For Quick Alerts
ALLOW NOTIFICATIONS  
For Daily Alerts

ಮಳೆಗಾಲ ಬಂದರೆ ಸಾಕು ಬೆಂಬಿಡದ ಸೊಳ್ಳೆ ಕಾಟ

|

ಮಳೆಗಾಲ ಬಂತೆಂದರೆ ಸಾಕು ಕೆಲವರ ಪಾಲಿಗಂತೂ ಒಂದು ಸುಂದರ ಕಾವ್ಯದ ಮೂಲವಾಗಿಬಿಡುತ್ತದೆ. ಮಿಕ್ಕೆಲ್ಲಾ ಕಾಲಗಳು ಅಷ್ಟೊಂದು ಮೋಡಿಯನ್ನು ಮಾಡದೇ ಇದ್ದರೂ ಮಳೆಗಾಲ ವಯಸ್ಸನ್ನು ಮರೆಸಿ ಪ್ರತಿಯೊಬ್ಬರಲ್ಲಿ ಹುರುಪನ್ನು ತರುತ್ತದೆ. ಕವಿಗಳ ಕಣ್ಣಿಗೆ ಕಾವ್ಯದ ಹನಿಯಾಗಿ, ಯುವ ಮನಸ್ಸುಗಳನ್ನು ಕನಸುಗಳಲ್ಲಿ ಕೊಚ್ಚಿಹೋಗುವಂತೆ ಮಾಡುವ ಮಳೆಗಾಲಕ್ಕೆ ಅದರದ್ದೇ ಆದ ಸವಿಯಿದೆ.

ಇನ್ನು ಕಾವ್ಯಮಯವಾಗಿ ಮಳೆಗಾಲ ಸೊಗಸಾದರೂ ಅದು ಉಂಟುಮಾಡುವ ಫಜೀತಿ, ರೋಗ ರುಜಿನಗಳ ಭೀತಿ, ಕೊಚ್ಚೆ ಕೆಸರು ಹೀಗೆ ಸಮಸ್ಯೆಗಳ ಸರಮಾಲೆ ಕಣ್ಮುಂದೆ ಬಂದು ಸುಳಿಯುತ್ತದೆ. ಇನ್ನು ಮಳೆಗಾಲದಲ್ಲಿ ಹೆಚ್ಚಿನ ಕಾಟ ಸೊಳ್ಳೆಗಳದ್ದಾಗಿದೆ ಎಂಬುದನ್ನು ಇಲ್ಲಿ ಪ್ರಸ್ತಾವಿಸಲೇಬೇಕು. ಮಳೆಗಾಲದಲ್ಲಿ ಕೆಸರುಮಯ ವಾತಾವರಣದಲ್ಲಿ ಜನ್ಮತಾಳುವ ಸೊಳ್ಳೆಗಳು ಅನೇಕರೋಗ ರುಜಿನಗಳಿಗೆ ಕಾರಣೀಕರ್ತವಾಗಿವೆ.

ಸೊಳ್ಳೆಗಳು ಮಹಾ ಉಪದ್ರವಕಾರಿಗಳೆ೦ಬುದರಲ್ಲ೦ತೂ ಯಾರಿಗೂ ಯಾವುದೇ ಅನುಮಾನಗಳಿಲ್ಲ. ಮನೋಲ್ಲಾಸಕ್ಕಾಗಿ, ವಿಶ್ರಾ೦ತಿಗಾಗಿ ಉದ್ಯಾನವನಗಳಲ್ಲಿ ಕುಳಿತುಕೊಳ್ಳುವುದು ವಾಡಿಕೆ. ಆದರೆ, ಅಲ್ಲೂ ಕೂಡಾ ಈ ಕ್ರಿಮಿಕೀಟಗಳ ಹಾಗೂ ಸೊಳ್ಳೆಗಳ ಕಿರಿಕಿರಿಯನ್ನು೦ಟು ಮಾಡುವ ಹಾರಾಟದ ಕರ್ಕಶ ಧ್ವನಿಯು ನಮ್ಮನ್ನು ಮನೆಯೊಳಗಡೆಯೇ ಕುಳಿತುಕೊ೦ಡಿರುವ೦ತೆ ಮಾಡಿಬಿಡುತ್ತವೆ. ಬನ್ನಿ ಈ ಸೊಳ್ಳೆಗಳ ಕಾಟದಿಂದ ಮುಕ್ತಿ ಹೊಂದುವುದು ಹೇಗೆ ಎಂಬುದನ್ನು ನೋಡೋಣ... ಮನೆಯಲ್ಲಿಯೇ ಬೆಳೆಸಬಹುದಾದ ಸೊಳ್ಳೆ ನಿವಾರಕ ಸಸ್ಯಗಳು!

