ಸಕ್ಕರೆ ಚಹಾ, ಕಾಫಿಗೆ ಮಾತ್ರವಲ್ಲ-ಸ್ವಚ್ಛತೆಗೂ ಬೇಕು!

By: manu
Subscribe to Boldsky

ಸಕ್ಕರೆ, ಪ್ರತಿ ಮನೆಯ ಒಂದು ಅನಿವಾರ್ಯ ಸಿಹಿಪದಾರ್ಥ. ಯಾವುದೇ ಪದಾರ್ಥ ಅಥವಾ ಚಹಾ, ಕಾಫಿ ಮೊದಲಾದ ಪೇಯಗಳ ಸಿಹಿ ಹೆಚ್ಚಿಸಲೂ ಸಕ್ಕರೆ ಬಳಕೆಯಾಗುತ್ತದೆ. ಆದರೆ ಸಿಹಿ ಹೆಚ್ಚಿಸುವ ಈ ಸಕ್ಕರೆ ಮನೆಯ ಸ್ವಚ್ಛತೆಯಲ್ಲಿಯೂ ಹಲವು ವಿಧದಲ್ಲಿ ನೆರವಿಗೆ ಬರುತ್ತದೆ ಎಂದು ಈ ಮೊದಲು ಗೊತ್ತಿತ್ತೇ? ಸ್ವಚ್ಛತೆಗೆ ಹಲವು ವಿಧದಲ್ಲಿ ನೆರವು ನೀಡುವ ಮನೆಯಲ್ಲಿರುವ ಇನ್ನೊಂದು ಸಾಮಾಗ್ರಿ ಎಂದರೆ ಉಪ್ಪು. ಉಪ್ಪಿನಂತೆಯೇ ಸಕ್ಕರೆಯೂ ಹಲವು ವಿಧದಲ್ಲಿ ಸ್ವಚ್ಛತೆಗೆ ನೆರವಾಗುತ್ತದೆ.

ಒಂದು ವೇಳೆ ಸಕ್ಕರೆಯನ್ನು ಬೇರೆ ದ್ರವದೊಡನೆ ಕರಗಿಸಿ ಬಳಸಿದರೆ ಇದು ಇನ್ನೂ ಹೆಚ್ಚು ಫಲಪ್ರದವಾಗುತ್ತದೆ. ಸಕ್ಕರೆಗೆ ಕೀಟಗಳು ಆಕರ್ಷಿತವಾಗುವುದು ಕೀಟಗಳ ನಿವಾರಣೆಗೆ ಇನ್ನೊಂದು ಪರ್ಯಾಯ ಮಾರ್ಗವಾಗಿದೆ. ಬನ್ನಿ ಸಕ್ಕರೆ ನಮ್ಮ ಮನೆಯಲ್ಲಿ ಯಾವ ರೀತಿಯಲ್ಲಿ ಸ್ವಚ್ಛತೆಗೆ ಸಹಕರಿಸುತ್ತದೆ ಎಂಬ ಐದು ಮಹತ್ವದ ಮಾಹಿತಿಗಳನ್ನು ಅರಿಯೋಣ:

 Ways To Use Sugar For Cleaning At Home

ಸಕ್ಕರೆ ಮತ್ತು ಅಡುಗೆ ಸೋಡಾ

ಮೂರು ದೊಡ್ಡಚಮಚ ಸಕ್ಕರೆ ಮತ್ತು ಒಂದು ದೊಡ್ಡಚಮಚ ಬೇಕಿಂಗ್ ಪೌಡರ್ (ಅಡುಗೆ ಸೋಡಾ) ಮತ್ತು ಕೊಂಚ ನೀರು ಸೇರಿಸಿ ಮಿಶ್ರಣ ಮಾಡಿ ದಟ್ಟನೆಯ ದ್ರಾವಣ ತಯಾರಿಸಿ. ಈ ದ್ರಾವಣ ಪಾತ್ರೆ ತೊಳೆಯಲು ಅತಿ ಉಪಯುಕ್ತವಾಗಿದೆ. ಈ ದ್ರಾವಣದಿಂದ ಪಾತ್ರೆಗಳು ಸುಲಭವಾಗಿ ಸ್ವಚ್ಛಗೊಳ್ಳುವುದು ಮಾತ್ರವಲ್ಲದೇ ಹೊಸ ಪಾತ್ರೆಗಳ ಹೊಳಪನ್ನೂ ಪಡೆಯುತ್ತವೆ.

