For Quick Alerts
ALLOW NOTIFICATIONS  
For Daily Alerts

ಬಟ್ಟೆಗಳು ದೀರ್ಘಕಾಲ ಬಾಳಿಕೆ ಬರಲು 10 ಸೂತ್ರಗಳು

By Super
|

ನೀವು ತುಂಬಾ ಹುಡುಕಾಡಿ, ಅಂಗಡಿಗಳನ್ನು ಸುತ್ತಿ ನಿಮ್ಮ ಮನಕ್ಕೊಪ್ಪುವ ಬಟ್ಟೆಗಳನ್ನು ಆರಿಸಿಕೊಂಡಿರುತ್ತೀರಿ. ಇದಕ್ಕಾಗಿ ನೀವು ನಿಮ್ಮ ಬೆಲೆಬಾಳುವ ಸಮಯ ಹಾಗೂ ದುಡ್ಡನ್ನೂ ಕೊಟ್ಟಿರುತ್ತೀರಿ. ಇಷ್ಟೆಲ್ಲಾ ಕಷ್ಟಪಟ್ಟು ತೆಗೆದುಕೊಂಡ ಬಟ್ಟೆಗಳು ಬೇಗನೆ ಹಾಳಾಗುವುದು ನಿಮಗೂ ಬೇಕಾಗಿರುವುದಿಲ್ಲ. ಈಗಾಗಲೇ ನಿಮ್ಮ ಕಪಾಟಿನಲ್ಲಿ ಇಂಥಹ ಬೆಲೆಕಟ್ಟಲಾಗದ ಸುಮಾರು ಬಟ್ಟೆಗಳು ಇರಬಹುದು.

ಇದರಲ್ಲಿ ಕೆಲವು ಬಟ್ಟೆಗಳು ಹಳೆಯ ಸುಮಧುರ ನೆನಪುಗಳನ್ನು ತರಬಹುದು, ಇನ್ನು ಕೆಲವು ನಿಮ್ಮ ಪ್ರೀತಿಪಾತ್ರರಿಂದ ಉಡುಗೊರೆಯಾಗಿ ಸಿಕ್ಕಿರಬಹುದು. ಇಂಥಹ ಬಟ್ಟೆಗಳನ್ನು ನೀವು ಯಾವ ಕಾರಣಕ್ಕೂ ಕಳೆದುಕೊಳ್ಳಲು ಬಯಸಲಾರಿರಿ. ಬಟ್ಟೆಗಳನ್ನು ಕಡಿಮೆ ಉಪಯೋಗಿಸಿ ಕಪಾಟಿನಲ್ಲಿ ಪೇರಿಸಿಡುವುದರಿಂದ ಅವು ಹಾಳಾಗುವ ಸಂಭವಗಳು ಹೆಚ್ಚು. ಇಂಥಹ ಬಟ್ಟೆಗಳ ಸಂರಕ್ಷಣೆಗೆ 10 ಸೂತ್ರಗಳನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.

1 . ಕೊಳ್ಳುವಾಗ ಜಾಗರೂಕರಾಗಿರಿ

1 . ಕೊಳ್ಳುವಾಗ ಜಾಗರೂಕರಾಗಿರಿ

ನೀವು ಬಟ್ಟೆಗಳನ್ನು ಕೊಳ್ಳುವಾಗ ಅದನ್ನು ಹೇಗೆ ಸಂರಕ್ಷಿಸಬಹುದೆಂದು ತಿಳಿದುಕೊಳ್ಳಿ. ಕೆಲವು ಬಟ್ಟೆಗಳಿಗೆ ಜಾಸ್ತಿ ಕಾಳಜಿ ಬೇಕಾಗಬಹುದು. ಇಂಥಹ ಬಟ್ಟೆಗಳು ನಿಮಗೆ ತುಂಬಾ ಇಷ್ಟವಾದರೂ ಕೊಳ್ಳುವ ಮೊದಲು ಒಂದು ಬಾರಿ ಯೋಚನೆ ಮಾಡಿ. ನಿರ್ವಹಣೆ ಕಷ್ಟವೆಂದು ನಿಮಗೆ ಅನಿಸಿದರೆ ಅದನ್ನು ಕೊಳ್ಳದಿರಿ. ಉದಾಹರಣೆಗೆ, ಕೆಲವು ವಸ್ತ್ರಗಳು ಡ್ರೈ ಕ್ಲೀನ್ ಮಾತ್ರ ಮಾಡಬೇಕೆಂದಿರುತ್ತದೆ. ನಿಮಗೆ ಅದು ಕಷ್ಟವೆನಿಸಿದಲ್ಲಿ ಅಂಥಹ ವಸ್ತ್ರಗಳನ್ನು ಕಡೆಗಣಿಸುವುದು ಒಳಿತು.

