For Quick Alerts
ALLOW NOTIFICATIONS  
For Daily Alerts

ಕನ್ನಡಿಯ ಶುದ್ಧತೆಗೆ ಸರಳ ವಿಧಾನ

|
Tips To Clean Mirror
ಕನ್ನಡಿ ಶುದ್ಧವಾಗಿದ್ದರನೆ ಅದರಲ್ಲಿ ನಮ್ಮ ಅಂದ ಚೆಂದ ನೋಡಲು ಇಷ್ಟವಾಗುವುದು. ಪಳಪಳ ಹೊಳೆಯುವ ಕನ್ನಡಿ ಮನೆ ಅಂದವನ್ನು ಹೆಚ್ಚಿಸುತ್ತದೆ.

ಕನ್ನಡಿಯನ್ನು ಶುಚಿಗೊಳಿಸದಿದ್ದರೆ ದೂಳು ಮತ್ತು ಕಪ್ಪು ಕಲೆಗಳಿದ ಕನ್ನಡಿಯ ಹೊಳಪು ಕಡಿಮೆಯಾಗುತ್ತದೆ. ಆದರೆ ಈ ಕೆಳಗಿನ ಸುಲಭ ವಿಧಾನದಿಂದ ಕನ್ನಡಿಯನ್ನು ಶುಚಿಗೊಳಿಸಿ ಅದರ ಹೊಳಪನ್ನು ಮರಳಿ ಪಡೆಯಬಹುದು.

1. ಕನ್ನಡಿಯಲ್ಲಿರುವ ದೂಳನ್ನು ಮೊದಲು ಮೃದುವಾದ ಬಟ್ಟೆಯಿಂದ ಒರೆಸಬೇಕು.

2. ನಂತರ ನ್ಯೂಸ್ ಪೇಪರ್ ಅನ್ನು ಚಿಕ್ಕ ಉಂಡೆ ರೀತಿ ಮಾಡಿ ಅದರಿಂದ ಕನ್ನಡಿ ಉಜ್ಜಿದರೆ ಅದರ ಹೊಳಪು ಹೆಚ್ಚುತ್ತದೆ.

3. ನಂತರ ಸ್ವಲ್ಪ ಆಲ್ಕೋಹಾಲ್ ಅಥವಾ ಸೀಮೆಯೆಣ್ಣೆಯನ್ನು ಕನ್ನಡಿ ಮೇಲೆ ಹಾಕಿ ಪೇಪರ್ ನಿಂದ ಉಜ್ಜಿ ಕಪ್ಪು ಕಲೆಗಳನ್ನು ತೆಗೆಯಬೇಕು.

4. ನಂತರ ಮತ್ತೊಮ್ಮೆ ನ್ಯೂಸ್ ಪೇಪರ್ ನಿಂದ ಉಜ್ಜಿದರೆ ಕನ್ನಡಿ ಹೊಳಪು ಹೆಚ್ಚಾಗುತ್ತದೆ. ಈ ರೀತಿ ತಿಂಗಳಿಗೊಮ್ಮೆ ಮಾಡುತ್ತಾ ಇದ್ದರೆ ಕನ್ನಡಿಯಲ್ಲಿ ದೂಳು ಮತ್ತು ಕಪ್ಪು ಕಲೆಗಳು ಇರುವುದಿಲ್ಲ.

ಸೂಚನೆ: ನೀರನ್ನು ಅಥವಾ ಕ್ಲೀನರ್ ಅನ್ನು ಕನ್ನಡಿ ಮೇಲೆ ಸ್ಪ್ರೇ ಮಾಡಬಾರದು. ಹೀಗೆ ಮಾಡಿದರೆ ಕನ್ನಡಿಯಲ್ಲಿ ಕಪ್ಪು ಕಲೆಗಳು ಉಂಟಾಗುತ್ತದೆ.

English summary

Tips To Clean Mirror | House Keeping Tips | ಕನ್ನಡಿ ಶುದ್ಧ ಮಾಡುವ ವಿಧಾನ | ಮನೆ ಶುದ್ಧತೆಗೆ ಕೆಲ ವಿಧಾನಗಳು

If mirror is get fogy it will lose its shiny and looks dull. But once in a month if you clean mirror it will be shiny and looks attractive.
Story first published: Thursday, March 29, 2012, 15:28 [IST]
X
Desktop Bottom Promotion