ಅದೃಷ್ಟ ತರುವ ಗಿಡಗಳಿವು! ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಿ

By: manu
Subscribe to Boldsky

ಅದೃಷ್ಟ ಎಂಬುವುದು ಎಲ್ಲರಿಗೂ ದಕ್ಕುವ ಸೊತ್ತಲ್ಲ. ಕೆಲವರು ಮುಟ್ಟಿದ್ದೆಲ್ಲಾ ಚಿನ್ನ, ಕೆಲವರು ಮುಟ್ಟಿದ್ದೆಲ್ಲಾ ಮಣ್ಣು. ಇದಕ್ಕೆ ಅನುಭವಸ್ಥರು ಪೂರ್ವಗ್ರಹಚಾರ ಎಂದು ಕರೆಯುತ್ತಾರೆ. ಕೆಲವೊಮ್ಮೆ ಇನ್ನೇನು ಕೈಗೆ ದಕ್ಕಿತು ಎನ್ನುವ ಸಮಯದಲ್ಲಿ ಕೈತಪ್ಪಿ ಹೋಗುವ ಹಲವು ಅವಕಾಶಗಳಿಗೆ ಮಾತ್ರ ದುರಾದೃಷ್ಟಕ್ಕಿಂತಲೂ ಆ ಅದೃಷ್ಟವನ್ನು ಹಿಡಿದುಕೊಳ್ಳುವ ಭಾಗ್ಯ ಇಲ್ಲದಿರುವುದೇ ಕಾರಣವಾಗುತ್ತದೆ.

ಈ ಭಾಗ್ಯವನ್ನು ಪಡೆಯಲು ಕೆಲವು ವಸ್ತುಗಳು ಹಾಗೂ ಬದಲಾವಣೆಗಳು ನೆರವಾಗುತ್ತವೆ. ಈ ಶಕ್ತಿಯನ್ನು ಪಡೆಯಲು ಮನೆಯ ಒಳಾಂಗಣದ ಉಪಕರಣಗಳು, ಅಲಂಕಾರಿದ ಸಾಧನಗಳು, ಮಕ್ಕಳು, ದಾನ, ಇತರರಿಗೆ ನೀಡುವ ಉಪಕಾರ, ಪ್ರಾಣಿ ದಯೆ ಇತ್ಯಾದಿಗಳು ನೆರವಾಗುತ್ತವೆ.   ಈ ಗಿಡಗಳು ಮನೆಯಲ್ಲಿದ್ದರೆ ಅದೃಷ್ಟ!

ಮನೆಯಂಗಳದಲ್ಲಿ ತುಳಸಿಯ ಗಿಡವೊಂದಿದ್ದರೆ ಬಹಳಷ್ಟು ಅದೃಷ್ಟವಿದೆ. ಈ ಗಿಡಕ್ಕೆ ಧನಾತ್ಮಕ ಮತ್ತು ಪವಿತ್ರ ತರಂಗಗಳನ್ನು ಮನೆಯೊಳಗೆ ಪ್ರವಹಿಸಿ ಅದೃಷ್ಟ ತರಲು ನೆರವಾಗುತ್ತದೆ. ಭಾರತದಲ್ಲಿ ತುಳಸಿ ಗಿಡವಾದರೆ ಇತರ ದೇಶಗಳಲ್ಲಿ ಇತರ ಶಕ್ತಿ ಇರುವ ಇತರ ಗಿಡಗಳನ್ನೂ ಮನೆಯಂಗಳದಲ್ಲಿ ಮತ್ತು ಮನೆಯೊಳಗೂ ಬೆಳೆಸುತ್ತಾರೆ ಎಂದು ಈಗ ಅಂತರ್ಜಾಲದ ಮೂಲಕ ಲಭ್ಯವಾಗುತ್ತಿರುವ ಮಾಹಿತಿಗಳ ಮೂಲಕ ಕಂಡುಬಂದಿದೆ. ಆ ದೇಶಗಳ ಜನರಿಗೆ ಅದೃಷ್ಟ ತರುವಂತಹದ್ದು ನಮ್ಮ ಮನೆಗೂ ಏಕಾಗಬಾರದು? ನಿಮ್ಮ ಆಲೋಚನೆಯೂ ಇದೇ ಆಗಿದ್ದರೆ ಕೆಳಗಿನ ಸ್ಲೈಡ್ ಶೋ ನಿಮ್ಮ ನೆರವಿಗೆ ಬರಲಿದೆ.....

