For Quick Alerts
ALLOW NOTIFICATIONS  
For Daily Alerts

ನಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಹಲ್ಲುಜ್ಜುವ ಪೇಸ್ಟ್!

By Super
|

ದಿನದ ಮೊದಲ ಕಾರ್ಯಕ್ರಮವಾದ ಹಲ್ಲುಜ್ಜುವಿಕೆಯಲ್ಲಿ ಬಳಕೆಯಾಗುವ ಟೂಥ್ ಪೇಸ್ಟ್ ಅಥವಾ ಹಲ್ಲುಜ್ಜುವ ಪೇಸ್ಟ್ ಮುಖ್ಯ ಕಾರ್ಯವೆಂದರೆ ಹಲ್ಲುಗಳ ಸಂದುಗಳಲ್ಲಿದ್ದ ಆಹಾರಕಣವನ್ನು ನಿವಾರಿಸುವುದು, ಒಸಡುಗಳ ಆರೋಗ್ಯ ಕಾಪಾಡುವುದು ಮತ್ತು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುವುದು.

ಈ ಮೂರೂ ಕೆಲಸಗಳ ಆದ್ಯತೆಯನ್ನು ಕೊಂಚವೇ ಹೆಚ್ಚು ಕಡಿಮೆಯಾಗಿಸಿ ಹಲವು ವಿಧದ ಹಲ್ಲುಜ್ಜುವ ಪೇಸ್ಟ್‌ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅದರಲ್ಲೂ ಒಸಡುಗಳಿಗೆ ಹೆಚ್ಚಿನ ಆದ್ಯತೆ ನೀಡುವ ಪೇಸ್ಟ್‌ಗಳು ದುಬಾರಿಯಾಗಿವೆ. ಏನೇ ಇರಲಿ, ಇವುಗಳ ಪ್ರಮುಖ ಕಾರ್ಯವೆಂದರೆ ಹಲ್ಲು ಮತ್ತು ಬಾಯಿಯ ಸ್ವಚ್ಛತೆಗೆ ಮೀಸಲಾಗಿದೆ.

ಆದರೆ ಇವುಗಳನ್ನು ಹಲವರು ಇದರ ನಿಗದಿತ ಬಳಕೆಯನ್ನು ಮೀರಿ ಇನ್ನೂ ಹತ್ತು ಹಲವು ಅಸಾಂಪ್ರಾದಾಯಿಕ ಕೆಲಸಗಳಿಗೆ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದು ಇದರ ಪರಿಣಾಮ ಕಂಡರೆ ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ಏಕೆಂದರೆ ನಾವ್ಯಾರೂ ಈ ಬಗ್ಗೆ ಯೋಚಿಸಿಯೇ ಇರದ, ಅಥವಾ ಹೀಗೂ ಇದರ ಬಳಕೆಯಾಗಬಹುದೇ ಎಂಬ ಕಲ್ಪನೆಯೇ ಇರದ ಕಾರಣ ಇದು ವಿಚಿತ್ರವಾಗಿ ತೋರುತ್ತದೆ. ಹಲ್ಲುಜ್ಜುವ ಪೇಸ್ಟ್‌ನಿಂದ ಸೌಂದರ್ಯವನ್ನು ಮರಳಿ ಪಡೆಯಬಹುದೇ?

ಇನ್ನೂ ಹೆಚ್ಚೆಂದರೆ ದುಬಾರಿ ವೆಚ್ಚದಲ್ಲಿ ಮತ್ತು ವೃತ್ತಿಪರ ವ್ಯಕ್ತಿಗಳಿಂದಾಗುವ ಕೆಲವು ಕೆಲಸಗಳು ಅಗ್ಗದ ಈ ಪೇಸ್ಟ್‌ನಿಂದ ಸುಲಭವಾಗಿ ಆಗುವುದು ಆಶ್ಚರ್ಯವನ್ನೂ ಮೂಡಿಸುತ್ತದೆ. ಇವು ಯಾವುವು ಎಂಬ ಕುತೂಹಲ ಮೂಡಿತೇ? ಕೆಳಗಿನ ಸ್ಲೈಡ್ ಶೋ ನಿಮ್ಮ ಕುತೂಹಲವನ್ನು ತಣಿಸಲಿದೆ.