How to prevent mosquitoes during rainy season

ಕೆಲವು ಉಪಯುಕ್ತವಾದ ಎಣ್ಣೆಗಳು
ಕೆಲವು ಉಪಯುಕ್ತವಾದ ಎಣ್ಣೆಗಳ ಸಹಾಯದಿಂದ ಮನೆಗಳಲ್ಲಿ ನೊಣವನ್ನು ದೂರವಿಡಲು ಸಾಧ್ಯವಾಗಿದೆ. ಅವು ಯಾವುದೆಂದರೆ ಲ್ಯಾವೆಂಡರ್, ನೀಲಗಿರಿ, ಪುದೀನಾ ಮತ್ತು ನಿಂಬೆ ಹುಲ್ಲು. ಇವುಗಳ ಸೌಮ್ಯ ಹಿತಕಾರಿ ಪರಿಮಳದಿಂದ ಮನೆಯ ನೊಣಗಳನ್ನು ಪರಿಣಾಮಕಾರಿಯಾಗಿ ದೂರವಿರಿಸಬಹುದು. ಈ ದ್ರವ್ಯವನ್ನು ನಿಮ್ಮ ಡ್ರಾಯಿಂಗ್ ರೂಮ್, ಮಲಗುವ ಕೋಣೆ ಹಾಗೂ ಅಡಿಗೆಮನೆಯಲ್ಲೂ ಸಹ ಸಿಂಪಡಿಸಿ ಆ ಪ್ರದೇಶಗಳೆಲ್ಲವನ್ನು ನೊಣಗಳಿಂದ ದೂರವಿರಿಸಬಹುದು.

ತುಳಸಿ
ತುಳಸಿ ಗಿಡವು ಔಷಧೀಯ ಗುಣಗಳನ್ನು ಹೊಂದಿರುವುದಲ್ಲದೆ ಅದು ಅತ್ಯಂತ ಪರಿಣಾಮಕಾರಿಯಾಗಿ ನೊಣಗಳ ವಿರುದ್ಧ ಬಲವಾಗಿ ವರ್ತಿಸುತ್ತದೆ. ಆದ್ದರಿಂದ ನಿಮ್ಮ ಮನೆತೋಟಗಳಲ್ಲಿ ನೊಣಗಳನ್ನು ದೂರವಿರಿಸಲು ಆದಷ್ಟು ತುಳಸಿ ಬೆಳೆಯಿರಿ. ಹಾಗೆಯೇ ಪುದೀನ, ನಸು ಕೆನ್ನೀಲಿ (Lavender) ಅಥವ ಚೆಂಡು ಹೂ ಗಿಡಗಳನ್ನು ಬೆಳೆಸಿ ನೊಣಗಳನ್ನು ದೂರವಿರಿಸಿರಿ.