ಅದೃಷ್ಟ ತರುವ ಪುಟ್ಟ ಬಿದಿರು

ಅದೃಷ್ಟ ತರುವ ಪುಟ್ಟ ಬಿದಿರು

ಚೀನೀಯರ ಅದೃಷ್ಟ ತರುವ ಚಿಕ್ಕ ಚಿಕ್ಕ ಬಿದಿರಿನ ಗಿಡಗಳು ಈಗ ಭಾರತದಲ್ಲಿಯೂ ಬಹಳಷ್ಟು ಜನಪ್ರಿಯತೆ ಕಂಡುಕೊಳ್ಳುತ್ತಿವೆ. ಚಿಕ್ಕ ಚಿಕ್ಕ ಬಿದಿರಿನ ಹಸಿ ಕಡ್ಡಿಗಳನ್ನು ಕಲಾತ್ಮಕವಾಗಿ ಜೋಡಿಸಿ ಮನೆಯ ಒಳಾಂಗಣದಲ್ಲಿ, ಮೇಜು, ಕಿಟಕಿಗಳಲ್ಲೆಲ್ಲಾ ಸ್ಥಳ ಪಡೆಯುತ್ತಿದೆ.....

ಅದೃಷ್ಟ ತರುವ ಪುಟ್ಟ ಬಿದಿರು

ಅದೃಷ್ಟ ತರುವ ಪುಟ್ಟ ಬಿದಿರು

ಚೀನೀಯರು ಇದಕ್ಕೆ ಫೆಂಗ್ ಶುಯಿ ಎಂದು ಕರೆಯುತ್ತಾರೆ. ಸರಳವಾದ ವಿನ್ಯಾಸದಲ್ಲಿ ನಾಲ್ಕು ಬಿದಿರಿನ ಹಸಿ ಕಾಂಡಗಳ ಭಾಗವನ್ನು ಕೆಂಪು ರಿಬ್ಬನ್ ಪಟ್ಟಿಯಿಂದ ಕಟ್ಟಲಾಗಿರುತ್ತದೆ. ಈ ಗಿಡ ಮನೆಯೊಳಗಿದ್ದರೆ ಅದೃಷ್ಟ ಅರಸಿ ಬರುವುದೆಂದು ನಂಬಲಾಗುತ್ತದೆ.

ತುಳಸಿ ಗಿಡ

ತುಳಸಿ ಗಿಡ

ಆಯುರ್ವೇದದ ಪ್ರಕಾರ ಔಷಧೀಯ ಗುಣಗಳ ಭಂಡಾರವೇ ಆಗಿರುವ ತುಳಸಿ ಗಿಡಕ್ಕೆ ಹಿಂದೂ ಧರ್ಮಗ್ರಂಥಗಳಲ್ಲಿ ಪವಿತ್ರಗಿಡ ಎಂದೂ ಕರೆಯಲಾಗಿದೆ. ತುಳಸಿ ಎಂದರೆ ಕೃಷ್ಣದೇವರ ಪತ್ನಿ ಹಾಗೂ ಆಕೆ ಅತ್ಯಂತ ಪವಿತ್ರಳು ಎಂಬ ವಿಶೇಷಣವನ್ನು ಇದರ ಎಲೆಗಳಿಗೆ ನೀಡಲಾಗಿದೆ.... ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?

ತುಳಸಿ ಗಿಡ

ತುಳಸಿ ಗಿಡ

ಇದರ ಎಲೆಗಳು ಹಲವು ಕಾಯಿಲೆಗಳನ್ನು ತೊಳೆದು ಹಾಕುವಂತೆಯೇ ಬಟ್ಟೆಗಳ ಕಲೆಯನ್ನೂ ತೊಲಗಿಸಬಲ್ಲದು. ಮನೆಯಂಗಳದಲ್ಲಿರುವ ತುಳಸಿ ಗಿಡ ಕೆಟ್ಟ ಶಕ್ತಿಗಳನ್ನು ದೂರವಾಗಿಸಿ ಧನಾತ್ಮಕ ಶಕ್ತಿಯನ್ನು ಮನೆಯೊಳಕ್ಕೆ ತರುತ್ತದೆ ಎಂದು ನಂಬಲಾಗಿದೆ.

ಸ್ನೇಕ್ ಪ್ಲಾಂಟ್

ಸ್ನೇಕ್ ಪ್ಲಾಂಟ್

ಅತ್ತೆಯ ನಾಲಿಗೆ (Mother-in-law's tongue) ಎಂಬ ಅನ್ವರ್ಥನಾಮವನ್ನು ಪಡೆದಿರುವ ಈ ಗಿಡದ ಎಲೆಗಳು ಉದ್ದವಾದ ನಾಲಿಗೆಯೊಂದು ನೆಲದಿಂದ ಮೇಲೆ ಚಾಚಿದಂತಿದ್ದು ನಡುವಲ್ಲಿ ಹಸಿರು ಮತ್ತು ಅಂಚುಗಳಲ್ಲಿ ಹಳದಿ ಪಟ್ಟಿಯನ್ನು ಹೊಂದಿದೆ. ಈ ಸಸ್ಯ ಮನೆಯಲ್ಲಿದ್ದರೆ ಮನೆಯೊಳಗಣ ಹಲವು ವಿಷಾನಿಲಗಳನ್ನು ಹೀರಿಕೊಳ್ಳುತ್ತದೆ ಎಂದು ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ.

