For Quick Alerts
ALLOW NOTIFICATIONS  
For Daily Alerts

ಬಟ್ಟೆಗೆ ಅಂಟಿದ ಚ್ಯೂಯಿಂಗ್ ಗಮ್ ತೆಗೆಯಲು ಟಿಪ್ಸ್

|

ಕೆಲವೊಮ್ಮೆ ಒಳ್ಳೆಯ ಬಟ್ಟೆಯಲ್ಲಿ ಚ್ಯೂಯಿಂಗ್ ಗಮ್ ಅಂಟಿದರೆ ತೆಗೆಯಲು ಕಷ್ಟ. ಬಟ್ಟೆಯನ್ನು ತುಂಬಾ ತಿಕ್ಕಿದರೆ ಬಟ್ಟೆಯೇ ಹರಿದುಹೋಗಬಹುದು. ಚ್ಯೂಯಿಂಗ್ ಗಮ್ ಸಾಮಾನ್ಯವಾಗಿ ಮಕ್ಕಳ ಬಟ್ಟೆಗಳಲ್ಲಿ ಕಂಡು ಬರುತ್ತದೆ. ಆಟ, ಆಡಿಕೊಂಡು ತುಂಟ ಮಕ್ಕಳು ಬಟ್ಟೆಗೆ ಅಂಟಿಸಿದರೆ ನೀವು ನಿಮ್ಮ ಮಕ್ಕಳನ್ನು ಬೈಯ್ದು ಪ್ರಯೋಜವಿಲ್ಲ.

ಚ್ಯೂಯಿಂಗ್ ಗಮ್ ಅಂಟಿದ್ದರೆ ಚಿಂತೆ ಬೇಡ, ಇಲ್ಲಿ ಕೆಲವು ಸರಳ ವಿಧಾನಗಳಿವೆ. ಅವುಗಳನ್ನು ಪಾಲಿಸಿ, ಗಮ್ ಅನ್ನು ಸುಲಭದಲ್ಲಿ ತೆಗೆಯಬಹುದು:

Remove Chewing Gum From Cloth?

ಬಿಸಿ ವಿನಿಗರ್
ಬಿಸಿ ವಿನಿಗರ್ ಅನ್ನು ಗಮ್ ಅಂಟಿದ ಭಾಗಕ್ಕೆ ಹಾಕಿ. ವಿನಿಗರ್ ಅಂಟು ಸಡಿಲವಾಗದಂತೆ ಮಾಡಿ, ಗಮ್ ಅನ್ನು ಸುಲಭವಾಗಿ ತೆಗೆಯಲು ಸಹಾಯ ಮಾಡುತ್ತದೆ. ನಂತರ ಬಟ್ಟೆಯನ್ನು ಒಗೆದರೆ ಸಾಕು ಗಮ್ ಸಂಪೂರ್ಣವಾಗಿ ಹೋಗುವುದು.

ನೇಲ್ ಪಾಲೀಷ್ ರಿಮೋವರ್
ಬಟ್ಟೆಯ ಮೇಲೆ ನೇಲ್ ಪಾಲೀಷ್ ರಿಮೋವರ್ ಹಾಕಿ, ಸ್ವಲ್ಪ ಹೊತ್ತಿನ ಬಳಿಕ ಉಜ್ಜಿದರೆ ಚ್ಯೂಯಿಂಗ್ ಗಮ್ ನ ಕಲೆ ಬಟ್ಟೆಯಲ್ಲಿ ಇರುವುದಿಲ್ಲ.

ಐಸೋಪ್ರೋಪೈಲ್ ಆಲ್ಕೋಹಾಲ್
ಸ್ಪಾಂಜ್ ಅನ್ನು ಈ ಆಲ್ಕೋಹಾಲ್ ನಲ್ಲಿ ಅದ್ದಿ ಅದನ್ನು ಚ್ಯೂಯಿಂಗ್ ಗಮ್ ಅಂಟಿರುವ ಕಡೆ ಸ್ವಲ್ಪ ಹೊತ್ತು ಇಡಿ. ನಂತರ ಬ್ರಷ್ ಹಾಕಿ ಚೆನ್ನಾಗಿ ಉಜ್ಜಿದರೆ ಸಾಕು.

ಆರೇಂಜ್ ಎಣ್ಣೆ
ಆರೇಂಜ್ ಎಣ್ಣೆಯನ್ನು ಬಟ್ಟೆಗೆ ಹಾಕಿ ಸ್ವಲ್ಪ ಹೊತ್ತಿನ ಬಳಿಕ ಉಜ್ಜಿ ಚ್ಯೂಯಿಂಗ್ ಗಮ್ ಕಲೆಯನ್ನು ಸುಲಭವಾಗಿ ಹೋಗಲಾಡಿಸಬಹುದು.

ಚ್ಯೂಯಿಂಗ್ ಗಮ್ ಬಟ್ಟೆಗೆ ಅಂಟಿದ್ದರೆ ತೆಗೆಯಲು ಬೇರೆ ಯಾವುದಾದರೂ ವಿಧಾನವಿದ್ದರೆ ನಮಗೆ ತಿಳಿಸಬಹುದು.

English summary

Remove Chewing Gum From Cloth? | Tips For Cleaning | ಬಟ್ಟೆಗೆ ಅಂಟಿದ ಚ್ಯೂಯಿಂಗ್ ಗಮ್ ತೆಗೆಯುವುದು ಹೇಗೆ? | ಶುಚಿತ್ವಕ್ಕೆ ಕೆಲ ಸಲಹೆಗಳು

Removing chewing gum from clothes is one of the greatest laundry challenges. why not trying some easy methods to remove it before thinking of throwing it off? If you are looking for easy home tips to remove chewing gum from your clothes, here are some.
Story first published: Wednesday, April 10, 2013, 15:41 [IST]
X
Desktop Bottom Promotion