For Quick Alerts
ALLOW NOTIFICATIONS  
For Daily Alerts

ನೆಲದ ಕಪ್ಪು ಕಲೆಗಳಿಗೆ ಗುಡ್ ಬೈ ಹೇಳಲು, ಸಿಂಪಲ್ ಟಿಪ್ಸ್!

By Arshad
|

ಮನೆ ನಿರ್ಮಾಣದ ಖರ್ಚನ್ನು ಕಡಿಮೆ ಮಾಡಲು ಮಧ್ಯಮವರ್ಗ ಆಯ್ದುಕೊಳ್ಳುವ ಚಪ್ಪಡಿಗಳೆಂದರೆ ಕಡಪಾ ಕಲ್ಲುಗಳು. ಗೋಡೆಗೆ ಬಿಳಿಯ ಮಾರ್ಬಲ್ ಕಲ್ಲುಗಳನ್ನು ಅಥವಾ ಬಣ್ಣವನ್ನು ಆಯ್ದು ನೆಲಕ್ಕೆ ಕಪ್ಪು ಬಣ್ಣದ ಚಪ್ಪಡಿಗಳನ್ನು ಹಾಸಿ ಚಪ್ಪಡಿಯ ನಾಲ್ಕೂ ಮೂಲೆಗಳಲ್ಲಿ ಕಲಾತ್ಮಕವಾಗಿ ಬಿಳಿಯ ಕಡಪ ಅಥವಾ ಮಾರ್ಬಲ್ ಚಪ್ಪಡಿಯ ಚಿಕ್ಕ ತುಂಡುಗಳನ್ನು ಅಳವಡಿಸಿದರೆ ಕೋಣೆಯ ಸೌಂದರ್ಯ ಇನ್ನಷ್ಟು ಅರಳುತ್ತದೆ. ಮನೆಯ ನೆಲದ ಟೈಲ್ಸ್ ಸಿಂಪಲ್ ಆಗಿದ್ದರೂ ಸ್ವಚ್ಛವಾಗಿರಲಿ

ಮನೆ ಎಂದ ಮೇಲೆ ಸ್ವಚ್ಛತೆಗೆ ಸದಾ ಪ್ರಥಮ ಆದ್ಯತೆ ನೀಡಬೇಕಾಗುತ್ತದೆ. ಅಂತೆಯೇ ಕಪ್ಪು ನೆಲವೂ ಇದಕ್ಕೆ ಹೊರತಲ್ಲ. ಕೇವಲ ಸ್ವಚ್ಛವಾಗಿಡುವುದು ಮಾತ್ರವಲ್ಲ, ಹೊಳೆಯುವಂತೆ ಮಾಡುವುದೂ ಒಂದು ಕಲೆ. ಆದರೆ ಹೆಚ್ಚಿನವರಿಗೆ ಈ ಕಪ್ಪು ಚಪ್ಪಡಿಗಳನ್ನು ಹೇಗೆ ಹೊಳೆಯುವಂತೆ ಮಾಡುವುದು ಎಂದು ಗೊತ್ತಿಲ್ಲ. ಪಾತ್ರೆ, ಬಟ್ಟೆ, ನೆಲದ ಕಲೆಗಳನ್ನು ಹೋಗಲಾಡಿಸಲು ಸಲಹೆಗಳು

ಸಾಮಾನ್ಯ ಪದ್ಧತಿ ಎಂದರೆ ಹರಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಬಿಸಿನೀರಿನಲ್ಲಿ ಬೆರೆಸಿ ನೆಲವನ್ನು ಒರೆಸುವುದು. ಇದು ತಾತ್ಕಾಲಿಕವಾದ ಹೊಳಪನ್ನು ನೀಡಿದರೂ ಜೊತೆಗೇ ಜಾರುವ ಸಂಭವವನ್ನೂ ಹೆಚ್ಚಿಸುತ್ತದೆ. ನಿಮ್ಮ ಕನಸಿನ ಮನೆಯ ನೆಲದ ಚಪ್ಪಡಿ ಕಪ್ಪುಕಲ್ಲುಗಳಾಗಿದ್ದರೆ ಇದರ ಹೊಳಪನ್ನು ಹೆಚ್ಚಿಸಲು ಕೆಲವು ಸುಲಭ ವಿಧಾನಗಳಿವೆ. ಇವನ್ನು ಅನುಸರಿಸುವ ಮೂಲಕ ಹೆಚ್ಚಿನ ಸಮಯದವರೆಗೆ ಹೊಳಪನ್ನು ಉಳಿಸಿಕೊಳ್ಳುವ ಜೊತೆಗೇ ಇವುಗಳು ಬಿರುಕು ಬಿಡುವ ಸಂಭವವನ್ನು ಕಡಿಮೆಗೊಳಿಸುವ ಮೂಲಕ ಆಯಸ್ಸನ್ನೂ ಹೆಚ್ಚಿಸಬಹುದು. ಹೊಸ ಟ್ರಿಕ್ಸ್: ಟೈಲ್ಸ್ ನೆಲದ ಸ್ವಚ್ಛತೆಗೆ ನೈಸರ್ಗಿಕ ಟಿಪ್ಸ್

