For Quick Alerts
ALLOW NOTIFICATIONS  
For Daily Alerts

ಕಿಚನ್ ಶೆಲ್ಫ್ ಜೋಡಿಸುವ ವಿಧಾನಗಳು

By Hemanth P
|

ಕಿಚನ್ ಶೆಲ್ಫ್ ನ್ನು ಜೋಡಿಸುವುದು ತುಂಬಾ ಕಠಿಣ ಕೆಲಸ. ಎಲ್ಲಾ ಡಬ್ಬಗಳು, ಪಾತ್ರೆಗಳು ಸೂಕ್ತ ರೀತಿಯಲ್ಲಿ ಜೋಡಿಸಬೇಕು ಮತ್ತು ವ್ಯವಸ್ಥಿತವಾಗಿಡುವುದು ತುಂಬಾ ಮುಖ್ಯ. ಕಿಚನ್ ಶೆಲ್ಫ್ ನ್ನು ಯಾವ ರೀತಿಯಲ್ಲಿ ಜೋಡಿಸಿಡಬೇಕೆಂದರೆ ನಮಗೆ ಬೇಕಾದ ವಸ್ತುಗಳು ತುಂಬಾ ಸುಲಭವಾಗಿ ಸಿಗುವಂತೆ ಹಾಗೂ ಕ್ರಮಬದ್ಧವಾಗಿರಬೇಕು. ಕಿಚನ್ ಶೆಲ್ಫ್ ನ್ನು ಕಾಲಕಾಲಕ್ಕೆ ಶುಚಿಗೊಳಿಸಿ, ಮರುಜೋಡಿಸಿಡಬೇಕು. ಕಿಚನ್ ಶೆಲ್ಫ್ ನ್ನು ಸರಿಯಾಗಿ ಮತ್ತು ನಿಯಮಿತವಾಗಿ ಸ್ವಚ್ಛಗೊಳಿಸದೆ ಇದ್ದರೆ ಕಿಚನ್ ತುಂಬಾ ಕೊಳಕು ಮತ್ತು ಅಸಂಬದ್ಧವಾಗಿ ಕಾಣುತ್ತದೆ.

ಕಿಚನ್ ಶೆಲ್ಫ್ ನ್ನು ಶುಚಿಗೊಳಿಸುವುದು ಮತ್ತು ವ್ಯವಸ್ಥಿತವಾಗಿಡುವುದು ಅತ್ಯಗತ್ಯ. ನಮ್ಮ ಕೈಗೆ ಎಲ್ಲಾ ಸಾಮಾನುಗಳು ಸುಲಭವಾಗಿ ಸಿಕ್ಕಿದರೆ ಆಗ ಅಡುಗೆ ಮಾಡುವುದು ತುಂಬಾ ಸುಲಭ. ಹೀಗಿದ್ದರೆ ಅಡುಗೆಗೆ ಬೇಕಾಗುವ ಸಾಮಾನುಗಳನ್ನು ಹುಡುಕುವ ಶ್ರಮ ಕಡಿಮೆಯಾಗುತ್ತದೆ. ಸಮಯಕ್ಕೆ ಸರಿಯಾಗಿ ಪ್ರತಿಯೊಂದು ಸುಲಭವಾಗಿ ಸಿಗುವಂತಿರಬೇಕು. ಇದರಿಂದಾಗಿ ಕಿಚನ್ ಶೆಲ್ಫ್ ನ್ನು ವ್ಯವಸ್ಥಿತವಾಗಿಡಬೇಕು. ವ್ಯವಸ್ಥಿತವಾಗಿಲ್ಲದ ಕಿಚನ್ ಶೆಲ್ಫ್ ಎಲ್ಲವನ್ನು ಕಠಿಣಗೊಳಿಸಲಿದೆ. ಪದಾರ್ಥಗಳು ಎಲ್ಲೆಂದರಲ್ಲಿ ಹರಡಿಕೊಂಡಿದ್ದರೆ ಆಗ ಯಾವುದೂ ಸರಿಯಾದ ಜಾಗದಲ್ಲಿರುವುದಿಲ್ಲ. ಅವ್ಯವಸ್ಥಿತ ಕಿಚನ್ ಶೆಲ್ಫ್ ಜಿರಳೆ ಮತ್ತು ಇಲಿಗಳಿಗೆ ವಾಸಸ್ಥಾನವಾಗಲಿದೆ. ಅವ್ಯವಸ್ಥಿತವಾಗಿರುವ ಕಿಚನ್ ಶೆಲ್ಫ್ ನಿಂದಾಗಿ ಅಶುಚಿತ್ವ ಉಂಟಾಗಿ ಅನಾರೋಗ್ಯ ಕಾಡಬಹುದು.

