For Quick Alerts
ALLOW NOTIFICATIONS  
For Daily Alerts

ಫ್ಯಾಬ್ರಿಕ್ ಕವರ್ ಗಳ ನಿರ್ವಹಣೆ ಹೀಗಿರಲಿ

|

ಮನೆಯಲ್ಲಿ ಕುಷನ್, ಚೇರ್, ಸೋಫಾ ಸೆಟ್ ಗಳಿಗೆ ಅವುಗಳ ಅಂದ ಹೆಚ್ಚಿ, ಮನೆ ಸೊಗಸಾಗಿ ಕಾಣಲು ಸಾಮಾನ್ಯವಾಗಿ ಫ್ಯಾಬ್ರಿಕ್ ಕವರ್ ಬಳಸುವುದು ಸಹಜ. ಆದರೆ ಈ ಫ್ಯಾಬ್ರಿಕ್ ಕವರ್ ಗಳು ವರ್ಷಗಟ್ಟಲೆ ಹೊಸ ಕವರ್ ನಂತೆ ಕಾಣಲು ಅದರ ನಿರ್ವಹಣೆಯತ್ತ ಗಮನ ಹರಿಸಿದರೆ ಮಾತ್ರ ಸಾಧ್ಯ. ಇಲ್ಲದಿದ್ದರೆ ಸ್ವಲ್ಪ ಸಮಯದಲ್ಲಿ ಅದರ ಬಣ್ಣ ಮಾಸಿ ಹಳೆಯ ಕವರ್ ನಂತೆ ಕಾಣುವುದು.

ಫ್ಯಾಬ್ರಿಕ್ ಕವರ್ ತುಂಬಾ ಕಾಲ ಹೊಸದರಂತೆ ಕಾಣಲು ಟಿಪ್ಸ್ ನೋಡಿ ಇಲ್ಲಿದೆ:

Tips To Maintain Home Fabrics

ದಿನಾ ದೂಳು ತಟ್ಟಿ
ದಿನಾ ದೂಳು ತಟ್ಟಿದರೆ ಅದರಲ್ಲಿರುವ ದೂಳುಗಳು ಹೋಗುವುದರಿಂದ ಫ್ಯಾಬ್ರಿಕ್ ಬೇಗನೆ ಕೊಳೆಯಾಗದೆ ಆಕರ್ಷಕವಾಗಿ ಕಾಣುವುದು.

ಬಟ್ಟೆ ಯಾವುದು
ಕುಷನ್ ಕವರ್ ಗೆ ಹಾಕಿದ ಬಟ್ಟೆ ಯಾವುದು ಕೂಡ ಇಲ್ಲಿ ಮುಖ್ಯ. ಕಾಟನ್ ಫ್ಯಾಬ್ರಿಕ್ ಆದರೆ ವಾಷಿಂಗ್ ಮೆಷಿನ್ ನಲ್ಲಿ ಹಾಕಿ ತೊಳೆಯಬಹುದು, ಅದೇ ಸಿಲ್ಕ್ ಫ್ಯಾಬ್ರಿಕ್ ಆದರೆ ಡ್ರೈ ವಾಷ್ ಗೆ ಕೊಡುವುದು ಒಳ್ಳೆಯದು.

ಕರ್ಟನ್
ಪ್ರತೀ ತಿಂಗಳಿಗೆ ಎರಡು ಬಾರಿ ಕರ್ಟನ್ ಒಗೆಯುವುದು ಒಳ್ಳೆಯದು. ಈ ರೀತಿ ಮಾಡಿದರೆ ಕರ್ಟನ್ ಫ್ಯಾಬ್ರಿಕ್ ಆಕರ್ಷಕವಾಗಿ ಕಾಣುವುದು.

ಯಾವುದೇ ಬ್ಲೀಚ್ ಬಳಸಬೇಡಿ
ಒಂದು ವೇಳೆ ಕವರ್ ನಲ್ಲಿ ಏನಾದರೂ ಕಲೆಯಾಗಿದ್ದರೆ ಬ್ಲೀಚ್ ಬಳಸಬೆಡಿ. ಒಂದೋ ಡ್ರೈ ವಾಶ್ ಗೆ ಕೊಡಿ, ಇಲ್ಲಿದ್ದರೆ ನಿಂಬೆ ಹಣ್ಣಿನ ತುಂಡಿನಿಂದ ತಿಕ್ಕಿ ತೊಳೆಯಿರಿ.

ಬಿಸಿ ನೀರಿನಲ್ಲಿ ನೆನೆ ಹಾಕಬೇಡಿ
ಸೋಪಿನ ಪುಡಿ ಹಾಕಿ ಬಿಸಿ ನೀರಿನಲ್ಲಿ ನೆನೆ ಹಾಕಬೇಡಿ. ಈ ರೀತಿ ಮಾಡಿದರೆ ಕಲರ್ ಹೋಗಿ ಕವರ್ ಸಂಪೂರ್ಣ ಹಾಳಾಗುವುದು.

ಬಿಸಿಲಿನಲ್ಲಿ ಹಾಕಬೇಡಿ
ಈ ಬಟ್ಟೆಗಳನ್ನು ಒಣಗಿಸುವಾಗ ನೆರಳಿರುವ ಕಡೆ ಹಾಕಿ. ತುಂಬಾ ಬಿಸಿಲಿರುವ ಕಡೆ ಹಾಕಿದರೆ ಫೇಡ್ ಆಗುತ್ತವೆ.

English summary

Tips To Maintain Home Fabrics | Tips For Fabrics Wash | ಮನೆಯಲ್ಲಿ ಫ್ಯಾಬ್ರಿಕ್ ನಿರ್ವಹಣೆ ಹೇಗೆ | ಫ್ಯಾಬ್ರಿಕ್ ವಾಶ್ ಗೆ ಟಿಪ್ಸ್

We all use fabrics for our home decor. Cushion covers, curtains, sofa covers etc. are all very common home fabrics. But it is not enough to just buy these fabrics. You also need to maintain these fabrics to keep them as good as new for years.
X
Desktop Bottom Promotion