ಸಕ್ಕರೆ ಮತ್ತು ಗುಲಾಬಿ ನೀರು

ಒಂದು ಚಿಕ್ಕ ಪಾತ್ರೆಯಲ್ಲಿ ಮೂರು ದೊಡ್ಡಚಮಚ ಸಕ್ಕರೆ ಮತ್ತು ಒಂದು ದೊಡ್ಡಚಮಚ ಗುಲಾಬಿ ನೀರು ಸೇರಿಸಿ ಸಕ್ಕರೆ ಕರಗುವವರೆಗೆ ತಿರುವುತ್ತಾ ಮಿಶ್ರಣ ಮಾಡಿ. ಇದು ಬೆಳ್ಳಿಯ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಮತ್ತು ಹೊಳಪು ನೀಡಲು ಅತ್ಯುತ್ತಮವಾಗಿದೆ. ಬೆಳ್ಳಿಯ ವಿಗ್ರಹ ಮತ್ತು ಇತರ ವಸ್ತುಗಳನ್ನು ಸ್ವಚ್ಛಗೊಳಿಸಲು ಇದು ಅತ್ಯುತ್ತಮವಾದ ಮನೆಮದ್ದಾಗಿದೆ.

 Ways To Use Sugar For Cleaning At Home

ಸಕ್ಕರೆ ಮತ್ತು ಲಿಂಬೆರಸ

ಒಂದು ಇಡಿಯ ಲಿಂಬೆಯನ್ನು ಹಿಂಡಿ ರಸವನ್ನು ಒಂದು ಚಿಕ್ಕಪಾತ್ರೆಯಲ್ಲಿ ಸಂಗ್ರಹಿಸಿ. ಇದಕ್ಕೆ ಮೂರು ದೊಡ್ಡಚಮಚ ಸಕ್ಕರೆ ಸೇರಿಸಿ ಕಲಸಿ. ಈ ದ್ರಾವಣ ತುಕ್ಕು ತೆಗೆಯುವುದರಲ್ಲಿ ಅತ್ಯುತ್ತಮವಾಗಿದೆ. ತುಕ್ಕು ಬಂದ ಯಾವುದೇ ಪಾತ್ರೆ ಅಥವಾ ಇತರ ವಸ್ತುಗಳನ್ನು ಈ ದ್ರಾವಣ ಬಳಸಿ ಸುಲಭವಾಗಿ ನಿವಾರಿಸಬಹುದು.

ಸಕ್ಕರೆ ಮತ್ತು ಶಿರ್ಕಾ

ಸಕ್ಕರೆ ಮತ್ತು ಶಿರ್ಕಾದ ಜೋಡಿ ಮನೆಯ ನೆಲವನ್ನು ಒರೆಸಲು ಅತ್ಯುತ್ತಮವಾಗಿದೆ. ಇದು ಮೊಸಾಯಿಕ್ ಅಥವಾ ಮರದ ನೆಲದಲ್ಲಿ ಮೂಡಿದ್ದ ಕಲೆಗಳನ್ನು ನಿವಾರಿಸಲು ಸಕ್ಷಮವಾಗಿದೆ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ನಾಲ್ಕು ದೊಡ್ಡಚಮಚ ಶಿರ್ಕಾ ಮತ್ತು ಒಂದು ದೊಡ್ಡ ಚಮಚ ಸಕ್ಕರೆ ಸೇರಿಸಿ ಕಲಕಿ. ಈ ದ್ರಾವಣದಲ್ಲಿ ದಪ್ಪನೆಯ ಹತ್ತಿಯುಂಡೆಯನ್ನು ಮುಳುಗಿಸಿ ಕಲೆಗಳಿರುವಲ್ಲಿ ಉಜ್ಜಿ. ಕಲೆಗಳು ಸುಲಭವಾಗಿ ನಿವಾರಿಸಲ್ಪಡುತ್ತವೆ. ಕಲೆ ಹಸಿಯಾಗಿದ್ದಾಗಲೇ ನಿವಾರಣೆ ಸುಲಭ ಹಳೆಯ ಕಲೆಯಾಗಿದ್ದರೆ ಕಲೆಯ ಮೇಲೆ ಈ ದ್ರಾವಣವನ್ನು ಕೊಂಚ ಕಾಲ ಹರಡಿ ಬಳಿಕ ಉಜ್ಜಿ.

