For Quick Alerts
ALLOW NOTIFICATIONS  
For Daily Alerts

ಬೆಳ್ಳಿ, ಬಂಗಾರದ ಆಭರಣಗಳ ಸ್ವಚ್ಛತೆಗೆ ಸಿಂಪಲ್ ಟಿಪ್ಸ್

ಚಿನ್ನ ಹಾಗೂ ಬೆಳ್ಳಿಯ ಆಭರಣಗಳಿಗೆ ಮತ್ತೆ ಹೊಳಪು ನೀಡುವ ವಿಧಾನಗಳನ್ನು ತಿಳಿಸಲಾಗಿದೆ. ಇದನ್ನು ಅನುಸರಿಸಿಕೊಂಡು ಹೋಗಿ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಹೊಳೆಯುವಂತೆ ಮಾಡಿ.

By Hemanth
|

'ಭಾರತದಲ್ಲಿ ಬಂಗಾರಕ್ಕೆ ನೀಡುವಷ್ಟು ಮಹತ್ವ ಬೇರೆ ಯಾವುದೇ ಲೋಹಕ್ಕೂ ನೀಡಲಾಗುವುದಿಲ್ಲ. ಹಳದಿ ಲೋಹವನ್ನು ಭಾರತೀಯರು ತುಂಬಾ ಪವಿತ್ರವೆಂದು ಭಾವಿಸುತ್ತಾರೆ. ಬಂಗಾರ ಹೊಂದಿರುವ ವ್ಯಕ್ತಿಗಳು ಹೆಚ್ಚಾಗಿ ಇದರ ನಿರ್ವಹಣೆ ಬಗ್ಗೆ ಗಮನಹರಿಸುವುದು ತುಂಬಾ ಕಡಿಮೆ. ಇಂದಿನ ದಿನಗಳಲ್ಲಿ ದಿನಕ್ಕೊಂದು ವಿನ್ಯಾಸದ ಬಂಗಾರದ ಆಭರಣಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವಾಗ ಹಳೆಯ ಆಭರಣಗಳನ್ನು ತೊಳೆಯುತ್ತಾ ಕುಳಿತುಕೊಳ್ಳುವ ಪುರುಸೊತ್ತು ಕೂಡ ಇಲ್ಲ.

ಆದರೆ ನಾವು ಧರಿಸುವಂತಹ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ನಿರ್ವಹಣೆ ಮಾಡುವುದು ಅತ್ಯಗತ್ಯವಾಗಿದೆ. ತುಂಬಾ ದೀರ್ಘ ಕಾಲದವರೆಗೆ ನೀವು ಧರಿಸುತ್ತಿರುವ ಬಂಗಾರದ ಆಭರಣದಲ್ಲಿ ಧೂಳು ಕುಳಿತುಕೊಂಡರೆ ಆಗ ಅದರ ಹೊಳಪು ಕಳೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಬೆಳ್ಳಿ ವಸ್ತುಗಳು ಹೊಳೆಯಲು ಕೆಲವೊಂದು ಸಲಹೆಗಳು

ಈ ಲೇಖನದಲ್ಲಿ ಚಿನ್ನ ಹಾಗೂ ಬೆಳ್ಳಿಯ ಆಭರಣಗಳಿಗೆ ಮತ್ತೆ ಹೊಳಪು ನೀಡುವ ವಿಧಾನಗಳನ್ನು ತಿಳಿಸಲಾಗಿದೆ. ಇದನ್ನು ಅನುಸರಿಸಿಕೊಂಡು ಹೋಗಿ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಹೊಳೆಯುವಂತೆ ಮಾಡಿ.

1. ಪಾತ್ರೆ ತೊಳೆಯುವ ಹುಡಿ ಹಾಗೂ ಲಿಕ್ವಿಡ್
ಪ್ರತಿಯೊಂದು ಮನೆಗಳಲ್ಲೂ ಪಾತ್ರೆ ತೊಳೆಯಲು ಸಾಮಾನ್ಯವಾಗಿ ಪಾತ್ರೆ ತೊಳೆಯುವ ಹುಡಿ ಅಥವಾ ಲಿಕ್ವಿಡ್ ಅನ್ನು ಬಳಸುವುದನ್ನು ನೋಡುತ್ತೇವೆ. ಇದೇ ಹುಡಿಯನ್ನು ಬಳಸಿಕೊಂಡು ಬಂಗಾರದ ಆಭರಣಗಳನ್ನು ಸ್ವಚ್ಛ ಮಾಡಬಹುದು ಎಂದು ಯಾರಿಗಾದರೂ ತಿಳಿದಿದೆಯಾ? ಒಂದು ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಪಾತ್ರೆ ತೊಳೆಯುವ ಹುಡಿಯನ್ನು ಹಾಕಿ ಬಳಿಕ ಆಭರಣಗಳನ್ನು ಹಾಕಿ ಸ್ವಲ್ಪ ಸಮಯ ಹಾಗೆ ಬಿಡಿ.

