For Quick Alerts
ALLOW NOTIFICATIONS  
For Daily Alerts

ಅಚ್ಚುಕಟ್ಟಾದ ಅಡುಗೆಮನೆಯ ಅಂದಕ್ಕಾಗಿ ಟಾಪ್ ಸಲಹೆಗಳು

|

ಇಂದು ನಾನು ನಿಮಗಾಗಿ ಅಡುಗೆಮನೆಯನ್ನು ಹೇಗೆ ವ್ಯವಸ್ಥಿತವಾಗಿ ಇರಿಸಿಕೊಳ್ಳುವುದು ಎಂಬುದರ ಕುರಿತು ತಿಳಿಸಿಕೊಡಲಿದ್ದೇನೆ. ನನ್ನ ಪ್ರಕಾರ ಪ್ರಪಂಚದಲ್ಲಿರುವ ಅತ್ಯಂತ ಸುಂದರ ಸ್ಥಳವೆಂದರೆ ಅದು ನನ್ನ ಅಡುಗೆ ಮನೆ. ಅದನ್ನು ಬಿಟ್ಟಿರಲು ನನ್ನಿಂದ ಅಸಾಧ್ಯ. ಬನ್ನಿ ನಿಮಗೂ ಅಂತಹ ಅಡುಗೆ ಮನೆ ಬೇಕೆಂದರೆ ಅದಕ್ಕೆ ಏನು ಮಾಡುವುದು ಎಂಬುದನ್ನು ನಾನು ನಿಮಗೆ ತಿಳಿಸುತ್ತೇನೆ.

ವ್ಯವಸ್ಥಿತವಾದ ಮತ್ತು ಶುಚಿಯಾದ ಅಡುಗೆ ಮನೆ ಎಲ್ಲರಿಗು ಅತ್ಯಾವಶ್ಯಕ. ಶುಚಿಯಾದ ಅಡುಗೆ ಮನೆಯು ಸಂಪತ್ತಿನ ಸಂಕೇತ. ಅದು ಖಂಡಿತ ನಿಮಗೆ ಅಡುಗೆ ಮಾಡುವ ಉತ್ಸಾಹವನ್ನು ನೀಡುತ್ತದೆ ಎಂಬ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ.ಬೋಲ್ಡ್‌ ಸ್ಕೈ ನಿಮ್ಮ ಅಡುಗೆ ಮನೆಯನ್ನು ಹೇಗೆ ಶುದ್ಧಿಗೊಳಿಸುವುದು ಎಂಬುದರ ಕುರಿತು ನಿಮಗೆ ಇಂದು ತಿಳಿಸಿಕೊಡುತ್ತದೆ.

 Tips For An Organised Kitchen

ವಸ್ತುಗಳನ್ನು ಸ್ಥಾನಪಲ್ಲಟ ಮಾಡುವುದು
ಇದು ಕೆಲಸಕ್ಕೆ ಬರುವುದಿಲ್ಲ: ಒಂದು ವೇಳೆ ಈ ಸಲಹೆ ಕೆಲಸಕ್ಕೆ ಬರುವುದಿಲ್ಲ ಎಂದು ನೀವು ಭಾವಿಸಿದರೆ ಅದು ತಪ್ಪಾಗಬಹುದು. ಯಾವಾಗಲು ಅಡುಗೆ ಮನೆಯಲ್ಲಿ ನಮಗಾಗಿ ಒಂದು ಆಯ್ಕೆ ಸದಾ ಕಾದಿರುತ್ತದೆ. ಅಲ್ಲಿರುವ ಬೇಡದ ವಸ್ತುಗಳನ್ನು ಹೊರಗೆ ಎಸೆಯಿರಿ, ಆ ಸ್ಥಳದಲ್ಲಿ ನಿಮಗೆ ಅಗತ್ಯವಾದ ವಸ್ತುಗಳನ್ನು ತಂದಿಡಿ. ಇದು ನಿಮ್ಮ ಅಡುಗೆ ಮನೆಗೆ ಅತ್ಯಗತ್ಯವಾಗಿ ಬೇಕಾಗಿರುತ್ತದೆ.

ಪಾರದರ್ಶಕ ಜಾರ್‌ಗಳನ್ನು ಬಳಸಿ
ನಿಮ್ಮ ಅಡುಗೆ ಮನೆಯಲ್ಲಿ ಪಾರದರ್ಶಕ ಜಾರ್‌ಗಳನ್ನು ಬಳಸುವುದು ಒಳ್ಳೆಯದು. ಇದರಿಂದ ನಿಮ್ಮ ಅಡುಗೆ ಮನೆಯು ಸುಂದರವಾಗಿ ಕಾಣುತ್ತದೆ ಮತ್ತು ಅಗತ್ಯ ವಸ್ತುಗಳನ್ನು ಬೇಗ ಹುಡುಕಲು ಸಹ ಅನುಕೂಲವಾಗುತ್ತದೆ. ಅದರಲ್ಲೂ ನಿಮ್ಮ ಅಡುಗೆ ಮನೆಯಲ್ಲಿ ಕಪಾಟು ಇದ್ದಲ್ಲಿ, ಇದು ತೀರಾ ಅತ್ಯಾವಶ್ಯಕ. ಔಷಧಿಯಂತೆ ಕಾರ್ಯನಿರ್ವಹಿಸುವ ಅಡುಗೆಮನೆ ಸಾಮಾಗ್ರಿಗಳು

