For Quick Alerts
ALLOW NOTIFICATIONS  
For Daily Alerts

ಚಾಕಲೇಟ್ ಕರಗದಂತೆ ಸಂಗ್ರಹಿಸಿಡಲು ಟಿಪ್ಸ್

|
Right Way To Store Chocolates
ಚಾಕಲೇಟ್ ಬಾಕ್ಸ್ ಕೊಂಡು ತಂದರೆ ಎಲ್ಲವನ್ನು ಒಂದೇ ದಿನದಲ್ಲಿ ತಿನ್ನಲು ಸಾಧ್ಯವಿಲ್ಲ. ಆದರೆ ಒಂದು ವಾರದವರೆಗೆ ಇಟ್ಟರೆ ಮೆತ್ತಗಾಗಿ ತಿನ್ನಲು ಇಷ್ಟವಾಗುವುದಿಲ್ಲ. ಚಾಕಲೇಟ್ ಅನ್ನು ಫ್ರಿಜ್ ನಲ್ಲಿ ಇಟ್ಟರೆ ಚೆನ್ನಾಗಿರುತ್ತದೆ ಎಂದು ನೀವು ಭಾವಿಸಿದರೆ ಅದು ತಪ್ಪು! ಏಕೆಂದರೆ ಚಾಕಲೇಟ್ ಅನ್ನು ಫ್ರಿಜ್ ನಲ್ಲಿ ಇಟ್ಟರೆ ಅದು ತನ್ನ ರುಚಿಯನ್ನು ಕಳೆದುಕೊಳ್ಳುತ್ತದೆ.

ಆದ್ದರಿಂದ ಚಾಕಲೇಟ್ ಅನ್ನು ಸ್ವಲ್ಪ ದಿನ ಇಟ್ಟರೂ ತನ್ನ ರುಚಿ ಮತ್ತು ವಾಸನೆಯನ್ನು ಕಳೆದುಕೊಳ್ಳದಿರಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು:

1. ತಂಪಾದ ಮತ್ತು ಸ್ವಲ್ಪ ಕತ್ತಲಿರುವ ಪ್ರದೇಶದಲ್ಲಿ ಇಡಬೇಕು. ಆದರೆ ತೇವಾಂಶವಿರುವ ಪ್ರದೇಶದಲ್ಲಿ ಇಡಬೇಡಿ. ಏರ್ ಕಂಡೀಷನರ್ ಇರುವ ರೂಮಿನಲ್ಲಿರುವ ಡ್ರಾಯರ್ ಚಾಕಲೇಟ್ ಇಡಲು ಇರುವ ಸೂಕ್ತವಾದ ಜಾಗವಾಗಿದೆ.

2. ಕೆಲವೊಮ್ಮೆ ಸ್ವಲ್ಪ ಚಾಕಲೇಟ್ ತಿಂದಾಗ ಸಾಕು ಮತ್ತೆ ತಿನ್ನುವ ಅನಿಸುತ್ತದೆ, ಆಗ ಅದನ್ನು ಹಾಗೆಯೇ ಇಡದೆ ಅದನ್ನು ರೇಪರ್ ನಲ್ಲಿ ಸುತ್ತಿ ಗಾಳಿ ಸೇರದ ಡಬ್ಬದಲ್ಲಿ ಹಾಕಿಡಬೇಕು.

3. ಗಾಢ ವಾಸನೆ ಇರುವ ಪದಾರ್ಥಗಳಿಂದ ಚಾಕಲೇಟ್ ಅನ್ನು ದೂರ ಇಡಬೇಕು. ಏಕೆಂದರೆ ಚಾಕಲೇಟ್ ಬೇಗನೆ ಇತರ ವಾಸನೆಯನ್ನು ಹೀರಿಕೊಂಡು ಇದರ ಮೂಲ ವಾಸನೆ ಕಳೆದುಕೊಳ್ಳುತ್ತದೆ. ಬಾಳೆಹಣ್ಣಿನ ಹತ್ತಿರ ಚಾಕಲೇಟ್ ಇಟ್ಟು ನೋಡಿ, ಚಾಕಲೇಟ್ ಬಾಳೆ ಹಣ್ಣಿನ ವಾಸನೆ ಬರುತ್ತದೆ.

4. ಸ್ವಲ್ಪ ಶಾಖವಿರುವ ಪ್ರದೇಶದಲ್ಲಿ ಇಡಬೇಡಿ. ಚಾಕಲೇಟ್ ಕರಗಿದರೆ ಕೋಕಾದ ರುಚಿ ಮಾತ್ರ ಇರುತ್ತದೆ, ಚಾಕಲೇಟ್ ನ ರುಚಿ ಇರುವುದಿಲ್ಲ.

English summary

Right Way To Store Chocolates | Tips For Storage Things | ಚಾಕಲೇಟ್ ಅನ್ನು ಸ್ಟೋರ್ ಮಾಡಲು ಕೆಲ ಸಲಹೆಗಳು | ವಸ್ತುಗಳನ್ನು ಸಂಗ್ರಹಿಸಿಡಲು ಕೆಲ ಸಲಹೆಗಳು

Have you ever wondered that your refrigerator might not be the best place to store your chocolates? Most people have this strange misconception that chocolates will start melting and therefore must be stored at low temperatures.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more