Dishwashing Powder Or Liquid

ಹಲ್ಲುಜ್ಜುವ ಬ್ರಶ್ ತೆಗೆದುಕೊಂಡು ಬಂಗಾರದ ಆಭರಣಗಳ ಅಂಚುಗಳನ್ನು ತೊಳೆಯಿರಿ. ಇದರಿಂದ ಧೂಳು ಹೊರಗೆ ಬರುತ್ತದೆ. ಇದರ ಬಳಿಕ ಸ್ವಚ್ಛವಾದ ನೀರಿನಲ್ಲಿ ಆಭರಗಳನ್ನು ಹಾಕಿ ತೆಗೆಯಿರಿ. ಬಟ್ಟೆಯಿಂದ ಆಭರದಲ್ಲಿರುವ ನೀರನ್ನು ಉಜ್ಜಿಕೊಳ್ಳಿ. ಬಂಗಾರದ ಆಭರಗಳನ್ನು ಸ್ವಚ್ಛ ಮಾಡಿಕೊಳ್ಳಲು ಇದು ತುಂಬಾ ಅಗ್ಗದ ವಿಧಾನ.

2. ಹಲ್ಲುಜ್ಜುವ ಪೇಸ್ಟ್
ಬಂಗಾರದ ಆಭರಣಗಳನ್ನು ಮನೆಯಲ್ಲೇ ಯಾವುದೇ ಹೆಚ್ಚಿನ ವೆಚ್ಚವಿಲ್ಲದೆ ಸ್ವಲ್ಪಗೊಳಿಸುವ ಸುಲಭ ವಿಧಾನವೆಂದರೆ ಹಲ್ಲುಜ್ಜುವ ಪೇಸ್ಟ್. ಸ್ವಲ್ಪ ಹಲ್ಲುಜ್ಜುವ ಪೇಸ್ಟ್ ತೆಗೆದುಕೊಂಡು ಬಂಗಾರದ ಆಭರಣದ ಮೇಲೆ ಹಾಕಿಕೊಳ್ಳಿ. ಹಳೆಯ ಹಲ್ಲುಜ್ಜುವ ಬ್ರಶ್ ತೆಗೆದುಕೊಂಡು ಆಭರಣದ ಅಂಚು ಹಾಗೂ ಸಂಧುಗಳನ್ನು ಸರಿಯಾಗಿ ಉಜ್ಜಿಕೊಳ್ಳಿ. ಹೆಚ್ಚು ರಾಸಾಯನಿಕವಿಲ್ಲದಂತಹ ಪೇಸ್ಟ್ ಬಳಸಿದರೆ ಬಂಗಾರಕ್ಕೆ ಯಾವುದೇ ಹಾನಿಯಾಗದು. ಇದರ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಐದು ನಿಮಿಷ ಕಾಲ ಆಭರಣಗಳನ್ನು ಹಾಕಿಡಿ. ಬಳಿಕ ಬಟ್ಟೆಯಿಂದ ಒರೆಸಿಕೊಳ್ಳಿ.

3. ಅಮೋನಿಯಾ
ಸ್ವಲ್ಪ ಉಗುರುಬೆಚ್ಚಗಿನ ನೀರಿಗೆ ಅಮೋನಿಯಾ ಹುಡಿಯನ್ನು ಹಾಕಿ. ಬಂಗಾರದ ಆಭರಣಗಳನ್ನು ಈ ಮಿಶ್ರಣದಲ್ಲಿ ಹಾಕಿ ಎರಡು ನಿಮಿಷ ಬಿಟ್ಟು ತೆಗೆಯಿರಿ. ಬ್ರಶ್ ನಿಂದ ಆಭರಣಗಳ ಅಂಚು ಹಾಗೂ ಸಂಧುಗಳನ್ನು ಉಜ್ಜಿಕೊಳ್ಳಿ. ಬಳಿಕ ಸ್ವಚ್ಛ ನೀರಿನಿಂದ ಆಭರಣಗಳನ್ನು ತೊಳೆಯಿರಿ. ಬಂಗಾರದ ಆಭರಣ ತೊಳೆಯಲು ಅಮೋನಿಯಾ ತುಂಬಾ ಉಪಯುಕ್ತ. ಆದರೆ ಆಭರಣಗಳಲ್ಲಿ ಯಾವುದೇ ರೀತಿಯ ಮುತ್ತು, ರತ್ನ ಹಾಗೂ ಹವಳ ಇರಬಾರದು.