ಕೈಯಲ್ಲಿನ ದುರ್ವಾಸನೆಯನ್ನು ನಿವಾರಿಸುತ್ತದೆ

ಕೈಯಲ್ಲಿನ ದುರ್ವಾಸನೆಯನ್ನು ನಿವಾರಿಸುತ್ತದೆ

ಸಾಮಾನ್ಯವಾಗಿ ಹೆಚ್ಚಿನವರು ಮೀನಿನ ಖಾದ್ಯವನ್ನು ಮೆಚ್ಚುತ್ತಾರೆಯೇ ವಿನಃ ಕತ್ತರಿಸಲು ಅಥವಾ ಸ್ವಚ್ಛಗೊಳಿಸಲು ಬರುವುದೇ ಇಲ್ಲ. ಏಕೆಂದರೆ ಇದರಿಂದ ಬರುವ ವಾಸನೆ, ಕೈಯನ್ನು ನಾಲ್ಕಾರು ಬಾರಿ ಸೋಪು ಹಚ್ಚಿ ತೊಳೆದುಕೊಂಡರೂ ಕೊಂಚವಾಗಿ ಉಳಿಯುವ ಮೀನಿನ ವಾಸನೆ ಹೆಚ್ಚಿನವರಿಗೆ ಸಹ್ಯವಾಗುವುದಿಲ್ಲ. ಅಷ್ಟೇ ಏಕೆ, ಈರುಳ್ಳಿ, ಬೆಳ್ಳುಳ್ಳಿ ಮೊದಲಾದವುಗಳನ್ನು ಹೆಚ್ಚಿದ ಬಳಿಕವೂ ಕೈಗಳಲ್ಲಿ ಕೊಂಚ ದುರ್ವಾಸನೆ ಉಳಿಯುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೈಯಲ್ಲಿನ ದುರ್ವಾಸನೆಯನ್ನು ನಿವಾರಿಸುತ್ತದೆ

ಕೈಯಲ್ಲಿನ ದುರ್ವಾಸನೆಯನ್ನು ನಿವಾರಿಸುತ್ತದೆ

ಇದನ್ನು ನಿವಾರಿಸಲು ಹೆಚ್ಚಿನ ಸೋಪಿನ ಬಳಕೆ ಮತ್ತು ಹೆಚ್ಚು ಉಜ್ಜಿಕೊಳ್ಳುವುದರಿಂದ ಕೈಗಳು ಹೆಚ್ಚು ಸವೆದು ಘಾಸಿಗೊಳ್ಳುವ ಸಂಭವವಿದೆ. ಇದರ ಬದಲಿಗೆ ಕೊಂಚ ಟೂಥ್ ಪೇಸ್ಟ್ ಅನ್ನು ಹಚ್ಚಿ ಕೊಂಚ ನೀರಿನೊಂದಿಗೆ ಉಜ್ಜಿಕೊಳ್ಳಿ. ನೊರೆಬಂದ ಬಳಿಕ ಸುರಿಯುವ ತಣ್ಣೀರಿನ ಕೆಳಗೆ ತೊಳೆದುಕೊಳ್ಳಿ. ಕೈಗಳು ಅತ್ಯಂತ ಸ್ವಚ್ಛವಾಗುವ ಜೊತೆಗೇ ವಾಸನೆ ಕೊಂಚವೂ ಇಲ್ಲವಾಗುತ್ತದೆ.

ಆಭರಣಗಳ ಸ್ವಚ್ಛತೆಗೆ

ಆಭರಣಗಳ ಸ್ವಚ್ಛತೆಗೆ

ಮನೆಯಲ್ಲಿಯೇ ಬಂದು ಆಭರಣಗಳನ್ನು ಸ್ವಚ್ಛಮಾಡಿಕೊಡುತ್ತೇವೆಂದು ನಂಬಿಸುವ ಜನರನ್ನು ಮನೆಗೆ ಸೇರಿಸಬೇಡಿ. ಆದರೆ ನಿಮ್ಮ ನೆಚ್ಚಿನ ಚಿನವಾರನೂ ನಿಮ್ಮ ಆಭರಣಗಳನ್ನು ಸ್ವಚ್ಛಗೊಳಿಸಲು ಹೆಚ್ಚಿನ ಬಾಬ್ತು ಕೇಳುತ್ತಾನಲ್ಲಾ? ಇದಕ್ಕೆ ಪರಿಹಾರವಿದೆ.