ಶಿರ್ಕಾ (ವಿನೇಗರ್) ಮತ್ತು ನೀರಿನ ಬಳಕೆ

ಶಿರ್ಕಾ (ವಿನೇಗರ್) ಮತ್ತು ನೀರಿನ ಬಳಕೆ

ಸಾಮಾನ್ಯವಾಗಿ ನಿತ್ಯವೂ ತೊಳೆಯಬೇಕಾದ ಅವಶ್ಯಕತೆ ಇದ್ದಲ್ಲಿ, ಉದಾಹರಣೆಗೆ ಕಲ್ಯಾಣಮಂಟಪ, ಮನೆಯ ಮೊದಲ ಕೊಠಡಿ ಇತ್ಯಾದಿಗಳಿಗೆ ಈ ವಿಧಾನ ಸೂಕ್ತವಾಗಿದೆ. ಸಾಮಾನ್ಯವಾಗಿ ಈ ನೆಲದ ಮೇಲೆ ಜನರು ಓಡಾಡುತ್ತಲೇ ಇರುವ ಕಾರಣ ಸ್ವಾಭಾವಿಕವಾಗಿಯೇ ಹೊಳಪು ಕಡಿಮೆಯಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶಿರ್ಕಾ (ವಿನೇಗರ್) ಮತ್ತು ನೀರಿನ ಬಳಕೆ

ಶಿರ್ಕಾ (ವಿನೇಗರ್) ಮತ್ತು ನೀರಿನ ಬಳಕೆ

ಪ್ರತಿದಿನ ಒಂದು ಬಕೆಟ್ ನೀರಿನಲ್ಲಿ ಒಂದು ಕಪ್ ಶಿರ್ಕಾ ಸೇರಿಸಿ ಒರೆಸುವುದರಿಂದ ಇದರ ಹೊಳಪನ್ನು ಹೊಸದರಂತೆ ಉಳಿಸಿಕೊಳ್ಳಬಹುದು.

ಲಿಂಬೆ ಮತ್ತು ನೀರು

ಲಿಂಬೆ ಮತ್ತು ನೀರು

ಸಾಮಾನ್ಯವಾಗಿ ಮನೆಯಲ್ಲಿ ಸದಸ್ಯರು ಓಡಾಡುತ್ತಾ ಇರುವ ಸ್ಥಳ ಕೊಂಚ ಕಳೆಗುಂದುತ್ತದೆ. ಈ ಸ್ಥಳಗಳನ್ನು ಕಡಿಮೆ ಕಾಲಾವಕಾಶದಲ್ಲಿ, ಅಂದರೆ ಇನ್ನೇನು ಅತಿಥಿಗಳು ಬರುವವರಿದ್ದಾರೆ ಎಂದಿದ್ದಾಗ ಹೊಳಪು ನೀಡಲು ಈ ವಿಧಾನ ಸೂಕ್ತವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲಿಂಬೆ ಮತ್ತು ನೀರು

ಲಿಂಬೆ ಮತ್ತು ನೀರು

ಒಂದು ಬಕೆಟ್ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸ ಸೇರಿಸಿ ನೆಲವನ್ನು ಎಂದಿನಂತೆ ಒರೆಸಿಬಿಡಿ. ಇದರಿಂದ ನೆಲ ಸ್ವಚ್ಛಗೊಂಡು ಹೊಳಪು ಹೆಚ್ಚುವ ಜೊತೆಗೇ ನಿತ್ಯದ ಓಡಾಟದಿಂದ ಮೂಡಿದ್ದ ಸೂಕ್ಷ್ಮ ಗೀರುಗಳೂ ಮಾಯವಾಗುತ್ತವೆ.

ಆಲ್ಕೋಹಾಲ್ ಮಿಶ್ರಣ

ಆಲ್ಕೋಹಾಲ್ ಮಿಶ್ರಣ

ಒಂದು ವೇಳೆ ನಿಮ್ಮ ಮನೆಯ ನೆಲ ಸಿರಾಮಿಕ್ ಚಪ್ಪಡಿಗಳಿಂದಾಗಿದ್ದರೆ ಇದರ ಕಪ್ಪು ಬಣ್ಣಕ್ಕೆ ಹೆಚ್ಚಿನ ಹೊಳಪು ನೀಡಲು ಒಂದು ಬಕೆಟ್ ನೀರಿಗೆ ಒಂದು ದೊಡ್ಡಚಮಚ ಐಸೋಪ್ರೋಪೈಲ್ ಆಲ್ಕೋಹಾಲ್ (rubbing alcohol) ಅನ್ನು ಬೆರೆಸಿ ಈ ನೀರಿನಿಂದ ನೆಲವನ್ನು ಒರೆಸಿ. ಆ ಬಳಿಕ ಒಣಗುವವರೆಗೆ ಯಾರೂ ನಡೆದಾಡದಂತೆ ಎಚ್ಚರ ವಹಿಸಿ. ಇದರಿಂದ ಕಪ್ಪು ಸಿರಾಮಿಕ್ ಚಪ್ಪಡಿಗಳು ಹೊಸದರಂತೆ ಹೊಳೆಯುತ್ತವೆ.