2. ಪ್ರತ್ಯೇಕವಾಗಿ ಜೋಡಿಸಿಡಿ

2. ಪ್ರತ್ಯೇಕವಾಗಿ ಜೋಡಿಸಿಡಿ

ಪ್ರತೀ ವಸ್ತ್ರಕ್ಕೂ ನಿರ್ವಹಣೆ ಅಗತ್ಯ. ಆದರೆ ನಿರ್ವಹಣೆಯ ಮಟ್ಟ ಬೇರೆ ಬೇರೆ ಆಗಿರುತ್ತದೆ. ನಿಮ್ಮ ಬಟ್ಟೆಗಳನ್ನು ಅದರ ನಿರ್ವಹಣೆಯ ಮಟ್ಟಕ್ಕೆ ಅನುಗುಣವಾಗಿ ಜೋಡಿಸುವುದು ಉತ್ತಮ. ಜಾಸ್ತಿ ಕಾಳಜಿ ವಹಿಸಬೇಕಾದ ಬಟ್ಟೆಗಳನ್ನು ದಿನನಿತ್ಯ ಉಪಯೋಗಿಸುವ ಬಟ್ಟೆಗಳಿಂದ ಪ್ರತ್ಯೇಕಿಸಿ. ಇದು ಬಟ್ಟೆ ಒಗೆಯಲು, ಇಸ್ತ್ರೀ ಮುಂತಾದ ಕೆಲಸಗಳಿಗೆ ಬಟ್ಟೆಗಳನ್ನು ಆರಿಸಲು ಸಹಾಯಕವಾಗುವುದು.

3. ಜೋಡಿಸುವ ಬಗೆ

3. ಜೋಡಿಸುವ ಬಗೆ

ಕೆಲವು ಬಟ್ಟೆಗಳನ್ನು ಸುಲಭವಾಗಿ ಮಡಚಿ ಕಪಾಟಿನಲ್ಲಿ ಇಡಬಹುದು. ಇನ್ನು ಕೆಲವು ಬಟ್ಟೆಗಳನ್ನು ಹ್ಯಾಂಗರ್ ನಲ್ಲಿ ಜೋತು ಹಾಕುವುದು ಸುಲಭ ಹಾಗೂ ಅವಶ್ಯ ಕೂಡ. ಬಟ್ಟೆಗಳನ್ನು ಜೋಡಿಸುವಾಗ ಅವುಗಳನ್ನು ಹೇಗೆ ಜೋಡಿಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ. ಮಡಚಿ ಇಡಬೇಕಾದ ಬಟ್ಟೆಗಳನ್ನು ಹ್ಯಾಂಗರ್ ನಲ್ಲಿ ಜೋತು ಹಾಕುವುದರಿಂದ ಹಾಗೂ ಹ್ಯಾಂಗರ್ ನಲ್ಲಿ ತೂಗಿ ಹಾಕುವ ಬಟ್ಟೆಗಳನ್ನು ಮಡಚಿ ಇಡುವುದರಿಂದ ಬಟ್ಟೆಗಳು ಹಾಳಾಗಬಹುದು.

