For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಮನೆಯ ಕಾರ್ಪೆಟ್‌ನ ಸ್ವಚ್ಛತೆ ಹೀಗಿರಲಿ

By hemanth
|

ಮಳೆಗಾಲ ಬಂತೆಂದರೆ ಮನೆಗೆ ಬೇಕಾಗಿರುವ ಪ್ರತಿಯೊಂದನ್ನು ಮೊದಲೇ ಮಾಡಿಕೊಂಡಿರಬೇಕಾಗುತ್ತದೆ. ಇದಕ್ಕಾಗಿ ಒಂದೆರಡು ತಿಂಗಳುಗಳ ಮೊದಲೇ ಎಲ್ಲಾ ರೀತಿಯ ತಯಾರಿ ನಡೆಯುತ್ತದೆ. ಆದರೆ ಮಳೆಗಾಲದಲ್ಲಿ ವಾತಾವರಣದಲ್ಲಿರುವ ತೇವಾಂಶ ಮತ್ತು ಆರ್ದ್ರತೆಯಿಂದಾಗಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಒಂದು ಅಗ್ನಿಪರೀಕ್ಷೆ ಎದುರಿಸಿದಂತೆ. ನಾವು ಕಡೆಗಣಿಸಿದರೆ ಒದ್ದೆಯಾದ ಕಾರ್ಪೆಟ್ ಮತ್ತು ಪೀಠೋಪಕರಣಗಳಿಂದ ಫಂಗಲ್ ಸೋಂಕು ಕೂಡ ಉಂಟಾಗಬಹುದು.

ಹಾಗಾಗಿ ಮಳೆಗಾಲದಲ್ಲಿ ಕಾರ್ಪೆಟ್ ಅನ್ನು ಸ್ವಚ್ಛಗೊಳಿಸಲು ನಾವಿಲ್ಲಿ ಕೆಲವೊಂದು ವಿಧಾನಗಳನ್ನು ಪರಿಚಯಿಸುತ್ತಿದ್ದೇವೆ. ಕಾರ್ಪೆಟ್ ಅನ್ನು ಸ್ಚಚ್ಛಗೊಳಿಸುವುದು ನಿಮ್ಮ ಮನೆಯ ಅಲಂಕಾರ ಮತ್ತು ಕುಟುಂಬದ ಆರೋಗ್ಯಕ್ಕೆ ಅತೀ ಪ್ರಾಮುಖ್ಯವಾದದ್ದು. ಕೊಳೆಯುಕ್ತ ಮತ್ತು ಸ್ಚಚ್ಛವಾಗಿಲ್ಲದ ಕಾರ್ಪೆಟ್ ಶಾಂತಿಯುತ ವಾತಾವರಣವನ್ನು ಕೆಡಿಸುತ್ತದೆ. ಅಷ್ಟೇ ಅಲ್ಲದೆ ಅಲರ್ಜಿ ಮತ್ತು ಕೊಳೆಯಿಂದಾಗಿ ಉಸಿರಾಟದ ಸಮಸ್ಯೆಗಳು ಉಂಟಾಗಬಹುದು. ಕಾರ್ಪೆಟ್ ನ ಕೊಳಕನ್ನು ಅನುಸರಿಸಿಕೊಂಡು ಅದನ್ನು ಸ್ವಚ್ಛಗೊಳಿಸಲು ಹಲವಾರು ವಿಧಾನಗಳಿವೆ.

Quick Ways To Clean Carpet In Monsoon

ಕಾರ್ಪೆಟ್ ಅನ್ನು ಹೇಗೆ ಸ್ವಚ್ಛಗೊಳಿಸಬೇಕೆಂದು ತಿಳಿದುಕೊಂಡು ರೋಗಗಳನ್ನು ಹರಡುವ ಕೀಟಾಣುಗಳು ನೆಲದಲ್ಲಿ ಬೆಳೆಯದಂತೆ ತಡೆಯುವುದು ಅತೀ ಮುಖ್ಯವಾಗಿದೆ. ಅತ್ಯುತ್ತಮ ಪ್ರಯತ್ನ ಮತ್ತು ಕೆಲವೊಂದು ಸರಳ ವಿಧಾನಗಳಿಂದ ಮಳೆಗಾಲದ ಈ ಸಮಸ್ಯೆಯನ್ನು ನೀವು ಸುಲಭವಾಗಿ ನಿಭಾಯಿಸಬಹುದು. ಬನ್ನಿ ಇಲ್ಲಿ ನೀಡಲಾಗಿರುವ ಸರಳವಾದ ಸಲಹೆಗಳನ್ನು ಪಾಲಿಸಿ ನಿಮ್ಮ ಮನೆಯ ಕಾರ್ಪೆಟ್ ಮತ್ತು ಅಲಂಕಾರವನ್ನು ಸ್ವಚ್ಛವಾಗಿಟ್ಟುಕೊಳ್ಳಿ...

