For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಗೂಡು ಕಟ್ಟಿದ ಜೇನುನೊಣಗಳಿಂದ ಮುಕ್ತಿ ಹೇಗೆ?

By Jaya Subramanya
|

ಹೂವಿನಿಂದ ಹೂವಿಗೆ ಹಾರುತ್ತಾ ಮಕರಂದವನ್ನು ಹೀರಿ ಅದರಿಂದ ಸಿಹಿಯಾದ ಜೇನು ತಯಾರಿಸುವ ಜೇನ್ನೊಣಗಳು ಪರೋಪಕಾರಿ ಜೀವಿಗಳಾಗಿವೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಜೇನು ಹುಳುಗಳು ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆಯೇ ನಮಗೆ ಸಹಾಯವನ್ನು ಮಾಡುತ್ತವೆ. ಕಷ್ಟಪಟ್ಟು ಜೇನು ಸಂಪಾದಿಸಿ ಅದನ್ನು ನಮಗೆ ನೀಡುತ್ತವೆ ಅಂತೆಯೇ ಆದಾಯದ ಹೊಸ ಹಾದಿಯನ್ನು ಇವು ನಮಗೆ ತೋರಿಸಿವೆ.

ಇಂದು ಎಷ್ಟೋ ನಿರುದ್ಯೋಗಿಗಳು ಜೇನು ಕೃಷಿಯ ಮೂಲಕ ತಮ್ಮ ಜೀವನದಲ್ಲಿ ಬೆಳಕನ್ನು ಕಂಡುಕೊಂಡಿದ್ದಾರೆ. ಕಡಿಮೆ ಬಂಡವಾಳದಲ್ಲಿ ಹೆಚ್ಚುವರಿ ಆದಾಯವನ್ನು ಗಳಿಸುವ ಜೇನು ವ್ಯವಸಾಯ ಇಂದು ಮಾರುಕಟ್ಟೆಯಲ್ಲಿ ಉತ್ತಮ ಹೆಸರನ್ನು ಗಳಿಸಿದೆ. ಆದರೆ ಜೇನು ಕೃಷಿ ನಾವಂದುಕೊಂಡಷ್ಟೇ ಸುಲಭದಲ್ಲಿ ನಮ್ಮ ಕೈಗೆ ಬರುವಂತಹದ್ದಲ್ಲ. ಮುಟ್ಟಿದರೆ ಮುನಿ ಎಂಬಂತಿರುವ ಜೇನ್ನೊಣಗಳ ದೃಷ್ಟಿಗೆ ನಾವು ಬಿದ್ದರಂತೂ ಅದರಿಂದ ತಪ್ಪಿಸಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಇಂತಹ ಅತಿಥಿಗಳನ್ನು ಮನೆಯಿಂದ ಆದಷ್ಟು ಬೇಗ ಓಡಿಸಿ!

Honey Bees

ಅದಾಗ್ಯೂ ಒಮ್ಮೊಮ್ಮೆ ಚಿಕ್ಕಮಕ್ಕಳು ಅಂತೆಯೇ ದೊಡ್ಡವರು ಕೂಡ ಜೇನ್ನೊಣದ ಕಡಿತಕ್ಕೆ ಒಳಗಾಗುತ್ತಾರೆ. ಜೇನು ಹುಳುಗಳು ಭಾರೀ ಗಾತ್ರದಲ್ಲಿ ಗೂಡು ಕಟ್ಟಿಬಿಡುತ್ತವೆ. ಮಕ್ಕಳಿರುವ ಮನೆಯಲ್ಲಿ ಈ ಗೂಡುಗಳು ಅಪಾಯಕಾರಿಯಾಗಿವೆ. ಅಂತೆಯೇ ಅವುಗಳ ಗೂಡಿಗೆ ಯಾವುದೋ ಕಾರಣಕ್ಕೆ ಹಾನಿಯುಂಟಾಯಿತು ಎಂದಾದಲ್ಲಿ ಅವುಗಳು ಏಕಾಏಕಿಯಾಗಿ ದಾಳಿಮಾಡಿಬಿಡುತ್ತವೆ. ಹಾಗಿದ್ದರೆ ಇವುಗಳನ್ನು ಹಾಗಿದ್ದರೆ ಜೇನ್ನೊಣಳಗಳ ಕಡಿತದಿಂದ ತಪ್ಪಿಸಿಕೊಂಡು ಜೇನು ಪಡೆಯುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳಲಿದ್ದೇವೆ.

ಸೋಪು ನೀರು
ಜೇನ್ನೊಣಗಳಿಂದ ಸಂರಕ್ಷಣೆಯನ್ನು ಪಡೆದುಕೊಳ್ಳಲು ಸೋಪು ನೀರು ಉತ್ತಮವಾಗಿದೆ. ಒಂದು ಭಾಗಷ್ಟು ದ್ರವ ರೂಪದ ಸೋಪು ನೀರನ್ನು ತೆಗೆದುಕೊಳ್ಳಿ ಮತ್ತು 4 ಭಾಗದಷ್ಟು ನೀರನ್ನು ಇದರೊಂದಿಗೆ ಮಿಶ್ರ ಮಾಡಿ. ಸ್ಪ್ರೇ ಬಾಟಲಿಗೆ ಹಾಕಿ. ಸ್ಪ್ರೇ ಮಾಡುವ ಮುನ್ನ ನಿಮ್ಮ ದೇಹವನ್ನು ಬಟ್ಟೆಗಳಿಂದ ಮುಚ್ಚಿಕೊಳ್ಳಿ.