4. ಬಣ್ಣದ ಬಟ್ಟೆಗಳನ್ನು ಒಗೆಯುವಾಗ ಜಾಗರೂಕರಾಗಿ

4. ಬಣ್ಣದ ಬಟ್ಟೆಗಳನ್ನು ಒಗೆಯುವಾಗ ಜಾಗರೂಕರಾಗಿ

ಕಡು ಬಣ್ಣದ ಬಟ್ಟೆಗಳು ಬಣ್ಣ ಬಿಟ್ಟುಕೊಳ್ಳುವ ಸಾಧ್ಯತೆ ಹೆಚ್ಚು. ಕಡು ಹಾಗೂ ತಿಳಿ ಬಣ್ಣದ ಬಟ್ಟೆಗಳನ್ನು ಜೊತೆಗೆ ಒಗಿಯುವುದರಿಂದ ನಿಮ್ಮ ಎಲ್ಲ ಬಟ್ಟೆಗಳು ಹಾಳಾಗಬಹುದು. ಆದುದರಿಂದ ತಿಳಿ ಮತ್ತು ಕಡು ಬಣ್ಣದ ಬಟ್ಟೆಗಳನ್ನು ಬೇರೆ ಬೇರೆ ಒಗೆಯಿರಿ. ಇವೆರಡನ್ನೂ ಜೊತೆಗೆ ಒಗೆಯುವುದರ ಮೊದಲು ಕಡು ಬಣ್ಣದ ಬಟ್ಟೆಗಳು ಬಣ್ಣ ಬಿಡುವುದಿಲ್ಲವೆಂದು ಖಚಿತಗೊಳಿಸಿ.

5. ಸೂಕ್ಷ್ಮ ಬಟ್ಟೆಗಳನ್ನು ವಿಂಗಡಿಸಿ

5. ಸೂಕ್ಷ್ಮ ಬಟ್ಟೆಗಳನ್ನು ವಿಂಗಡಿಸಿ

ಕೆಲವು ಬಟ್ಟೆಗಳು ತುಂಬಾ ಸೂಕ್ಷ್ಮವಿರುತ್ತದೆ. ಉದಾಹರಣೆಗೆ ಲೇಸ್, ಸ್ಯಾಟಿನ್ ಅಥವಾ ನೆಟ್ ಇರುವ ಬಟ್ಟೆಗಳನ್ನು ತೊಳೆಯುವಾಗ ತುಂಬಾ ಜಾಗರೂಕರಾಗಿರಬೇಕಾಗುತ್ತದೆ. ತುಂಬಾ ಹೊಳೆಯುತ್ತಿರುವ ಬಟ್ಟೆಗಳನ್ನು ಡ್ರೈ ಕ್ಲೀನ್ ಗೆ ಕೊಡಬೇಕಾಗುತ್ತದೆ. ಇಂಥಹ ಬಟ್ಟೆಗಳನ್ನು ಬೇರೆ ಬಟ್ಟೆಗಳಿಂದ ವಿಂಗಡಿಸಲು ನೆನಪಿಡಿ.

6. ತಣ್ಣೀರಿನಲ್ಲಿ ಒಗೆಯಿರಿ

6. ತಣ್ಣೀರಿನಲ್ಲಿ ಒಗೆಯಿರಿ

ದೀರ್ಘ ಕಾಲದ ವರೆಗೆ ಬಟ್ಟೆಯನ್ನು ಬಿಸಿ ನೀರಿನಲ್ಲಿ ಒಗೆಯುವುದರಿಂದ ಬಟ್ಟೆ ಹಾಳಾಗಬಹುದು. ಆದುದರಿಂದ ಸಾಧ್ಯವಾದಷ್ಟೂ ತಣ್ಣೀರಿನಲ್ಲೇ ಒಗೆಯುವುದು ಉತ್ತಮ.

7. ಡ್ರೈಯರ್ ನ ಉಪಯೋಗ ಕಡಿಮೆಗೊಳಿಸಿ

7. ಡ್ರೈಯರ್ ನ ಉಪಯೋಗ ಕಡಿಮೆಗೊಳಿಸಿ

ಡ್ರೈಯರ್ ನ ದೀರ್ಘಕಾಲ ಬಳಕೆಯಿಂದ ಬಟ್ಟೆಯ ಬಣ್ಣ ಮಾಸುವುದಲ್ಲದೆ ಬಟ್ಟೆಯೂ ಕಳಪೆಯಾಗುವ ಸಾಧ್ಯತೆಯಿದೆ. ಬಟ್ಟೆಯನ್ನು ಬಿಸಿನಲ್ಲಿ ಒಣಗಿಸುವುದರಿಂದ ಬಟ್ಟೆಯೂ ನಳನಳಿಸುತ್ತದೆ.