Steps to organise your kitchen shelf

ಕಿಚನ್ ಶೆಲ್ಫ್ ನ್ನು ಶುಚಿಗೊಳಿಸಲು ನೀವು ಕೆಲವೊಂದು ವಿಧಾನಗಳನ್ನು ಪಾಲಿಸಬೇಕು. ಈ ವಿಧಾನಗಳು ನಿಮ್ಮ ಕಿಚನ್ ಶೆಲ್ಫ್ ನ್ನು ಶುಚಿಯಾಗಿ ಮತ್ತು ವ್ಯವಸ್ಥಿತವಾಗಿಡಲು ನೆರವಾಗಲಿದೆ. ಕಿಚನ್ ಶೆಲ್ಫ್ ನ್ನು ಶುಚಿಯಾಗಿಡಲು ಪಾಲಿಸಬೇಕಾದ ಕೆಲವೊಂದು ಸಾಮಾನ್ಯ ವಿಧಾನಗಳು.

1. ಒಂದು ಪಟ್ಟಿ ಮಾಡಿ

ಅಡುಗೆ ಮನೆಗೆ ಬೇಕಾಗಿರುವ ಪದಾರ್ಥಗಳು, ಡಬ್ಬಗಳು, ಪಾತ್ರೆಗಳು ಮತ್ತು ಇತರ ಚಾಕುಕತ್ತರಿಗಳ ಒಂದು ಪಟ್ಟಿ ಮಾಡಿ. ನಿಮ್ಮ ಪಟ್ಟಿಯಲ್ಲಿ ಇರುವಂತೆ ಕಿಚನ್ ನ ಶೆಲ್ಫ್ ನಲ್ಲಿ ಅವುಗಳಿಗೆ ಬೇಕಾಗಿರುವ ಜಾಗ ಮಾಡಿ. ಕಿಚನ್ ಶೆಲ್ಫ್ ನಲ್ಲಿ ಜೋಡಿಸಬೇಕಾಗಿರುವ ಎಲ್ಲಾ ವಸ್ತುಗಳು ನಿಮ್ಮ ಪಟ್ಟಿಯಲ್ಲಿಡಬೇಕು. ಅನುಕೂಲಕತೆಗೆ ತಕ್ಕಂತೆ ಆ ವಸ್ತುಗಳನ್ನು ಬೇರ್ಪಡಿಸಿಡಿ. ಆಹಾರ ಧಾನ್ಯಗಳು, ಪ್ಯಾಕೇಜ್ಡ್ ಆಹಾರ, ಮೆಣಸು ಇತ್ಯಾದಿಗಳನ್ನು ಬೇರ್ಪಡಿಸಿಡಿ. ಸಾಮಾನ್ಯವಾಗಿ ಒಂದೇ ರೀತಿಯ ವಸ್ತುಗಳನ್ನು ಜತೆಯಾಗಿಡಿ.

2. ಕಿಚನ್ ಶೆಲ್ಫ್ ನ್ನು ಶುಚಿಯಾಗಿಡಿ

ಎಲ್ಲಾ ಪದಾರ್ಥಗಳನ್ನು ಜತೆಯಾಗಿಡುವುದರೊಂದಿಗೆ ಕಿಚನ್ ಶೆಲ್ಫ್ ನ್ನು ಶುಚಿಯಾಗಿಡಿ. ಮೊದಲನೇಯದಾಗಿ ಒಣಬಟ್ಟೆ ಅಥವಾ ಪೊರಕೆ ಬಳಸಿಕೊಂಡು ಶೆಲ್ಫ್ ನ್ನು ಶುಚಿಗೊಳಿಸಿ. ಶೆಲ್ಫ್ ನಲ್ಲಿರುವ ಎಲ್ಲಾ ಧೂಳು ಮತ್ತು ಕೊಳೆ ಶುಚಿಗೊಳಿಸಿ. ಶೆಲ್ಫ್ ನ್ನು ಶುಚಿಗೊಳಿಸಲು ನೆಲದ ಕ್ಲೀನರ್ ಅಥವಾ ಲಿಕ್ವಿಡ್ ಕ್ಲೀನರ್ ನ್ನು ಬಳಸಿ ಮತ್ತು ಶೆಲ್ಫ್ ನ್ನು ಹೊಳೆಯುವಂತೆ ಮಾಡಬಹುದು. ಇದರ ಬಳಿಕ ಸ್ವಚ್ಛ ಬಟ್ಟೆ ಉಪಯೋಗಿಸಿ ಶೆಲ್ಫ್ ನ್ನು ಒರಸಿ.

