For Quick Alerts
ALLOW NOTIFICATIONS  
For Daily Alerts

ಉಪ್ಪು ಕೇವಲ ರುಚಿಗಷ್ಟೇ ಅಲ್ಲ, ಶುಚಿತ್ವಕ್ಕೂ ಬೇಕು!

By Arpitha
|

"ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ" ಎಂಬುದು ಎಲ್ಲರಿಗು ಗೊತ್ತಿರುವ ಗಾದೆ. ಉಪ್ಪಿಲ್ಲದೆ ಊಟ ತಯಾರಿಸಲು ಅಸಾಧ್ಯ. ಉಪ್ಪನ್ನು ಬರೀ ಅಡುಗೆಗೆ ಮಾತ್ರ ಬಳಸುತ್ತಾರೆ ಎಂದರೆ ತಪ್ಪಾಗುತ್ತದೆ. ಇದರ ಹೊರತಾಗಿ ಇದನ್ನು ಮನೆಯ ಶುಚಿತ್ವಕ್ಕೆ ಕೂಡ ಬಳಸಲಾಗುತ್ತದೆ. ಸಂಶೋಧಕರು ತಿಳಿಸುವ ಪ್ರಕಾರ ಉಪ್ಪಿನಿಂದ 14000 ರೀತಿಯ ಉಪಯೋಗವಿದೆಯಂತೆ!

ಅಡುಗೆಯ ರುಚಿಯನ್ನು ಹೆಚ್ಚಿಸುವ ಉಪ್ಪಿನಲ್ಲಿ ಇಂತಹ ಸಾಕಷ್ಟು ಇತರ ಉಪಯೋಗಗಳಿವೆ ಎಂದರೆ ಆಶ್ಚರ್ಯವೆನಿಸುತ್ತದೆಯಲ್ಲವೇ? ಅಡುಗೆಯಲ್ಲಿ ಉಪ್ಪಿನ ಪಾತ್ರವೇನು ಎಂಬುದು ನಮಗೆಲ್ಲ ತಿಳಿದೇ ಇದೆ. ದೇಹಕ್ಕೆ ಬೇಕಾದ ಸೋಡಿಯಂ ಅಂಶವನ್ನು ನೀಡುವುದರ ಜೊತೆಗೆ ಉಪ್ಪು ದೇಹದಲ್ಲಿ ನಿರ್ಜಲೀಕರಣವನ್ನು ತಡೆಯುವ ಗುಣವನ್ನು ಹೊಂದಿದೆ.

ಅಡುಗೆ ಪಾತ್ರೆಗಳ ಸ್ವಚ್ಛತೆಗೆ

Household Things That Salt Can Clean

ಸಾಮಾನ್ಯ ಅಡುಗೆ ಮಾಡಲು ಕಬ್ಬಿಣದಂತಹ ಪಾತ್ರೆಗಳನ್ನು ಉಪಯೋಗಿಸಿದಾಗ ಸೋಪಿನಿಂದ ಹೋಗಲಾಡಿಸಲು ಸಾಧ್ಯವಾಗದ ಕಲೆಗಳು ಉಳಿಯುತ್ತವೆ. ಹಾಗಾಗಿ ಇಂತಹ ಕಲೆಯನ್ನು ಹೋಗಲಾಡಿಸಲು ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಅದಕ್ಕೆ ಉಪ್ಪನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಪಾತ್ರೆಗೆ ಹಾಕಿ ತಿಕ್ಕಿ ಅದನ್ನು ಬಿಸಿ ನೀರಿನಲ್ಲಿ ತೊಳೆದರೆ ಕಲೆ ಮಾಯವಾಗುತ್ತದೆ. ಈ ವಸ್ತುಗಳನ್ನು ಉಪ್ಪು ಬಳಸಿ ಶುಚಿ ಮಾಡಿ ನೋಡಿ!

