For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯ ಕಪ್‌ಬೋರ್ಡ್ ಕೂಡ ಫಳ ಫಳ ಹೊಳೆಯುತ್ತಿರಲಿ!

By Hemanth
|

ಮನೆಯಂಗಳ ಮತ್ತು ಅಡುಗೆ ಕೋಣೆ ನೋಡಿದರೆ ಮನೆಯ ಮಹಿಳೆಯರು ಹೇಗೆಂದು ಹೇಳಬಹುದು ಎಂದು ಹಿರಿಯರು ಹೇಳುತ್ತಾರೆ. ಮನೆ ಎಂದರೆ ಅದರಲ್ಲಿ ಕೇವಲ ಹಾಲ್, ಕೋಣೆಗಳು ಮಾತ್ರವಲ್ಲ, ಪ್ರಮುಖವಾಗಿ ಬೇಕಾಗಿರುವಂತಹದ್ದು ಅಡುಗೆಕೋಣೆ. ಇದನ್ನು ಎಷ್ಟು ಅಚ್ಚುಕಟ್ಟಾಗಿ, ಸ್ವಚ್ಛವಾಗಿ ಇಟ್ಟಿದ್ದೀರಾ ಎನ್ನುವುದು ನಿಮ್ಮ ಮನೆ ಎಷ್ಟು ಪರಿಪೂರ್ಣ ಎಂದು ಹೇಳುತ್ತದೆ.

ಮನೆಯ ಇತರ ಭಾಗಗಳು ಸ್ವಚ್ಛವಾಗಿದ್ದು, ಅಡುಗೆ ಕೋಣೆ ನಿರ್ಮಲವಾಗಿಲ್ಲವೆಂದರೆ ಅದು ಮನೆಯವರ ಬೇಜವಾಬ್ದಾರಿಯನ್ನು ಸಾರಿ ಹೇಳುತ್ತದೆ. ಶೌಚಾಲಯವನ್ನು ಯಾರು ಸ್ವಚ್ಛ ಮತ್ತು ಅಲಂಕಾರವಾಗಿ ಇಟ್ಟುಕೊಂಡಿರುತ್ತಾರೆಯಾ ಅವರನ್ನು ಆಧುನಿಕತೆಯ ಮೂರ್ತರೂಪಕರು ಎನ್ನಬಹುದು. ಆದರೆ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡರೆ ಅದು ನಿಮ್ಮ ನಿರ್ಮಲ ಜೀವನಕ್ಕೆ ಹಿಡಿದ ಕನ್ನಡಿ.

Ways To Clean Window Shield Of Kitchen Cupboards

ನಾವು ಸೇವಿಸುವ ಆಹಾರವನ್ನು ಅಡುಗೆ ಮನೆಯಲ್ಲಿ ತಯಾರಿಸುವುದರಿಂದ ಅದನ್ನು ಅಚ್ಚುಕಟ್ಟಾಗಿ ಇಟ್ಟುಕೊಂಡರೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಅಡುಗೆ ಮನೆಯ ನೈರ್ಮಲ್ಯಕ್ಕೆ ದೊಡ್ಡ ಸಮಸ್ಯೆಯೆಂದರೆ ಅದು ಎಣ್ಣೆ ಜಿಡ್ಡು. ಅಡುಗೆ ಮನೆಯಲ್ಲಿ ಹೊಗೆಹೋಗುವ ಚಿಮಿನಿ ಇದ್ದರೂ ಗ್ರೀಸ್ ನಿಂದಾಗಿ ಗ್ಯಾಸ್ ನ ಓವನ್, ಕಪಾಟು ಮತ್ತು ಕಪ್ ಬೋರ್ಡ್‌ನ ಕಿಟಕಿಯಶೀಲ್ಡ್‪ ಗಳಲ್ಲಿ(ವಿಂಡೋ ಶೀಲ್ಡ್) ಕಲೆಗಳು ಉಂಟಾಗುತ್ತದೆ. ಕೆಲವು ಸಲ ಎಣ್ಣೆ, ಮಸಾಲೆ ಮತ್ತು ಜಿಡ್ಡಿನ ಅಂಶಗಳನ್ನು ಕಿಟಕಿಯ ಶೀಲ್ಡ್‌ನಿಂದ ತೆಗೆಯುವುದು ತುಂಬಾ ಕಷ್ಟ. ಕೆಲವೊಂದು ಟಿಪ್ಸ್‌ಗಳಿವೆ. ಕಿಚನ್ ಶೆಲ್ಫ್ ಜೋಡಿಸುವ ವಿಧಾನಗಳು

