For Quick Alerts
ALLOW NOTIFICATIONS  
For Daily Alerts

ಕತ್ತರಿಸಿದ ಹಣ್ಣುಗಳನ್ನು ತಾಜಾವಾಗಿಡಲು ಟಿಪ್ಸ್

|

ಹಣ್ಣುಗಳು ತಾಜಾವಾಗಿರುವಾಗಲೇ ತಿನ್ನಬೇಕು. ಆದರೆ ಕೆಲವೊಮ್ಮೆ ಹಣ್ಣುಗಳನ್ನು ಕತ್ತರಿಸಿ ಬಿಟ್ಟಿರುತ್ತೇವೆ. ಸ್ವಲ್ಪ ತಿಂದಾಗ ಸಾಕು, ನಾಳೆ ತಿನ್ನುವ ಅನಿಸಿಬಿಡುತ್ತದೆ. ಕತ್ತರಿಸಿದ ಹಣ್ಣುಗಳನ್ನು ಸರಿಯಾದ ರೀತಿಯಲ್ಲಿ ತೆಗೆದಿಡದಿದ್ದರೆ ಆ ಹಣ್ಣಿನಲ್ಲಿರುವ ಪೋಷಕಾಂಶಗಳು ನಾಶವಾಗುವುದು.

ಆದ್ದರಿಂದ ಕತ್ತರಿಸಿದ ಹಣ್ಣುಗಳನ್ನು ಹಾಳಾಗದಂತೆ ಸಂಗ್ರಹಿಸಿಡುವುದು ಹೇಗೆ ಎಂದು ಚಿತ್ರ ಮಾಹಿತಿ ನೀಡಲಾಗಿದೆ ನೋಡಿ:

ಸೇಬು:

ಸೇಬು:

ಕತ್ತರಿಸಿದ ಸೇಬನ್ನು ತೆಗೆದಿಡುವಾಗ ಸ್ವಲ್ಪ ಆಪಲ್ ಸೈಡರ್ ವಿನಿಗರ್ ಅನ್ನು ಅಥವಾ ನಿಂಬೆರಸವನ್ನು ಕತ್ತರಿಸಿದ ಭಾಗಕ್ಕೆ ಸವರಿ ತೆಗೆದಿಟ್ಟರೆ ಕತ್ತರಿಸಿದ ಭಾಗ ಕಪ್ಪಾಗುವುದಿಲ್ಲ ಮತ್ತು ತನ್ನ ತಾಜಾತನವನ್ನು ಕಳೆದುಕೊಳ್ಳುವುದಿಲ್ಲ.

ಬೆಣ್ಣೆ ಹಣ್ಣು:

ಬೆಣ್ಣೆ ಹಣ್ಣು:

ಅವಕಾಡೊ ಹಣ್ಣಿನ ಕತ್ತರಿಸಿದ ಭಾಗವನ್ನು ನಾಳೆ ಬಳಸುವ ಎಂದು ಯೋಚಿಸಿ ಹಾಗೆಯೇ ತೆಗೆದಿಟ್ಟರೆ ಅದು ಮೆತ್ತಗಾಗಿ ಹಾಳಾಗುವುದು. ಆದ್ದರಿಂದ ಕತ್ತರಿಸಿದ ಅವಕಾಡೊ ಅಥವಾ ಬೆಣ್ಣಿಗೆ ಸ್ವಲ್ಪ ನಿಂಬೆ ರಸ ಸವರಿ ನಂತರ ಅದನ್ನು ಗಾಳಿಯಾಡಂತೆ ಪ್ಲಾಸ್ಟಿಕ್ ನಲ್ಲಿ ಹಾಕಿ ಫ್ರಿಜ್ ನಲ್ಲಿಡಬೇಕು.

ನಿಂಬೆ ಹಣ್ಣು:

ನಿಂಬೆ ಹಣ್ಣು:

ನಿಂಬೆ ಹಣ್ಣನ್ನು ಕತ್ತರಿಸಿಟ್ಟರೆ ಒಣಗಿದಂತೆ ಆಗುವುದು. ಆದ್ದರಿಂದ ಅದನ್ನು ಒಂದು ಪ್ಲಾಸ್ಟಿಕ್ ನಲ್ಲಿ ಸುತ್ತಿ ನಂತರ ಫ್ರಿಜ್ ನಲ್ಲಿಡಬೇಕು.

ಕಲ್ಲಂಗಡಿ ಹಣ್ಣು:

ಕಲ್ಲಂಗಡಿ ಹಣ್ಣು:

ಕಲ್ಲಂಗಡಿ ಹಣ್ಣನ್ನು ಕತ್ತರಿಸಿದ ನಂತರ ಪ್ಲಾಸ್ಟಿಕ್ ನಲ್ಲಿ ಸುತ್ತಿಟ್ಟರೆ ಹಾಳಾಗುವುದಿಲ್ಲ.

ಸೀಬೆಕಾಯಿ:

ಸೀಬೆಕಾಯಿ:

ಸೀಬೆಕಾಯಿ ಮೇಲೂ ಅಷ್ಟೆ ಸ್ವಲ್ಪ ನಿಂಬೆರಸ ಹಾಕಿ ಇಟ್ಟರೆ ಸೀಬೆಕಾಯಿ ಹಾಳಾಗುವುದಿಲ್ಲ.

 ಪೈನಾಪಲ್:

ಪೈನಾಪಲ್:

ಈ ಹಣ್ಣನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಗಾಳಿಯಾಡದಂತೆ ಮುಚ್ಚಿಟ್ಟರೆ ಹಾಳಾಗುವುದಿಲ್ಲ.

ಪಪ್ಪಾಯಿ:

ಪಪ್ಪಾಯಿ:

ಪಪ್ಪಾಯಿಯನ್ನು ಕತ್ತರಿಸಿದರೆ ನಂತರ ತೆಗೆದಿಡುವಾಗ ಅದನ್ನು ಶುದ್ಧವಾದ ಪೇಪರ್ ನಲ್ಲಿ ಸುತ್ತಿ ನಂತರ ಫ್ರಿಜ್ ನಲ್ಲಿಟ್ಟರೆ 2-3 ದಿನದವರೆಗೆ ಇಡಬಹುದು.

English summary

Tips To Keep Fruit Fresh After Cutting | Tips For Home Improvement | ಕತ್ತರಿಸಿದ ಹಣ್ಣುಗಳ ತಾಜಾತನ ಹಾಳಾಗದಿರಲು ಟಿಪ್ಸ್ | ಮನೆ ಅಭಿವೃದ್ಧಿಗೆ ಕೆಲ ಸಲಹೆಗಳು

When we cut fruit and keep it for next day there is a need to store these fruits in a healthy way so that they do not dry or get brown. Here are some of the best tips...
X
Desktop Bottom Promotion