ಆಭರಣಗಳ ಸ್ವಚ್ಛತೆಗೆ

ಆಭರಣಗಳ ಸ್ವಚ್ಛತೆಗೆ

ಇದಕ್ಕಾಗಿ ಸೌಮ್ಯ ಟೂಥ್ ಬ್ರಶ್ ಒಂದನ್ನು ತೆಗೆದುಕೊಂಡು ಆಭರಣಗಳನ್ನು ಒದ್ದೆಗೊಳಿಸಿದ ಬಳಿಕ ಕೊಂಚ ಟೂಥ್ ಪೇಸ್ಟ್ ಸವರಿ ನವಿರಾಗಿ ಉಜ್ಜಿದರೆ ಸಾಕು. ನಂತರ ಸುರಿಯುವ ನೀರಿನ ಕೆಳಗೆ ಹಿಡಿದು ತೊಳೆದರೆ ನಿಮ್ಮ ಆಭರಣಗಳು ಹೊಸದಂತೆ ಮಿನುಗುತ್ತವೆ.

ಮೊಡವೆಗಳನ್ನು ನಿವಾರಿಸಲು

ಮೊಡವೆಗಳನ್ನು ನಿವಾರಿಸಲು

ಹಲ್ಲುಜ್ಜುವ ಪೇಸ್ಟ್ ಮೊಡವೆಗಳನ್ನು ನಿವಾರಿಸಲೂ ಮತ್ತು ಚರ್ಮ ಕೆಂಪಗಾಗಿ ಕೊಂಚ ತುರಿಕೆಯುಂಟಾಗುವ ತೊಂದರೆಯನ್ನೂ ನಿವಾರಿಸಲೂ ಬಳಕೆಯಾಗುತ್ತದೆ ಎಂದರೆ ಆಶ್ಚರ್ಯವಾಗುತ್ತದೆ. ಏಕೆಂದರೆ ಹಲವಾರು ಮನೆಮದ್ದುಗಳಿರಲಿ, ದುಬಾರಿಯಾದ ಮೊಡವೆಗಳ ಔಷಧಿಗಳಿಗೇ ಬಗ್ಗದ ಈ ಮೊಡವೆಗಳು ಹಲ್ಲುಜ್ಜುವ ಪೇಸ್ಟ್ ಎದುರು ಶರಣಾಗಿ ತಲೆಬಾಗುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೊಡವೆಗಳನ್ನು ನಿವಾರಿಸಲು

ಮೊಡವೆಗಳನ್ನು ನಿವಾರಿಸಲು

ಇದಕ್ಕಾಗಿ ಕೆಲವು ಗಂಟೆಗಳ ಅವಧಿಗೆ ಮೊಡವೆಗಳ ಮೇಲೆ ತೆಳುವಾಗಿ ಹಲ್ಲುಜ್ಜುವ ಪೇಸ್ಟ್ ಹಚ್ಚಿದರೆ ಸಾಕು. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಉತ್ತಮ ಅವಧಿ ಎಂದರೆ ರಾತ್ರಿ ಮಲಗುವ ಮೊದಲು ಮತ್ತು ಆರು ಗಂಟೆಗಳ ಬಳಿಕ ಎಚ್ಚರಾಗಬೇಕು. ಇನ್ನೂ ಹೆಚ್ಚು ಹೊತ್ತು ಇದ್ದರೆ ಮೊಡವೆ ಸುಟ್ಟಂತಾಗುತ್ತದೆ.

