For Quick Alerts
ALLOW NOTIFICATIONS  
For Daily Alerts

ಮನೆಗೆ ಹೊಂದುವಂತಹ ಕಾರ್ಪೆಟ್‌ನ್ನು ಆರಿಸಿಕೊಳ್ಳುವುದು ಹೇಗೆ?

|

ಮನೆಗಾಗಿ ವಿವಿಧ ಬಣ್ಣದ, ವಿವಿಧ ಸಾಮಗ್ರಿಗಳನ್ನು ಬಳಸಿದ ಮತ್ತು ವಿನ್ಯಾಸದ ಕಾರ್ಪೆಟ್‌ಗಳನ್ನು ಆರಿಸಿಕೊಳ್ಳುವುದು ಸ್ವಲ್ಪ ಕಷ್ಟವೇ. ಕಾರ್ಪೆಟ್ ಮಕ್ಕಳಿಗೆ ಆಡಲು ಸುರಕ್ಷತೆಯನ್ನು ನೀಡುತ್ತದೆ. ಇದರಿಂದ ನಿಮಗೆ ಸುಖಕರ ಮತ್ತು ಆರಾಮದಾಯಕ ಅನುಭವ ದೊರೆಯುವುದು ಖಚಿತ. ಹಾಗಾಗಿ ಕಾರ್ಪೆಟ್ ಕೊಳ್ಳುವ ಮೊದಲು ನಿಮಗೆ ಕೆಲವೊಂದು ಸಲಹೆಗಳು ಅಗತ್ಯವಾಗಿ ಬೇಕಾಗಿರುತ್ತವೆ.

ಫ್ಲೋರಿಂಗ್ ನೆಲ ಅಥವಾ ಮರದ ನೆಲಕ್ಕೆ ಹೋಲಿಸಿದರೆ, ಕಾರ್ಪೆಟ್‌ ರಕ್ಷಿಸಲು ಹೆಚ್ಚಿನ ಕಾಳಜಿ ಅತ್ಯಗತ್ಯ. ಕೆಲವೊಂದು ಕಾರ್ಪೆಟ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಲೆ ಇರಬೇಕಾಗುತ್ತದೆ. ಹಾಗಾದರೆ ಕಾರ್ಪೆಟ್ ಅನ್ನು ಹೇಗೆ ಆರಿಸುವುದು? ಬೋಲ್ಡ್‌ಸ್ಕೈ ನಿಮಗಾಗಿ ಕೆಲವೊಂದು ಮಾಹಿತಿಗಳನ್ನು ಈ ಕುರಿತಾಗಿ ನಿಮಗೆ ತಿಳಿಸಿಕೊಡುತ್ತಿದೆ. ಕಾರ್ಪೆಟ್ ಕೊಳ್ಳುವವರು ತಪ್ಪದೆ ಓದಿ....