 Ways To Use Sugar For Cleaning At Home

ಸಕ್ಕರೆ ಮತ್ತು ಟೊಮೇಟೊ ರಸ

ಟೊಮೇಟೊ ರಸ ಬಟ್ಟೆಗಳ ಕಲೆಗಳನ್ನು ನಿವಾರಿಸುವಲ್ಲಿ ಉತ್ತಮವಾಗಿದೆ. ಒಂದು ವೇಳೆ ಕಲೆ ಬಹಳ ಹಠಮಾರಿಯಾಗಿದ್ದರೆ ಸಮಪ್ರಮಾಣದಲ್ಲಿ ಟೊಮೇಟೊ ರಸ ಮತ್ತು ಸಕ್ಕರೆಯನ್ನು ಸೇರಿಸಿದ ದ್ರಾವಣವನ್ನು ಕಲೆಯ ಮೇಲೆ ಹಚ್ಚಿ ಕೊಂಚಕಾಲ ಬಿಡಿ. ಬಳಿಕ ಬಟ್ಟೆಯ ಬ್ರಶ್ ಬಳಸಿ ಕೊಂಚವೇ ಉಜ್ಜಿ ತೊಳೆಯುವ ಮೂಲಕ ಕಲೆ ಸುಲಭವಾಗಿ ತೊಲಗುತ್ತದೆ.

ಕಿವಿಮಾತು: ಬಟ್ಟೆಗೆ ಬಬ್ಬಲ್ ಗಂ ಅಂಟಿಕೊಂಡಿದ್ದರೆ ನಿವಾರಿಸುವುದು ಹೇಗೆ? ಇದಕ್ಕೊಂದು ಸುಲಭ ವಿಧಾನವಿದೆ. ಬಟ್ಟೆಯನ್ನು ಫ್ರಿಜ್ಜಿನ ಫ್ರೀಜರಿನಲ್ಲಿ ಒಂದು ರಾತ್ರಿಯಿಡೀ ಇರಿಸಿ. ಬೆಳಿಗ್ಗೆ ಬಬ್ಬಲ್ ಗಂ ಗಟ್ಟಿಯಾಗಿರುತ್ತದೆ. ಇದನ್ನು ಮಡಚಿದರೆ ತುಂಡುತುಂಡಾಗಿ ಹೋಗುತ್ತದೆ. ಕೊಂಚವಾಗಿ ಬಟ್ಟೆಯನ್ನು ಬಬ್ಬಲ್ ಗಂ ಅಂಟಿಕೊಂಡಿದ್ದ ವಿರುದ್ಧ ಭಾಗಕ್ಕೆ ಮಡಚುತ್ತಾ ಎಳೆಯುವ ಮೂಲಕ ಬಬ್ಬಲ್ ಗಂ ಪುಡಿಪುಡಿಯಾಗಿ ಹೋಗುತ್ತದೆ. ಉಳಿದ ಪುಡಿಯನ್ನು ಸೋಪಿನ ದ್ರಾವಣದಿಂದ ಸುಲಭವಾಗಿ ನಿವಾರಿಸಬಹುದು.

English summary

Ways To Use Sugar For Cleaning At Home

Sugar is one of the main ingredients which is present in almost every home. Sugar is a sweet kitchen ingredient that is normally used in food or beverages to make the item taste sweet and yummy. However, did you know that this same sugar can be used as a cleaning agent too.
Story first published: Sunday, November 1, 2015, 11:52 [IST]
Subscribe Newsletter