ಉಗುರುಗಳ ಆರೈಕೆಗೆ

ಉಗುರುಗಳ ಆರೈಕೆಗೆ

ಉಗುರು ಮತ್ತು ಚರ್ಮ ಹೊಂದಾಣಿಕೆಯಾಗುವ ಪದಗಳು. ಆದರೆ ಉಗುರು ಮತ್ತು ಹಲ್ಲು? ಇಲ್ಲ, ಇವೆರಡರ ರಚನೆ, ಜೀವಕೋಶಗಳು ಎಲ್ಲಾ ಬೇರೆ ಬೇರೆಯಾಗಿವೆ. ಆದರೆ ಇವೆರಡೂ ಸುಮಾರಾಗಿ ಒಂದೇ ಮೂಲಧಾತುವನ್ನು ಹೊಂದಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉಗುರುಗಳ ಆರೈಕೆಗೆ

ಉಗುರುಗಳ ಆರೈಕೆಗೆ

ಆದ್ದರಿಂದ ಹಲ್ಲುಜ್ಜುವ ಪೇಸ್ಟ್ ಉಗುರುಗಳ ಸ್ವಚ್ಛತೆಗೂ ನೆರವಾಗಬಲ್ಲುದು. ಹಲ್ಲುಗಳನ್ನು ಬ್ರಶ್ ನಿಂದ ಉಜ್ಜಿದಂತೆಯೇ ಉಗುರುಗಳನ್ನೂ ಉಜ್ಜಿದಾಗ ಸಂದುಗಳಲ್ಲಿ ಉಳಿದಿರುವ ಕೊಳೆ ನಿವಾರಣೆಯಾಗುತ್ತದೆ ಹಾಗೂ ಉಗುರುಗಳ ಕಾಂತಿಯನ್ನೂ ಹೆಚ್ಚಿಸುತ್ತದೆ.

ಮಗುವಿನ ಹಾಲು ಕುಡಿಯುವ ಬಾಟಲಿ ಸ್ವಚ್ಛಗೊಳಿಸಲು

ಮಗುವಿನ ಹಾಲು ಕುಡಿಯುವ ಬಾಟಲಿ ಸ್ವಚ್ಛಗೊಳಿಸಲು

ಮಗುವಿನ ಹಾಲು ಕುಡಿಯುವ ಬಾಟಲಿಯನ್ನು ತಕ್ಷಣ ತೊಳೆದರೆ ಮಾತ್ರ ವಾಸನೆ ಇಲ್ಲವಾಗುತ್ತದೆ. ಇಲ್ಲದಿದ್ದರೆ ಒಳಭಾಗದಿಂದ ಕೊಂಚ ಕಮಟು ವಾಸನೆ ಬರುತ್ತದೆ. ಇದನ್ನು ತೊಳೆಯಲು ಬಾಟಲ್ ಬ್ರಶ್ ಲಭ್ಯವಿದ್ದರೂ ವಾಸನೆಯನ್ನು ತೊಲಗಿಸಲು ಬರೆಯ ಬ್ರಶ್ ಸಾಲದು. ಅಲ್ಲದೇ ಮಗುವಿನ ಆರೋಗ್ಯಕ್ಕೆ ಬಾಧೆ ತರಬಲ್ಲ ಸೂಕ್ಷ್ಮಾಣುಗಳು ಬಾಟಲಿನ ಒಳಭಾಗದ ಕೆಲವು ಅಂಚುಗಳಲ್ಲಿ ಕುಳಿತುಕೊಂಡಿರಬಹುದು.

ಮಗುವಿನ ಹಾಲು ಕುಡಿಯುವ ಬಾಟಲಿ ಸ್ವಚ್ಛಗೊಳಿಸಲು

ಮಗುವಿನ ಹಾಲು ಕುಡಿಯುವ ಬಾಟಲಿ ಸ್ವಚ್ಛಗೊಳಿಸಲು

ಇಲ್ಲಿ ಬ್ರಶ್ ತಲುಪದೇ ವಾಸನೆಗೆ ಕಾರಣವಾಗುತ್ತದೆ. ಈ ಸಮಯದಲ್ಲಿ ಹಲ್ಲುಜ್ಜುವ ಪೇಸ್ಟ್ ಸಹಾಯಕ್ಕೆ ಬರುತ್ತದೆ. ಕೊಂಚ ಟೂಥ್ ಪೇಸ್ಟ್ ಅನ್ನು ಬ್ರಶ್‌ಗೆ ಹಚ್ಚಿ ಕೊಂಚ ನೀರಿನೊಂದಿಗೆ ಬಾಟಲಿಯ ಒಳಭಾಗವನ್ನೆಲ್ಲಾ ಚೆನ್ನಾಗಿ ಕಲಕಿ ಉಜ್ಜುವ ಮೂಲಕ ಒಳಭಾಗ ಅತ್ಯಂತ ಸ್ವಚ್ಛವಾಗುವುದು ಮಾತ್ರವಲ್ಲ, ಏನೊಂದೂ ವಾಸನೆಯಿಲ್ಲದೆ ಇರುತ್ತದೆ. ಕಂದನ ಆರೋಗ್ಯಕ್ಕೆ ಇದಕ್ಕಿಂತ ಹೆಚ್ಚೇನು ಬೇಕು?