Tips for Choosing Carpet

ಸರಿಯಾದ ಕಾರ್ಪೆಟ್ ಆಯ್ಕೆ ಮಾಡಿಕೊಳ್ಳಿ
ಕಾರ್ಪೆಟ್‌ನ ಹಿಂಬದಿಯಲ್ಲಿ ಪ್ಯಾಡಿಂಗ್‌ನ ಪದರವು ಇರುತ್ತದೆ. ನಿಮ್ಮ ಕಾರ್ಪೆಟ್‌ಗಾಗಿ ಪ್ಯಾಡಿಂಗ್ ಸಾಮಗ್ರಿ ಸರಿಯಾಗಿರುವ ಕಾರ್ಪೆಟ್ ಆರಿಸಿಕೊಳ್ಳಿ. ಇದು ನಿಮ್ಮ ಮನೆಯ ನೆಲ ಹೆಚ್ಚೂ ಕಮ್ಮಿಯಾಗಿದ್ದರು ಪರವಾಗಿಲ್ಲ, ಹರಿಯುವ ಸಮಸ್ಯೆಯಿಲ್ಲದೆ ನಿಮ್ಮ ಕಾರ್ಪೆಟ್ ಅನ್ನು ಕಾಪಾಡುತ್ತದೆ. ಆದಷ್ಟು ರಬ್ಬರ್ ಅಥವಾ ಫೋಮ್ ಮೆಟಿರಿಯಲ್ ಅನ್ನು ಆರಿಸಿಕೊಳ್ಳಿ. ನಿಮ್ಮ ಲೈಫ್ ಸ್ಟೈಲ್‌ಗೆ ಹೊಂದಿಕೊಳ್ಳುವಂತಹ ಕಾರ್ಪೆಟ್ ಶೈಲಿಯನ್ನು ಆರಿಸಿಕೊಳ್ಳಿ. ಕೆಲವೊಂದು ಕಾರ್ಪೆಟ್‌ಗಳಲ್ಲಿ ನಿಮ್ಮ ಹೆಜ್ಜೆ ಗುರುತುಗಳು, ವ್ಯಾಕ್ಯೂಮ್ ಕ್ಲೀನರ್‌ನ ಗುರುತುಗಳು, ಹಾಗೆಯೇ ಉಳಿದು ಬಿಡುತ್ತವೆ. ಜನ ಹೆಚ್ಚು ಓಡಾಡದ ಲಿವಿಂಗ್ ರೂಮ್ ಮತ್ತು ಮಾಸ್ಟರ್ ಬೆಡ್‌ರೂಮ್‍ಗಳಲ್ಲಿ ಸ್ಯಾಕ್ಸನ್ ಕಾರ್ಪೆಟ್‌ಗಳನ್ನು ಬಳಸಿ. ಕಾರ್ಪೆಟ್ ಮೇಲೆ ಬಿದ್ದ ಒಡೆದ ಗಾಜುಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ವಿವಿಧ ಬಗೆಯ ಕಾರ್ಪೆಟ್‌ಗಳನ್ನು ಪರಿಗಣಿಸಿ
ನಿಮ್ಮ ಲೈಫ್‍ಸ್ಟೈಲ್‌ಗೆ ಹೊಂದಿಕೊಳ್ಳುವಂತಹ ಕಾರ್ಪೆಟ್‌ಗಳನ್ನು ಬಳಸಿ. ಕೆಲವೊಂದು ಕಾರ್ಪೆಟ್‌ಗಳಲ್ಲಿ ನಿಮ್ಮ ಹೆಜ್ಜೆ ಗುರುತುಗಳು, ವ್ಯಾಕ್ಯೂಮ್ ಕ್ಲೀನರ್‌ನ ಗುರುತುಗಳು, ಹಾಗೆಯೇ ಉಳಿದು ಬಿಡುತ್ತವೆ. ಜನ ಹೆಚ್ಚು ಓಡಾಡದ ಲಿವಿಂಗ್ ರೂಮ್ ಮತ್ತು ಮಾಸ್ಟರ್ ಬೆಡ್‌ರೂಮ್‍ಗಳಲ್ಲಿ ಸ್ಯಾಕ್ಸನ್ ಕಾರ್ಪೆಟ್‌ಗಳನ್ನು ಬಳಸಿ.

ಅಧಿಕ ಧನವನ್ನು ವ್ಯಯ ಮಾಡಬೇಡಿ
ನಿಮ್ಮ ಕೈಗೆಟುಕುವ ದರದಲ್ಲಿ ದೊರೆಯುವ ಕಾರ್ಪೆಟನ್ನು ಕೊಂಡುಕೊಳ್ಳಿ. ದುಬಾರಿಯಾದ ಕಾರ್ಪೆಟ್‌ಗಳನ್ನು ಕೊಂಡುಕೊಳ್ಳಬೇಡಿ. ವಿವಿಧ ಕಾರ್ಪೆಟ್ ಪೂರೈಕೆದಾರರ ನಮೂನೆಗಳನ್ನು ಪರಿಶೀಲಿಸಿ. ಇದು ಕಾರ್ಪೆಟ್ ಕೊಳ್ಳುವವರು ತಪ್ಪದೆ ಪಾಲಿಸಬೇಕಾದ ಒಂದು ಅಂಶವಾಗಿರುತ್ತದೆ. ಕಾರ್ಪೆಟ್ ಕ್ಲೀನ್ ಮಾಡಲು ಕೀ ಇಲ್ಲಿದೆ

ವಾರಂಟಿಗಳ ಕುರಿತು ಒಂದು ಮಾತು
ಅಧಿಕ ದಿನಗಳ ವಾರಂಟಿ ಇದೆ ಎಂದು ಒಂದು ಕಾರ್ಪೆಟ್ ಕೊಳ್ಳಲು ಹೋಗಬೇಡಿ. ಬಹುತೇಕ ಕಾರ್ಪೆಟ್‌ಗಳನ್ನು ಸರಿಯಾಗಿ ಹಾಕಲು ಬಾರದೆ ಇರುವ ಕಾರಣಕ್ಕೆ ಅವುಗಳು ಹಾಳಾಗುತ್ತವೆ. ಹಾಗಾಗಿ ಕಾರ್ಪೆಟ್ ಖರೀದಿಸುವ ಮೊದಲು ಸ್ವಲ್ಪ ವಾರಂಟಿಯನ್ನು ಸಹ ನೋಡಿ.

English summary

Tips for Choosing Carpet

It can be difficult to choose the best carpet for your home as there are many different colors, materials and designs available. Carpeting provides a comfortable and safe flooring for kids to play. Have a look at guide to buy carpet.
Story first published: Monday, March 30, 2015, 14:29 [IST]
X
Desktop Bottom Promotion