ಹಾಗಾದರೆ ಅಡುಗೆ ಮನೆಯ ಕಪ್ ಬೋರ್ಡ್‌ನ ಕಿಟಕಿಯ ಶೀಲ್ಡ್‌ಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಕಿಟಕಿಗಳನ್ನು ಸ್ವಚ್ಛಗೊಳಿಸಲು ಕೇವಲ ನೀರು ಮತ್ತು ಸೋಪ್ ಸಾಕಾಗದು. ಅಡುಗೆ ಮನೆಯ ಕಿಟಕಿಗಳನ್ನು ಸ್ವಚ್ಛಗೊಳಿಸಲು ನಿಮಗೆ ಕೆಲವು ಟಿಪ್ಸ್ ಬೇಕಾಗಿದೆ. ಧೂಳು ಮತ್ತು ಜೇಡರ ಬಲೆಯನ್ನು ಸ್ಪಂಜ್ ಅಥವಾ ಬ್ರಶ್ ನಿಂದ ಸ್ವಚ್ಛಗೊಳಿಸಬಹುದು. ಆದರೆ ಕಿಟಕಿಗೆ ಅಂಟಿರುವ ಎಣ್ಣೆಯ ಜಿಡ್ಡನ್ನು ಹೇಗೆ ತೆಗೆಯುತ್ತೀರಿ? ಅಡುಗೆ ಮನೆ ಕಪ್ ಬೋರ್ಡ್‌ನ ಕಿಟಕಿಯ ಶೀಲ್ಡ್‌ಗಳನ್ನು ಹೇಗೆ ಸ್ವಚ್ಛಗೊಳಿಸಬಹುದು ಎಂದು ತಿಳಿಯಲು ಮುಂದೆ ಓದಿ.

ನೀರಿನಿಂದ ತೊಳೆಯಿರಿ
ಅಡುಗೆ ಮನೆಯ ಕಿಟಕಿಗಳನ್ನು ತೊಳೆಯಲು ಅತ್ಯಂತ ಸರಳ ವಿಧಾನ ನೀರಿನಿಂದ ತೊಳೆಯುವುದು. ನಿಯಮಿತವಾಗಿ ಕಿಟಕಿಗಳನ್ನು ನೀರು ಹಾಕಿ ತೊಳೆಯುತ್ತಾ ಇದ್ದರೆ ಆಗ ಹೆಚ್ಚುವರಿ ಹೊರೆ ಹೊತ್ತುಕೊಂಡು ಗಂಟೆಗಟ್ಟಲೆ ಅದನ್ನು ತೊಳೆಯಬೇಕೆಂದಿಲ್ಲ. ಬಿಸಿ ನೀರನ್ನು ಬಳಸಿ ಎಣ್ಣೆ ಜಿಡ್ಡನ್ನು ತೆಗೆಯಲು ಪ್ರಯತ್ನಿಸಿ.

ಬೇಕಿಂಗ್ ಸೋಡಾ ಬಳಸಿ
ಬೇಕಿಂಗ್ ಸೋಡಾ ಹಾಕಿ ಅಡುಗೆ ಕೋಣೆಯ ಕಪ್ ಬೋರ್ಡ್‌ಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಬೇಕಿಂಗ್ ಸೋಡಾದಿಂದ ಅಡುಗೆ ಮನೆಗೆ ಹಲವಾರು ಉಪಯೋಗಗಳಿವೆ. ಬೇಕಿಂಗ್ ಸೋಡಾವನ್ನು ನೀರಿಗೆ ಹಾಕಿ ಕಲಸಿ ಮತ್ತು ಒಂದು ಸ್ಪಂಜ್ ತೆಗೆದುಕೊಂಡು ಆ ನೀರಿನಲ್ಲಿ ಅದ್ದಿ ತೆಗೆದು ಕಪ್ ಬೋರ್ಡ್‌ನ ಕಿಟಕಿಯ ಶೀಲ್ಡ್ ಅನ್ನು ಉಜ್ಜಿ. ಎಣ್ಣೆ ಜಿಡ್ಡನ್ನು ತೆಗೆಯುವ ಬೇಕಿಂಗ್ ಸೋಡಾ ಕಿಟಕಿಗೆ ಹೊಳಪನ್ನು ನೀಡುತ್ತದೆ. ಕೀಟಗಳ ನಿವಾರಣೆಗೆ ನೈಸರ್ಗಿಕ ದಾರಿಗಳು

