಒಂದು ಮುಷ್ಟಿ ತುಂಬುವಷ್ಟು
ಮೆಂತೆ- ಒಂದು ಚಿಕ್ಕ ಚಮಚ
ಕೊಬ್ಬರಿ ಎಣ್ಣೆ : ಸುಮಾರು ಇನ್ನೂರು ಮಿ.ಲೀ.

ವಿಧಾನ:
ದಾಸವಾಳದ ಹೂವು ಮತ್ತು ಎಲೆಗಳನ್ನು ಒಟ್ಟಿಗೇ ಅರೆದು ನುಣ್ಣನೆಯ ಲೇಪನ ತಯಾರಿಸಿ. ಇದನ್ನು ಕೊಬ್ಬರಿಎಣ್ಣೆಗೆ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮಧ್ಯಮ ಉರಿಯ ಮೇಲೆ ಬಿಸಿಮಾಡಿ.
ಬಿಸಿಯಾಗುವ ಹೊತ್ತಿನಲ್ಲಿ ಬಿಡದೇ ಚಮಚದಿಂದ ತಿರುವುತ್ತಿರಿ. ಕೊಂಚ ಹೊತ್ತಿನ ಬಳಿಕ ಎಣ್ಣೆ ಸಾಕಷ್ಟು ಬಿಸಿಯಾಗಿದೆ ಅನ್ನಿಸಿದರೆ ಮೆಂತೆ ಹಾಕಿ ಸಿಡಿಯುವಂತೆ ಮಾಡಿ. ಎಲ್ಲಾ ಮೆಂತೆಕಾಳುಗಳು ಸಿಡಿಯಿತು ಎಂದು ಅನ್ನಿಸಿದ ಬಳಿಕ ಉರಿಯನ್ನು ನಂದಿಸಿ ಎಣ್ಣೆಯನ್ನು ಮುಚ್ಚಿಟ್ಟು ತಣಿಯಲು ಬಿಡಿ. ದಾಸವಾಳದ ಪುಡಿ ತಳದಲ್ಲಿ ನಿಲ್ಲಲು ಸುಮಾರು ಒಂದು ದಿನವೇ ಬೇಕು. ಬಳಿಕ ಯಾವಾಗ ಬೇಕೆನ್ನಿಸುತ್ತದೆಯೋ ಆಗ ಸ್ವಲ್ಪವೇ ಬಿಸಿಮಾಡಿ ಉಪಯೋಗಿಸಿ. ಇದನ್ನು ತಲೆಗೂದಲ ಬುಡಕ್ಕೆ ಬರುವಂತೆ ಹಚ್ಚಿಕೊಂಡಷ್ಟೂ ಹೆಚ್ಚು ಪರಿಣಾಮಕಾರಿಯಾಗಿದೆ. ಸೊಂಪಾದ ಕೂದಲಿಗಾಗಿ ತಯಾರಿಸಿ- ನೈಸರ್ಗಿಕ ಹೇರ್ ಮಾಸ್ಕ್

ತುಳಸಿ ಎಣ್ಣೆ
ಒಂದು ವೇಳೆ ನಿಮ್ಮ ತಲೆಯಲ್ಲಿ ತಲೆಹೊಟ್ಟು, ತುರಿಕೆ, ಸೀರು ಮೊದಲಾದ ತೊಂದರೆಗಳಿದ್ದರೆ ಈ ಎಣ್ಣೆ ಬಳಕೆಗೆ ಅತ್ಯುತ್ತಮವಾಗಿದೆ. ಇದು ತಲೆಗೂದಲಿಗೆ ಹೊಳಪನ್ನು ನೀಡುವುದರ ಜೊತೆಗೇ ಬುಡದಿಂದಲೇ ಅತ್ಯುತ್ತಮವದ ಪೋಷಣೆ ನೀಡುತ್ತದೆ. ಈ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಲು ಕೆಳಗಿನ ವಿಧಾನವನ್ನು ಅನುಸರಿಸಿ:
ಅಗತ್ಯವಿರುವ ಸಾಮಾಗ್ರಿಗಳು:
*ತುಳಸಿ ಪುಡಿ: ಎರಡು ದೊಡ್ಡ ಚಮಚ
*ಕೊಬ್ಬರಿ ಎಣ್ಣೆ: ಇನ್ನೂರು ಮಿ.ಲೀ.
*ನೀರು-ಸ್ವಲ್ಪ
*ಮೆಂತೆ-ಒಂದು ಚಿಕ್ಕಚಮಚ

ವಿಧಾನ:
ತುಳಸಿ ಪುಡಿಗೆ ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ಕಲಕಿ ದಪ್ಪನೆಯ ಲೇಪನವಾಗುವಂತೆ ಮಾಡಿ. ಒಂದು ಚಿಕ್ಕ ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಕುದಿಯಲು ಪ್ರಾರಂಭಿಸಿದೊಡನೆಯೇ ತುಳಸಿಯ ಲೇಪನವನ್ನು ಮಿಶ್ರಣ ಮಾಡಿ.
ನಂತರ ಎಡೆಬಿಡದೇ ಚಿಕ್ಕ ಉರಿಯಲ್ಲಿ ಚಮಚದಿಂದ ತಿರುವುತ್ತಿರಿ. ಕೊಂಚ ಸಮಯದ ಬಳಿಕ ಮೆಂತೆ ಕಾಳುಗಳನ್ನು ಹಾಕಿ ಸಿಡಿಯುವಂತೆ ಮಾಡಿ. ಎಲ್ಲಾ ಕಾಳುಗಳು ಸಿಡಿದ ಬಳಿಕ ಉರಿಯನ್ನು ನಂದಿಸಿ ತೆಳುವಾದ ಬಟ್ಟೆಯಲ್ಲಿ ಸೋಸಿ ಗಾಜಿನ ಬಾಟಲಿಯಲ್ಲಿ ಶೇಖರಿಸಿ. ಪೂರ್ಣವಾಗಿ ತಣಿದ ಬಳಿಕ ಅಗತ್ಯವಿದ್ದಷ್ಟು ಪ್ರಮಾಣವನ್ನು ಕೊಂಚವೇ ಬಿಸಿ ಮಾಡಿ ಉಪಯೋಗಿಸಿ.