4. ಉಪ್ಪು ನೀರು


ಬೆಳ್ಳಿಯ ಆಭರಣಗಳನ್ನು ತೊಳೆಯಲು ಉಪ್ಪು ನೀರು ತುಂಬಾ ಒಳ್ಳೆಯದು. ಸ್ವಲ್ಪ ಬಿಸಿ ನೀರಿಗೆ ಉಪ್ಪು ನೀರನ್ನು ಹಾಕಿಕೊಳ್ಳಿ. ಬೆಳ್ಳಿಯ ಆಭರಣಗಳನ್ನು ಇದರಲ್ಲಿ ಮುಳುಗಿಸಿ ಸ್ವಲ್ಪ ಸಮಯ ಹಾಗೆ ಬಿಡಿ. ಬ್ರಶ್ ತೆಗೆದುಕೊಂಡು ಬೆಳ್ಳಿ ಆಭರಣಗಳ ಬದಿ ಹಾಗೂ ಸಂಧುಗಳನ್ನು ತೊಳೆಯಿರಿ. ಬಳಿಕ ಸ್ವಚ್ಛ ನೀರಿಗೆ ಹಾಕಿ ತೆಗೆದು ಬಟ್ಟೆಯಿಂದ ಒರೆಸಿಕೊಳ್ಳಿ. ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸಲು ಇದು ತುಂಬಾ ಅಗ್ಗ ಹಾಗೂ ವೇಗದ ವಿಧಾನವಾಗಿದೆ.

5. ಬೆಳ್ಳಿಯ ಪಾಲಿಶ್


ಬೆಳ್ಳಿ ಆಭರಣಗಳಿಗೆ ಹೊಳಪನ್ನು ನೀಡಲು ಅನುಸರಿಸುವ ಮತ್ತೊಂದು ವಿಧಾನವೆಂದರೆ ಬೆಳ್ಳಿಯ ಪಾಲಿಶ್ ನೀಡುವುದು. ಮಾರುಕಟ್ಟೆಯಲ್ಲಿ ಸಿಗುವಂತಹ ಬೆಳ್ಳಿಯ ಪಾಲಿಶ್ ನಿಂದ ಬೆಳ್ಳಿಯ ಆಭರಣಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಆಭರಣದಲ್ಲಿರುವ ಕಳೆ ಹಾಗೂ ಧೂಳನ್ನು ಇದು ತುಂಬಾ ಸುಲಭವಾಗಿ ತೆಗೆದುಹಾಕುತ್ತದೆ. ಸ್ವಲ್ಪ ಪಾಲಿಶ್ ತೆಗೆದುಕೊಂಡು ಆಭರಣದ ಮೇಲೆ ಹಾಕಿ ಉಜ್ಜಿಕೊಳ್ಳಿ. ಇದನ್ನು ಬಟ್ಟೆಯಿಂದ ಉಜ್ಜಿ ತಂಪಾದ ನೀರಿನಿಂದ ತೊಳೆಯಿರಿ. ತುಂಬಾ ಗಡುಸಾಗಿ ಆಭರಣಗಳನ್ನು ಉಜ್ಜಿದರೆ ಬಣ್ಣ ಕಳೆದುಕೊಳ್ಳುವ ಅಪಾಯವಿರುತ್ತದೆ.

6. ಅಲ್ಯುಮಿನಿಯಂ ಹಾಳೆ
ಸ್ವಲ್ಪ ಅಲ್ಯುಮಿನಿಯಂ ಹಾಳೆಯನ್ನು ತೆಗೆದುಕೊಂಡು ಅದನ್ನು ಒಂದು ಪಾತ್ರೆಯಲ್ಲಿ ಹರಡಿಬಿಡಿ. ಇದರಲ್ಲಿ ಬೆಳ್ಳಿ ಆಭರಣಗಳನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ಅಡುಗೆ ಸೋಡಾ ಸಿಂಪಡಿಸಿ. ಉಗುರುಬೆಚ್ಚಗಿನ ನೀರಿಗೆ ಆಭರಣಗಳನ್ನು ಹಾಕಿ. ನೀರು ಹೆಚ್ಚು ಬಿಸಿ ಇದ್ದರೆ ಆಭರಣಗಳ ಬಣ್ಣವು ಹಾಳೆಗೆ ಹೋಗಬಹುದು. ಆಭರಣ ಬಣ್ಣ ಹಾಗೆ ಉಳಿದುಕೊಳ್ಳಲು ಹಲವಾರು ಸಲ ಹೀಗೆ ಮಾಡಿಕೊಳ್ಳಿ. ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ತೊಳೆಯಲು ಇದು ಕೆಲವೊಂದು ವಿಧಾನಗಳು.

English summary

Easy Tips To Clean Gold & Silver Jewels

Gone are the days when no one cared about your jewellery. Today, most of the modern designs are available in gold and silver jewellery which makes them an indivisible part of a woman’s attire. Just like how our body needs maintenance and care, even gold and silver ornaments require some maintenance.
Story first published: Tuesday, November 8, 2016, 10:01 [IST]
X
Desktop Bottom Promotion