3. ಪದಾರ್ಥಗಳನ್ನು ಸಂಗ್ರಹಿಸಿಡಿ

ಅಡುಗೆ ಮನೆಯಲ್ಲಿ ಬೇಕಾಗಿರುವ ಪದಾರ್ಥಗಳನ್ನು ಸಂಗ್ರಹಿಸಿಡಲು ಸರಿಯಾದ ಡಬ್ಬಗಳು ಬೇಕಾಗುತ್ತದೆ. ಪದಾರ್ಥಗಳನ್ನು ಡಬ್ಬಗಳಲ್ಲಿ ವ್ಯವಸ್ಥಿತವಾಗಿಡಬೇಕು ಮತ್ತು ಅದನ್ನು ತೆರೆದಿಡಬಾರದು. ಇದರಿಂದ ಆಹಾರ ಕೆಡಬಹುದು ಅಥವಾ ಶೆಲ್ಫ್ ನ್ನು ಅವ್ಯವಸ್ಥಿತವಾಗಿಡಬಹುದು. ಪದಾರ್ಥಗಳನ್ನು ಸರಿಯಾದ ರೀತಿಯ ಡಬ್ಬಗಳಲ್ಲಿಟ್ಟು ಹಾಕಿರುವ ಪದಾರ್ಥಗಳ ಹೆಸರನ್ನು ಬರೆದಿಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಅಡುಗೆ ಮನೆಯಲ್ಲಿ ಯಾವುದೇ ಪದಾರ್ಥವನ್ನು ಹುಡುಕುಲು ಸುಲಭವಾಗಲಿದೆ. ನಿಮ್ಮ ಅಡುಗೆಮನೆಯನ್ನು ವ್ಯವಸ್ಥಿತವಾಗಿ ಜೋಡಿಸಿಡಬೇಕು.

4. ಡಬ್ಬಗಳನ್ನು ಜೋಡಿಸಿಡಿ
ಈ ವಿಧಾನದಿಂದ ಕಿಚನ್ ಶೆಲ್ಫ್ ನ್ನು ಆಯೋಜಿಸುವುದು ಕಠಿಣವಾಗಲಿದೆ. ಕಿಚನ್ ಶೆಲ್ಫ್ ನ್ನು ಶುಚಿಗೊಳಿಸಲು ಎಲ್ಲಾ ಸಾಮಗ್ರಿಗಳನ್ನು ಕರಾರುವಕ್ಕಾಗಿ ಜೋಡಿಸಿಡಬೇಕು. ಎಲ್ಲಾ ಡಬ್ಬಗಳು ಮತ್ತು ಪಾತ್ರೆಗಳು ವ್ಯವಸ್ಥಿತವಾಗಿ ಕಾಣುವಂತೆ ಅದರದರ ಜಾಗದಲ್ಲಿಡಬೇಕು. ಇದರಿಂದ ಪದಾರ್ಥಗಳನ್ನು ಹುಡುಕುವುದು ಸುಲಭವಾಗಲಿದೆ. ಒಂದೇ ರೀತಿಯ ಪದಾರ್ಥಗಳನ್ನು ಜತೆಯಾಗಿಡಿ. ಪ್ರತೀದಿನ ನೀವು ಬಳಸುವಂತಹ ಸಾಮಗ್ರಿಗಳನ್ನು ಒಂದೇ ಜಾಗದಲ್ಲಿಟ್ಟಿರೆ ಆಗ ನಿಮಗೆ ಬಳಸಲು ಸುಲಭವಾಗಲಿದೆ.

5. ನಿರ್ವಹಣೆ

ಕಿಚನ್ ಶೆಲ್ಫ್ ನ್ನು ನೀವು ಜೋಡಿಸಿದ ಬಳಿಕ ಸುಮ್ಮನೆ ಆರಾಮವಾಗಿರಬೇಡಿ. ಕಿಚನ್ ಶೆಲ್ಫ್ ನ್ನು ನಿಯಮಿತವಾಗಿ ಶುಚಿಗೊಳಿಸಬೇಕು ಮತ್ತು ನಿರ್ವಹಣೆ ಮಾಡಬೇಕು. ಪ್ರತೀ ವಾರ ಅದರಲ್ಲಿರುವ ಧೂಳು ಮತ್ತು ಕೊಳೆಯನ್ನು ತೆಗೆಯಿರಿ. ಎಲ್ಲಾ ಡಬ್ಬಗಳನ್ನು ಶುಚಿಯಾಗಿಡಿ. ಇದು ನಿಮ್ಮ ಕಿಚನ್ ಶೆಲ್ಫ್ ನ ಅಂದಗೆಡಿಸಲು ಬಿಡಬೇಡಿ. ಕಿಚನ್ ಶೆಲ್ಫ್ ನ್ನು ತುಂಬಾ ಶುಚಿ ಹಾಗೂ ವ್ಯವಸ್ಥಿತವಾಗಿಡಿ.

English summary

Steps to organise your kitchen shelf

Organizing kitchen shelf is a hectic job. All the containers, vessels and utensils need proper arrangement and systematic display. The kitchen shelf should be organized in such a way that every necessary article should be easily available and neatly kept.
Story first published: Friday, December 27, 2013, 16:40 [IST]
X
Desktop Bottom Promotion