ಬಿಸಿನೀರು ಮತ್ತು ಸೋಪಿನ ದ್ರಾವಣ

ಬಿಸಿನೀರು ಮತ್ತು ಸೋಪಿನ ದ್ರಾವಣ

ಒಂದು ವೇಳೆ ನಿಮ್ಮ ಮನೆಯ ನೆಲದಲ್ಲಿ ಕಪ್ಪು ಮಾರ್ಬಲ್ ಚಪ್ಪಡಿಗಳನ್ನು ಅಳವಡಿಸಿದ್ದರೆ ಇದಕ್ಕೆ ಹೆಚ್ಚಿನ ಕಾಳಜಿಯ ಅಗತ್ಯವಿದೆ. ಈ ಚಪ್ಪಡಿಗಳಿಗೆ ಯಾವುದೇ ಆಮ್ಲೀಯ ದ್ರವ ಹಾನಿಕಾರಕವಾದುದರಿಂದ ಲಿಂಬೆ, ಹುಳಿ ಮೊದಲಾದವೆಲ್ಲಾ ಕಲೆ ಮೂಡಿಸಬಹುದು. ಬದಲಿಗೆ ಈ ನೆಲವನ್ನು ಒರೆಸಲು ಕೊಂಚ ಉಗುರುಬೆಚ್ಚನೆಯ ನೀರಿಗೆ ಪಾತ್ರೆ ತೊಳೆಯಲು ಬಳಸುವ ದ್ರಾವಣವನ್ನು ಕೊಂಚವೇ ಬೆರೆಸಿ ಒರೆಸಿ. ಒಣಗುವವರೆಗೂ ಯಾರೂ ನಡೆದಾಡದಂತೆ ಎಚ್ಚರ ವಹಿಸಿ.

ಹೊಳಪು ಉಳಿಯಲು ನೆಲದ ಬಿರುಕುಗಳನ್ನು ಮುಚ್ಚಿ

ಹೊಳಪು ಉಳಿಯಲು ನೆಲದ ಬಿರುಕುಗಳನ್ನು ಮುಚ್ಚಿ

ಸಾಮಾನ್ಯವಾಗಿ ಎರಡು ಚಪ್ಪಡಿಗಳ ನಡುವೆ ಇರುವ ಕಿರುದಾದ ಬಿರುಕಿನಲ್ಲಿ ಧೂಳು, ಕೊಳೆ, ನೀರು ಇಳಿದರೆ ಇದನ್ನು ಹೊರತೆಗೆಯುವುದು ಕಷ್ಟ. ಆದ್ದರಿಂದ ಈ ಬಿರುಕುಗಳನ್ನು ಮುಚ್ಚಿಬಿಡುವಂತೆ ಹೆಚ್ಚಿನ ಒಳಾಂಗಣ ವಿನ್ಯಾಸಕಾರರು ಅಭಿಪ್ರಾಯಪಡುತ್ತಾರೆ. ಉತ್ತಮವಾದ ಮತ್ತು ನಿಮ್ಮ ನೆಲದ ಚಪ್ಪಡಿಯ ಬಗೆಯನ್ನು ಆಧರಿಸಿ ಸೂಕ್ತವಾದ ಪುಡಿಯನ್ನು (sealant) ಬಳಸಿ ಈ ಬಿರುಕುಗಳನ್ನು ಪರಿಣಿತರಿಂದ ಮುಚ್ಚಿಸಿಬಿಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೊಳಪು ಉಳಿಯಲು ನೆಲದ ಬಿರುಕುಗಳನ್ನು ಮುಚ್ಚಿ

ಹೊಳಪು ಉಳಿಯಲು ನೆಲದ ಬಿರುಕುಗಳನ್ನು ಮುಚ್ಚಿ

ಇದರಿಂದ ಪ್ರತಿದಿನ ನೆಲ ಒರೆಸುವ ಅಗತ್ಯ ಬೀಳುವುದಿಲ್ಲ. ಬದಲಿಗೆ ಈ ಸೀಲೆಂಟ್‍ಗಳು ಎಣ್ಣೆಯನ್ನು ಹೀರಿಕೊಂಡು ಚಪ್ಪಡಿಗಳ ಹೊಳಪಿಗೆ ಸರಿಸಮಾನವಾಗಿ ಹೊಳೆಯುತ್ತಾ ನೆಲದ ಅಂದವನ್ನು ಹೆಚ್ಚಿಸುತ್ತದೆ.

English summary

How To Make Black Floor Tiles Appear Shiny

Hence, if you are looking for how to make black floor tiles appear shiny, here's your answer! here are some of the easy tips for making black tiles appear shiny using simple, natural ingredients, do take a look.
Story first published: Monday, August 22, 2016, 20:13 [IST]
X
Desktop Bottom Promotion