ಬೇವಿನ ಗಿಡ
ಬೇವಿನ ಗಿಡವು ಸೊಳ್ಳೆಗಳನ್ನು ಹಿಮ್ಮೆಟ್ಟಿಸುವ ಒ೦ದು ಪ್ರಬಲವಾದ ಸಸಿಯಾಗಿದೆ. ಬೇವಿನ ಗಿಡವು ಕೀಟಗಳನ್ನು ಹಿಮ್ಮೆಟ್ಟಿಸುವ ಗುಣಲಕ್ಷಣಗಳನ್ನೂ ಪಡೆದಿದೆ. ಬೇವು ಆಧಾರಿತ ಸೊಳ್ಳೆ ನಿವಾರಕ ಉತ್ಪನ್ನಗಳು ಹಾಗೂ ಬಾಮ್ ಗಳು ಬಹುಸ೦ಖ್ಯೆಯಲ್ಲಿ ಇ೦ದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸೊಳ್ಳೆಗಳನ್ನು ನಿಯ೦ತ್ರಿಸಲು, ಬೇವಿನ ಗಿಡವನ್ನು ಹಾಗೆಯೇ ನಿಮ್ಮ ಕೈತೋಟದಲ್ಲಿ ನೆಡಿರಿ. ಸೊಳ್ಳೆಗಳನ್ನು ಹಿಮ್ಮೆಟ್ಟಿಸುವ ಉದ್ದೇಶಕ್ಕಾಗಿ ನೀವು ಬೇವಿನ ಎಲೆಗಳನ್ನು ಸುಡಬಹುದು ಇಲ್ಲವೇ ಬೇವಿನ ಎಣ್ಣೆಯನ್ನು ಸೀಮೆ ಎಣ್ಣೆಯ ದೀಪಗಳಲ್ಲಿ ಬಳಸಬಹುದು. ಸೊಳ್ಳೆಗಳು ನಿಮ್ಮ ಮೈಗೆ ಘಾಸಿಯನ್ನು೦ಟು ಮಾಡದ೦ತೆ, ಅವುಗಳನ್ನು ದೂರವಿಡಲು ಬೇವಿನ ಎಣ್ಣೆಯನ್ನು ತ್ವಚೆಯ ಮೇಲೆ ಹಚ್ಚಿಕೊಳ್ಳಬಹುದು.

ಪುದಿನಾ (ಪೆಪ್ಪರ್ ಮಿ೦ಟ್)
ಸಲಾಡ್‌ಗಳಿಗೆ ಹಾಗೂ ಮತ್ತಿತರ ಆಹಾರಪದಾರ್ಥಗಳಿಗೆ ಸೇರಿಸಿದಾಗ, ಪುದಿನಾ ಎಲೆಗಳು ಅವುಗಳ ಸ್ವಾದವನ್ನು ದುಪ್ಪಟ್ಟುಗೊಳಿಸುತ್ತವೆ ಎ೦ಬ ಸ೦ಗತಿಯು ನಮಗೆಲ್ಲಾ ತಿಳಿದಿರುವುದೇ ಆಗಿದೆ. ಇಷ್ಟು ಮಾತ್ರವೇ ಅಲ್ಲದೇ, ಪುದಿನಾವು ಸೊಳ್ಳೆಗಳನ್ನು ಹಿಮ್ಮೆಟ್ಟಿಸುವ ಒ೦ದು ಸಸ್ಯದ ರೂಪದಲ್ಲಿಯೂ ಪ್ರಯೋಜನಕಾರಿಯಾಗಿದೆ ಎ೦ಬ ಸ೦ಗತಿಯು ನಿಮಗೆ ತಿಳಿದಿದೆಯೇ ?! ಪುದಿನಾ ಸೊಪ್ಪಿನ ಪ್ರಬಲ ಘಾಟುವಾಸನೆಯು ಅನಪೇಕ್ಷಿತ ಸೊಳ್ಳೆಗಳನ್ನು ಮನೆಯಿ೦ದ ದೂರವೇ ಇರಿಸುತ್ತದೆ.

English summary

How to prevent mosquitoes during rainy season

As we all know, mosquitoes are not only irritating, but can lead to several serious diseases. During the rainy seasons, water tends to stagnate, thereby creating a breeding place for mosquitoes. have a look how to prevent mosquitoes during rainy season
Story first published: Wednesday, June 3, 2015, 19:54 [IST]
X
Desktop Bottom Promotion