ಸ್ನೇಕ್ ಪ್ಲಾಂಟ್

ಸ್ನೇಕ್ ಪ್ಲಾಂಟ್

ಅಲ್ಲದೇ ಇತರ ಗಿಡಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೀರಿ ಅತ್ಯಧಿಕ ಪ್ರಮಾಣದ ಆರ್ದ್ರತೆ ಮತ್ತು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮನೆಯಲ್ಲಿ ಹೆಚ್ಚಿನ ಆರ್ದ್ರತೆ ಇದ್ದು ಚರ್ಮದ ಆರೈಕೆಯಲ್ಲಿ ನೆರವಾಗುತ್ತದೆ. ಇದು ವಾಸ್ತವವಾಗಿ ಆರೋಗ್ಯದ ರೂಪದಲ್ಲಿ ಮನೆಗೆ ಶುಭತರುತ್ತದೆ.

ಮನಿ ಪ್ಲಾಂಟ್

ಮನಿ ಪ್ಲಾಂಟ್

ನಮ್ಮ ವೀಳೆಯದೆಲೆಯೇ ಕೊಂಚ ತೆಳು ಹಸಿರು ಹಳದಿ ಬಣ್ಣಗಳಲ್ಲಿರುವಂತೆ ಕಾಣುವ ಮನಿಪ್ಲಾಂಟ್ ಅತಿ ಸುಲಭವಾಗಿ, ಅತಿ ಕಡಿಮೆ ಆರೈಕೆಯಲ್ಲಿ, ಬರೆಯ ಕಾಂಡವನ್ನು ಕೊಂಚ ನೀರಿನಲ್ಲಿ ಮುಳುಗಿಸಿಟ್ಟರೂ ಸೊಂಪಾಗಿ ಬೆಳೆಯುವ ಗಿಡವಾಗಿದ್ದು ಇದರ ಬೆಳವಣಿಗೆಯೂ ಅತಿ ವೇಗದಲ್ಲಿ ಆಗುತ್ತದೆ. ಈ ಗಿಡ ಮನೆಯಲ್ಲಿದ್ದರೆ ಹಣ ಬರುತ್ತದೆ ಎಂಬ ನಂಬಿಕೆಯಿಂದಲೇ ಈ ಗಿಡಕ್ಕೆ ಮನಿ ಪ್ಲಾಂಟ್ ಎಂಬ ಹೆಸರು ಬಂದಿದೆ.

ಮನಿ ಪ್ಲಾಂಟ್

ಮನಿ ಪ್ಲಾಂಟ್

ವಾಸ್ತವವಾಗಿ ಈ ಗಿಡದ ಬೆಳವಣಿಗೆ ನೆಲದಿಂದ ಮೇಲಕ್ಕೇರುವಂತಿರಬೇಕೇ ಹೊರತು ಮೇಲಿನಿಂದ ಕೆಳಕ್ಕೆ ಬರುವಂತೆ ಅಲ್ಲ. ಕೆಲವರು ಕೀಟಬಾಧೆಯನ್ನು ತಡೆಯಲು, ಅಲಂಕಾರ ಹೆಚ್ಚಲು ತೂಗುಹಾಕುವ ಕುಂಡದಲ್ಲಿ ಈ ಗಿಡವನ್ನು ಬೆಳೆಸುತ್ತಾರೆ. ಆದರೆ ಈ ಪರಿಯಿಂದ ಮನಿ ಪ್ಲಾಂಟ್‌ನ ಶಕ್ತಿಯೂ ವಿರುದ್ದವಾಗುತ್ತದೆ. ಅಂದರೆ ಹಣ ಮನೆಯಿಂದ ಹೊರಹೋಗುತ್ತದೆ. ಆದ್ದರಿಂದ ಸದಾ ಮನಿ ಪ್ಲಾಂಟ್ ಕಳಗಿನಿಂತ ಮೇಲೆ ಹೋಗುವಂತೆ ಮಾತ್ರ ಬೆಳೆಸಿ.

 
English summary

Best Good Luck Plants For Your Home

Good luck plants are an interesting new trend for your home decor and your garden. Lucky plants are supposed to bring good fortune. Earlier these good luck charms for homes was a local or at best regional trends. Every courtyard would have a Tulsi plant to bring forth auspicious energy into the house But now, we have an information explosion on the internet and with the world so well connected, good luck plants have become more of a global trend. You enter any average Indian home and you will see the famous lucky bamboo plants.
Please Wait while comments are loading...
Subscribe Newsletter