ಮೇಜಿನ ಮೇಲಿನ ವೃತ್ತಾಕಾರ ನಿವಾರಿಸಲು

ಮೇಜಿನ ಮೇಲಿನ ವೃತ್ತಾಕಾರ ನಿವಾರಿಸಲು

ಮನೆಯ ಮರದ ಮೇಜಿನ ಮೇಲೆ ವಸ್ತ್ರ ಅಥವಾ ಪ್ಲಾಸ್ಟಿಕ್ಕಿನ ಕವರ್ ಹೊದಿಸುವುದು ಅಗತ್ಯ. ಏಕೆಂದರೆ ಟೀ, ಕಾಫಿ ಕುಡಿದಾದ ಬಳಿಕ ಇಡುವ ಲೋಟದ ತಳಭಾಗದಲ್ಲಿರುವ ಕೊಂಚ ದ್ರವ ಮೇಜಿನ ಮೇಲೆ ಇಳಿದು ಕೊಂಚಹೊತ್ತಿನಲ್ಲಿಯೇ ವೃತ್ತಾಕಾರದ ಚಿತ್ತಾರವನ್ನು ಮೂಡಿಸುತ್ತದೆ.

ಮೇಜಿನ ಮೇಲಿನ ವೃತ್ತಾಕಾರ ನಿವಾರಿಸಲು

ಮೇಜಿನ ಮೇಲಿನ ವೃತ್ತಾಕಾರ ನಿವಾರಿಸಲು

ಕವರ್ ಇಲ್ಲದಿದ್ದರೆ ಮೇಜಿನ ಮೇಲ್ಭಾಗದಲ್ಲಿ ಮೂಡಿದ ಈ ವೃತ್ತಾಕಾರ ಸುಲಭವಾಗಿ ತೊಲಗುವುದಿಲ್ಲ. ಇದನ್ನು ನಿವಾರಿಸಲು ಒಂದು ಸ್ವಚ್ಛವಾದ ಬಟ್ಟೆಯನ್ನು ಕೊಂಚ ತೇವಗೊಳಿಸಿ ಅದರ ಮೇಲೆ ಸ್ವಲ್ಪ ಹಲ್ಲುಜ್ಜುವ ಪೇಸ್ಟ್ ಹಚ್ಚಿ ನಯವಾಗಿ ಉಜ್ಜಿದರೆ ಈ ಕಲೆಗಳು ನಿವಾರಣೆಯಾಗುತ್ತವೆ.

ರತ್ನಗಂಬಳಿಯ ಕಲೆ ನಿವಾರಿಸಲು

ರತ್ನಗಂಬಳಿಯ ಕಲೆ ನಿವಾರಿಸಲು

ಮನೆಯ ಅಂದ ಹೆಚ್ಚಿಸಲು ನೆಲದ ಮೇಲೆ ಹಾಸಿರುವ ರತ್ನಗಂಬಳಿಯ ಮೇಲೆ ಬಿದ್ದ ಕಲೆ ನಿವಾರಿಸುವುದು ತುಂಬಾ ಕಷ್ಟಕರ. ಏಕೆಂದರೆ ಇದನ್ನು ತೊಳೆಯಲೆಂದು ನೀರು ಚಿಮುಕಿಸಿದರೆ ಅದು ಕಲೆಯನ್ನು ಅತ್ತಿತ್ತ ಹರಡಿಸುತ್ತದೆಯೇ ಹೊರತು ಪೂರ್ಣವಾಗಿ ನಿವಾರಿಸುವುದಿಲ್ಲ. ಹೊರಗಡೆ ತೆಗೆದುಕೊಂಡು ಹೋಗಿ ತೊಳೆಯೋಣವೆಂದರೆ ನೀರು ಕುಡಿದ ಬಳಿಕ ಈ ರತ್ನಗಂಬಳಿ ಎತ್ತಲಾರದಷ್ಟು ಭಾರವಾಗುತ್ತವೆ. ಎತ್ತಲಾಗದೇ ನೆಲದ ಕೊಳೆಯನ್ನೆಲ್ಲಾ ಹೀರಿಕೊಂಡು ಇನ್ನಷ್ಟು ಮಲಿನವಾಗುತ್ತದೆ. ಇದಕ್ಕೆ ಸುಲಭವಾದ ಮಾರ್ಗವೊಂದಿದೆ.