ವ್ಯಾಕುಮ್ ಕ್ಲೀನ್
ಮಳೆಗಾಲದಲ್ಲಿ ವ್ಯಾಕುಮ್ ಕ್ಲೀನರ್ ನಿಂದ ನಿಯಮಿತವಾಗಿ ಕಾರ್ಪೆಟ್ ಅನ್ನು ಸ್ಚಚ್ಛ ಮಾಡುತ್ತಾ ಇರಿ. ನಿಧಾನವಾಗಿ ಹಿಂಬದಿಗೆ ಹೋಗುವ ಪ್ರದೇಶ ಮತ್ತು ನಾಲ್ಕು ಮೂಲೆಗಳ ಬದಿಯನ್ನು ವ್ಯಾಕುಮ್ ಮಾಡಿ. ಇದರಿಂದ ಕಾರ್ಪೆಟ್ ನಲ್ಲಿರುವ ಎಲ್ಲಾ ರೀತಿಯ ಕೊಳೆ ತೆಗೆಯಲು ಸಾಧ್ಯವಾಗುತ್ತದೆ.

ಸ್ಟೈನ್ ರಿಮೂವರ್
ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಕಾರ್ಪೆಟ್ ನ ಹೊಳಪು ಹೆಚ್ಚಾಗಿ, ಕೊಳೆ ಹೋಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ರೀತಿಯ ಸಾಧಾರಣ ಕಳೆ ನಿವಾರಕಗಳನ್ನು ಬಳಸಿ. ಆದರೆ ಇದನ್ನು ಬಳಸುವ ಮೊದಲು ಇದು ನಿಮ್ಮ ಕಾರ್ಪೆಟ್‌ನ ಬಣ್ಣವನ್ನು ತೆಗೆಯಲ್ಲ ಎನ್ನುವುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಇದರಿಂದ ಬೂಸ್ಟು ಬೆಳೆಯುವುದನ್ನು ತಡೆಯಬಹುದು ಮತ್ತು ಕಾರ್ಪೆಟ್ ಹಾಳಾಗುವುದನ್ನು ತಡೆಯಬಹುದು.

ಕಾರ್ಪೆಟ್ ನ್ನು ಸ್ಕರ್ಬ್ ಮಾಡಿ
ಗಡುಸಾಗಿಸುವ ಬ್ರಷ್ ತೆಗೆದುಕೊಂಡು ಬಿಸಿ ನೀರು ಹಾಕಿ ಕಾರ್ಪೆಟ್ ನಲ್ಲಿರುವ ಕೊಳೆಯನ್ನು ಸ್ಕರ್ಬ್ ಮಾಡಿ. ಆದರೆ ಇದನ್ನು ಅತಿಯಾಗಿ ಮಾಡಬೇಡಿ. ನೀವು ಅತಿಯಾಗಿ ಸ್ಕರ್ಬ್ ಮಾಡಿದರೆ ಕಾರ್ಪೆಟ್ ನ ಫೈಬರ್ ಕಿತ್ತು ಬರಬಹುದು. ಮಳೆಗಾಲದಲ್ಲಿ ಇದು ಕಾರ್ಪೆಟ್‌ನ್ನು ಸ್ವಚ್ಛಗೊಳಿಸುವ ಅತ್ಯಂತ ಸುಲಭ ವಿಧಾನ.

ಡೆಹುಮಿಡಿಫೈಯರ್ಸ್ ಮತ್ತು ಫ್ಯಾನ್
ಡ್ರೈಯರ್ ಮತ್ತು ಫ್ಯಾನ್ ಬಳಸಿಕೊಂಡು ಕಾರ್ಪೆಟ್ ಯಾವಾಗಲೂ ಒಣಗಿರುವಂತೆ ನೋಡಿಕೊಳ್ಳಿ. ಕಾರ್ಪೆಟ್ ನಿಂದ ಫಂಗಸ್ ನ್ನು ತೆಗೆಯಲು ಡೆಹುಮಿಡಿಫೈಯರ್ಸ್ ಬಳಸಿ ಮತ್ತು ಫ್ಯಾನ್ ನಿಂದ ಸಂಪೂರ್ಣ ತೇವಾಂಶ ತೆಗೆಯಬಹುದು. ಮಳೆಗಾಲದಲ್ಲಿ ಕಾರ್ಪೆಟ್ ಅನ್ನು ಸ್ವಚ್ಛವಾಗಿಡಲು ಇದು ಮತ್ತೊಂದು ವಿಧಾನ.

English summary

Quick Ways To Clean Carpet In Monsoon

Monsoon is a pleasant weather with great humidity. It is a bit tough to keep our home beautiful in this season due to moisture & humidity. Using damp carpets and furniture can lead to fungal infections, if ignored. Follow these quick & easy steps to keep your carpet & indoor décor clean.
Story first published: Tuesday, June 23, 2015, 19:55 [IST]
X
Desktop Bottom Promotion