ನೆಲ್ಲಿಕಾಯಿ ಎಣ್ಣೆ
ಕೂದಲುದುರುವ ಸಮಸ್ಯೆ ತೀವ್ರವಾಗಿದ್ದರೆ, ಚಿಕ್ಕವಯಸ್ಸಿನಲ್ಲಿಯೇ ಕೂದಲು ನೆರೆದರೆ ಮತ್ತು ಇತರ ಕೂದಲ ತೊಂದರೆಗಳಿಗೆ ಈ ಎಣ್ಣೆ ಅತ್ಯುತ್ತಮವಾಗಿದೆ. ಅಲ್ಲದೇ ಮನಸ್ಸಿನ ಒತ್ತಡಕ್ಕೂ ಈ ಎಣ್ಣೆಯ ಮಸಾಜ್ ಆರಾಮ ನೀಡುತ್ತದೆ. ಈ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಲು ಕೆಳಗಿನ ವಿಧಾನವನ್ನು ಅನುಸರಿಸಿ:

ಸಾಮಾಗ್ರಿಗಳು:
*ನೆಲ್ಲಿಕಾಯಿ ಪುಡಿ: ಸುಮಾರು ಎರಡು ದೊಡ್ಡ ಚಮಚ
*ತೆಂಗಿನೆಣ್ಣೆ: ಸುಮಾರು ಇನ್ನೂರು ಮಿ.ಲೀ.
*ನೀರು ಸ್ವಲ್ಪ

ವಿಧಾನ:
ಒಂದು ಚಿಕ್ಕ ಪಾತ್ರೆಯಲ್ಲಿ ನೆಲ್ಲಿಕಾಯಿ ಪುಡಿ ಮತ್ತು ಕೊಂಚ ನೀರು ಸೇರಿಸಿ ಚೆನ್ನಾಗಿ ಕಲಕಿ. ನೀರು ಕೊಂಚ ಹೆಚ್ಚೇ ಇರಲಿ. ಇದನ್ನು ಒಲೆಯ ಮೇಲಿಟ್ಟು ಕುದಿಯಲು ಬಿಡಿ. ಸುಮಾರು ಹದಿನೈದು ನಿಮಿಷ ಚಿಕ್ಕ ಉರಿಯಲಿ ಕುದಿದ ಬಳಿಕ ಉರಿಯನ್ನು ಆರಿಸಿ ತಣಿಯಲು ಬಿಡಿ. ನೀರು ತಣ್ಣಗಾದ ಬಳಿಕ (ಸುಮಾರು ಒಂದು ಗಂಟೆ ಬೇಕು) ಇದನ್ನು ತೆಳುವಾದ ಬಟ್ಟೆಯಲ್ಲಿ ಸೋಸಿ ನೆಲ್ಲಿಕಾಯಿ ಪುಡಿಯನ್ನು ನೀರಿನಿಂದ ಪ್ರತ್ಯೇಕಿಸಿ.
ಈ ನೀರನ್ನು ಎಸೆಯಬೇಡಿ.

ಈಗ ಪ್ರತ್ಯೇಕಿಸಿದ ಪುಡಿಯನ್ನು ಸ್ವಲ್ಪ ನೀರು ಮಿಶ್ರಣ ಮಾಡಿ. ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಪ್ರತ್ಯೇಕಿಸಿದ ನೀರು, ಕೊಬ್ಬರಿಎಣ್ಣೆ ಮತ್ತು ಈ ಮಿಶ್ರಣವನ್ನು ಹಾಕಿ ಬಿಸಿಮಾಡಿ. ಕುದಿಯಲು ಪ್ರಾರಂಭಿಸಿದ ಬಳಿಕ ಉರಿ ಚಿಕ್ಕದು ಮಾಡಿ ಸುಮಾರು ಹದಿನೈದು ನಿಮಿಷ ನಿರಂತರವಾಗಿ ತಿರುವುತ್ತಿರಿ. ಬಳಿಕ ಉರಿ ನಂದಿಸಿ. ಈ ಎಣ್ಣೆಯನ್ನು ಬಳಿಕ ತಣಿಯಲು ಬಿಡಿ. ಬಳಿಕ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ ಅಗತ್ಯವಿದ್ದಾಗ ಸ್ವಲ್ಪವೇ ಬಿಸಿಮಾಡಿ ಉಪಯೋಗಿಸಿ.

English summary

Pamper Your Hair With These Ayurvedic Oil Recipes

Do you know why Indian women have the best looking hair in the world? Well, for one reason and one reason only - they pamper their tresses with natural ayurvedic oils. Indian women love to massage their scalp with hot oils made purely with hibiscus, amla and tulsi. If you want your hair to look beautiful and feel strong, then take a look at some of these recipes you can try, in order to make the ayurvedic oil at home. Take a look at these three best oils to use on your hair
Story first published: Friday, September 18, 2015, 10:23 [IST]
X
Desktop Bottom Promotion