8. ಸರಿಯಾಗಿ ಶೇಖರಣೆ ಮಾಡಿ

8. ಸರಿಯಾಗಿ ಶೇಖರಣೆ ಮಾಡಿ

ಕಾಲ ಕಾಲಕ್ಕೆ ಬಳಸದ ವಸ್ತ್ರಗಳನ್ನು ತೇವ ಮತ್ತು ಫಂಗಸ್ ನಿಂದ ಕಾಪಾಡಿ ಶೇಖರಣೆ ಮಾಡಿ. ಬೇಕಿದ್ದಲ್ಲಿ ನಿಮ್ಮ ಕಪಾಟಿನಲ್ಲಿ anti-ಫಂಗಲ್ ಮಾತ್ರೆಗಳನ್ನು ಇಟ್ಟಿರಿ. ಇದು ಸ್ವೆಟರ್ ಮುಂತಾದ ಬಟ್ಟೆಗಳು ತೂತು ಆಗುವುದನ್ನು ತಡೆಯಬಹುದು.

9. ಹಾನಿಗೊಳಗಾದ ಬಟ್ಟೆಯನ್ನು ಕೂಡಲೇ ಸರಿಪಡಿಸಿ

9. ಹಾನಿಗೊಳಗಾದ ಬಟ್ಟೆಯನ್ನು ಕೂಡಲೇ ಸರಿಪಡಿಸಿ

ನಿಮ್ಮ ಬಟ್ಟೆಯ ಗುಂಡಿ ಕಿತ್ತುಹೋದಲ್ಲಿ ಅಥವಾ ತುಂಡು ಆದಲ್ಲಿ ಅದನ್ನು ಕೂಡಲೇ ಸರಿಪಡಿಸಿ. ಅದು ಪೂರ್ತಿ ಹಾಳು ಆಗುವ ಮೊದಲೇ ನಿಮ್ಮ ಬಟ್ಟೆಯನ್ನು ಸರಿಪಡಿಸಿ. ನಿಮ್ಮ ಬಟ್ಟೆಯ ಬಗ್ಗೆ ನಿಗಾವಹಿದಷ್ಟು ದೀರ್ಘ ಕಾಲ ನಿಮ್ಮ ಬಟ್ಟೆ ಬಾಳುತ್ತದೆ.

10. ನಿರ್ದೇಶಗಳನ್ನು ಪಾಲಿಸಿ

10. ನಿರ್ದೇಶಗಳನ್ನು ಪಾಲಿಸಿ

ಬಟ್ಟೆಗಳನ್ನು ಕೊಳ್ಳುವಾಗ ಅದರ ಮೇಲೆ ಇರುವ 'ಟ್ಯಾಗ್'ನಲ್ಲಿ ಕೆಲವು ನಿರ್ದೆಶಗಳು ಇರುತ್ತದೆ. ಇದರಲ್ಲಿ ಬಟ್ಟೆಯನ್ನು ಒಗೆಯುವ, ಇಸ್ತ್ರೀ ಮಾಡುವ ಹಾಗೂ ಒಣಗಿಸುವ ವಿಧಾನವನ್ನು ತಿಳಿಸಿರುತ್ತಾರೆ. ಇದರಲ್ಲಿ ಇರುವ ಥರ ನಡೆದುಕೊಂಡರೆ ಬಟ್ಟೆಗಳು ದೀರ್ಘ ಕಾಲದವರೆಗೆ ಚೆನ್ನಾಗಿರುತ್ತವೆ. ಬಟ್ಟೆಗಳ ಮೇಲೆ ಯಾವುದೇ ನಿರ್ದೇಶಗಳು ಇಲ್ಲವಾದಲ್ಲಿ ಬಟ್ಟೆ ಅಂಗಡಿಯಲ್ಲಿ ಕೇಳಿ ತಿಳಿದುಕೊಳ್ಳಬಹುದು.

ಮೇಲೆ ಹೇಳಿದ ದಾರಿಯನ್ನು ಅನುಸರಿಸಿದಲ್ಲಿ ನಿಮ್ಮ ಬಟ್ಟೆಗಳು ಮೊದಲಿಗಿಂತ ಹೆಚ್ಚು ಕಾಲ ಬಾಳುವುದು ನಿಸ್ಸಂಶಯ.

English summary

10 Simple Ways To Make Your Clothes Last Longer

Some of your clothes remind you of some things, that’s why they are so special to you. But, when you use them less and stack them more, it’s obvious that they’ll suffer from wear and tear. That’s why, we’ve come up with 10 ways to help you make your clothes last longer!
X
Desktop Bottom Promotion