ಸಿಂಕ್ ಸ್ವಚ್ಛಗೊಳಿಸಲು


ಉಪ್ಪನ್ನು ಬಳಸಿ ಸಿಂಕ್ ಸ್ವಚ್ಛಗೊಳಿಸುವುದರಿಂದ ಹೊಳೆಯುವಂತೆ ಮಾಡಬಹುದು. ಉಪ್ಪು ಮತ್ತು ಬಿಸಿ ನೀರಿನಿಂದ ಸಿಂಕ್ ತೊಳೆದರೆ ಎಣ್ಣೆ ಜಿಡ್ಡಿನ ಅಂಶ ಹೋಗಲಾಡಿಸಿ ಹೊಳೆಯುವಂತೆ ಮಾಡಬಹುದು.

ಸುಟ್ಟ ಕಲೆಗಳನ್ನು ಹೋಗಲಾಡಿಸಲು
ಪಾತ್ರೆಗಳಲ್ಲಿ ಕಂಡುಬರುವ ಸುಟ್ಟ ಕಲೆಗಳನ್ನು ಹೋಗಲಾಡಿಸುವುದು ಸುಲಭದ ಕೆಲಸವಲ್ಲ. ಅಡುಗೆ ಮಾಡುವಾಗ ಪಾತ್ರೆ ಸುಟ್ಟುಹೋದರೆ ತಕ್ಷಣ ಅದಕ್ಕೆ ಉಪ್ಪನ್ನು ಹಾಕಿ ತಿಕ್ಕುವುದರಿಂದ ಹಠಮಾರಿ ಕಲೆಗಳು ಕೂಡ ಮಾಯವಾಗುತ್ತವೆ.

ನೀರಿನ ಕಲೆಗಳನ್ನು ಹೋಗಲಾಡಿಸಲು
ದಿನನಿತ್ಯ ಬಳಸುವ ನೀರಿನ ಬಾಟಲ್ ಅಥವಾ ಪಾಟ್ ಗಳು ಕಲೆ ಹೊಂದುತ್ತವೆ. ಜೊತೆಗೆ ನೀರಿನಲ್ಲಿರುವ ಕಬ್ಬಿಣದ ಅಂಶದಿಂದ ಕೆಂಪಾಗುತ್ತವೆ. ಸ್ವಲ್ಪ ಉಪ್ಪು, ಒಂದು ಚಮಚ ಬೇಕಿಂಗ್ ಸೋಡಾ ಮತ್ತು ಕೆಲವು ಹನಿ ಲಿಂಬೆ ರಸವನ್ನು ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಇಡಿ. ನಂತರ ಇದನ್ನು ನೀರಿನಲ್ಲಿ ತೊಳೆದರೆ ಕಲೆ ಇಲ್ಲವಾಗುತ್ತದೆ.

ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು


ಕಪ್ಪಗಾಗಿರುವ ತಾಮ್ರ, ಕಂಚು. ಹಿತ್ತಾಳೆ ಪಾತ್ರೆಗಳನ್ನು ಉಪ್ಪು ಮತ್ತು ಹುಣಸೆ ಹಣ್ಣು ಅಥವಾ ಉಪ್ಪು ಮತ್ತು ಲಿಂಬಿ ರಸ ಹಾಕಿ ತೊಳೆದರೆ ಪಾತ್ರೆಗಳ ಹೊಳಪು ಹೆಚ್ಚುತ್ತದೆ.

ಊಟದ ತಟ್ಟೆಯ ಸ್ವಚ್ಛತೆಗೆ
ಮೊಟ್ಟೆ, ಮಾಂಸ, ಮೀನು ಈ ರೀತಿಯ ಆಹಾರಗಳು ತಿಂದ ನಂತರ ಪ್ಲೇಟ್ ಅಥವಾ ಊಟದ ಪ್ಲೇಟ್ ತೊಳೆಯುವಾಗ ಸ್ವಲ್ಪ ಉಪ್ಪು ಹಾಕಿ ತಿಕ್ಕಿದರೆ ಪ್ಲೇಟ್ ವಾಸನೆ ರಹಿತವಾಗಿರುತ್ತದೆ.

English summary

Household Things That Salt Can Clean

There are lots of ways how salt becomes beneficial human’s life. So, stating only 15 ways to naturally clean with salt is somehow difficult. Some researches say that there are 14,000 uses of salt. Read on and apply these ways to naturally clean with salt in your daily lives to see the magic
X
Desktop Bottom Promotion