ವಿನೇಗರ್
ಜೇನು ಗೂಡಿಗೆ ವಿನೇಗರ್ ಸಿಂಪಡಿಸುವುದೂ ಉತ್ತಮ ಸಲಹೆಯಾಗಿದೆ. ಮುಕ್ಕಾಲು ನೀರಿಗೆ 1 ಚಮಚದಷ್ಟು ವಿನೇಗರ್ ಅನ್ನು ಮಿಶ್ರ ಮಾಡಿ ಮತ್ತು ಸ್ಪ್ರೇ ಬಾಟಲಿಗೆ ಇದನ್ನು ಹಾಕಿ. ಜೇನು ಗೂಡಿಗೆ ಸ್ಪ್ರೇ ಮಾಡಿ. ಇದರ ವಾಸನೆಯನ್ನು ಜೇನ್ನೊಣಗಳಿಗೆ ತಡೆಯಲಾಗುವುದಿಲ್ಲ.

ಸೋಡಾ ಪಾಪ್
ಸೋಡಾ ಬಾಟಲ್ ಮತ್ತು ಸಿಹಿಯಾದ ಮೌಂಟನ್ ಡ್ಯೂ ಅಥವಾ ಸ್ಪ್ರೈಟ್ ಪಾನೀಯವನ್ನು ತೆಗೆದುಕೊಳ್ಳಿ. ಹಳೆಯ ಸೋಡಾ ಬಾಟಲಿಯನ್ನು ಅರ್ಧಕ್ಕೆ ತುಂಡರಿಸಿ. ತದನಂತರ ಅದಕ್ಕೆ ಸಿಹಿ ಸೋಡಾವನ್ನು ಹಾಕಿ ಮತ್ತು ಗಾರ್ಡನ್ ಬಳಿ ನೇತು ಹಾಕಿ. ಸೋಡಾದ ಪರಿಮಳವು ಜೇನ್ನೊಳಗಳನ್ನು ಆಕರ್ಷಿಸುತ್ತದೆ ಮತ್ತು ದ್ರಾವಣದಲ್ಲಿ ಅವು ಬಿದ್ದು ಸಾಯುತ್ತವೆ.

ಜೇಪರ್
ಜೇಪರ್ ವಸ್ತುವನ್ನು ನೋಡಿದ್ದೀರಾ? ಇದೊಂದು ಇಲೆಕ್ಟ್ರಾನಿಕ್ ಡಿವೈಸ್ ಆಗಿದ್ದು ಇದು ಕೀಟಗಳನ್ನು ಕೊಲ್ಲುತ್ತದೆ. ಸೂಪರ್ ಮಾರ್ಕೆಟ್ ಮತ್ತು ಗ್ರಾಸರಿ ಅಂಗಡಿಗಳಲ್ಲಿ ಇದು ಲಭ್ಯವಿದೆ. ನೀವು ಒಂದನ್ನು ಖರೀದಿಸಿ ಮತ್ತು ಗೂಡಿನ ಬಳಿ ಇದನ್ನು ಇರಿಸಿ. ಈ ಅಂಟಾದ ಸಾಮಾಗ್ರಿಗೆ ಜೇನ್ನೊಣಗಳು ಸಿಕ್ಕಿ ಹಾಕಿಕೊಳ್ಳುತ್ತವೆ ಮತ್ತು ಅವುಗಳಿಗೆ ಹಾರಲಾಗುವುದಿಲ್ಲ.

ಬೆಳ್ಳುಳ್ಳಿ ಪೌಡರ್
ಮೊದಲೇ ನಾವು ತಿಳಿಸಿರುವಂತೆ, ಜೇನ್ನೊಣಗಳು ಪರಿಮಳಕ್ಕೆ ಆಕರ್ಷಣೆಗೊಳ್ಳುತ್ತವೆ. ಬೆಳ್ಳುಳ್ಳಿ ಹುಡಿ ಕೂಡ ಅತ್ಯುತ್ತಮವಾಗಿದೆ. ಜೇನು ಗೂಡಿನ ಬಳಿ ಬೆಳ್ಳುಳ್ಳಿ ಹುಡಿಯನ್ನು ಸಿಂಪಡಿಸಿ. ಅಂತೆಯೇ ಅವುಗಳಿಗೆ ಗೂಡಿನ ಬಳಿ ಬರಲಾಗುವುದಿಲ್ಲ. ಇದರಿಂದ ಹುಳಗಳು ನಿಮ್ಮ ಮನೆಯನ್ನು ಬಿಟ್ಟು ಬೇರೆ ಕಡೆ ಹೊರಟು ಹೋಗುತ್ತವೆ.

English summary

Best Home Remedies To Get Rid Of Honey Bees

Here, in this article, we have listed tips to get rid of honey bees, which we hope would help you get rid of them easier. So, take a look.
X
Desktop Bottom Promotion