ಲಿಂಬೆಯ ನೆರವು


ಕೆಲವು ಸಲ ಕಿಟಕಿಯಲ್ಲಿ ನೀರಿನ ಕಲೆಗಳು ಉಳಿದಿರುತ್ತದೆ. ನಿಂಬೆಯು ಇದನ್ನು ತೆಗೆಯಲು ನೆರವಾಗುತ್ತದೆ. ಒಂದು ಲಿಂಬೆ ತುಂಡನ್ನು ತೆಗೆದುಕೊಂಡು ಕಪ್ ಬೋರ್ಡ್ ನ ವಿಂಡೋ ಶೀಲ್ಡ್ ನ್ನು ಉಜ್ಜಬಹುದು. ಮೊದಲು ಸ್ವಲ್ಪ ಉಪ್ಪನ್ನು ಸಿಂಪಡಿಸಿ ಬಳಿಕ ಲಿಂಬೆಯನ್ನು ಉಜ್ಜಿದರೆ ಹೆಚ್ಚು ಪರಿಣಾಮಕಾರಿ.ಕೆಟ್ಟ ವಾಸನೆ ಬರುತ್ತಿದ್ದರೆ ಅದನ್ನು ನಿಂಬೆಯು ದೂರ ಮಾಡುತ್ತದೆ.

ವಿನೇಗರ್‌ನ ಉಪಯೋಗ


ಅಡುಗೆಮನೆಯಲ್ಲಿ ಕಿಟಕಿಯನ್ನು ಸ್ವಚ್ಛ ಮಾಡಬೇಕೆಂದು ಇದ್ದರೆ ನಿಮಗೆ ನೀಡುವ ಟಿಪ್ಸ್ ಯಾವುದು ಗೊತ್ತೇ? ಅದೇ ವಿನೇಗರ್. ನೀರು ಮತ್ತು ವಿನೇಗರ್ ಅನ್ನು ಮಿಶ್ರಣ ಮಾಡಿ. ಇದಕ್ಕೆ ಕೆಲವು ಹನಿ ಆಲಿವ್ ಆಯಿಲ್ ಹಾಕಿ. ಈ ಮಿಶ್ರಣಕ್ಕೆ ಒಂದು ಸ್ಪಂಜ್ ಅನ್ನು ಮುಳುಗಿಸಿ ಮತ್ತು ಕಿಟಕಿಯ ಶೀಲ್ಡ್ ಗಳನ್ನು ಸ್ಪಂಜ್ ನಿಂದ ಸರಿಯಾಗಿ ಉಜ್ಜಿ. ವಿನೇಗರ್ ಜಿಡ್ಡನ್ನು ತೆಗೆಯುವುದರೊಂದಿಗೆ ಸೋಂಕು ನಿವಾರಕವಾಗಿ ಕೆಲಸ ಮಾಡುತ್ತದೆ. ಆಲಿವ್ ಆಯಿಲ್ ಕಿಟಕಿಯನ್ನು ಮತ್ತಷ್ಟು ಹೊಳೆಯುವಂತೆ ಮಾಡುತ್ತದೆ.
English summary

Ways To Clean Window Shield Of Kitchen Cupboards

Your house is not only a compilation of a few rooms. It is the reality of your dream. Therefore, you must always take special care to maintain it. Your taste will be admired when you concentrate on every part of your house. It is said that the person who keeps his bathroom clean and well decorated is an epitome of sophistication. But if you keep your kitchen clean, it is the sign of your hygienic life style
Story first published: Thursday, July 9, 2015, 19:19 [IST]
X
Desktop Bottom Promotion