For Quick Alerts
ALLOW NOTIFICATIONS  
For Daily Alerts

ಮರದ ಪೀಠೋಪಕರಣಗಳು ಹೊಸದರಂತೆ ಕಂಗೊಳಿಸಬೇಕೇ?

By ಮನೋಹರ್
|

ಮರದ ಪೀಠೋಪಕರಣಗಳು ಮನೆಗೆ ವಿಶೇಷ ಸೊಬಗು ನೀಡುತ್ತದೆ. ಹಿಂದಿನ ಕಾಲದ ವಾಸ್ತುಶಿಲ್ಪ ಮತ್ತು ಪೀಠೋಪಕರಣಗಳು ಸ್ವಲ್ಪ ನಸುಬಣ್ಣ ನೀಡುತ್ತದೆ. ಹಿಂದಿನ ಕಾಲದ ಮರದ ಪೀಠೋಪಕರಣಗಳಿಗೆ ಇಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆಯಿದೆ ಮತ್ತು ಪ್ರತಿಯೊಬ್ಬರು ಇದನ್ನು ಇಷ್ಟಪಡುತ್ತಾರೆ. ಆದರೆ ಮರದ ಪೀಠೋಪಕರಣಗಳ ಒಂದು ಸಮಸ್ಯೆಯೆಂದರೆ ಅದರ ನಿರ್ವಹಣೆ. ಮರದ ಪೀಠೋಪಕರಣಗಳ ನಿರ್ವಹಣೆ ಮತ್ತು ಶುಚಿಗೊಳಿಸುವುದು ಅತೀ ಕಠಿಣ ಕೆಲಸ. ಬನ್ನಿ ಕೆಲವೊಂದು ವಿಧಾನಗಳಿಂದ ಪೀಠೋಪಕರಣಗಳ ಮೇಲೆ ಇರುವ ಕಲೆಗಳನ್ನು ತೆಗೆಯಬಹುದು ಮತ್ತು ಅದು ಹೊಳೆಯುವಂತೆ ಮಾಡಬಹುದು. ಆ ವಿಧಾನಗಳು ಇಲ್ಲಿವೆ...

Ways to keep your wooden furniture shiny and stainless

ಟರ್ಪಂಟೈನ್ ಮತ್ತು ಜೇನುಮೇಣ
ಟರ್ಪಂಟೈನ್ ಮತ್ತು ಜೇನುಮೇಣವನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ಮರದ ಪೀಠೋಪಕರಣಗಳನ್ನು ಸರಿಯಾಗಿ ಶುಚಿಗೊಳಿಸಬಹುದು. ಇದರಿಂದ ಪೀಠೋಪಕರಣಗಳಿಗೆ ಗೆದ್ದಲು ಮತ್ತು ಇತರ ಕೀಟಗಳು ಹಿಡಿಯುವುದಿಲ್ಲ. ಟರ್ಪಂಟೈನ್ ಮತ್ತು ಜೇನುಮೇಣ ಸೇರಿಸಿ ಪೇಸ್ಟ್ ಮಾಡಿ, ಇದನ್ನು ಹಚ್ಚುವ ಮೊದಲು ಪೀಠೋಪಕರಣಗಳನ್ನು ಒದ್ದೆ ಬಟ್ಟೆಯಲ್ಲಿ ಒರೆಸಿ. ಬಳಿಕ ಒಣಗಿದ ಬಟ್ಟೆಯನ್ನು ಈ ಮಿಶ್ರಣದಲ್ಲಿ ಮುಳುಗಿಸಿ ಮತ್ತು ಪೀಠೋಪಕರಣಗಳನ್ನು ಒರೆಸಿ. ಪೀಠೋಪಕರಣಗಳನ್ನು ಸ್ವಚ್ಛ ಮತ್ತು ಹೊಳೆಯುವಂತೆ ಮಾಡಲು ಇದು ತುಂಬಾ ಪರಿಣಾಮಕಾರಿ ವಿಧಾನ.

ಮೇಯನೇಸ್
ಸಲಾಡ್ ಮತ್ತು ಪಾಸ್ತಾಗಳ ರುಚಿ ಹೆಚ್ಚಿಸುವ ಮೇಯನೇಸ್ ನಲ್ಲಿ ಮರದ ಪೀಠೋಪಕರಣಗಳ ಮೇಲಿರುವ ಕಲೆಗಳನ್ನು ತೆಗೆಯುವ ಸಾಮರ್ಥ್ಯವಿದೆ. ಪಾನೀಯಗಳು, ನೀರು, ಆಹಾರ, ಪೆನ್ನಿನಿಂದ ಆದ ಕಲೆ ಮತ್ತು ಇತರ ಕಲೆಗಳನ್ನು ಮೇಯನೇಸ್ ತೆಗೆಯಬಲ್ಲದು. ಬಟ್ಟೆಯಲ್ಲಿ ಸ್ವಲ್ಪ ಮಯೊ ಸೇರಿಸಿ ಮತ್ತು ಕಲೆ ಇರುವ ಕಲೆ ಇದನ್ನು ಉಜ್ಜಿ. ಕಲೆ ಒರೆಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಅಂತಿಮವಾಗಿ ಕಲೆ ಮಾಯವಾಗುತ್ತದೆ. ಮರದ ಪೀಠೋಪಕರಣಗಳ ಮೇಲೆ ಇರುವ ಕಲೆಗಳನ್ನು ತೆಗೆಯಲು ಮಯೊ ಅತ್ಯುತ್ತಮ ವಿಧಾನ.

ಆಲಿವ್ ತೈಲ
ಆಲಿವ್ ಎಣ್ಣೆ ಮರದ ಪೀಠೋಪಕರಣಗಳನ್ನು ಹೊಳೆಯುವಂತೆ ಮಾಡಲು ಅತ್ಯುತ್ತಮವಾದ ವಸ್ತು. ಮರದ ಪೀಠೋಪಕರಣದ ಮೇಲೆ ಸ್ವಲ್ಪ ಆಲಿವ್ ಎಣ್ಣೆ ಸಿಂಪಡಿಸಿ ಮತ್ತು ಅಷ್ಟೇ ಪ್ರಮಾಣದ ತೈಲವನ್ನು ಫರ್ನಿಚರ್ ಮೇಲೆ ಹಚ್ಚಿ. ಪೀಠೋಪಕರಣಗಳಲ್ಲಿ ಇರುವ ಕೆತ್ತನೆಯ ಭಾಗಗಳ ಬಗ್ಗೆ ಎಚ್ಚರಿಕೆ ವಹಿಸಿ.

English summary

Ways to keep your wooden furniture shiny and stainless

Wooden Furniture gives a very classy look to the house. It can give a little tinge of the olden time architecture and furniture. Old wood furniture is also pretty much in demand and is liked by everyone.
X
Desktop Bottom Promotion