ನಿಮ್ಮ ಅಡುಗೆ ಮನೆಯನ್ನು ಸದಾ ಶುಚಿಯಾಗಿಡಿ
ಪ್ರತಿ ಬಾರಿ ಅಡುಗೆ ಮಾಡಿದ ಮೇಲೆ ಸ್ವಲ್ಪ ಸಮಯವನ್ನು ಸ್ವಚ್ಛತೆಗೆ ಮೀಸಲಿರಿಸಿದರೆ, ಅಡುಗೆ ಮನೆ ಫಳ ಫಳ ಎಂದು ಹೊಳೆಯುತ್ತದೆ. ಪ್ರತಿ ಜಾರ್, ಪಾತ್ರೆಯನ್ನು ಬಳಸಲು ಎತ್ತಿಕೊಂಡಾಗ ಆ ಸ್ಥಳವನ್ನು ಸ್ವಲ್ಪ ಒರೆಸಿ ನಂತರ ಇವುಗಳನ್ನು ಯಥಾಸ್ಥಾನದಲ್ಲಿ ಇರಿಸಿ. ಇದರಿಂದ ನಿಮ್ಮ ಅಡುಗೆ ಮನೆ ವ್ಯವಸ್ಥಿತವಾಗುತ್ತದೆ.

ಮತ್ತೆ-ಮತ್ತೆ ಬಳಸುವ ವಸ್ತುಗಳನ್ನು ಕೈಗೆಟುಕುವಂತೆ ಇಡಿ
ವ್ಯವಸ್ಥಿತವಾದ ಅಡುಗೆ ಮನೆಯಲ್ಲಿ ವಸ್ತುಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂಟೆ ಇಟ್ಟುಕೊಳ್ಳಿ. ಪದೇ-ಪದೇ ಬಳಸುವ ವಸ್ತುಗಳನ್ನು ನಿಮ್ಮ ಕೈಗೆಟುಕವಂತೆ ಇಟ್ಟುಕೊಳ್ಳಿ. ಉದಾಹರಣೆಗೆ, ಗಾಜಿನ ಬಟ್ಟಲುಗಳನ್ನು ನೀವು ಸದಾ ಬಳಸುವುದಿಲ್ಲವಾದ್ದರಿಂದ ಅದನ್ನು ದೂರದಲ್ಲಿಡಿ. ಡೀಪ್ ಫ್ರೈ ಪ್ಯಾನ್ ಮುಂತಾದವನ್ನು ನಿಮ್ಮ ಕೈಗೆಟುಕುವ ಸ್ಥಳದಲ್ಲಿ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಅಡುಗೆ ಮನೆ ವ್ಯವಸ್ಥಿತವಾಗುತ್ತದೆ.

ಪಟ್ಟಿ ತಯಾರಿಸಿ
ಒಂದು ಪೇಪರ್ ಮತ್ತು ಪೆನ್ ನಿಮ್ಮ ಕೈಗೆಟುಕುವ ದೂರದಲ್ಲಿರಲಿ. ಇದರಿಂದ ನಿಮ್ಮ ಅಡುಗೆ ಮನೆಯಲ್ಲಿ ಖಾಲಿಯಾದ ವಸ್ತುಗಳನ್ನು ಕೊಂಡುಕೊಳ್ಳಲು ಪಟ್ಟಿ ತಯಾರಿಸಿಕೊಳ್ಳಬಹುದು. ಬಾತ್ ರೂಂಗಿಂತ ಅಡುಗೆ ಮನೆಯಲ್ಲೇ ಹೆಚ್ಚು ಕೀಟಾಣು!

ಚಿಕ್ಕ ವಸ್ತುಗಳು
ನಿಮಗೆ ಅತ್ಯಗತ್ಯವಾಗಿ ಬೇಕಾಗುವ ರಬ್ಬರ್ ಬ್ಯಾಂಡ್, ಕ್ಲಿಪ್, ಮೇಣದ ಬತ್ತಿ, ಇತ್ಯಾದಿಗಳನ್ನು ಒಂದು ಸಣ್ಣ ಪೆಟ್ಟಿಗೆಯಲ್ಲಿ ಹಾಕಿರಿಸಿ. ಇದರಿಂದ ಪ್ರತಿ ಬಾರಿಯೂ ಅವುಗಳನ್ನು ಹುಡುಕುವುದು ತಪ್ಪುತ್ತದೆ. ಈ ಸಲಹೆಗಳನ್ನು ಪಾಲಿಸಿ ನಿಮ್ಮ ಅಡುಗೆ ಮನೆಯನ್ನು ವ್ಯವಸ್ಥಿತಗೊಳಿಸಿ.

English summary

Tips For An Organised Kitchen

Today I will give you tips for organised kitchen. To me, my kitchen is one of the best places in the world and I cannot forsake it for anything. Lets check how to keep a clean and organized kitchen. A clean kitchen is a sign of prosperity. Boldsky suggests on tips for how you can clean your kitchen as you read on.
Story first published: Friday, February 6, 2015, 10:14 [IST]
X
Desktop Bottom Promotion