ರತ್ನಗಂಬಳಿಯ ಕಲೆ ನಿವಾರಿಸಲು

ರತ್ನಗಂಬಳಿಯ ಕಲೆ ನಿವಾರಿಸಲು

ಒಂದು ಒರಟಾದ ಬ್ರಶ್ (ಬಟ್ಟೆಯುಜ್ಜುವ ಬ್ರಶ್ ಅಥವಾ ಮನೆಯ ಟೈಲ್‪ಗಳನ್ನು ಸ್ವಚ್ಛಗೊಳಿಸುವ ಪ್ಲಾಸ್ಟಿಕ್ಕಿನ ಕೂದಲುಗಳ ಬ್ರಶ್) ಬಳಸಿ. ಮೊದಲು ಹಲ್ಲುಜ್ಜುವ ಪೇಸ್ಟ್ ಅನ್ನು ಕೊಂಚ ನೀರಿನೊಂದಿಗೆ ಮಿಶ್ರಣ ಮಾಡಿ ದಪ್ಪನಾಗಿ ಕಲೆಯಿರುವ ಜಾಗಕ್ಕೆ ಹಚ್ಚಿ. ಬಳಿಕ ಬ್ರಶ್ ನಿಂದ ಕಲೆಯ ಜಾಗವನ್ನು ಉಜ್ಜಿ. ನಂತಹ ಇನ್ನೊಂದು ಬಟ್ಟೆಯಿಂದ ಈ ನೊರೆಯನ್ನು ಒರೆಸಿ ತೆಗೆಯಿರಿ. ಚಿಕ್ಕ ಪುಟ್ಟ ಕಲೆಗಳು ಒಂದೇ ಬಾರಿ ನಿವಾರಣೆಯಾಗುತ್ತವೆ.

ರತ್ನಗಂಬಳಿಯ ಕಲೆ ನಿವಾರಿಸಲು

ರತ್ನಗಂಬಳಿಯ ಕಲೆ ನಿವಾರಿಸಲು

ಆದರೆ ಕಠಿಣ ಮತ್ತು ಆಳವಾಗಿ ಹೀರಲ್ಪಟ್ಟ ಕಲೆಗಳು ಸುಲಭವಾಗಿ ನಿವಾರಣೆಯಾಗಲಾರವು. ಇದಕ್ಕಾಗಿ ಎರಡು ಅಥವಾ ಮೂರು ಬಾರಿ ಪುನರಾವರ್ತಿಸಿ. ಈ ವಿಧಾನ ಕೇವಲ ಹತ್ತಿಯ ಕಂಬಳಿಗಳಿಗೆ ಸೂಕ್ತವೇ ಹೊರತು ಎಲ್ಲಾ ಬಟ್ಟೆಗಳಿಗಲ್ಲ. ಮೊದಲು ಚಿಕ್ಕ ಭಾಗದಲ್ಲಿ ಪ್ರಯತ್ನಿಸಿ ಫಲಪ್ರದವೆಂದು ಕಂಡು ಬಂದರೆ ಮಾತ್ರ ಇಡಿಯ ಭಾಗಕ್ಕೆ ಉಪಯೋಗಿಸಿ.

English summary

Uses For Toothpaste You Didn't Know Before

Toothpaste, as we all know, is used for white teeth, minty fresh breath and strong gums. Well, that is what most of us limit the product to. But there are some people who have used toothpaste for other nontraditional activities. Although these uses might not sound real, they most certainly are and have been tried and tested with surprisingly positive results.
X
Desktop Bottom Promotion